Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING: ಸಿಎಂ ಸಿದ್ಧರಾಮಯ್ಯ, ಡಿಕೆಶಿ ಬಗ್ಗೆ ಅವಹೇಳನಕರ, ಅಸಭ್ಯ ವೀಡಿಯೋ ಹರಿಬಿಟ್ಟವರ ವಿರುದ್ಧ FIR ದಾಖಲು

07/11/2025 9:56 PM

ಸಾಗರ ತಾಲ್ಲೂಕಿನ ಜನತೆಯ ಸಮಸ್ಯೆ ನಿವಾರಣೆಗೆ ‘ಶಾಸಕ ಗೋಪಾಲಕೃಷ್ಣ ಬೇಳೂರು’ ಮಹತ್ವದ ಹೆಜ್ಜೆ

07/11/2025 9:46 PM

BREAKING: ‘ಸೊರಬ ಪುರಸಭೆ’ಗೆ ಸಾಗರ ಉಪವಿಭಾಗಾಧಿಕಾರಿಯನ್ನು ‘ಆಡಳಿತಾಧಿಕಾರಿ’ಯಾಗಿ ನೇಮಿಸಿ ‘ರಾಜ್ಯ ಸರ್ಕಾರ’ ಆದೇಶ

07/11/2025 9:03 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಹೀಗಿದೆ ಇಂದಿನ ಸಿಎಂ ಸಿದ್ಧರಾಮಯ್ಯ ನೇತೃತ್ವದಲ್ಲಿ ನಡೆದ ‘ಸಚಿವ ಸಂಪುಟ ಸಭೆ’ ಪ್ರಮುಖ ಹೈಲೈಟ್ಸ್ | Karnataka Cabinet Meeting
KARNATAKA

ಹೀಗಿದೆ ಇಂದಿನ ಸಿಎಂ ಸಿದ್ಧರಾಮಯ್ಯ ನೇತೃತ್ವದಲ್ಲಿ ನಡೆದ ‘ಸಚಿವ ಸಂಪುಟ ಸಭೆ’ ಪ್ರಮುಖ ಹೈಲೈಟ್ಸ್ | Karnataka Cabinet Meeting

By kannadanewsnow0911/09/2025 6:16 PM

ಬೆಂಗಳೂರು: ಸ್ಯಾಂಡಲ್ ವುಡ್ ನಟ ವಿಷ್ಣುವರ್ಧನ್ ಗೆ ಹಾಗೂ ಬಿ.ಸರೋಜಾದೇವಿಗೂ ಕರ್ನಾಟಕ‌ರತ್ನ ಪ್ರಶಸ್ತಿ ನೀಡಲು ರಾಜ್ಯ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಿದೆ. ಅಲ್ಲದೇ ಕುವೆಂಪು ಅವರಿಗೆ ಭಾರತ ರತ್ನ‌ಪ್ರಶಸ್ತಿ ನೀಡಬೇಕು. ಈ ಬಗ್ಗೆ ಕೇಂದ್ರಕ್ಕೆ ಶಿಫಾರಸು‌ಮಾಡಲು ನಿರ್ಧರಿಸಲಾಗಿದೆ. ಆ ಎಲ್ಲಾ ಇಂದಿನ ರಾಜ್ಯ ಸಚಿವ ಸಂಪುಟ ಸಭೆಯ ಪ್ರಮುಖ ಹೈಲೈಟ್ಸ್ ಮುಂದಿದೆ ಓದಿ.

ಇಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದಲ್ಲಿ ರಾಜ್ಯ ಸಚಿವ ಸಂಪುಟ ಸಭೆ ನಡೆಯಿತು. ಈ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಸಂಪುಟದ ನಿರ್ಧಾರಗಳನ್ನು ವಿವರಿಸಿದಂತ ಸಚಿವ ಹೆಚ್.ಕೆ ಪಾಟೀಲ್ ಅವರು, ಇಂದು 40 ವಿಷಯಗಳ ಬಗ್ಗೆ ಚರ್ಚೆಯಾಗಿದೆ. ಉಪಖನಿಜ ರಿಯಾಯ್ತಿ ತಿದ್ದುಪಡಿ ನಿಯಮಕ್ಕೆ ಒಪ್ಪಿಗೆ ನೀಡಲಾಗಿದೆ. ಜನರಿಗೆ ಅನುಕೂಲವಾಗುವಂತೆ ಸರಳೀಕರಣ ಮಾಡಲಾಗುತ್ತಿದೆ. ಮಣ್ಣು,ಮರಳು ತೆಗೆಯಲು ಅನುಕೂಲ ಆಗಲಿದೆ ಎಂದರು.

