Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ತುರ್ತು ಪರಿಸ್ಥಿತಿಯಲ್ಲಿ ಸಂಜಯ್ ಗಾಂಧಿ 1.7 ಕೋಟಿ ಜನರಿಗೆ ‘ಸಂತಾನಹರಣ’ ಚಿಕಿತ್ಸೆ ಮಾಡಿಸಿದ್ದರು : ಪ್ರಹ್ಲಾದ್ ಜೋಶಿ

06/07/2025 7:41 PM

BREAKING : ಪುತ್ತೂರಿನ ಬೀರಮಲೆ ಬೆಟ್ಟದಲ್ಲಿ ನೈತಿಕ ಪೊಲೀಸ್ ಗಿರಿ ಪ್ರಕರಣ : ಇಬ್ಬರು ಆರೋಪಿಗಳು ಅರೆಸ್ಟ್

06/07/2025 7:13 PM

BREAKING : ಇನ್ಮುಂದೆ ಆನ್​ಲೈನ್ ಬೆಟ್ಟಿಂಗ್ ಗೆ ನಿಷೇಧ : ಗ್ಯಾಂಬ್ಲಿಂಗ್​ಗೆ ಕಡಿವಾಣ ಹಾಕಲು ಹೊಸ ಮಸೂದೆ ಸಿದ್ದಪಡಿಸಿದ ರಾಜ್ಯ ಸರ್ಕಾರ

06/07/2025 7:06 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಪಂಚಾಂಗ ಕುರಿತು ಇಲ್ಲಿದೆ ಒಂದು ಮಹತ್ವದ ಮಾಹಿತಿ
KARNATAKA

ಪಂಚಾಂಗ ಕುರಿತು ಇಲ್ಲಿದೆ ಒಂದು ಮಹತ್ವದ ಮಾಹಿತಿ

By kannadanewsnow5714/10/2024 10:01 AM

ಪಂಚಾಂಗವೆಂದರೆ ತಿಥಿ, ವಾರ, ನಕ್ಷತ್ರ, ಯೋಗ, ಕರಣವೆಂಬ ಐದು ಅಂಗಗಳಿಂದ ಕೂಡಿರುವುದು ಎಂದರ್ಥ. ಇವು ಕಾಲಗಣನೆಯ ಪ್ರಮುಖ ಅಂಗಗಳಾಗಿರುತ್ತದೆ.

ಪ್ರತಿ ನಿತ್ಯವೂ ಈ ಐದು ಅಂಗಗಳನ್ನೊಳಗೊಂಡು ರಚಿತವಾದ ಪುಸ್ತಕರೂಪವೇ ಪಂಚಾಂಗ ಎನ್ನಬಹುದು. ಇದು ಅಲ್ಲದೇ ಹಬ್ಬ ಹರಿದಿನಗಳು, ಗ್ರಹಣಗಳು , ಉಪಯುಕ್ತ ಧರ್ಮಶಾಸ್ತ್ರ ವಿಚಾರಗಳು ಹಾಗೂ ಜೋತಿಷ್ಯ ಫಲಶಾಸ್ತ್ರವು ಕೂಡ ಪಂಚಾಂಗ ಪುಸ್ತಕದ ಪ್ರಮುಖ ಭಾಗವಾಗಿರುತ್ತದೆ.

ವಾಕ್ಯ ಸಿದ್ದಿ, ಮಂತ್ರಸಿದ್ದಿ ಯಂತ್ರ ಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕ್ಕೈಕ ಜೋತಿಷ್ಯರು ವಿದ್ವಾನ್ ವಿದ್ಯಾಧರ್ ನಕ್ಷತ್ರಿ ತಂತ್ರಿ 9686268564 ಇಷ್ಟ ಪಟ್ಟವರು ನೀಮ್ಮಂತೇ ಆಗಲು, ಪ್ರೀತಿಯಲ್ಲಿ ಮೋಸ ಹೋಗಿದ್ದರೆ ಮದುವೆ ವಿಳಂಬ, ಸತಿ ಪತಿ ಕಲಹ, ಸಂತಾನ, ಅತ್ತೆ ಸೋಸೆ ಕಲಹ, ಶತ್ರು ಭಾದೆ, ಅನಾರೋಗ್ಯ, ಸಾಲದ ಭಾದೆ, ಮನೆಯಲ್ಲಿ ಅಶಾಂತಿ, ಬೀಜೀನೇ‍ಸ್ಸ ನಲ್ಲಿ ನಷ್ಟ , ಕೋರ್ಟ್ ಕೇಸ್, ಎಷ್ಟೇ ಪ್ರಯತ್ನ ಜೀವನದಲ್ಲಿ ಏಳಿಗೆ ಅಭಿವೃದ್ಧಿ ಆಗದೆ ನೋಂದಿದ್ದರೆ ಇನ್ನೂ ನಿಮ್ಮ ಸಮಸ್ಯೆ ಯಾವುದೇ ಇರಲಿ ಎಷ್ಟೇ ಕಠಿಣವಾಗಿರಲಿ ಕೇವಲ 2 ದಿನದಲ್ಲಿ ಪರಿಹಾರ ಶತಃಸಿದ್ದ ವಿದ್ವಾನ್ ವಿದ್ಯಾಧರ್ ನಕ್ಷತ್ರಿ ತಂತ್ರಿ 9686268564.

