ಬೆಂಗಳೂರು: ಇಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದಲ್ಲಿ ಮಹತ್ವದ ರಾಜ್ಯ ಸಚಿವ ಸಂಪುಟ ಸಭೆ ನಡೆಯಿತು. ಮೂವತ್ತುವರ್ಷಗಳ ಲೀಸ್ 5% ಗೈಡೆನ್ಸ್ ವ್ಯಾಲ್ಯೂ ಮೇಲೆ ಸೈಟು ಹಂಚಿಕೆ ಮಾಡಲು ನಿರ್ಧಾರ ಸೇರಿದಂತೆ ವಿವಿಧ ವಿಚಾರಗಳ ಬಗ್ಗೆ ಚರ್ಚೆ ನಡೆದು, ಅನುಮೋದನೆ ನೀಡಲಾಗಿದೆ. ಅಕ್ಟೋಬರ್.30, 2025ರ ಇಂದಿನ ರಾಜ್ಯ ಸಚಿವ ಸಂಪುಟ ಸಭೆಯ ಪ್ರಮುಖ ಹೈಲೈಟ್ಸ್ ಮುಂದಿದೆ ಓದಿ.
ಇಂದಿನ ಸಂಪುಟ ಸಭೆ ಬಳಿಕ ಕಾನೂನು ಸಚಿವ ಎಚ್ ಕೆ ಪಾಟೀಲ್ ಪತ್ರಿಕಾಗೋಷ್ಠಿ ಮಾತನಾಡಿ, ಇಂದಿನ ಸಂಪುಟ ಸಭೆಯಲ್ಲಿ 26 ವಿಷಯಗಳ ಬಗ್ಗೆ ಚರ್ಚೆ ಆಗಿವೆ. ಅರಣ್ಯ ಇಲಾಖೆಗೆ ಸಂಬಂಧಪಟ್ಟಂತೆ k ಶೋರ್ ಯೋಜನೆ ಅಡಿ 20 ಕೋಟಿ ಮೊತ್ತದದ ಕಾಮಗಾರಿಗಳಿಗೆ ಒಪ್ಪಿಗೆ ನೀಡಲಾಗಿದೆ. ಕರಾವಳಿ ಮತ್ತು ಪಶ್ಚಿಮಘಟ್ಟ ಗಳಲ್ಲಿನ ಕುರಿತು ಯೋಜನೆ ಇದಾಗಿದೆ. ಕಾರವಾರ, ಮಲ್ಪೆ,ಹಳೆ ಮಂಗಳೂರು ಬಂದರುಗಳನ್ನು ಪಿಪಿಪಿ ಮಾದರಿಯಲ್ಲಿ ರಿಪೇರಿ ಮಾಡಿ ನಿರ್ವಹಣೆ ಮಾಡುಲು ತಯಾರಿಯಾಗಲಿದೆ. 40 ಕೋಟಿ ಯೋಜನಾ ವೆಚ್ಚಕ್ಕೆ ಸಂಪುಟ ಅನುಮೋದನೆ ನೀಡಲಾಗಿದೆ. ಮಂಡ್ಯ ಕಾಂಗ್ರೆಸ್ ಭವನ ನಿರ್ಮಾಣಕ್ಕೆ ವಿವೇಕಾನಂದ ಬಡಾವಣೆಯಲ್ಲಿ ಜಾಗ ನೀಡಲಾಗುತ್ತಿದೆ ಎಂದರು.
