ಶಿವಮೊಗ್ಗ: ಸಾಗರದ ಮಾರಿಕಾಂಬ ದೇವಿ ನ್ಯಾಸ ಪ್ರತಿಷ್ಠಾನಕ್ಕೆ ನವೆಂಬರ್ 30ರಂದು ಚುನಾವಣೆ ನಿಗದಿಯಾಗಿತ್ತು. ಆದರೇ ಈ ಚುನಾವಣೆಗೆ ಕರ್ನಾಟಕ ಹೈಕೋರ್ಟ್ ತಡೆಯಾಜ್ಞೆ ವಿಧಿಸಿರುವುದಾಗಿ ತಿಳಿದು ಬಂದಿದೆ. ಹೀಗಾಗಿ ನವೆಂಬರ್.30ರಂದು ನಡೆಯಬೇಕಿದ್ದಂತ ಸಾಗರದ ಮಾರಿಕಾಂಬ ದೇವಿ ನ್ಯಾಸ ಪ್ರತಿಷ್ಠಾನದ ಚುನಾವಣೆ ಮುಂದೂಡಿಕೆಯಾದಂತೆ ಆಗಿದೆ.
ಶಿವಮೊಗ್ಗ ಜಿಲ್ಲೆಯ ಸಾಗರದ ಮಾರಿಕಾಂಬ ದೇವಿ ನ್ಯಾಸ ಪ್ರತಿಷ್ಠಾನಕ್ಕೆ ಚುನಾವಣೆ ಘೋಷಣೆಯಾಗಿತ್ತು. ಚುನಾವಣೆಗೆ ನಾಮಪತ್ರ ಸಲ್ಲಿಕೆ ಕೂಡ ಆರಂಭಗೊಂಡು ಸುಮಾರು 60ಕ್ಕೂ ಹೆಚ್ಚು ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆಯನ್ನು ಸಲ್ಲಿಸಿದ್ದಾರೆ. ನಿಗದಿಯಂತೆ ನಡೆದಿದ್ದರೇ ನವೆಂಬರ್.30ರಂದು ಮತದಾನ ನಡೆದು, ಅಂದೇ ಫಲಿತಾಂಶ ಘೋಷಣೆಯಾಗಬೇಕಿತ್ತು. ಆದರೇ ಈ ಚುನಾವಣೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.
ಹೈಕೋರ್ಟ್ ತಡೆಯಾಜ್ಞೆ ಏಕೆ?
ಕರ್ನಾಟಕ ಹೈಕೋರ್ಟ್ ಗೆ ಕೊರಚ-ಕೊರಮ ಸಮಾಜದ ಮುಖಂಡರಾದಂತ ಬಸವರಾಜು ಎಂಬುವರು ತಮ್ಮ ಸಮುದಾಯದಕ್ಕೆ ಶ್ರೀ ಮಾರಿಕಾಂಬ ದೇವಿ ನ್ಯಾಸ ಪ್ರತಿಷ್ಠಾನದಲ್ಲಿ ಸ್ಥಾನ ಮಾನ ನೀಡಿಲ್ಲ. ಹಲವು ವರ್ಷಗಳಿಂದ ನಾವು ದೇವಿಯ ಸೇವೆ ಮಾಡಿಕೊಂಡು ಬರುತ್ತಿದ್ದೇವೆ. ಹೀಗಾಗಿ ನಮ್ಮ ಸಮುದಾಯಕ್ಕೆ ಸ್ಥಾನ ಮಾನ ನೀಡುವವರೆಗೂ ಘೋಷಣೆಯಾಗಿರುವಂತ ಚುನಾವಣೆ ಮುಂದೂಡಿಕೆ ಮಾಡುವಂತೆ ಅರ್ಜಿಯಲ್ಲಿ ಮನವಿ ಮಾಡಲಾಗಿತ್ತು.
ಈ ಮನವಿಯನ್ನು ಪುರಸ್ಕರಿಸಿದಂತ ಹೈಕೋರ್ಟ್ ನ್ಯಾಯಪೀಠವು, ದಿನಾಂಕ 30-11-2025ರಂದು ನಿಗದಿಯಾಗಿದ್ದಂತ ಶ್ರೀ ಮಾರಿಕಾಂಬ ದೇವಿ ನ್ಯಾಸ ಪ್ರತಿಷ್ಠಾನದ ಚುನಾವಣೆಗೆ ಮುಂದಿನ ಆದೇಶದವರೆಗೆ ತಾತ್ಕಾಲಿಕವಾಗಿ ತಡೆಯಾಜ್ಞೆ ನೀಡಿದೆ.
