ಹುಬ್ಬಳ್ಳಿ: ರಾಜ್ಯ ಪೊಲೀಸ್ ನೇಮಕಾತಿ ಪರೀಕ್ಷೆ ಹಿನ್ನೆಲೆಯಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿವಾರಿಸಲು ರಾಜ್ಯದೊಳಗೆ ಸಂಚರಿಸುವ ವಿವಿಧ ರೈಲುಗಳಲ್ಲಿ ಒಂದು ಹೆಚ್ಚುವರಿ ಬೋಗಿಗಳನ್ನು ತಾತ್ಕಾಲಿಕ ರೈಲ್ವೆ ವಲಯ ನಿರ್ಧರಿಸಿದೆ.
ಮೈಸೂರು-ಬೆಳಗಾವಿ (17301) ಫೆ. 24ರಿಂದ 25ರವರೆಗೆ, ಬೆಳಗಾವಿ- ಮೈಸೂರು (17302), ಮೈಸೂರು- ಬಾಗಲಕೋಟ (17307) ಫೆ. 23 ರಿಂದ ಬಾಗಲಕೋಟೆ-ಮೈಸೂರು (17308) ಫೆ. 24ರಿಂದ 26, ಮೈಸೂರು-ತಾಳಗುಪ್ಪ ಫೆ. 23ರಿಂದ 25 ( 16227), ತಾಳಗುಪ್ಪ ಮೈಸೂರು (16228) ಫೆ. 24ರಿಂದ 26, ಈ ಎಲ್ಲ ರೈಲುಗಳಿಗೆ ನಿಗದಿತ ದಿನಾಂಕಗಳಂದು ಒಂದು ಸಾಮಾನ್ಯ ದ್ವಿತೀಯ ದರ್ಜೆ ಹೆಚ್ಚುವರಿ ಬೋಗಿ ಜೋಡಿಸಲಾಗುತ್ತಿದೆ. ಕೆಎಸ್‌ಆರ್ ಬೆಂಗಳೂರು-ಹುಬ್ಬಳ್ಳಿ (17391) ಫೆ. 25ರಿಂದ 27ರವರೆಗೆ ಹುಬ್ಬಳ್ಳಿ-ಕೆಎಸ್‌ಆ ಬೆಂಗಳೂರು
(17392) ಫೆ. 22ರಿಂದ 25, ಕೆಎಸ್‌ಆರ್ ಬೆಂಗಳೂರು-ಹೊಸಪೇಟೆ (05243) ಫೆ. 23ರಿಂದ 25, ಹೊಸಪೇಟೆ-ಕೆಎಸ್‌ಆರ್ ಬೆಂಗಳೂರಿಗೆ ಫೆ.24ರಿಂದ 26, ಹೊಸಪೇಟೆ-ಹರಿಹರ (06245) ಫೆ. 23ರಿಂದ 25, ಹರಿಹರ-ಹೊಸಪೇಟೆ (06246) ಫೆ. 24ರಿಂದ 25, ಕೆಎಸ್‌ಆ ಬೆಂಗಳೂರು-ಮೀರಜ್ (16589) ಫೆ. 23ರಿಂದ 25, ಮೀರಜ್ – ಕೆಎಸ್‌ಆರ್ ಬೆಂಗಳೂರಿಗೆ (16590), ಫೆ.24ರಿಂದ 26, ಕೆಎಸ್ ಆರ್ ಬೆಂಗಳೂರು-ಬೆಳಗಾವಿ (20653) ಫೆ.23ರಿಂದ 25, ಬೆಳಗಾವಿ-ಕೆಎಸ್ ಆ ಬೆಂಗಳೂರಿಗೆ (20654) ಫೆ. 24ರಿಂದ 26. ಈ ರೈಲುಗಳಿಗೆ ಒಂದು ಸಾಮಾನ್ಯ ದ್ವಿತೀಯ ದರ್ಜೆ ಅಂತ್ಯೋದಯ ರೈಲು ಬೋಗಿ ಜೋಡಿಸಲಾಗುತ್ತಿದೆ. ಯಶವ೦ತ ಪುರ-ವಿಜಯಪುರ (06545) ಫೆ. 23ರಿಂದ 25, ವಿಜಯಪುರ- ಯಶವಂತಪುರ (06546) ಫೆ. 24ರಿಂದ 26, ಎಸ್.ಎಂಐಟಿ ಬೆಂಗಳೂರು- ಮುರ್ಡೇಶ್ವರ (16585) ಫೆ. 23ರಿಂದ ಮುರ್ಡೇಶ್ವರ-ಎಸ್‌ಎಂಪಿಟಿ ಬೆಂಗಳೂರು, (16586) ಫೆ.24ರಿಂದ 26ರವರೆಗೆ. ಈ ರೈಲುಗಳಿಗೆ 1 ಸಾಮಾನ್ಯ ದ್ವಿತೀಯ ದರ್ಜೆ ಜೋಡಿಸಲಾಗುತ್ತಿದೆ.\ ಬೋಗಿ= ಅದೇ ರೀತಿ ಕೆಎಸ್ ಆರ್ ಬೆಂಗಳೂರು -ನಾಂದೇಡ್ (16593) ಫೆ.23ರಿಂದ 25, ನಾಂದೇಡ್-ಕೆಎಸ್‌ಆರ್ ಬೆಂಗಳೂರು (16594) ಫೆ. 25ರಿಂದ 27. ಈ ರೈಲಿಗೆ 1 ಸಾಮಾನ್ಯ ದ್ವಿತೀಯ ದರ್ಜೆ ಅಂತ್ಯೋದಯ ಬೋಗಿ ಜೋಡಿಸಲಾಗುತ್ತಿದೆ ಎಂದು ನೈಋತ್ಯ ರೈಲ್ವೆ ವಲಯ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ. ಮಂಜುನಾಥ ಕನಮಡಿ ತಿಳಿಸಿದ್ದಾರೆ.