ಮೂವತ್ತುವರ್ಷಗಳ ಲೀಸ್ 5% ಗೈಡೆನ್ಸ್ ವ್ಯಾಲ್ಯೂ ಮೇಲೆ ಸೈಟು ಹಂಚಿಕೆ ಮಾಡಲು ನಿರ್ಧಾರ ಕೈಗೊಳ್ಳಲಾಗಿದೆ. ನೈರುತ್ಯ ಮುಂಗಾರು ಮಳೆಯಿಂದ ತೀವ್ರ ಹಾನಿ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲು ರಾಜ್ಯದ ನಿರ್ಧಾರ ಮಾಡಿದೆ. ಭಾರೀ ಮಳೆ ಮತ್ತು ನದಿ ಪ್ರವಾಹದಿಂದ ಹಾನಿಗೊಳಗಾದ ಪ್ರದೇಶಗಳು, ಮಳೆ ಹಾಗೂ ಪ್ರವಾಹದಿಂದ ಮೂಲಸೌಕರ್ಯಗಳ ತೀವ್ರ ಹಾನಿಯಾಗಿವೆ. ರಸ್ತೆ, ಸೇತುವೆ, ಚೆಕ್ ಡ್ಯಾಂಗಳು ಸೇರಿ 50೦೦ ಕೋಟಿಗೂ ಹೆಚ್ಚು ಮೌಲ್ಯದ ಸಾರ್ವಜನಿಕ ಆಸ್ತಿ ನಷ್ಟ ಅಂದಾಜು ಮಾಡಲಾಗಿದೆ. ಈ ಮೂಲ ಸೌಕರ್ಯಗಳ ಪುನರ್ ನಿರ್ಮಾಣಕ್ಕೆ ಕೇಂದ್ರದ ಮೊರೆ ಹೋಗಲು ನಿರ್ಧಾರ ಕೈಗೊಳ್ಳಲಾಗಿದೆ ಎಂದರು.
NDRF ಅಡಿಯಲ್ಲಿ 1545.23 ಕೋಟಿ ಆರ್ಥಿಕ ಸಹಾಯ ಕೋರಲು ನಿರ್ಧಾರ ಕೈಗೊಳ್ಳಲಾಗಿದೆ. 1545 ಕೋಟಿ ಸಹಾಯವನ್ನು ನೀಡುವಂತೆ ಕೇಂದ್ರಕ್ಕೆ ಮನವಿ ಸಲ್ಲಿಸಲು ನಿರ್ಧಾರ ಕೈಗೊಂಡಿದೆ. ಚೇತರಿಕೆ ಮತ್ತು ಪುನರ್ನಿರ್ಮಾಣ ಮನವಿ ಸಲ್ಲಿಸಲು ಕ್ಯಾಬಿನೆಟ್ ನಿರ್ಧಾರ ಮಾಡಿದೆ. ಕ್ಯಾಬಿನೆಟ್ ಅನುಮೋದನೆ ಹಿನ್ನೆಲೆ ಕೇಂದ್ರಕ್ಕೆ ಮನವಿ ಸಲ್ಲಿಸಲಿದೆ ಎಂದರು.
ಕ್ಯಾಬಿನೆಟ್ ಸಭೆಯಲ್ಲಿ ಸಚಿವರ ಟಾಕ್ ವಾರ್
ಹೆಚ್.ಸಿ.ಮಹದೇವಪ್ಪ,ಜಾರ್ಜ್ ನಡುವೆ ಟಾಕ್ ವಾರ್ ನಡೆದಿದೆ. ಗಂಗಾ ಕಲ್ಯಾಣ ಯೋಜನೆ ಬಗ್ಗೆ ಮಾತಿನಚಕಮಕಿಗೆ ಕಾರಣವಾಯಿತು. ಏರುಧ್ವನಿಯಲ್ಲೇ ಸಚಿವ ಡಾ.ಹೆಚ್.ಸಿ ಮಹದೇವಪ್ಪ ಕಿರುಚಾಡಿದರು. ಗಂಗಾ ಕಲ್ಯಾಣ ಯೋಜನೆಯಲ್ಲಿ ಬೋರ್ ವೆಲ್ ಹಾಕಲಾಗಿದೆ. ಆದರೆ ಇಲ್ಲಿಯವರೆಗೆ ಪವರ್ ಕನೆಕ್ಶನ್ ಕೊಟ್ಟಿಲ್ಲ. ಬಡವರಿಗೆ ಕೊರೆದಿರುವ ಬೋರ್ ವೆಲ್. ಪವರ್ ಕೊಡದಿದ್ರೆ ಅವರು ನೀರು ಎತ್ತೋದೇಕೆ. ಬಡವರ ಅಭಿವೃದ್ಧಿ ಅಂತ ನಮ್ಮ ಸರ್ಕಾರ ಹೇಳುತ್ತೆ. ಬೋರ್ ವೆಲ್ ಹಾಕಿ ವರ್ಷವಾದ್ರೂ ಕನೆಕ್ಶನ್ ಕೊಟ್ಟಿಲ್ಲ. ನಿಮ್ಮ ಪವರ್ ಇಲಾಖೆ ಸಬೂಬು ಹೇಳ್ತಿದೆ. ನಮಗೆ ಸಾಕಷ್ಟು ದೂರುಗಳು ಬರ್ತಿವೆ. ಜನಸಾಮಾನ್ಯರು ನಮ್ಮನ್ನ ಸುಮ್ನೆ ಬಿಡ್ತಾರಾ? ಮೊದಲು ಪವರ್ ಕನೆಕ್ಶನ್ ಕೊಡಿ ಎಂದರು.