ಪ್ರೋಟೋಕಾಲ್ ಮಾರ್ಗಸೂಚಿ‌ ಪರಿಷ್ಕರಣೆ ಮಾಡಲಾಗುತ್ತಿದೆ. ಸರ್ಕಾರಿ ಕಾರ್ಯಕ್ರಮಗಳಿಗೆ ಅನ್ವಯವಾಗಲಿದೆ. ಆಹ್ವಾನ ಪತ್ರಿಕೆಗಳಲ್ಲಿ‌ ಗಣ್ಯರ ಹೆಸರು ಸೇರಿಸಲು ಅವಕಾಶ ನೀಡಲಾಗುತ್ತದೆ. ಶಿಷ್ಟಾಚಾರ ಪಟ್ಟಿ ಬದಲಾವಣೆಗೆ ಕ್ಯಾಬಿನೆಟ್ ಒಪ್ಪಿಗೆ ಸೂಚಿಸಿದೆ. ಹೆಚ್ಚು ಮಂದಿ ಸೇರಿಸುವುದಕ್ಕೆ ಕಡಿವಾಣ ಬೀಳಲಿದೆ. 9 ಗಣ್ಯರಿಗಷ್ಟೇ ಇನ್ಮುಂದೆ ಆಹ್ವಾನಿಸಲು ಸಮ್ಮತಿ ನೀಡಲಾಗಿದೆ. ಈ ಮೊದಲು 20, 25 ಗಣ್ಯರಿಗೆ ಅವಕಾಶ ಇರ್ತಿತ್ತು. ಯಾರು ಎಷ್ಟೇ ದೊಡ್ಡವರಿರಲಿ ಅವಕಾಶ ಇಲ್ಲ. ಅಮಂತ್ರಣ ಇರುವವರಿಗಷ್ಟೇ ವೇದಿಕೆಗೆ ಅವಕಾಶ ನೀಡಲಾಗಿದೆ ಎಂದರು.

ಕುಸುಮ್ ಯೋಜನೆಗೆ ಸರ್ಕಾರದ ಸಹಾಯಧನ ಶೇ 50 ರಷ್ಟು ಸಹಾಯ ಧನ ನೀಡಲು ಸಮ್ಮತಿ ನೀಡಲಾಗಿದೆ. ಬಯೋ ಡೀಸೇಲ್ ಮಿಶ್ರಣ ನಿಯಮಕ್ಕೆ ಒಪ್ಪಿಗೆ ಸೂಚಿಸಲಾಗಿದೆ. ಬಯೋಡಿಸೇಲ್ ಹೆಸರಿನಲ್ಲಿ ಇತರ ರಾಸಾಯನಿಕ ಮಾರಾಟ. ಡಿಸೇಲ್ ಗೆ 10% ಮಿಕ್ಸ್ ಮಾಡಲು ಅವಕಾಶವಿದೆ. ಮೊದಲಿಗೆ 7% ಮಿಕ್ಸ್ ಗೆ ಅವಕಾಶ ಇತ್ತು. ಎಷ್ಟೆಷ್ಟು ಪ್ರಮಾಣದಲ್ಲಿ ಮಾಡಬಹುದು. ಬಯೋ ಎನರ್ಜಿ ಡೆವಲಪ್ ಮೆಂಟ್ ಬೋರ್ಡ್ ಗೆ ನೀಡಲಾಗಿದೆ ಎಂದರು.

