ಬೆಂಗಳೂರು: : ಬಿಬಿಎಂಪಿಯ ಸಂಪರ್ಕರಹಿತ, ಫೇಸ್ ಲೆಸ್, ಆನ್‌ಲೈನ್ ತಂತ್ರಾಂಶದ ವಿನ್ಯಾಸವು ನಾಗರಿಕರ ನಿಯಂತ್ರಣದಲ್ಲಿ ಇರಿಸಲಾಗಿದೆ. ಸಾರ್ವಜನಿಕರು ತಾವೇ (Do it yourself) ಸ್ವತಃ ಆನ್ ಲೈನ್ https://bbmpeaasthi.karnataka.gov.in ನಲ್ಲಿ ಹೆಚ್ಚುವರಿ ಮಾಹಿತಿಯನ್ನು ನೀಡುವ ಮೂಲಕ ಅಂತಿಮ ಇ-ಖಾತಾ ಅನ್ನು ಪಡೆಯಬಹುದು.
ಬಿಬಿಎಂಪಿ ಖಾತಾ ವ್ಯವಸ್ಥೆಯನ್ನು ಅಧಿಕಾರಶಾಹಿಯಿಂದ ಮುಕ್ತಗೊಳಿಸುವುದು ಪಾಲಿಕೆಯ ಸಂಪೂರ್ಣ ಆಲೋಚನೆಯಾಗಿದೆ. ಇದರಿಂದ ನಾಗರಿಕರು ಸಬಲರಾಗುತ್ತಾರೆ ಮತ್ತು ಇ-ಖಾತಾ ಅಥವಾ ಖಾತಾ ಸೇವೆಗಳಿಗಾಗಿ ಪಾಲಿಕೆ ಸಿಬ್ಬಂದಿಯನ್ನು ಅವಲಂಬಿಸುವುದರಿಂದ ತಪ್ಪುವುದು. (ವರ್ಗಾವಣೆ, ಮ್ಯುಟೆಷನ್ಸ್, ಇತ್ಯಾದಿ…)
ಈ ನಾಗರಿಕ ಸಬಲೀಕರಣ ವ್ಯವಸ್ಥೆಯಲ್ಲಿ ಅಂತರ್ಗತವಾಗಿ ನಾಗರಿಕನ ನಿಯಂತ್ರಣದಲ್ಲಿರುತ್ತದೆ ಹಾಗೂ ಅವನ / ಅವಳ ಅಂತಿಮ ಇ-ಖಾತಾವನ್ನು ಸ್ವತಃ ತಾನೇ ಪಡೆಯಬಹುದು.
ಬೆಂಗಳೂರು ಒನ್ ಕೇಂದ್ರಗಳಲ್ಲಿ ನಾಗರಿಕರು ತಮ್ಮ ಅಂತಿಮ ಇ-ಖಾತಾವನ್ನು ಪಡೆಯಲು ಸಹಾಯ ಪಡೆಯಬಹುದು. ಬಿಬಿಎಂಪಿ ಅಧಿಕಾರಶಾಹಿಯಿಂದ ಅವಲಂಬಿತರಾಗದೆ ತಾವೇ ಇ-ಖಾತಾ ಪಡೆಯುವುದು ಇದರ ಗುರಿಯಾಗಿದೆ.