ಈ ಮಾತಿಗೆ ಸಚಿವ ಜಾರ್ಜ್ ವಿರುದ್ಧ ಮಹದೇವಪ್ಪ ಗರಂ ಆದರು. ಏರುಧ್ವನಿಯಲ್ಲೇ ಮಹದೇವಪ್ಪ ಮಾತನಾಡಿದ್ದಕ್ಕೇ, ತಾಂತ್ರಿಕ ಕಾರಣವನ್ನು ಸಚಿವ ಜಾರ್ಜ್ ನೀಡಿದರು. ಜಾರ್ಜ್ ಮಾತಿಗೆ ಒಪ್ಪದ ಮಹದೇವಪ್ಪ, ಇಬ್ಬರು ಸಚಿವರ ನಡುವೆ ಮಾತಿನಸಮರಕ್ಕೆ ಕಾರಣವಾಯಿತು.
ಸಚಿವರ ನಡುವಿನ ಗದ್ದಲದ ವಿಚಾರ ತಳ್ಳಿ ಹಾಕಿದ ಸಚಿವ ಎಚ್ ಕೆ ಪಾಟೀಲ್
ಸೌಹಾರ್ಧಯುತ ಮಾತುಕತೆ ಆಗಿದೆ. ನೀವು ಕೇಳಿದ ರೀತಿಯಲ್ಲಿ ಯಾವುದೇ ಮಾತುಕತೆ ಆಗಿಲ್ಲ. ನಿಮಗೆ ಯಾರೋ ತಪ್ಪು ಮಾಹಿತಿ ಕೊಟ್ಟಿದ್ದಾರೆ. Scptsp ಯೋಜನೆ ಇರೋದೇ ಆ ಸಮುದಾಯದ ಅಭಿವೃದ್ಧಿ ಗೆ.ಅದರ ವಿನಿಯೋಗಕ್ಕೇ ಹಣ ಬಳಕೆ ಆಗತ್ತೆ. ಸರ್ಕಾರವೂ ಅದನ್ನೇ ಮಾಡಿದೆ ಎಂದರು.
ಒಳ ಮೀಸಲು ಅನುಷ್ಟಾನಕ್ಕೆ ಮಸೂದೆ ಮಾಡುವ ವಿಚಾರ ಇಂದಿನ ಸಂಪುಟದಲ್ಲಿ ಅದರ ಚರ್ಚೆ ಆಗಿಲ್ಲ. ಮುಂದಿನ ಕ್ಯಾಬಿನೆಟ್ ನಲ್ಲಿ ಇದರ ಚರ್ಚೆ ಆಗಲಿದೆ. ಅದಕ್ಕೆ ಅಗತ್ಯ ಕರಡು ಸಿದ್ದಪಡಿಸುವ ಕಾರ್ಯವೂ ನಡೆಯುತ್ತಿದೆ ಎಂದರು.
