ಮಂಗಳೂರು: ಜಿಲ್ಲೆಯ ಬಂಟ್ವಾಳದ ಬಿ.ಸಿ ರಸ್ತೆಯಲ್ಲಿ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ಭಾರೀ ಹೈಡ್ರಾಮಾವೇ ನಡೆಯುತ್ತಿದೆ. ಬಿಸಿ ರೋಡ್ ಚಲೋದಲ್ಲಿ ಭಾರೀ ಸಂಖ್ಯೆಯ ಹಿಂದೂ ಕಾರ್ಯಕರ್ತರು ಭಾಗಿಯಾಗಿದ್ದು, ಸ್ಥಳದಲ್ಲಿ ಬಿಗುವಿನ ವಾತಾವರಣದಿಂದ ಕೂಡಿದೆ.
ಮಂಗಳೂರಿನ ಬಂಟ್ವಾಳದ ಬಿ.ಸಿ ರಸ್ತೆಯಲ್ಲಿ ಇಂದು ಬಿಸಿ ರೋಡ್ ಚಲೋಗೆ ಹಿಂದೂ ಪರ ಸಂಘಟನೆಗಳ ಮುಖಂಡರು ಕರೆ ನೀಡಿದ್ದರು. ಈ ಚಲೋಗೆ ನೂರಾರು ಸಂಖ್ಯೆಯ ಆರ್ ಎಸ್ ಎಸ್ ಹಾಗೂ ವಿ ಹೆಚ್ ಪಿ ಕಾರ್ಯಕರ್ತರು ಭಾಗಿಯಾಗಿದ್ದಾರೆ.
ಹಿಂದೂ ಕಾರ್ಯಕರ್ತರು, ಪೊಲೀಸರ ನಡುವೆ ತಳ್ಳಾಟ, ನೂಕಾಟ ಕೂಡ ಉಂಟಾಗಿದ್ದೂ, ಭಾರೀ ಹೈಡ್ರಾಮಾವೇ ನಡೆಯುತ್ತಿದೆ. ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಬಿಸಿ ರಸ್ತೆಯಲ್ಲಿ ಹೈ ಅಲರ್ಟ್ ನೀಡಲಾಗಿದೆ. ಎಲ್ಲೆಲ್ಲೂ ಪೊಲೀಸರ ಭಿಗಿ ಭದ್ರತೆಯನ್ನು ಹೆಚ್ಚಿಸಲಾಗಿದೆ.
ಇನ್ನೂ ಬಿಸಿ ರೋಡ್ ಮೂಲಕವೇ ಇಂದು ಈದ್ ಮಿಲಾದ್ ಮೆರವಣಿಗೆ ಸಾಗಲಿದೆ. ಹೀಗಾಗಿ ಮತ್ತಷ್ಟು ಬಿಗುವಿನ ವಾತಾವರಣಕ್ಕೆ ಕಾರಣವಾಗುವ ಮುನ್ನವೇ ಪೊಲೀಸರು ಹಲವು ಹಿಂದೂಪರ ಮುಖಂಡರು, ಕಾರ್ಯಕರ್ತರನ್ನು ವಶಕ್ಕೆ ಪಡೆದಿರುವುದಾಗಿ ತಿಳಿದು ಬಂದಿದೆ. ಇದರ ನಡುವೆ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ.
ಬಳ್ಳಾರಿ ಜೈಲಲ್ಲಿ ಮತ್ತೊಂದು ಬೇಡಿಕೆ ಇಟ್ಟ ‘ನಟ ದರ್ಶನ್’: ನೀಡಲು ನಿರಾಕರಿಸಿದ ಅಧಿಕಾರಿಗಳು | Actor Darshan
ಉದ್ಯಮಿ ಸುಲಿಗೆ ಮಾಡಿದ ಆರೋಪ: ಬೆಂಗಳೂರಿನ ನಾಲ್ವರು ‘GST ಅಧಿಕಾರಿ’ಗಳು ಸಸ್ಪೆಂಡ್