ಜಿಲ್ಲಾ, ತಾಲೂಕು ಆಸ್ಪತ್ರೆಗಳ ನವೀಕರಣ. ಕೊರಟಗೆರೆ, ಜಗಳೂರು, ಮಾಗಡಿ, ಕುಶಾಲನಗರ, ಸವಣೂರು, ಮಾಲೂರು, ರಾಮದುರ್ಗ ಆಸ್ಪತ್ರೆಗಳ ನವೀಕರಣ ಮಾಡಲಾಗುತ್ತಿದೆ. ವೆನ್ಲಾಕ್, ದಾವಣಗೆರೆ ಜಿಲ್ಲಾ ಸ್ಪತ್ರೆಗಳ ನವೀಕರಣ. 540 ಕೋಟಿಗಳ ಅಂದಾಜು ಮೊತ್ತಕ್ಕೆ ಸಂಪುಟ ಒಪ್ಪಿಗೆ ನೀಡಲಾಗಿದೆ ಎಂದು ತಿಳಿಸಿದರು.

ಲೇಬರ್ ಸೆಸ್ ತಂತ್ರಾಶ ಪ್ರಾರಂಭಕ್ಕೆ ನಿರ್ಧಾರ ಕೈಗೊಳ್ಳಲಾಗಿದೆ. ಟ್ರಾಕಿಂಗ್ ಆಂಡ್ ಮಾನಿಟರಿಂಗ್ ಸಾಫ್ಟ್ ವೇರ್. 28.11 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಗೆ ಸಮ್ಮತಿಸಲಾಗಿದೆ. ಔಟ್ ಸೋರ್ಸ್ ಎಂಪ್ಲಾಯ್ ಗಳ ನೇಮಕ ದ ಬಗ್ಗೆ ಹೊಣೆ ನೀಡಲಾಗುತ್ತಿದೆ. ಕಾರ್ಮಿಕ ಇಲಾಖೆಯೇ ಇದನ್ನ ನಡೆಸಲಿದೆ. ಕ್ಯಾಬಿನೆಟ್ ಸಬ್ ಕಮಿಟಿಗೆ ಈ ಬಗ್ಗೆ ಸೂಚನೆ ನೀಡಲಾಗಿದೆ ಎಂದರು.

ವಿಕ್ಟೋರಿಯಾ ಆಸ್ಪತ್ರೆ ಪೀಠೋಪಕರಣ ಖರೀದಿಗೆ ಒಪ್ಪಿಗೆ ನೀಡಲಾಗಿದೆ. ಅಲ್ಪಸಂಖ್ಯಾತರ ಕಲ್ಯಾಣ ಹಜ್ ಇಲಾಖೆ, ಅಲ್ಪಸಂಖ್ಯಾತರ ಕಾಲೋನಿಗಳ ಅಭಿವೃದ್ಧಿಗೆ ಸಮ್ಮತಿಸಲಾಗಿದೆ. 398 ಕೋಟಿ ಅನುದಾನಕ್ಕೆ ಒಪ್ಪಿಗೆ ನೀಡಲಾಗಿದೆ. ರಾಜ್ಯದ 22 ಕ್ಷೇತ್ರಗಳ 40 ಕಾಮಗಾರಿಗೆ ಒಪ್ಪಿಗೆ ನೀಡಲಾಗಿದೆ ಎಂದರು.

ಬೆಟ್ಟದ ಪುರ ರಸ್ತೆ ನಿರ್ಮಾಣಕ್ಕೆ ಅನುದಾನ. ಪಿರಿಯಾಪಟ್ಟಣದ ಬೆಟ್ಡದ ಪುರ ರಸ್ತೆ ಅಭಿವೃದ್ಧಿ. ಸೀಮಾ ಮಸೂತಿ ಬಿಡಿಎಯಿಂದ ಜಿ ಕೆಟಗರಿ ನಿವೇಶನ. ಶುದ್ಧಕ್ರಯ ಪತ್ರ ನೀಡಲು ಒಪ್ಪಿಗೆ ನೀಡಲಾಗಿದೆ. ಏರ್ ಇಂಡಿಯಾ ಘನತ್ಯಾಜ್ಯ ವಿಲೇವಾರಿಗೆ ಒಪ್ಪಿಗೆ ಸೂಚಿಸಲಾಗಿದೆ. ಬೈರಮಂಗಲ ಕೆರೆ ದಡದಲ್ಲಿ ತ್ಯಾಜ್ಯ ಶುದ್ಧೀಕರಣ ಘಟಕ ನಿರ್ಮಾಣವನ್ನು ಮಾಡಲಾಗುತ್ತಿದೆ. 25 ದಶಲಕ್ಷ ಲೀಟರ್ ಸಾಮರ್ಥ್ಯದ ಘಟಕ ನಿರ್ಮಾಣ. 391 ಕೋಟಿ ಮೊತ್ತದ ಯೋಜನೆಗೆ ಅನುಮೋದನೆ ನೀಡಲಾಗಿದೆ. 7 ವರ್ಷಗಳ ಅವಧಿಗೆ ಖಾಸಗಿಯವರಿಗೆ ನೀಡಲಾಗುತ್ತದೆ ಎಂದರು.

