ಯುಗಾದಿ ಹಬ್ಬ ಬಂದರೆ ನಾವು ಮಾತ್ರ ಹೊಸ ಬಟ್ಟೆ ಧರಿಸಿ ಸಂಭಾಮಿಸುವುದಲ್ಲ, ಜೊತೆಗೆ ಮನೆಯನ್ನು ಅಲಂಕರಿಸುವುದು ಸಹ ಮುಖ್ಯವಾಗಿದೆ. ಈ ಶುಭ ಸಮಾರಂಭಕ್ಕೆ ಮನೆಯನ್ನು ಅಲಂಕಾರ ಮಾಡುವ ವಿಧಾನ ಕೂಡ ತಿಳಿದಿರಬೇಕು. ಈ ಹೊಸ ವರುಷಕೆ ಮನೆಯಲ್ಲಿ ಹಬ್ಬದ ಕಳೆ ತುಂಬುವುದು ಹೇಗೆ?
ಹಿಂದೆ ಮನೆಯ ಅಂಗಳವನ್ನು ಸೆಗಣಿಯಿಂದ ಸುಂದರಗೊಳಿಸುತ್ತಿದ್ದರು. ಈಗ ಅದು ಕಡಿಮೆಯಾಗಿದ್ದಿರಬಹುದು. ಅದಕ್ಕಾಗಿ ನೀವು ಹೆಣ್ಣಾಗಿ ಗುಡಿಸಿ, ಶುಚಿ ಮಾಡಿ.
ಮನೆಯಲ್ಲಿ ಹಬ್ಬದ ಸಂದರ್ಭ ಮೂಡಲು ಹಸಿರು ತೋರಣ ಇರಲೇಬೇಕು. ಯುಗಾದಿಗೆ ಮನೆಯ ಮುಖ್ಯ ದ್ವಾರ ಸೇರಿದಂತೆ ಎಲ್ಲೆಡೆ ಮಾವಿನ ಎಲೆಯ ತೋರಣ ಕಟ್ಟಬೇಕು. ಜೊತೆಗೆ ಬೇವಿನ ಎಲೆಯ ಬಳಕೆಯೂ ಇದೆ. ಮಾವಿನಎಲೆ ಕೇವಲ ಹಬ್ಬದ ವಾತಾವರಣ ಸೃಷ್ಟಿಸುವುದು ಮಾತ್ರವಲ್ಲ ಶುಭಸೂಚಕವೂ ಹೌದು.
ಮನೆಯ ಮುಖ್ಯ ದ್ವಾರ ಮತ್ತು ಒಳಗಡೆ ಶುಚಿಗೊಳಿಸಿದ ಚೆಂಡು ಹೂವುಗಳಿಂದ ಅಲಂಕರಿಸಿ. ಇನ್ನು ಮನೆಯ ಮುಂದಿನ ತುಳಸಿ ಗಿಡಕ್ಕೆ ಬೇವು, ಹೂಗಳನ್ನು ಕಟ್ಟಿರಿ
ದೇವರ ಕೋಣೆಯಲ್ಲಿಟ್ಟ ಗಂಧ, ತುಳಸಿ, ಸಾಂಬ್ರಾಣಿಯ ಪರಿಮಳ ಮನೆಯಲ್ಲಿ ಹರಡಿದರೆ ಭಕ್ತಿ, ಸಂತೋಷ ಮನೆಯವರಲ್ಲಿ ತುಂಬಿ ತುಳಕಾಡುತ್ತದೆ. ಜೊತೆಗೆ ದೇವರಿಗೆ ಮಲ್ಲಿಗೆ ಹೂವಿನಿಂದ ಅಲಂಕರಿಸಿ ಈ ಹೂವು ಮನೆ ಪೂರ್ತಿ ಸುವಾಸನೆ ಹರಡುತ್ತದೆ. ಜೊತೆಗೆ ಭಕ್ತಿಯ ವಾತಾವರಣ ಸೃಷ್ಟಿಯಾಗುತ್ತದೆ.
ಹಬ್ಬ ಎಂದರೆ ರಂಗೋಲಿ ಇರದೇ ಇದ್ದರೆ ಹೇಗೆ ಅಲ್ವ? ಮನೆ ಮುಂದೆ, ದೇವರ ಕೋಣೆಯಲ್ಲಿ ಆಕರ್ಷಕವಾದ ರಂಗೋಲಿ ಚಿತ್ತಾರಗಳನ್ನು ಬಿಡಿಸಿ. ಇದರಿಂದ ಮನೆ ದೈವೀಕತಾನವಾಗಿ ಪರಿವರ್ತಿತವಾಗುತ್ತದೆ.
ಮನೆಯನ್ನು ಮಿನಿಚಾರ್ ಲೈಟ್ ಅಥವಾ ಲ್ಯಾಂಪ್ ಗಳಿಂದ ಅಲಂಕರಿಸಿ. ದೇವರ ಕೋಣೆಯಲ್ಲಿ ಜಗಮಗಿಸುವ ದೀಪ ಹಾಕಿ ಪ್ರಜ್ವಲಿಸುವಂತೆ ಮಾಡುತ್ತದೆ.
ಹೂವಿನ ಅಲಂಕಾರದ ಮೇಲೆ ಲಾವಾ ದೀಪ, ಮಂದ ಬೆಳಕು ನೀಡುವ ಬಲ್ಬ್ ನಿಂದ ಬೆಳಕು ಬಿದ್ದರೆ ಮನೆ ಮತ್ತಷ್ಟು ಶೋಭಿಸುತ್ತದೆ.