ತಿಥಿ; ಪಕ್ಷ; ಚಾಂದ್ರಮಾಸ:
ಸದಾ ಸಂಚಾರಶೀಲನಾಗಿರುವ ಸೂರ್ಯ ಮತ್ತು ಚಂದ್ರರ ಅಂತರವನ್ನು ತಿಥಿಯೆಂಬುದಾಗಿ ಕರೆಯುತ್ತಾರೆ. ಸೂರ್ಯಚಂದ್ರರು ಜೊತೆಗಿರುವುದೇ ಅಮಾವಾಸ್ಯೆ ಎಂದು ಹೆಸರು. ಚಾಂದ್ರಮಾಸದ ಕೊನೆಯದಿನ ಅಂದರೆ ಅಮಾವಾಸ್ಯೆಯಂದು ಸೂರ್ಯಚಂದ್ರರು ಜೊತೆಗಿರುತ್ತಾರೆ.
ಅಮಾವಾಸ್ಯೆಯಂದು ಒಂದಾದ ಸೂರ್ಯಚಂದ್ರರು ಪೂರ್ವ ದಿಕ್ಕಿನಲ್ಲಿ ಚಲನೆಯನ್ನು ಆರಂಭಿಸುತ್ತಾರೆ. ಚಂದ್ರನ ಚಲನೆ ಸೂರ್ಯನ ಚಲನೆಗಿಂತ ವೇಗವಾಗಿರುವುದರಿಂದ ಅವರಿಬ್ಬರ ಅಂತರ ಜಾಸ್ತಿಯಾಗುತ್ತಾ ಹೋಗುತ್ತದೆ. ಈ ಅಂತರವನ್ನು ಅಂಶಗಳ ಲೆಕ್ಕಾಚಾರದಲ್ಲಿ ಗಣನೆಗೆ ತೆಗೆದುಕೊಂಡಾಗ ಒಂದನೆಯ ಹನ್ನೆರಡು ಅಂಶಗಳ ಅಂತರವು ಒಂದನೇ ತಿಥಿಯಾದ ಪ್ರತಿಪತ್/ ಪಾಡ್ಯ ವೆಂತಲೂ ಕರೆಯಲ್ಪಡುತ್ತದೆ. ಚಂದ್ರನು ಈ ಸಂದರ್ಭದಲ್ಲಿ ಬಿಳಿಯಾಗಿ ಕಾಣಲು ಪ್ರಾರಂಭಿಸುತ್ತಾನೆ. ಇದನ್ನು ಪ್ರಥಮ ಕಲೆ ಎಂತಲೂ ಕರೆಯುತ್ತಾರೆ.
ಅಂತರಗಳು ಹೆಚ್ಚಾದಂತೆ ತದಿಗೆ, ಚೌತಿ, ಪಂಚಮಿ, ಷಷ್ಟಿ, ಸಪ್ತಮಿ, ಅಷ್ಟಮಿ, ನವಮಿ, ಏಕಾದಶಿ, ದ್ವಾದಶಿ, ತ್ರಯೋದಶಿ, ಚತುರ್ದಶಿ ತಿಥಿಗಳಾಗುತ್ತದೆ.
ನೂರಅರವತ್ತೆಂಟರಿಂದ ನೂರಎಂಬತ್ತು ಅಂಶಗಳ ಅಂತರವಿರುವಾಗ ಪೂರ್ಣಚಂದ್ರನು ಅಂದರೆ ಹುಣ್ಣಿಮೆಯೂ ಪುನಃ ಮುನ್ನೂರಅರವತ್ತು ಅಂಶಗಳಿಗೆ ಒಗ್ಗೂಡುವ ಸೂರ್ಯಚಂದ್ರರಿಂದ ಉಂಟಾದ ಕತ್ತಲೆಯು ಅಮವಾಸ್ಯಾ ಎಂದು ಕರೆಯಲ್ಪಟ್ಟು ಚಕ್ರದಂತೆ ಸುತ್ತಲು ಆರಂಭವಾಗುತ್ತದೆ. ಇದಕ್ಕೆ ತಿಥಿಚಕ್ರವೆಂದು ಕರೆಯುತ್ತಾರೆ.
ಖಗೋಳ ವಿಜ್ಞಾನದ ಪ್ರಕಾರ ಹಿಂದೂ ಪದ್ದತಿಯಂತೆ ತಿಥಿ ಅಥವಾ ಚಾಂದ್ರದಿನದ ಗಣನೆ ಬಹಳ ಮುಖ್ಯ. ತಿಥಿಯೇ ಎಲ್ಲಾ ಹಬ್ಬ ಹರಿದಿನಗಳನ್ನು ನಿರ್ಧರಿಸುವುತ್ತದೆ. ಹನ್ನೆರಡು ಅಂಶಗಳನ್ನೊಳಗೊಂಡ ೩೦ ತಿಥಿಗಳು ಒಂದು ಚಾಂದ್ರಮಾಸವನ್ನು ಸಂಪೂರ್ಣಗೊಳಿಸುತ್ತದೆ. ಕೆಲವು ವೇಳೆ ಒಂದು ಪಕ್ಷದಲ್ಲಿ ೧೩, ೧೪, ೧೬ ದಿನಗಳು ಬರುವುದು ಉಂಟು. ಪಾಡ್ಯದಿಂದ ಹುಣ್ಣಿಮೆಯವರೆಗೆ ಶುಕ್ಲಪಕ್ಷವೆಂತಲೂ ಪುನಃ ಪಾಡ್ಯದಿಂದ ಅಮಾವಾಸ್ಯೆವರೆಗೆ ಕೃಷ್ಣಪಕ್ಷವೆಂತಲೂ ಕರೆಯಲ್ಪಟ್ಟು ಒಂದು ಚಾಂದ್ರಮಾಸ ಪೂರ್ಣಗೊಳ್ಳುತ್ತದೆ.

