ಬೆಂಗಳೂರು : ರಾಜ್ಯ ಸರ್ಕಾರವು ರಾಜ್ಯ ಸರ್ಕಾರಿ ನೌಕರರಿಗೆ ಸಿಹಿಸುದ್ದಿ ನೀಡಿದ್ದು, 2024 ರ ಪರಿಷ್ಕೃತ ಮೂಲ ವೇತನ ಮತ್ತು ಮನೆ ಬಾಡಿಗೆ ಭತ್ಯೆ ಪರಿಷ್ಕರಿಸಿ ಆದೇಶ ಹೊರಡಿಸಿದೆ.
ರಾಜ್ಯ ಸರ್ಕಾರದಿಂದ ಸರ್ಕಾರಿ ನೌಕರರಿಗೆ 7ನೇ ವೇತನ ಶ್ರೇಣಿಯನ್ನು ಜಾರಿಗೊಳಿಸಲಾಗಿತ್ತು.ಈ ಬೆನ್ನಲ್ಲೇ 2024ರ ಹೊಸ ವೇತನ ಶ್ರೇಣಿಯ ಪರಿಷ್ಕೃತ ನಿಯಮಗಳನ್ನು ಜಾರಿಗೊಳಿಸಿ ಆದೇಶ ಹೊರಡಿಸಲಾಗಿದೆ.
ಪರಿಷ್ಕೃತ ವೇತನ ಶ್ರೇಣಿಯಲ್ಲಿ ವೇತನ ನಿಗದಿಯ ಕ್ರಮ
ದಿನಾಂಕ:01.07.2022ರಲ್ಲಿದ್ದಂತೆ ಮೂಲ ವೇತನ
ಸದರಿ ದಿನಾಂಕಕ್ಕೆ ಇದ್ದ ಶೇ 31 ರಷ್ಟು ತುಟ್ಟಿ ಭತ್ಯೆ
ದಿನಾಂಕ:01.07.2022ರಂದು ಇದ್ದಂತ ಮೂಲ ವೇತನಕ್ಕೆ ಶೇ.27.50ರಷ್ಟು ಫಿಟ್ನಂಟ್ ಸೌಲಭ್ಯ
ಹೊಸ ಮೂಲ ವೇತನ: 1, 2 & 3 ನ್ನು ಸೇರಿಸಿ ಒಟ್ಟು ಮೊತ್ತದ ಮುಂದಿನ ಹಂತಕ್ಕೆ ನಿಗದಿಗೊಳಿಸಕ್ಕದ್ದು.