ಸಿಡಿಎಸ್ ನಾಲೆಗಳ ಅಧುನೀರಕಣಕ್ಕೆ ಒಪ್ಪಿಗೆ ಸೂಚಿಸಲಾಗಿದೆ. ಶ್ರೀರಂಗಪಟ್ಟಣದಬಳಿ ಬರುವ ನಾಲೆಗಳು, ಪಿಕ್ ಅಪ್ ನಾಲೆಗಳ ನಿರ್ಮಾಣ,ಅಭಿವೃದ್ದಿ. ಸುಮಾರು 50 ಕೋಟಿ ಅಂದಾಜು ಮೊತ್ತಕ್ಕೆ ಸಹಿ ಹಾಕಲಾಗಿದೆ. ಕೆಜೆಐಎಸ್-2 ಅನುಷ್ಠಾನಕ್ಕೆ ಒಪ್ಪಿಗೆ ಸಾಧ್ಯತೆ ಇದೆ. ಕರ್ನಾಟಕ ಬೌಗೋಳಿಕ‌ಮಾಹಿತಿ ವ್ಯವಸ್ಥೆ. 150 ಕೋಟಿ ಅಂದಾಜು‌ಮೊತ್ತಕ್ಕೆ ಸಮ್ಮತಿಸಲಾಗಿದೆ. 70 ವರ್ಷ ಮೇಲ್ಪಟ್ಟವರಿಗೆ ಆರೋಗ್ಯ ಸೇವೆ, ಆಯುಷ್ಮಾನ್ ಭಾರತ್ ಯೋಜನೆಯಡಿ ಸೇವೆ, ಇಎಸ್ ಐಎಸ್ ಲಾಭ ಪಡೆಯಲು ಸರ್ಕಾರದ ಅವಕಾಶ. ಯಲಹಂಕ,ಹೆಬ್ಬಾಳದಲ್ಲಿ ಅತ್ಯಾಧುನಿಕ ಆಸ್ಪತ್ರೆ ನಿರ್ಮಾಣ. ಬೆಳ್ಳಹಳ್ಳಿ,ಜಿಕೆವಿಕೆಯಲ್ಲಿ ಆಸ್ಪತ್ರೆಗಳ ನಿರ್ಮಾಣ. ಸುಮಾರು 10೦ ಕೋಟಿ ವೆಚ್ಚಕ್ಕೆ ಒಪ್ಪಿಗೆ ನೀಡಲಾಗಿದೆ ಎಂದರು.

ಮದ್ದೂರು,ಮಳವಳ್ಳಿ ವಿಸಿ ಶಾಕಾ ನಾಲೆಗಳ ಅಧುನೀಕರಣ ಮಾಡಲಾಗುತ್ತಿದೆ. 293 ಕೋಟಿ ವೆಚ್ಚದಲ್ಲಿ ನಾಲೆಗಳ ನಿರ್ಮಾಣ ಮಾಡಲಾಗುತ್ತಿದೆ. ಮಲಪ್ರಭಾ ನದಿಗೆ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣ. ಜೊತೆಗೆ ತಡೆಗೋಡೆಯ ನಿರ್ಮಾಣಕ್ಕೆ ಒಪ್ಪಿಗೆ. ಖಾನಾಪುರ ತಾಲೂಕಿನ ಚಿಕ್ಕಹಟ್ಟಿಹೊಳೆ ಬಳಿ ನಿರ್ಮಾಣ. 50 ಕೋಟಿ ಅಂದಾಜು‌ಮೊತ್ತಕ್ಕೆ ಒಪ್ಪಿಗೆ ನೀಡಲಾಗಿದೆ. ಕಾಂಗ್ರೆಸ್ ಭವನ ನಿರ್ಮಾಣಕ್ಕೆ ಭೂಮಿ ನೀಡಿಕೆಗೆ ಸಮ್ಮತಿಸಲಾಗಿದೆ ಎಂದರು.