ವಾರ:
ಸೂರ್ಯನಿಂದ ಆರಂಭಿಸಿ ಶನಿಯ ತನಕ ಏಳು ಗ್ರಹಗಳು ಅಧಿಪತಿಗಳಾಗಿರುವ ಏಳು ದಿನಗಳೇ ಏಳು ವಾರಗಳು. ಒಂದು ದಿನದ ಸೂರ್ಯೋದಯದಿಂದ ಮರುದಿನದ ಸೂರ್ಯೋದಯದವರೆಗಿನ ಕಾಲವನ್ನು ಇಪ್ಪತ್ತನಾಲ್ಕು ವಿಭಾಗಗಳಾಗಿ ಮಾಡಲಾಗಿದೆ. ಈ ವಿಭಾಗಗಳಿಗೆ ಹೋರಾ ಎಂದು ಹೆಸರು. ಪ್ರತಿಯೊಂದು ವಾರವು ಆರಂಭವಾಗುವ ಕಾಲದಲ್ಲಿರುವ ಹೋರೆಯ ಅಧಿಪತಿ ಆ ವಾರದ ಅಧಿಪತಿಯಾಗಿರುತ್ತಾನೆ.
ಉದಾಹರಣೆಗೆ ಆದಿತ್ಯವಾರವು ಆದಿತ್ಯ ಹೋರೆಯಿಂದ ಆರಂಭವಾಗಿ ಮುಂದಿನ ಸೂರ್ಯೋದಯದ ತನಕ ೨೪ ಹೋರೆಗಳನ್ನು ಒಳಗೊಂಡಿರುತ್ತದೆ. ಸೋಮವಾರವು ಚಂದ್ರ ಹೋರೆಯಿಂದ ಆರಂಭಗೊಳ್ಳುತ್ತದೆ. ಹೀಗೆಯೇ ಮಂಗಳವಾರವು ಬುಧ. ಗುರು, ಶುಕ್ರ, ಶನಿವಾರಗಳು ಮುಂದುವರಿಯುತ್ತದೆ.