ಕೆ-ಶೋರ್ ಯೋಜನೆಯಡಿಯಲ್ಲಿ ತಾಂತ್ರಿಕ ಮತ್ತು ನಿರ್ವಹಣೆ ಸೇವೆಗಳನ್ನು ರೂ.20.47 ಕೋಟಿಗಳ ಅಂದಾಜು ಮೊತ್ತದಲ್ಲಿ ಪಡೆಯಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
ವೆಂಕಯ್ಯ ಇನಾಮದಾರ, ಹಿರಿಯ ಉಪನ್ಯಾಸಕರು, ಡಯಟ್,ಯಾದಗಿರಿ (ಹಿಂದಿನ ಪ್ರಭಾರಿ ಕ್ಷೇತ್ರ ಶಿಕ್ಷಣಾಧಿಕಾರಿ) ಇವರಿಗೆ ಕರ್ನಾಟಕ ಲೋಕಾಯುಕ್ತ ಟ್ರಾಪ್ ಪ್ರಕರಣದಲ್ಲಿ ಸೆಷನ್ಸ್ ನ್ಯಾಯಾಲಯವು ಕಾರಾಗೃಹ ಶಿಕ್ಷೆ ವಿಧಿಸಿರುವ ಹಿನ್ನೆಲೆಯಲ್ಲಿ ಸದರಿಯವರಿಗೆ ಸೇವೆಯಿಂದ ವಜಾಗೊಳಿಸುವುದು.
ರಾಜ್ಯದ ವಿವಿಧ ಸರ್ಕಾರಿ ಶಾಲೆಗಳಲ್ಲಿ 2200 ಶಾಲಾ ಕೊಠಡಿಗಳನ್ನು ರೂ.360.01 ಕೋಟಿಗಳ ಅಂದಾಜು ಮೊತ್ತದಲ್ಲಿ ನಿರ್ಮಾಣ ಮಾಡಲು ಲೋಕೋಪಯೋಗಿ ಇಲಾಖೆಗೆ ನೀಡಲು ಅನುಮೋದನೆ ಬಗ್ಗೆ
ರಾಜ್ಯದ ಪ್ರಮುಖ ಬಂದರುಗಳಾದ (1) ಕಾರವಾರ (2) ಹಳೆ ಮಂಗಳೂರು (ಬೇಂದ್ರೆ ಬದಿ) (3) ಹಳೆ ಮಂಗಳೂರು (ನಗರ ಬದಿಯ) ಮತ್ತು (4) ಮಲ್ಪೆಯ ಬರ್ತ್‌ಗಳನ್ನು ಸಾರ್ವಜನಿಕ ಖಾಸಗಿ ಸಹಭಾಗಿತ್ವ (ಪಿಪಿಪಿ) ಮಾದರಿಯಲ್ಲಿ ರಿಪೇರಿ- ಕಾರ್ಯಾಚರಣೆ-ನಿರ್ವಹಣೆ- ವರ್ಗಾವಣೆ (ROMT) ಆಧಾರದ ಮೇಲೆ ಒಟ್ಟು ರೂ.40.12 ಕೋಟಿಗಳ ಅಂದಾಜು “ಮೊತ್ತದಲ್ಲಿ ಅಭಿವೃದ್ಧಿಪಡಿಸಲು ಖಾಸಗಿ ಪಾಲುದಾರ ಸಂಸ್ಥೆಗೆ ವಹಿಸುವ ಬಗ್ಗೆ.
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ಬನಶಂಕರಿ 1ನೇ ಹಂತ, 1ನೇ ಬ್ಲಾಕ್, ನಿವೇಶನ ಹೊಂದಿಕೊಂಡಿರುವ ಸಂಖ್ಯೆ: 602.88 181 ಚದರ ಮೀಟರ್ ಅಳತೆಯ ನಾಗರಿಕ ಸೌಲಭ್ಯ ನಿವೇಶನವನ್ನು ವೆಂಕಟರಮಣಸ್ವಾಮಿ ದೇವಸ್ಥಾನ ಟ್ರಸ್ಟ್ ರವರಿಗೆ 30 ವರ್ಷಗಳ ಅವಧಿಗೆ ಗುತ್ತಿಗೆ ಆಧಾರದ ಮೇಲೆ ಹಂಚಿಕೆ ಮಾಡುವ ಬಗ್ಗೆ.
ಮಂಡ್ಯ ಜಿಲ್ಲಾ, ಕಾಂಗ್ರೆಸ್ ಭವನದ ಕಟ್ಟಡದ ನಿರ್ಮಾಣ ಮಾಡುವ ಉದ್ದೇಶಕ್ಕಾಗಿ ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದ ವಿವೇಕಾನಂದ ಬಡಾವಣೆಯಲ್ಲಿರುವ ನಾಗರಿಕ ಸೌಲಭ್ಯ ನಿವೇಶನ ಸಂಖ್ಯೆ:1/ಬಿ ರಲ್ಲಿ 1457.8 ಚ.ಮೀ ವಿಸ್ತೀರ್ಣದ ನಿವೇಶನವನ್ನು ಮಂಜೂರು ಮಾಡುವ ಬಗ್ಗೆ.