ಕಂದಾಯ ನಿರೀಕ್ಷಕರಿಗೆ ಕ್ರೋಮ್ ಬುಕ್ ವಿತರಣೆ ಮಾಡಲಾಗುತ್ತಿದೆ. 19.25 ಕೋಟಿ ವೆಚ್ಚದ ಖರೀದಿಗೆ ಒಪ್ಪಿಗೆ ನೀಡಲಾಗಿದೆ. ಸುಮಾರು 3500 ಕ್ರೋಮ್ ಬುಕ್ ಖರೀದಿಸಲಾಗುತ್ತಿದೆ. ಸಿಎಂ ಆದಿವಾಸಿ ಗೃಹ ಭಾಗ್ಯ ಯೋಜನೆ ಜಾರಿ. ಅರಣ್ಯ ವಾಸಿಗಳಿಗೆ ಮನೆಗಳ ನಿರ್ಮಾಣ. ಸೋಲಿಗ, ಹಲಸರು, ಗೌಡಲು, ಸಿದ್ದಿ,ಮಲೆ ಕುಡಿಯ, ಕಾಡುಕುರುವ, ಇರುಳಿಗ, ಜೇನು ಕುರಬರಿಗೆ ಮನೆ ನಿರ್ಮಾಣ. 160 ಕೋಟಿ ವೆಚ್ಚದ ಯೋಜನೆಗೆ ಒಪ್ಪಿಗೆ. ಗಂಗಾ ಕಲ್ಯಾಣ ಯೋಜನೆ ಗುತ್ತಿಗೆ ವಿಸ್ತರಣೆ. ಬೋರ್ ವೆಲ್ ಕೊರೆಯುವುದು,ಪಂಪ್ ಹಾಕುವ ಗುತ್ತಿಗೆ. ಗುತ್ತಿಗೆ ನೀಡಿರುವವರಿಗೆ ಎರಡು ವರ್ಷ ವಿಸ್ತರಣೆ ಮಾಡಲಾಗುತ್ತಿದೆ. ಒಂದು ವೇಳೆ ಗುತ್ತಿಗೆದಾರರು ಒಪ್ಪದಿದ್ದರೆ ಡಿಸಿಗಳಿಗೆ ಹೊಣೆ ನೀಡಲಾಗುತ್ತಿದೆ ಎಂದರು.

ಅಪ್ಪರ್ ಕೃಷ್ಣಾ ಯೋಜನೆ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದೆ. ಯೋಜನೆ ಪೂರ್ಣಗೊಳಿಸಲು ಸಿಎಂ ಅಭಿಪ್ರಾಯ. ಈಗಾಗಲೇ ಆಭಾಗದ ಮುಖಂಡರ ಜೊತೆ ಸಭೆ. ರೈತರ ಜೊತೆಗೂ ಸಭೆಗಳನ್ನ ಮಾಡಲಾಗಿತ್ತು. ಬಹಳಷ್ಟು ಮಂದಿ ಕೋರ್ಟ್ ಕಟ್ಟೆ ಏರಿದ್ದರು. ಡಿಸಿಎಂ ಎರಡು ಮೂರು ಸಭೆ ಮಾಡಿದ್ದರು. ಮುಳುಗಡೆಯಾಗುವ ಭೂಮಿ 75 ಸಾವಿರ ಎಕರೆ. ಈ ಯೋಜನೆ ಸಂಪೂರ್ಣಗೊಳ್ಳಲು ಎಲ್ಲರ ಸಹಕಾರ ಮುಖ್ಯ. ರೈತರನ್ನ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಭೂಮಿ ಸ್ವಾಧೀನಕ್ಕೆ ಪ್ರಕ್ರಿಯೆ ಮಾಡಬೇಕು. ಹಲವು ತಾಂತ್ರಿಕ ಕಾರಣಗಳು ಅಡ್ಡಿಯಾಗಿವೆ. ಹಲವು ಅಂಶಗಳ ಬಗ್ಗೆ ಚರ್ಚೆ ಮಾಡಿದ್ದೇವೆ. ರಾಜ್ಯದ ಹಿತದೃಷ್ಟಿಯಿಂದ ಕೆಲವು ತೀರ್ಮಾನ ಆಗಬೇಕು. ಇವತ್ತಿನ ಚರ್ಚೆ ಪೂರ್ಣಗೊಂಡಿಲ್ಲ. ಅಕ್ಟೋಬರ್ 16ರಂದು ವಿಶೇಷ ಸಂಪುಟ ಸಭೆ. ಅಲ್ಲಿ ಸಮಗ್ರವಾಗಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗಿದೆ ಎಂದರು.