ನಕ್ಷತ್ರ; ನಕ್ಷತ್ರ ಪಾದ; ರಾಶಿ; ಸೌರಮಾಸ:
ನಕ್ಷತ್ರವೆನ್ನುವುದು ಪಂಚಾಂಗದ ಮೂರನೆಯ ಅಂಗವಾಗಿದೆ. ಒಟ್ಟು ೨೭ ನಕ್ಷತ್ರಗಳಿದ್ದು ಅಶ್ವಿನಿಯಿಂದ ರೇವತಿಯವರೆಗೆ ನಾಮಾಂಕಿತವಾಗಿದೆ. ಸುಮಾರು ೨೭ ದಿನದಲ್ಲಿ ಚಂದ್ರನು ಆಕಾಶದಲ್ಲಿ ಒಂದು ಸುತ್ತು ಬರುತ್ತಾನೆ. ಆಗ ಅಶ್ವಿನ್ಯಾದಿ ಇಪ್ಪತ್ತೇಳು ನಕ್ಷತ್ರಗಳಲ್ಲಿ ಚಂದ್ರನು ದಿನಕ್ಕೆ ಒಂದೊಂದು ನಕ್ಷತ್ರದ ಸಮೀಪ ಬರುತ್ತಾನೆ. ಚಂದ್ರನ ಸಮೀಪ ನಕ್ಷತ್ರವು ಚಂದ್ರ ನಕ್ಷತ್ರವಾಗಿ ಕರೆಸಿಕೊಳ್ಳುವುದು.
ಮುನ್ನೂರ ಅರವತ್ತು ಅಂಶವಿರುವ ಕಾಂತಿವೃತ್ತವನ್ನು ಇಪ್ಪತ್ತೇಳು ವಿಭಾಗಗಳಾಗಿ ಮಾಡಿ ಒಂದೊಂದು ವಿಭಾಗಕ್ಕೆ ಅಶ್ವಿನ್ಯಾದಿ ಇಪ್ಪತ್ತೇಳು ಹೆಸರುಗಳನ್ನು ಇಟ್ಟರು. ಒಂದೊಂದು ವಿಭಾಗಕ್ಕೂ ಹದಿಮೂರು ಅಂಶ ಮತ್ತು ಇಪ್ಪತ್ತು ಕಲೆಗಳಿರುವುವು. ಈ ವಿಭಾಗಾತ್ಮಕವಾದ ಒಂದೊಂದು ನಕ್ಷತ್ರವನ್ನು ಅಂದರೆ ಹದಿಮೂರು ಅಂಶ ಮತ್ತು ಇಪ್ಪತ್ತು ಕಲೆಗಳನ್ನು ನಾಲ್ಕು ಪಾಲು ಮಾಡಿದಾಗ ಪ್ರತಿಯೊಂದು ಪಾಲಿಗೆ ಮೂರು ಅಂಶ ಮತ್ತು ಇಪ್ಪತ್ತು ಕಲೆಗಳು ಆಗುವುವು. ಇದನ್ನು ನಕ್ಷತ್ರ ಪಾದವೆಂದು ಕರೆಯುತ್ತಾರೆ.
ಈ ರೀತಿಯ ನಕ್ಷತ್ರ ಪಾದಗಳಲ್ಲಿ ಒಂಭತ್ತು ಪಾದಗಳಿಗೆ ಒಂದು ರಾಶಿಅಥವಾ ಎರಡು ಕಾಲು ನಕ್ಷತ್ರಕ್ಕೆ ಒಂದು ರಾಶಿಯಾಗುವುದು.
ಒಂದು ರಾಶಿಯೆಂದರೆ ಮೂವತ್ತು ಅಂಶಗಳು. ಹನ್ನೆರಡು ರಾಶಿಗಳಿಗೆ ಮುನ್ನುರರವತ್ತು ಅಂಶಗಳಾಗುವುವು. ಮೇಷ, ವೃಷಭ, ಮಿಥುನ, ಕರ್ಕಾಟಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ,ಕುಂಭ, ಮೀನಗಳೆಂದು ಹನ್ನೆರಡು ರಾಶಿಗಳು ಹೆಸರಿಸಲ್ಪಟ್ಟಿದೆ.
ಚಂದ್ರನಿರುವ ನಕ್ಷತ್ರವು ನಿತ್ಯ ನಕ್ಷತ್ರವಾದರೆ ಸೂರ್ಯನೀರುವ ನಕ್ಷತ್ರವುಮಹಾನಕ್ಷತ್ರವೆನಿಸುವುದು, ಸೂರ್ಯನು ಸುಮಾರು ಹದಿಮೂರುವರೆ ದಿನಗಳಲ್ಲಿ ಒಂದು ನಕ್ಷತ್ರದಿಂದ ಮತ್ತೊಂದು ನಕ್ಷತ್ರಕ್ಕೆ ಸಂಚರಿಸುವನು.
ಸೂರ್ಯನು ಕ್ರಾಂತಿ ವೃತ್ತದಲ್ಲಿ ಮೇಷ ರಾಶಿಯನ್ನು ಮೊದಲುಗೊಂಡು , ಹನ್ನೆರಡು ರಾಶಿಗಳಲ್ಲಿ ಒಂದು ರಾಶಿಯಿಂದ ಇನ್ನೊಂದು ರಾಶಿಗೆ ದಾಟುವ ಕಾಲವನ್ನು ಸಂಕ್ರಮಣಅಥವ ಸಂಕ್ರಾಂತಿಎಂದು ಕರೆಯುತ್ತಾರೆ.
ಸೂರ್ಯನು ಮಂದಗತಿಯಲ್ಲಿದ್ದರೆ ಅವನಿಗೆ ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಹೋಗಲು ಸುಮಾರು ಮೂವತ್ತು, ಮೂವತ್ತೊಂದು ಅಥವಾ ಮೂವತೆರಡು ದಿನಗಳು ಬೇಕಾಗುತ್ತದೆ. ಅವನು ಶೀಘ್ರಗತಿಯಲ್ಲಿದ್ದರೆ, ಅವನಿಗೆ ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಹೋಗಲು ಇಪ್ಪತ್ತೊಂಬತ್ತು ದಿನಗಳು ಬೇಕಾಗುತ್ತದೆ.
ಸೂರ್ಯನು ಒಂದು ರಾಶಿಯಲ್ಲಿರುವಷ್ಟು ಕಾಲ ಒಂದುಸೌರಮಾಸವಾಗುವುದು. ಇಂತಹ ೧೨ ಸಂಕ್ರಮಣಗಳಿಂದ (ಮೇಷ, ವೃಷಭ ….) ೧೨ ಸೌರಮಾಸಗಳಾಗುವುವು. ೧೨ ಸೌರಮಾಸಗಳಿಂದ ಒಂದು ಸೌರವರ್ಷವಾಗುವುದು.
ಸೂರ್ಯನ ಗತಿಯಲ್ಲಿ ದಿಕ್ಕು ಬದಲಾವಣೆಯಾಗುವುದರಿಂದ ಕರ್ಕಟಾ (ದಕ್ಷಿಣಾಯಣ) ಮತ್ತು ಮಕರ (ಉತ್ತರಾಯಣ) ಸಂಕ್ರಮಣಗಳನ್ನು ವಿಶೇಷವಾಗಿ ಪರಿಗ್ರಹಿಸುವರು.