ಚುನಾವಣೆ ಮುಂದೂಡಿ ರಿಟರ್ನಿಂಗ್ ಆಫೀಸರ್ ಆದೇಶ
ಕರ್ನಾಟಕ ಹೈಕೋರ್ಟ್ ಶ್ರೀ ಮಾರಿಕಾಂಬ ದೇವಿ ನ್ಯಾಸ ಪ್ರತಿಷ್ಠಾನಕ್ಕೆ ದಿನಾಂಕ 30-11-2025ರಂದು ನಿಗದಿ ಪಡಿಸಿದ್ದಂತ ಚುನಾವಣೆಗೆ ತಡೆಯಾಜ್ಞೆ ನೀಡಿರುವುದಾಗಿ ಆದೇಶದ ಪ್ರತಿಯನ್ನು ಚುನಾವಣಾಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಈ ಹಿನ್ನಲೆಯಲ್ಲಿ ಹೈಕೋರ್ಟ್ ಆದೇಶದಂತೆ ಮುಂದಿನ ಆದೇಶದವರೆಗೆ ಶ್ರೀ ಮಾರಿಕಾಂಬ ದೇವಿ ನ್ಯಾಸ ಪ್ರತಿಷ್ಠಾದನ ಚುನಾವಣೆಯನ್ನು ತಾತ್ಕಾಲಿಕವಾಗಿ ಮುಂದೂಡಿಕೆ ಮಾಡಿರುವುದಾಗಿ ತಿಳಿಸಿದ್ದಾರೆ.
ಹೈಕೋರ್ಟ್ ಗಮನಕ್ಕೆ ತಾರದ ಹಾಲಿ ಮಾರಿಕಾಂಬ ದೇವಿ ನ್ಯಾಸ ಪ್ರತಿಷ್ಠಾನ ಸಮಿತಿ
ದಿನಾಂಕ 30-11-2025ರಂದು ಶ್ರೀ ಮಾರಿಕಾಂಬ ದೇವಿ ನ್ಯಾಸ ಪ್ರತಿಷ್ಠಾನಕ್ಕೆ ಚುನಾವಣೆ ನಿಗದಿಪಡಿಸಲಾಗಿದೆ. ಶಿವಮೊಗ್ಗ ಜಿಲ್ಲಾ ನ್ಯಾಯಾಲಯವು ಚುನಾವಣೆ ನಡೆಸುವಂತೆ ನಿರ್ದೇಶನ ನೀಡಿದೆ. ನವೆಂಬರ್.30ರ ಒಳಗಾಗಿ ಶ್ರೀ ಮಾರಿಕಾಂಬ ದೇವಿ ನ್ಯಾಸ ಪ್ರತಿಷ್ಠಾನದ ನೂತನ ಸಮಿತಿಗೆ ವಹಿಸುವಂತೆಯೂ ಸೂಚಿಸಲಾಗಿದೆ ಎನ್ನುವ ಕೋರ್ಟ್ ಆದೇಶದ ಮಾಹಿತಿಯನ್ನು ಹಾಲಿ ಸಮಿತಿಯಿಂದ ಹೈಕೋರ್ಟ್ ಗಮನಕ್ಕೆ ತಾರದೇ ಇರುವುದೇ ತಡೆಯಾಜ್ಞೆಗೆ ಕಾರಣ ಎನ್ನಲಾಗುತ್ತಿದೆ.
ಒಂದು ವೇಳೆ ಶ್ರೀ ಮಾರಿಕಾಂಬ ದೇವಿ ನ್ಯಾಸ ಪ್ರತಿಷ್ಠಾನದ ಹಾಲಿ ಸಮಿತಿಯಿಂದ ಹೈಕೋರ್ಟ್ ಗೆ ಸೂಕ್ತ ದಾಖಲೆಯೊಂದಿಗೆ ಮಾಹಿತಿ ಸಲ್ಲಿಸಿದ್ದೇ ಆಗಿದ್ದಲ್ಲಿ, ನಿಗದಿಯಾಗಿರುವಂತ ಚುನಾವಣೆಗೆ ಹೈಕೋರ್ಟ್ ತಡೆಯಾಜ್ಞೆ ನೀಡುತ್ತಿರಲಿಲ್ಲ ಎಂಬುದು ಕಾನೂನು ತಜ್ಞರ ಅಭಿಪ್ರಾಯವಾಗಿದೆ. ಇದೀಗ ಹೈಕೋರ್ಟ್ ಚುನಾವಣೆಗೆ ತಡೆಯಾಜ್ಞೆ ನೀಡಿರುವ ಕಾರಣ, ನ.30ರಂದು ನಿಗದಿಯಾಗಿದ್ದ ಶ್ರೀ ಮಾರಿಕಾಂಬ ದೇವಿ ನ್ಯಾಸ ಪ್ರತಿಷ್ಠಾನದ ಚುನಾವಣೆ ತಾತ್ಕಾಲಿಕವಾಗಿ ಮುಂದೂಡಿಕೆ ಆದಂತೆ ಆಗಿದೆ.
ವರದಿ: ವಸಂತ ಬಿ ಈಶ್ವರಗೆರೆ.., ಸಂಪಾದಕರು..

ಈ ಹಂತ ಅನುಸರಿಸಿ ಬ್ಯಾಂಕ್ ಖಾತೆಯೊಂದಿಗೆ ಪ್ಯಾನ್ ನಂಬರ್ ಕುಳಿತಲ್ಲೇ ಲಿಂಕ್ ಮಾಡಿ | Link PAN With Bank Account
BREAKING: ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ ಬಲಿಷ್ಠ ಭಾರತ ತಂಡ ಪ್ರಕಟ








