ಬೆಂಗಳೂರು: ತಂದೆ-ತಾಯಿಗೆ ಮಕ್ಕಳು ನೀಡಬೇಕಾದ ಜೀವನಾಂಶದ ಮಿತಿ ಹೆಚ್ಚಳಕ್ಕೆ ಕೇಂದ್ರ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ಶಿಫಾರಸ್ಸು ಮಾಡಿದೆ.
2007ರ ಪೋಷಕರ ಕಲ್ಯಾಣ ಕಾಯ್ದೆಯ ಸೆಕ್ಷನ್ 9ರ ಪರಿಶೀಲನೆ ಅಗತ್ಯವಿದೆ. ಮಕ್ಕಳು ನೀಡಬೇಕಾದ ಗರಿಷ್ಠ ಜೀವನಾಂಶದ ಮಿತಿ 10,000 ಇದೆ. 2007ರ ಜೀವನಾಂಶ ನಿರ್ವಹಣಾ ವೆಚ್ಚಕ್ಕೂ 2025ಕ್ಕೂ ವ್ಯತ್ಯಾಸವಿದೆ ಎಂಬುದಾಗಿ ಅಭಿಪ್ರಾಯ ಪಟ್ಟಿದೆ.
ಈ ಹಿನ್ನಲೆಯಲ್ಲಿ ಹಣದುಬ್ಬರವನ್ನು ಪರಿಗಣಿಸಿ ಜೀವನಾಂಶದ ಗರಿಷ್ಠ ಮಿತಿ ಹೆಚ್ಚಿಸಬೇಕು ಎಂಬುದಾಗಿ ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರಿದ್ದಂತ ನ್ಯಾಯಪೀಠವು ಅಭಿಪ್ರಾಯ ಪಟ್ಟಿದೆ.
ಜೀವನಾಂಶ ವಿಧಿಸಲು 2007ರ ಪೋಷಕರ ಕಲ್ಯಾಣ ಕಾಯ್ದೆಯಲ್ಲಿ ಅವಕಾಶವಿದೆ. ತಂದೆ-ತಾಯಿ ಯೋಗಕ್ಷೇಮ ನಿರ್ಲಕ್ಷಿಸುವ ಮಕ್ಕಳಿಗೆ ವಿಧಿಸುವ ಜೀವನಾಂಶ ಇದಾಗಿದೆ ಎಂದಿದೆ.
BREAKING: ದಸರಾ ಉದ್ಘಾಟನೆಗೆ ಲೇಖಕಿ ಬಾನು ಮುಷ್ತಾಕ್ ಆಯ್ಕೆಗೆ ವಿರೋಧ: ಹೈಕೋರ್ಟ್ ಗೆ ಮೂರು PIL ದಾಖಲು
BREAKING: ಬೆಂಗಳೂರಿನ ಜಯದೇವ ಹೃದ್ರೋಗ ಸಂಸ್ಥೆಯ ನೂತನ ನಿರ್ದೇಶಕರಾಗಿ ಡಾ.ದಿನೇಶ್ ನೇಮಕ