ಯೋಗ:
ಇಪ್ಪತ್ತೇಳು ನಕ್ಷತ್ರದಂತೆಯೇ ಇಪ್ಪತ್ತೇಳು ಯೋಗಗಳಿರುತ್ತದೆ. ಹದಿಮೂರು ಅಂಶ ಮತ್ತು ಇಪ್ಪತ್ತು ಕಲೆಗಳನ್ನು ಕಾಂತಿವೃತ್ತದಲ್ಲಿರುವ ಮುನ್ನೂರ ಅರವತ್ತು ಅಂಶಗಳನ್ನು ವಿಭಜಿಸಿದ್ದಲ್ಲಿ ೨೭ ಯೋಗಗಳಾಗುತ್ತವೆ. ಯೋಗ ವೆಂದರೆ ಒಗ್ಗೂಡುವಿಕೆ ಎಂದರ್ಥ. ಸೂರ್ಯ ಚಂದ್ರರ ಗತಿಯನ್ನು ಒಟ್ಟೂ ಸೇರಿಸಿದರೆ ಆಗುವುದು ಯೋಗ. ಈ ಒಟ್ಟುಗೂಡುವಿಕೆಯು ೧೩ ಅಂಶ ಮತ್ತು ೨೦ ಕಲೆಗಳಾಗುತ್ತದೆ.

