ಹುಬ್ಬಳ್ಳಿ: ಜಿಲ್ಲೆಯಲ್ಲಿ ಬೇಸಿಗೆಯ ಬಿಸಿಲು ಹೆಚ್ಚಾಗಿದೆ. ಈ ಹಿನ್ನಲೆಯಲ್ಲಿ ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತದ ಕೆಲ ಜಿಲ್ಲೆಗಳ ಕಚೇರಿ ಸಮಯವನ್ನು ಬದಲಾವಣೆ ಮಾಡಲಾಗಿದೆ.
ಈ ಸಂಬಂಧ ಹೆಸ್ಕಾಂ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ಸರ್ಕಾರದ ಆದೇಶದನ್ವಯ ಹುಬ್ಬಳ್ಳಿ ವಿದ್ಯುಚ್ಛಕ್ತಿ ಸರಬರಾಜು ಕಂಪನಿಯ ಕಾರ್ಯವ್ಯಾಪ್ತಿಯಲ್ಲಿ ಬರುವ ಬಾಗಲಕೋಟೆ ಹಾಗೂ ವಿಜಯಪುರ ಜಿಲ್ಲೆಗೆ ಒಳಪಡುವ ಕಛೇರಿಗಳು ಏಪ್ರಿಲ್-2025 ಮತ್ತು ಮೇ-2025 ತಿಂಗಳಿನಲ್ಲಿ ಕೆಲಸದ ಸಮಯವನ್ನು ಬೆಳಗೆ, 8.00 ಗಂಟೆಯಿಂದ ಮಧ್ಯಾಹ್ನ 1.30 ಗಂಟೆಯ ವರೆಗೆ ವಿರಾಮ ರಹಿತವಾಗಿ ಕಾರ್ಯನಿರ್ವಹಿಸುವುದು ಎಂದಿದೆ.
ಈ ಅವಧಿಯಲ್ಲಿ ಕಛೇರಿ ಮುಖ್ಯಸ್ಥರು ಈ ಕೆಳಗಿನ ನಿಯಮಗಳನ್ನು ಪಾಲಿಸುವುದು.
1. ನಿಗಮ ಕಛೇರಿಗೆ ನೀಡಬೇಕಾದ ಮಾಹಿತಿ ಹಾಗೂ ವಿವರಗಳನ್ನು ನಿಗದಿತ ಸಮಯದಲ್ಲಿ ಸಲ್ಲಿಸಲು ಕ್ರಮಕೈಗೊಳ್ಳುವುದು.
2, ತುರ್ತು ಮತ್ತು ಅವಶ್ಯಕವಾದ ಕಛೇರಿ ಕಲಸಗಳನ್ನು ಆಯಾ ದಿನಗಳಂದು ಪೂರ್ಣಗೊಳಿಸಲು ಕ್ರಮಕೈಗೊಳ್ಳುವುದು. 3. ಉಪ ವಿಭಾಗ/ಶಾಖಾ ಕಛೇರಿಗಳ ನಗದು ಶಾಖೆಗಳನ್ನು (ಕ್ಯಾಶ್ ಕಲೆಕ್ಷನ್) ಬೆಳಗ್ಗೆ 8:00 ಗಂಟೆಯಿಂದ ಮಧ್ಯಾಹ್ನ 12:30 ಗಂಟೆಯ ವರೆಗೆ ಕಾರ್ಯನಿರ್ವಹಿಸುವುದು ಹಾಗೂ ಅವಶ್ಯಕತೆ ಆಧಾರದ ಮೇಲೆ ಈ ಸಮಯವನ್ನು ವಿಸ್ತರಿಸಿ ಕೆಲಸ ನಿರ್ವಹಿಸಲು ಕ್ರಮಕೈಗೊಳ್ಳುವುದು.
4. ಹು.ವಿ.ಸ.ಕಂ.ನಿ., ವ್ಯಾಪ್ತಿಯಲ್ಲಿ ಬರುವ ಕಛೇರಿಗಳ ಅಧಿಕಾರಿ/ನೌಕರರು ಬದಲಾದ ಸಮಯದಲ್ಲಿ ತಮ್ಮ ಕರ್ತವ್ಯವನ್ನು ಎಂದಿನಂತೆ ಯಾವುದೇ ಲೋಪ/ಅಡೆತಡೆಯಿಲ್ಲದ ಮತ್ತು ನಾರ್ವಜನಿಕರಿಗೆ ಯಾವುದೇ ರೀತಿ ತೊಂದರೆಯಾಗದಂತೆ ಕರ್ತವ್ಯ ನಿರ್ವಹಿಸತಕ್ಕದ್ದು.
ತುರ್ತು ಸಂದರ್ಭದಲ್ಲಿ ಯಾವುದೇ ಕಾರ್ಯವನ್ನು ನಿರ್ವಹಿಸಲು ನಿರ್ದೇಶಿಸಿದಲ್ಲಿ ಅಂತಹ ಆದೇಶಗಳನ್ನು ತಪ್ಪದೆ ಪಾಲಿಸಿ ಕಛೇರಿಯ ಸಮಯದ ಪರಿಮಿತಿಯಿಲ್ಲದ ಕರ್ತವ್ಯ ನಿರ್ವಹಿಸತಕ್ಕದ್ದು ಎಂಬ ಷರತ್ತಿಗೊಳಪಡಿಸಲಾಗಿದೆ ಎಂಬುದಾಗಿ ತಿಳಿಸಲಾಗಿದೆ.
ಬಾಂಗ್ಲಾದೇಶದ ‘ಯೂನುಸ್’ಗೆ ಪ್ರಧಾನಿ ನರೇಂದ್ರ ಮೋದಿ ಈ ಕಠಿಣ ಸಂದೇಶ ರವಾನೆ
ಸಾವರ್ಕರ್ ಬಗ್ಗೆ ಅವಹೇಳನಕಾರಿ ಹೇಳಿಕೆ: ರಾಹುಲ್ ಗಾಂಧಿಗೆ ನೀಡಿದ್ದ ಸಮನ್ಸ್ ರದ್ದತಿಗೆ ಕೋರ್ಟ್ ನಕಾರ