ದಿವಂಗತ ನಟ ವಿಷ್ಣುವರ್ಧನ್ ಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಲಾಗುತ್ತಿದೆ. ಬಿ.ಸರೋಜಾದೇವಿಗೂ ಕರ್ನಾಟಕ‌ರತ್ನ ಪ್ರಶಸ್ತಿ ನೀಡಲು ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಿದೆ. ಕುವೆಂಪು ಅವರಿಗೆ ಭಾರತ ರತ್ನ‌ಪ್ರಶಸ್ತಿ ನೀಡಬೇಕು. ಈ ಬಗ್ಗೆ ಕೇಂದ್ರಕ್ಕೆ ಶಿಫಾರಸು‌ಮಾಡಲು ನಿರ್ಧಾರ ಕೈಗೊಳ್ಳಲಾಗಿದೆ ಎಂದರು.

BREAKING: ಅಕ್ರಮ ಆಸ್ತಿ ಪತ್ತೆ ಪ್ರಕರಣ: ಶಾಸಕ ಸತೀಶ್​ ಸೈಲ್​​ಗೆ ಮಧ್ಯಂತರ ಜಾಮೀನು ಮಂಜೂರು

BREAKING: ಸ್ಯಾಂಡಲ್ ವುಡ್ ನಟ ದಿ.ವಿಷ್ಣವರ್ಧನ್, ನಟಿ ಬಿ.ಸರೋಜಾ ದೇವಿಗೆ ಮರಣೋತ್ತರ ‘ಕರ್ನಾಟಕ ರತ್ನ ಪ್ರಶಸ್ತಿ’ ಘೋಷಿಸಿದ ಸರ್ಕಾರ

ತುಮಕೂರು : ನೀರಿನ ವಿಚಾರವಾಗಿ ಶುರುವಾದ ಗಲಾಟೆ ಕೊಲೆಯಲ್ಲಿ ಅಂತ್ಯ : ಗೂಡ್ಸ್ ವಾಹನ ಹರಿಸಿ ವ್ಯಕ್ತಿಯ ಭೀಕರ ಹತ್ಯೆ!

Share. Facebook Twitter LinkedIn WhatsApp Email

Related Posts

BREAKING: ಸಿಎಂ ಸಿದ್ಧರಾಮಯ್ಯ, ಡಿಕೆಶಿ ಬಗ್ಗೆ ಅವಹೇಳನಕರ, ಅಸಭ್ಯ ವೀಡಿಯೋ ಹರಿಬಿಟ್ಟವರ ವಿರುದ್ಧ FIR ದಾಖಲು

07/11/2025 9:56 PM1 Min Read

ಸಾಗರ ತಾಲ್ಲೂಕಿನ ಜನತೆಯ ಸಮಸ್ಯೆ ನಿವಾರಣೆಗೆ ‘ಶಾಸಕ ಗೋಪಾಲಕೃಷ್ಣ ಬೇಳೂರು’ ಮಹತ್ವದ ಹೆಜ್ಜೆ

07/11/2025 9:46 PM2 Mins Read

BREAKING: ‘ಸೊರಬ ಪುರಸಭೆ’ಗೆ ಸಾಗರ ಉಪವಿಭಾಗಾಧಿಕಾರಿಯನ್ನು ‘ಆಡಳಿತಾಧಿಕಾರಿ’ಯಾಗಿ ನೇಮಿಸಿ ‘ರಾಜ್ಯ ಸರ್ಕಾರ’ ಆದೇಶ