ಕರಣ:
ಇದು ಪಂಚಾಂಗದ ೫ನೇ ಅಂಗ. ತಿಥಿಯ ಅರ್ಧಭಾಗ ಕರಣವಾಗಿರುತ್ತದೆ. ಶುಕ್ಲಪಕ್ಷದ ಪಾಡ್ಯದಿಂದ ಕೃಷ್ಣಪಕ್ಷದ ಅಮಾವಾಸ್ಯೆಯವರೆಗೆ ೩೦ ತಿಥಿಗಳಿರುತ್ತದೆ. ತಿಥಿಯ ಅರ್ಧ ಭಾಗ ಕರಣವೆನಿಸಿದಾಗ ಅರವತ್ತು ಕರಣಗಳಿರುತ್ತದೆ. ಆದರೆ ೬೦ ಕರಣಗಳಿಗೆ ಪ್ರತ್ಯೇಕ ಹೆಸರು ಇರುವುದಿಲ್ಲ. ಕರಣಗಳಿರಿವುದು ೧೧ ಮಾತ್ರ. ಶುಕ್ಲಪಕ್ಷದ ಪಾಡ್ಯದ ಉತ್ತರಾರ್ಧದಿಂದ ಆರಂಭಿಸಿ ಕೃಷ್ಣಪಕ್ಷದ ಚತುರ್ದಶಿಯ.ಪೂರ್ವಾರ್ಧದ ಅಂತ್ಯದ ತನಕ ಬವ, ಬಾಲವ ಕೌಲವ, ತೈತಿಲ, ಗರಜೆ, ವಣಜೆ ಮತ್ತು ಭದ್ರಾಗಳೆಂಬ ಏಳು ಕರಣಗಳು ಅನುಕ್ರಮವಾಗಿ ಎಂಟು ಸಲಪರಿವರ್ತಿಸಿ ಬರುತ್ತದೆ. ಈ ಕಾರಣದಿಂದ ಇವುಗಳಿಗೆ ಚರಕರಣಗಳೆಂದು ಪೆಸರು. ಶುಕ್ಲ ಪ್ರಥಮ ತಿಥಿಯ ಮೊದಲ ಭಾಗ (ಮೊದಲ ಅರ್ಧಭಾಗ) ಕಿಂಸ್ತುಘ್ನವೆಂಬ ಕರಣ. ಕೃಷ್ಣ ಚತುರ್ದಶಿಯ ಉತ್ತರಾರ್ಧದ ಆರಂಭದಿಂದ (ಎರಡನೆಯ ಅರ್ಧ) ಶಕುನಿ ಎಂಬ ಕರಣ. ಅಮಾವಾಸ್ಯೆಯ ಪೂರ್ವಾರ್ಧ ಮತ್ತು ಉತ್ತರಾರ್ಧಗಳಲ್ಲಿ ಚತುಷ್ಪಾತ್ ಮತ್ತು ನಾಗವಾನ್ ಎಂಬ ಕರಣಗಳಿವೆ. ಇವು ತಿಂಗಳೊಂದರ ಒಳಗೆ ಪುನರಾವರ್ತಿಸದಿರುವುದರಿಂದಸ್ಥಿರಕರಣಗಳು. ಏಳು ಚರಣಗಳ ಎಂಟು ಆವರ್ತನೆಗೆ ಐವತ್ತಾರು ಕರಣಗಳು ಆಗುತ್ತದೆ. ಇದಕ್ಕೆ ನಾಲ್ಕು ಸ್ಥಿರ ಕರಣಗಳನ್ನು ಸೇರಿಸಿದಾಗ ಮೂವತ್ತು ತಿಥಿಗಳಲ್ಲಿ ಒಂದು ತಿಂಗಳಲ್ಲಿ ಅರವತ್ತು ಕರಣಗಳಾಗುವುವು.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರು ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9686268564 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9686268564

