ಬೆಂಗಳೂರು: ಕೆಪಿಟಿಸಿಎಲ್ ನ ಎಇ, ಜೆಇ ಹುದ್ದೆಗಳ ಆಯ್ಕೆ ಪಟ್ಟಿಯನ್ನು ಹೈಕೋರ್ಟ್ ರದ್ದುಗೊಳಿಸಿದೆ. ಈ ಮೂಲಕ ಮೇ.8, 2024ರಂದು ಪ್ರಕಟಿಸಿದ್ದಂತ ಆಯ್ಕೆ ಪಟ್ಟಿಯನ್ನು ರದ್ದುಗೊಳಿಸಿ, ಮರುಪರೀಕ್ಷೆಗೆ ಹೈಕೋರ್ಟ್ ಆದೇಶಿಸಿದೆ.
ಈ ಸಂಬಂಧ ಹೈಕೋರ್ಟ್ ಗೆ ನೆಗೆಟಿವ್ ಮಾರ್ಕಿಂಗ್ ಪ್ರಶ್ನಿಸಿ ಅಭ್ಯರ್ಥಿಗಳು ಸಲ್ಲಿಸಿದ್ದಂತ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎನ್.ವಿ ಅಂಜಾರಿಯಾ, ನ್ಯಾಯಮೂರ್ತಿ ಕೆ.ವಿ ಅರವಿಂದ್ ಅವರಿದ್ದಂತ ಪೀಠವು ವಿಚಾರಣೆ ನಡೆಸಿ, ಈ ಆದೇಶ ಮಾಡಿದೆ.
ಫೆಬ್ರವರಿ 18, 2024ರಂದು ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳಿಗೆ ಮರುಪರೀಕ್ಷೆ ನಡೆಸುವಂತೆ ಕೆಪಿಸಿಎಲ್, ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಹೈಕೋರ್ಟ್ ನಿರ್ದೇಶಿಸಿದೆ. ಅಲ್ಲದೇ ನೆಗೆಟಿವ್ ಮಾರ್ಕಿಂಗ್ ಬಗ್ಗೆ ಪೂರ್ವ ಮಾಹಿತಿ ನೀಡಲು ಸೂಚಿಸಿರುವಂತ ಸೂಚಿಸಿದೆ.
ಬೆಂಗಳೂರಲ್ಲಿ ಕಸಕ್ಕೂ ತೆರಿಗೆ: ಶುಲ್ಕ ವಿಧಿಸುವ ನಿರ್ಧಾರ ಹಿಂಪಡೆಯುವಂತೆ ಆರ್.ಅಶೋಕ್ ಆಗ್ರಹ
ನಾಳೆ ಗುಜರಾತ್, ರಾಜಸ್ಥಾನ, ಪಂಜಾಬ್ ಮತ್ತು ಜಮ್ಮು-ಕಾಶ್ಮೀರದಲ್ಲಿ ಅಣಕು ಕವಾಯತು | Mega security drill