ಬೆಂಗಳೂರು : BPL Card ನಿರೀಕ್ಷೆಯಲ್ಲಿದವರಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿಯನ್ನು ಆಹಾರ ಮತ್ತು ನಾಗರೀಕ ಪೂರೈಕೆ ಸಚಿವ ಸಚಿವ ಕೆ.ಹೆಚ್ ಮುನಿಯಪ್ಪ ನೀಡಿದ್ದಾರೆ. 1.73 ಲಕ್ಷ ಬಿಪಿಎಲ್ ಕಾರ್ಡ್‌ಗಳನ್ನು ಆದಷ್ಟು ಶೀಘ್ರ ವಿತರಿಸಿ, ಪಡಿತರ ವಿತರಣೆಗೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಆಹಾರ ಸಚಿವ ಕೆ.ಎಚ್. ಮುನಿಯಪ್ಪ ವಿಧಾನಪರಿಷತ್ ಕಲಾಪದಲ್ಲಿ ತಿಳಿಸಿದ್ದಾರೆ.
ವಿಧಾನ ಪರಿಷತ್ ಕಲಾಪದಲ್ಲಿ ಸದಸ್ಯರೊಬ್ಬರು ಕೇಳಿದಂತ ಪ್ರಶ್ನೆಗೆ ಉತ್ತರಿಸಿದಂತ ಅವರು, ಹಿಂದಿನ ಸರ್ಕಾರ ಚುನಾವಣೆಗೆ ಮೊದಲು 2.95 ಲಕ್ಷ ಕಾರ್ಡ್ ಗಳನ್ನು ವಿತರಿಸುವುದು ಬಾಕಿ ಇತ್ತು. ಇವುಗಳನ್ನು ಪರಿಶೀಲಿಸಿ ಸುಮಾರು 2 ಲಕ್ಷ 65 ಸಾವಿರ ಕಾರ್ಡ್ ಗಳನ್ನು ಅರ್ಹತೆಯನ್ನು ಪಡೆದಿದ್ದಾವೆ. ಬಿಪಿಎಲ್ ಒಳಗಡೆ ಬರುತ್ತಾವೆ. 56,930 ಕಾರ್ಡ್ ಬಿಪಿಎಲ್ ಕಾರ್ಡ್ ಕೆಳಗಡೆ ಬರುವುದಿಲ್ಲ. 2 ಲಕ್ಷದ 36 ಸಾವಿರ 152 ಕಾರ್ಡ್ ನಲ್ಲಿ 62 ಸಾವಿರ ಕಾರ್ಡ್ ಗಳನ್ನು ಈಗಾಗಲೇ ಪಟ್ಟಿಗೆ ತಂದು ಪಡಿತರ ಹೆಸರಿನ ಪಟ್ಟಿಯಲ್ಲಿ ದವಸ ಧಾನ್ಯಗಳನ್ನು ಕೊಡುವ ವ್ಯವಸ್ಥೆಯಾಗಿದೆ.