ವಿಷ ಮತ್ತು ಅಮೃತ:
ಪಂಚಾಂಗದಲ್ಲಿ ತಿಥಿ, ವಾರ, ನಕ್ಷತ್ರ, ಯೋಗ ಮತ್ತು ಕರಣಗಳೆಂಬ ಐದು ಅಂಗಗಳನ್ನು ನಮೂದಿಸಿದ ನಂತರ ವಿಷ ಅಮೃತಗಳ ತಿಳುವಳಿಕೆಯು ಮುಖ್ಯವಾಗಿದೆ. ಪ್ರತಿ ನಕ್ಷತ್ರದಲ್ಲಿಯೂ ನಿರ್ದಿಷ್ಟ ಘಟಿಗಳು ಕಳೆದ ಆನಂತರದ ನಾಲ್ಕು ಘಟಿಗಳಿಗೆ ವಿಷಕಾಲವೆಂಬ ಸಂಜ್ಞೆಯಿದೆ. ಇದನ್ನು ವಿಷಎನ್ನುತ್ತಾರೆ. ಅಂತಯೇ ನಿರ್ದಿಷ್ಟ ಘಟಿಗಳು ಕಳೆದ ಆನಂತರದ ನಾಲ್ಕು ಘಟಿಗಳ ಕಾಲವನ್ನು ಅಮೃತ ಅಥವಾ ಅಮೃತಕಾಲವೆನ್ನುತ್ತಾರೆ.
ಇದು ಆಯಾ ನಕ್ಷತ್ರದ ಪರಮ ಘಟಿಯು ಅರವತ್ತು ಇದ್ದಾಗಿನ ಲೆಕ್ಕಾಚಾರ. ಪರಮಘಟಿಯಲ್ಲಿ ಹೆಚ್ಚು ಕಡಿಮೆಯಾದಾಗ ತ್ರೈರಾಶಿಕ ವಿಧಾನದಿಂದ ವಿಷ ಮತ್ತು ಅಮೃತ ಕಾಲವನ್ನು ನಿರ್ಧರಿಸಲಾಗುವುದು. ಕೆಲವು ಪಂಚಾಂಗದಲ್ಲಿ ವಿಶೇ, ಅಶೇ ಎಂದು ಬರೆದಿರುತ್ತದೆ. ಇವುಗಳಿಗೆ ವಿಷ ಶೇಷ, ಅಮೃತ ಶೇಷವೆಂದು ಅರ್ಥ. ವಿಷಕಾಲವು ದೋಷಗಳಲ್ಲಿ ಸೇರಿರುವುದರಿಂದ ಶುಭ ಕಾರ್ಯಗಳಿಗೆ ವರ್ಜ್ಯವಾದುದು ಮತ್ತು ಅಮೃತಕಾಲವು ಯೋಗ್ಯವಾಗಿರುತ್ತದೆ.

Here is an important information about almanac ಪಂಚಾಂಗ ಕುರಿತು ಇಲ್ಲಿದೆ ಒಂದು ಮಹತ್ವದ ಮಾಹಿತಿ
Share. Facebook Twitter LinkedIn WhatsApp Email

Related Posts

BREAKING : ತುರ್ತು ಪರಿಸ್ಥಿತಿಯಲ್ಲಿ ಸಂಜಯ್ ಗಾಂಧಿ 1.7 ಕೋಟಿ ಜನರಿಗೆ ‘ಸಂತಾನಹರಣ’ ಚಿಕಿತ್ಸೆ ಮಾಡಿಸಿದ್ದರು : ಪ್ರಹ್ಲಾದ್ ಜೋಶಿ

06/07/2025 7:41 PM2 Mins Read

BREAKING : ಪುತ್ತೂರಿನ ಬೀರಮಲೆ ಬೆಟ್ಟದಲ್ಲಿ ನೈತಿಕ ಪೊಲೀಸ್ ಗಿರಿ ಪ್ರಕರಣ : ಇಬ್ಬರು ಆರೋಪಿಗಳು ಅರೆಸ್ಟ್

06/07/2025 7:13 PM1 Min Read

BREAKING : ಇನ್ಮುಂದೆ ಆನ್​ಲೈನ್ ಬೆಟ್ಟಿಂಗ್ ಗೆ ನಿಷೇಧ : ಗ್ಯಾಂಬ್ಲಿಂಗ್​ಗೆ ಕಡಿವಾಣ ಹಾಕಲು ಹೊಸ ಮಸೂದೆ ಸಿದ್ದಪಡಿಸಿದ ರಾಜ್ಯ ಸರ್ಕಾರ