ಶ್ರೀ ಚನ್ನಬಸವೇಶ್ವರ ಚಾರಿಟಬಲ್ ಟ್ರಸ್ಟ್,ದೊಡ್ಡ ಹುಣಸೆ ಕಲ್ಮಠ,ಸವಣೂರು, ಹಾವೇರಿ ಜಿಲ್ಲೆ ಇವರಿಗೆ ಹುಬ್ಬಳ್ಳಿ-ಧಾರವಾಡ ಪ್ರಾಧಿಕಾರದಿಂದ ನಗರಾಭಿವೃದ್ಧಿ ಹಂಚಿಕೆಯಾಗಿರುವ ಹುಬ್ಬಳ್ಳಿ ತಾಲ್ಲೂಕು,ಉಣಕಲ್ ಗ್ರಾಮದ ರಿ.ಸ.ನಂ.537/1+2+3 ರಲ್ಲಿನ ನಿವೇಶನ ಸಂಖ್ಯೆ:22 ರಲ್ಲಿರುವ 393.72 ಚ.ಮೀ ನಾಗರಿಕ ಸೌಲಭ್ಯ ನಿವೇಶನಕ್ಕೆ ನಿಗಧಿಪಡಿಸಿರುವ ಗುತ್ತಿಗೆ ಮೊತ್ತಕ್ಕೆ ವಿನಾಯಿತಿ ನೀಡುವ ಬಗ್ಗೆ.
ಕೋಲಾರ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳು ಮತ್ತು ಕೋಲಾರ APMC ಯಿಂದ బిಬಿಎಂಪಿಯಿಂದ ಪ್ರತಿದಿನ ಒಟ್ಟಾರೆ 150 ಟನ್‌ಗಳಷ್ಟು Compressed Bio Gas (CBG) ಘಟಕಗಳ ಮೂಲಕ ಸಂಸ್ಕರಿಸಲು ಕೋಲಾರ ನಗರಸಭೆಗೆ ಸೇರಿದ ವಕ್ಕಲೇರಿ ಹೋಬಳಿ, ಅರಾಭಿಕೊತ್ತನೂರು ಗ್ರಾಮದ ಸರ್ವೆ ನಂ.152ರಲ್ಲಿ 9 ಎಕರೆ 38 ಗುಂಟೆ ಜಮೀನನ್ನು ಕೇವಲ ಸೀಮಿತ ಬಳಕೆಗಾಗಿ (Permissive Use) 25 Nominal Lease Rate ಆಧಾರದ ಮೇಲೆ Gas Authority of India Limited (GAIL) ಸಂಸ್ಥೆಗೆ ನೀಡುವ ಬಗ್ಗೆ.
ಯಾದಗಿರಿ ಜಿಲ್ಲೆ ಶಹಾಪುರ ನಗರಸಭೆ ವ್ಯಾಪ್ತಿಯ IDSMT ಲೇಔಟ್‌ನಲ್ಲಿ ಸಾರ್ವಜನಿಕ ಉಪಯೋಗಕ್ಕಾಗಿ ಮೀಸಲಿಟ್ಟ 300.14 ಚದರ ಮೀಟರ್ ಅಳತೆಯ ನಿವೇಶನ ಸಂಖ್ಯೆ: 85ನ್ನು ಕರ್ನಾಟಕ ಪ್ರದೇಶ ಕುರುಬರ ಸಂಘ, ಭವನ ಶಹಾಪೂರ ಇವರಿಗೆ ಕನಕ ನಿರ್ಮಾಣಕ್ಕಾಗಿ ಉಚಿತವಾಗಿ ಮಂಜೂರು ಮಾಡುವ ಬಗ್ಗೆ.
ಕರ್ನಾಟಕ ರಾಜ್ಯ ಮೀಸಲು ಪೊಲೀಸ್-KSRP ಮತ್ತು IRB ಘಟಕಗಳಿಗೆ ಪ್ರತ್ಯೇಕ ವೃಂದ ಮತ್ತು ನೇಮಕಾತಿ ನಿಯಮಗಳನ್ನು ರಚಿಸುವ ಬಗ್ಗೆ.
