ಬೆಂಗಳೂರು: ವಿಧಾನಸೌಧದ ಸಭಾಪತಿ ಬಸವರಾಜ ಹೊರಟ್ಟಿ ಅವರು ಕಚೇರಿಯಲ್ಲಿ ಇಂದು ಕಾಂಗ್ರೆಸ್ ಇಬ್ಬರು ಎಂಎಲ್ಸಿಗಳಿಂದ ಹೈಡ್ರಾಮಾವೇ ನಡೆಯಿತು. ಸಭಾಪತಿಗಳ ಕಚೇರಿಗೆ ತೆರಳಿದಂತ ಕಾಂಗ್ರೆಸ್ ಎಂಎಲ್ಸಿಗಳಿಬ್ಬರು ರಾಜೀನಾಮೆ ಪತ್ರ ತೋರಿಸಿ, ಕೊಡದೆ ಪ್ರಹಸನವನ್ನೇ ನಡೆಸಿದ್ದಾರೆ.
ಇಂದು ವಿಧಾನಸೌಧದ ಸಭಾಪತಿ ಬಸವರಾಜ ಹೊರಟ್ಟಿ ಅವರ ಕಚೇರಿಗೆ ತೆರಳಿದಂತ ಕಾಂಗ್ರೆಸ್ ಪರಿಷತ್ ಸದಸ್ಯರಾದಂತ ನಜೀರ್ ಅಹ್ಮದ್ ಹಾಗೂ ನಂಜೇಗೌಡ ಅವರು, ರಾಜೀನಾಮೆ ಪತ್ರವನ್ನು ಸಲ್ಲಿಸೋದಕ್ಕೆ ಮುಂದಾದರು. ಈ ವೇಳೆ ಮದ್ಯಪ್ರವೇಶಿಸಿದಂತ ಸಚಿವ ಬೈರತಿ ಸುರೇಶ್ ಅವರು, ಇಬ್ಬರು ಕಾಂಗ್ರೆಸ್ ಎಂಎಲ್ಸಿಗಳನ್ನು ಮನವೊಲಿಸಿದರು.
ರಾತ್ರಿ ಮುಖ್ಯಮಂತ್ರಿ, ಡಿಸಿಎಂ ಮಂಗಳೂರಿನಿಂದ ವಾಪಾಸ್ ಆಗುತ್ತಿದ್ದಾರೆ. ಅವರು ಬಂದ ನಂತ್ರ ಮೂವರು ಶಾಸಕರೊಂದಿಗೆ ಮಾತನಾಡುತ್ತಾರೆ ಎಂದರು.
ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ ನನ್ನ ಭೇಟಿಯಾಗೋದಾಗಿ ಸಮಯ ಪಡೆದಿದ್ದರು. ಬಂದು ಭೇಟಿಯಾದ್ರು. ಆದ್ರೇ ಸಚಿವ ಬೈರತಿ ಸುರೇಶ್ ಕೂಡ ಬಂದು ಅವರನ್ನು ಮನವೊಲಿಕೆ ಮಾಡಿದ್ರು. ನಾನು ನಿಮ್ಮ ಲೆಟರ್ ಹೆಡ್ ನಲ್ಲಿ ಕೈಯಲ್ಲಿ ಬರೆದು ರಾಜೀನಾಮೆ ಪತ್ರ ಕೊಡಿ ಅಂತ ಹೇಳಿದೆ. ಅವರು ಲೆಟರ್ ಹೆಡ್ ನಲ್ಲಿ ಕೈಯಲ್ಲಿ ಬರೆದಂತ ರಾಜೀನಾಮೆ ಪತ್ರ ತೋರಿಸಿದ್ರೇ ವಿನಹ ಕೊಟ್ಟಿಲ್ಲ ಎಂದರು.
ಈ ಬಳಿಕ ಮಾತನಾಡಿದಂತ ಪರಿಷತ್ ಸದಸ್ಯ ನಜೀರ್ ಅಹ್ಮದ್ ಅವರು, ಸಚಿವ ಕೆ.ಹೆಚ್ ಮುನಿಯಪ್ಪ ವಿರುದ್ಧ ವಾಗ್ಧಾಳಿ ನಡೆಸಿದರು. ನಾನು ಸಚಿವನಾಗಿದ್ದಾರ ಮುನಿಯಪ್ಪ ಬ್ಯಾಗ್ ಹಿಡ್ಕೊಂಡು ಬರುತ್ತಿದ್ದ. ಪುಟಗೋಸಿ ಅವನು ನಾನು ಸಚಿವನಾಗಿದ್ದಾಗ ಬ್ಯಾಗ್ ಹಿಡ್ಕೊಂಡು ಹಿಂದೆ ಹಿದೆ ಬರ್ತಿದ್ದನು. ಡಿಸಿಎಂ ಬರೋವರೆಗೂ ಇರಿ ಅಂತ ಹೇಳಿದ್ದಾರೆ. ಅವರು ಬರೋವರೆಗೂ ಕಾಯುತ್ತೇವೆ ಎಂಬುದಾಗಿ ನಜೀರ್ ಅಹ್ಮದ್ ಹೇಳಿದರು.