ಯೂಟ್ಯೂಬ್‌ನಲ್ಲಿ ತರಬೇತಿಯ ವೀಡಿಯೊಗಳನ್ನು ಬಿಡುಗಡೆ ಮಾಡಲಾಗಿದ್ದು, ನಾಗರಿಕರಿಗೆ ತಾವೇ ಮಾಡಿಕೊಳ್ಳಲು ಮಾರ್ಗದರ್ಶನ ನೀಡುತ್ತದೆ. ಇಂಗ್ಲೀಷ್: https://youtu.be/GL8CWsdn3wo?si=Zu_EMs3SCw5-wQwT ಕನ್ನಡ: https://youtu.be/JR3BxET46po?si=jDoSKqy2V1IFUpf6
ಬಿಬಿಎಂಪಿಯು ಮುಂಬರುವ ವಾರದಲ್ಲಿ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳಿಗೆ ಇ-ಖಾತಾ ಪಡೆಯುವ ಕುರಿತು ತರಬೇತಿ ನೀಡಲಾಗುವುದು. ಬಿಬಿಎಂಪಿ ನಾಗರಿಕರಿಗೆ ಮಾರ್ಗದರ್ಶನ ನೀಡಲು ಸಹಾಯವಾಣಿ ಸಂಖ್ಯೆಗಳನ್ನು ತೆರೆದಿದೆ. ಅವರೇ ಅವರ ಅಂತಿಮ ಇ-ಖಾತಾ ಅನ್ನು ಪಡೆಯಬಹುದು.(ಪ್ರತಿಯನ್ನು ಇದರೊಂದಿಗೆ ಲಗತ್ತಿಸಲಾಗಿದೆ).
ಬೆಂಗಳೂರು ಜ್ಞಾನದ ನಗರವಾಗಿದೆ ಮತ್ತು ನಾಗರಿಕರು ಹೆಚ್ಚು ಕಲಿತವರಾಗಿದ್ದು ಅವರ ಇ-ಖಾತಾ ಮತ್ತು ಖಾತಾ ಸೇವೆಗಳ ನಿಯಂತ್ರಣವನ್ನು ತೆಗೆದುಕೊಳ್ಳುವ ಸಾಮರ್ಥ್ಯ ಹೊಂದಿದ್ದಾರೆ. ಇದರ ಅನುಕೂಲ ಮಾಡಿಕೊಡುವ ಗುರಿಯನ್ನು ಬಿಬಿಎಂಪಿ ಹೊಂದಿದೆ.
ಆದ್ದರಿಂದ, ನಾಗರಿಕರು “ತಮ್ಮದೇ ಅಂತಿಮ ಇ-ಖಾತಾವನ್ನು ಮುದ್ರಿಸಲು” ಅಧಿಕಾರವನ್ನು ಹೊಂದಿದ್ದಾರೆ. ಬಿಬಿಎಂಪಿಯಲ್ಲಿನ ಯಾವುದೇ ಅಧಿಕಾರಿಯು ಅಂತಿಮ ಇ-ಖಾತಾ ಅನ್ನು ಅನುಮೋದಿಸುವುದಿಲ್ಲ(ಆಕ್ಷೇಪಣೆ ಅಥವಾ ಡೇಟಾ ಹೊಂದಾಣಿಕೆ ಆಗದೇ ಇದ್ದಲ್ಲಿ ಅಥವಾ ನಾಗರಿಕರಿಂದ ಅಪೂರ್ಣ ಮಾಹಿತಿಯು ನೀಡಿದ ಪಕ್ಷದಲ್ಲಿ).
ಇದು ಬಿಬಿಎಂಪಿಯ ಫೇಸ್ ಲೆಸ್, ಸಂಪರ್ಕವಿಲ್ಲದ, ಆನ್‌ಲೈನ್ ಇ-ಖಾತಾ ವ್ಯವಸ್ಥೆಯ ನಿಜವಾದ ತಿಳುವಳಿಕೆಯಾಗಿದೆ. ತಾಂತ್ರಿಕ ಸಮಸ್ಯೆಗಳು(ಯಾವುದಾದರೂ ಇದ್ದಲ್ಲಿ) ಮತ್ತು ಇತರೆ ಸಹಾಯವನ್ನು ಹೆಚ್ಚಿನ ಆದ್ಯತೆಯ ಮೇಲೆ ಮಾಡಲಾಗುತ್ತಿದೆ. ಏಕೆಂದರೆ ಇದು ದೇಶದ ಒಂದು ನಗರಕ್ಕೆ ಅತಿದೊಡ್ಡ ಇ-ಖಾತಾ ವ್ಯವಸ್ಥೆಯಾಗಿದೆ.