06/07/2025 7:06 PM1 Min Read
Recent News

BREAKING : ತುರ್ತು ಪರಿಸ್ಥಿತಿಯಲ್ಲಿ ಸಂಜಯ್ ಗಾಂಧಿ 1.7 ಕೋಟಿ ಜನರಿಗೆ ‘ಸಂತಾನಹರಣ’ ಚಿಕಿತ್ಸೆ ಮಾಡಿಸಿದ್ದರು : ಪ್ರಹ್ಲಾದ್ ಜೋಶಿ

06/07/2025 7:41 PM

BREAKING : ಪುತ್ತೂರಿನ ಬೀರಮಲೆ ಬೆಟ್ಟದಲ್ಲಿ ನೈತಿಕ ಪೊಲೀಸ್ ಗಿರಿ ಪ್ರಕರಣ : ಇಬ್ಬರು ಆರೋಪಿಗಳು ಅರೆಸ್ಟ್

06/07/2025 7:13 PM

BREAKING : ಇನ್ಮುಂದೆ ಆನ್​ಲೈನ್ ಬೆಟ್ಟಿಂಗ್ ಗೆ ನಿಷೇಧ : ಗ್ಯಾಂಬ್ಲಿಂಗ್​ಗೆ ಕಡಿವಾಣ ಹಾಕಲು ಹೊಸ ಮಸೂದೆ ಸಿದ್ದಪಡಿಸಿದ ರಾಜ್ಯ ಸರ್ಕಾರ

06/07/2025 7:06 PM

BREAKING : ಚಿಕ್ಕಮಗಳೂರು : ತೋಟದಲ್ಲಿ ಕೆಲಸ ಮಾಡುವಾಗ, ಕಾಡುಕೋಣ ದಾಳಿಗೆ ವ್ಯಕ್ತಿ ಬಲಿ!

06/07/2025 6:26 PM
State News
KARNATAKA

BREAKING : ತುರ್ತು ಪರಿಸ್ಥಿತಿಯಲ್ಲಿ ಸಂಜಯ್ ಗಾಂಧಿ 1.7 ಕೋಟಿ ಜನರಿಗೆ ‘ಸಂತಾನಹರಣ’ ಚಿಕಿತ್ಸೆ ಮಾಡಿಸಿದ್ದರು : ಪ್ರಹ್ಲಾದ್ ಜೋಶಿ

By kannadanewsnow0506/07/2025 7:41 PM KARNATAKA 2 Mins Read

ಧಾರವಾಡ : ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಜಾರ್ಜ್ ಫರ್ನಾಂಡಿಸ್ ಅವರ ಸಹೋದರನಿಗೆ ಬಹಳಷ್ಟು ಚಿತ್ರಹಿಂಸೆ ಕೊಟ್ಟಿದ್ದಾರೆ. ಅವರ ಬೆರಳಿಂದ ಉಗುರು…

BREAKING : ಪುತ್ತೂರಿನ ಬೀರಮಲೆ ಬೆಟ್ಟದಲ್ಲಿ ನೈತಿಕ ಪೊಲೀಸ್ ಗಿರಿ ಪ್ರಕರಣ : ಇಬ್ಬರು ಆರೋಪಿಗಳು ಅರೆಸ್ಟ್

06/07/2025 7:13 PM

BREAKING : ಇನ್ಮುಂದೆ ಆನ್​ಲೈನ್ ಬೆಟ್ಟಿಂಗ್ ಗೆ ನಿಷೇಧ : ಗ್ಯಾಂಬ್ಲಿಂಗ್​ಗೆ ಕಡಿವಾಣ ಹಾಕಲು ಹೊಸ ಮಸೂದೆ ಸಿದ್ದಪಡಿಸಿದ ರಾಜ್ಯ ಸರ್ಕಾರ

06/07/2025 7:06 PM

BREAKING : ಚಿಕ್ಕಮಗಳೂರು : ತೋಟದಲ್ಲಿ ಕೆಲಸ ಮಾಡುವಾಗ, ಕಾಡುಕೋಣ ದಾಳಿಗೆ ವ್ಯಕ್ತಿ ಬಲಿ!

06/07/2025 6:26 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.