07/11/2025 9:03 PM1 Min Read
Recent News

BREAKING: ಸಿಎಂ ಸಿದ್ಧರಾಮಯ್ಯ, ಡಿಕೆಶಿ ಬಗ್ಗೆ ಅವಹೇಳನಕರ, ಅಸಭ್ಯ ವೀಡಿಯೋ ಹರಿಬಿಟ್ಟವರ ವಿರುದ್ಧ FIR ದಾಖಲು

07/11/2025 9:56 PM

ಸಾಗರ ತಾಲ್ಲೂಕಿನ ಜನತೆಯ ಸಮಸ್ಯೆ ನಿವಾರಣೆಗೆ ‘ಶಾಸಕ ಗೋಪಾಲಕೃಷ್ಣ ಬೇಳೂರು’ ಮಹತ್ವದ ಹೆಜ್ಜೆ

07/11/2025 9:46 PM

BREAKING: ‘ಸೊರಬ ಪುರಸಭೆ’ಗೆ ಸಾಗರ ಉಪವಿಭಾಗಾಧಿಕಾರಿಯನ್ನು ‘ಆಡಳಿತಾಧಿಕಾರಿ’ಯಾಗಿ ನೇಮಿಸಿ ‘ರಾಜ್ಯ ಸರ್ಕಾರ’ ಆದೇಶ

07/11/2025 9:03 PM

BIG NEWS: ರಾಜ್ಯದ ‘KUWJ ಚುನಾವಣೆ’ಗೆ ತಡೆಯಾಜ್ಞೆ ನೀಡಲು ಹೈಕೋರ್ಟ್ ನಕಾರ: ನ.9ರಂದು 20 ಜಿಲ್ಲೆಯಲ್ಲಿ ‘ಮತದಾನ ಫಿಕ್ಸ್’

07/11/2025 8:51 PM
State News
KARNATAKA

BREAKING: ಸಿಎಂ ಸಿದ್ಧರಾಮಯ್ಯ, ಡಿಕೆಶಿ ಬಗ್ಗೆ ಅವಹೇಳನಕರ, ಅಸಭ್ಯ ವೀಡಿಯೋ ಹರಿಬಿಟ್ಟವರ ವಿರುದ್ಧ FIR ದಾಖಲು

By kannadanewsnow0907/11/2025 9:56 PM KARNATAKA 1 Min Read

ಬೆಂಗಳೂರು: ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಬಗ್ಗೆ ಅವಹೇಳನಕಾರಿ, ಅಸಭ್ಯವಾದಂತ ವೀಡಿಯೋ ಹರಿಬಿಟ್ಟವರ ವಿರುದ್ಧ ಎಫ್ಐಆರ್…

ಸಾಗರ ತಾಲ್ಲೂಕಿನ ಜನತೆಯ ಸಮಸ್ಯೆ ನಿವಾರಣೆಗೆ ‘ಶಾಸಕ ಗೋಪಾಲಕೃಷ್ಣ ಬೇಳೂರು’ ಮಹತ್ವದ ಹೆಜ್ಜೆ

07/11/2025 9:46 PM

BREAKING: ‘ಸೊರಬ ಪುರಸಭೆ’ಗೆ ಸಾಗರ ಉಪವಿಭಾಗಾಧಿಕಾರಿಯನ್ನು ‘ಆಡಳಿತಾಧಿಕಾರಿ’ಯಾಗಿ ನೇಮಿಸಿ ‘ರಾಜ್ಯ ಸರ್ಕಾರ’ ಆದೇಶ

07/11/2025 9:03 PM

BIG NEWS: ರಾಜ್ಯದ ‘KUWJ ಚುನಾವಣೆ’ಗೆ ತಡೆಯಾಜ್ಞೆ ನೀಡಲು ಹೈಕೋರ್ಟ್ ನಕಾರ: ನ.9ರಂದು 20 ಜಿಲ್ಲೆಯಲ್ಲಿ ‘ಮತದಾನ ಫಿಕ್ಸ್’

07/11/2025 8:51 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.