ಬೆಂಗಳೂರು: ಬೆಳಗಾವಿಯ ವಿಧಾನ ಪರಿಷತ್ ಕಲಾಪದ ವೇಳೆಯಲ್ಲೇ ಪೊಲೀಸರ ಬಂಧನ, ಆ ಬಳಿಕ ಹೈಡ್ರಾಮಾ ಕುರಿತಂತೆ ಡಿಜಿಪಿ ಕರೆದು ಸ್ಪಷ್ಟನೆ ಕೇಳುವಂತೆ ರಾಜ್ಯಪಾಲರಿಗೆ ಸಿ.ಟಿ ರವಿ ಅವರು 8 ಪುಟಗಳ ದೂರು ನೀಡಿದ್ದಾರೆ.
ಇಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಭೇಟಿಯಾದಂತ ಎಂಎಲ್ಸಿ ಸಿ.ಟಿ ರವಿಯನ್ನು ಒಳಗೊಂಡಂತ ಬಿಜೆಪಿ ಮುಖಂಡರು, ಬೆಳಗಾವಿ ಚಳಿಗಾಲದ ಅಧಿವೇಶನದ ವೇಳೆ ಬಂಧನದ ಹೈಡ್ರಾಮಾ ಕುರಿತಂತೆ ದೂರು ನೀಡಿದರು.
ಸಿ.ಟಿ ರವಿ ಸಲ್ಲಿಸಿರುವಂತ 8 ಪುಟಗಳ ದೂರಿನಲ್ಲಿ ಡಿಸೆಂಬರ್.19ರ ರಾತ್ರಿ ಪೊಲೀಸರ ವರ್ತನೆ ಬಗ್ಗೆ ಇಂಚಿಂಚೂ ಮಾಹಿತಿಯನ್ನು ವಿವರಿಸಲಾಗಿದೆ. ಈ ಘಟನೆ ಸಂಬಂಧ ಡಿಜಿಪಿಯನ್ನು ಕರೆದು ಸ್ಪಷ್ಟೀಕರಣ ಕೇಳುವಂತೆ ರಾಜ್ಯಪಾಲರಿಗೆ ಮನವಿ ಮಾಡಲಾಗಿದೆ. ಇದಲ್ಲದೇ ತಮ್ಮ ಮೇಲೆ ಪೊಲೀಸರ ದೌರ್ಜನ್ಯದ ಬಗ್ಗೆಯೂ ವಿವರಿಸಲಾಗಿದೆ.
ಇದೀಗ ರಾಜ್ಯಪಾಲರು ಸಿಟಿ ರವಿ ಅವರಿಂದ ದೂರು ಪಡೆದಿದ್ದು, ಡಿಜಿಪಿ ಅವರನ್ನು ಕರೆದು, ಸ್ಪಷ್ಟೀಕರಣವನ್ನು ಘಟನೆ ಸಂಬಂಧ ಪಡೆಯುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.
ಸಚಿವ ಪ್ರಿಯಾಂಕ್ ಖರ್ಗೆ ರಾಜೀನಾಮೆ ಕೊಡುವ ಅಗತ್ಯತೆ ಇಲ್ಲ: ಗೃಹ ಸಚಿವ ಡಾ.ಜಿ.ಪರಮೇಶ್ವರ್
BIGG NEWS : 2025 ನೇ ಸಾಲಿನ ರಾಜ್ಯ `ಸಾರ್ವತ್ರಿಕ ರಜೆ’ ದಿನಗಳ ಸಂಪೂರ್ಣ ಪಟ್ಟಿ ಇಲ್ಲಿದೆ | Holiday List 2025
SHOCKING : ಚಳಿಗೆ ಹೊಗೆ ಹಾಕಿ ಮಲಗಿದಾಗಲೇ ದುರಂತ : ಉಸಿರುಗಟ್ಟಿ ದಂಪತಿ ಸಾವು.!