“ಕಾವೇರಿ ಐಟಿ ಸೆಲ್” ಹೆಸರಿನ ಇನ್-ಹೌಸ್’ ತಾಂತ್ರಿಕ ಅಭಿವೃದ್ಧಿ ವಿಭಾಗವನ್ನು ಮಾನವ ಸಂಪನ್ಮೂಲ ಸಂಸ್ಥೆಯಿಂದ ಹೊರಗುತ್ತಿಗೆಯ ಮೂಲಕ 5 ವರ್ಷದ ಅವಧಿಗೆ ರೂ.69.13 ಕೋಟಿಗಳ ವೆಚ್ಚದಲ್ಲಿ ಸ್ಥಾಪಿಸಲು ಆಡಳಿತಾತ್ಮಕ ಅನುಮೋದನೆ ನೀಡುವ ಬಗ್ಗೆ.
ನೈಋತ್ಯ ಮುಂಗಾರು ಅವಧಿಯಲ್ಲಿ ಭಾರೀ ಮಳ ಮತ್ತು ನದಿ ಪ್ರವಾಹದಿಂದ ಹಾನಿಗೊಳಗಾದ ಮೂಲಸೌಕರ್ಯಗಳ ಪುನರ್ನಿರ್ಮಾಣವನ್ನು ಕೈಗೊಳ್ಳಲು NDRF ಅಡಿಯಲ್ಲಿ .1545.23 ಕೋಟಿಗಳ ಆರ್ಥಿಕ ಸಹಾಯವನ್ನು ಕೋರಲು ಭಾರತ ಸರ್ಕಾರಕ್ಕೆ ಚೇತರಿಕೆ ಮತ್ತು ಪುನರ್ನಿರ್ಮಾಣ (Recovery and Construction) memorandum ಅನುಮೋದನೆ ನೀಡುವ ಬಗ್ಗೆ.
ಮಂಡ್ಯ ಜಿಲ್ಲೆಯ ವಿಶ್ವೇಶ್ವರಯ್ಯ ಕಾಲುವೆ ಫಾರ್ಮ್‌ನಲ್ಲಿ ನೂತನವಾಗಿ ಪ್ರಾರಂಭಿಸಲಾಗಿರುವ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಪ್ರಾಥಮಿಕ ಹಂತಕ್ಕಾಗಿ .23.25 ಕೋಟಿಗಳ ಅಂದಾಜು ಮೊತ್ತದಲ್ಲಿ ಹೊಸ ಮೂಲಸೌಕರ್ಯ ಅಭಿವೃದ್ಧಿ, ದುರಸ್ತಿ ಮತ್ತು ನವೀಕರಣ ಕಾಮಗಾರಿಗಳನ್ನು ಕೈಗೊಳ್ಳಲು ಬಗ್ಗೆ. ಆಡಳಿತಾತ್ಮಕ ಅನುಮೋದನೆ ನೀಡುವ
ಕಾರವಾರ ವೈದ್ಯಕೀಯ ಕಾಲೇಜು ಅವರಣದಲ್ಲಿ ಕ್ಯಾನ್ಸರ್ ಕೇರ್ ಘಟಕದ ಸ್ಥಾಪನೆಗೆ ಅಗತ್ಯವಿರುವ ಉಪಕರಣಗಳ ಮತ್ತು ನಿರ್ಮಾಣ ಕಾಮಗಾರಿ ಗಳನ್ನು ಒಟ್ಟು ರೂ.31.63 ಕೋಟಿಗಳ ಅನುಮೋದನೆ ಅಂದಾಜು ಮೊತ್ತದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ನೀಡುವ ಬಗ್ಗೆ.
ಕರ್ನಾಟಕ ಸ್ಟಾರ್ಟ ಅಪ್ ಪಾಲಿಸಿ 2022-27ರ ಅಡಿಯಲ್ಲಿ ಐದು ವರ್ಷಗಳ ಅವಧಿಗೆ ರೂ 80.00 ಹಂಚಿಕೆಯೊಂದಿಗೆ (ಪ್ರತಿ .10.00 ) (08) ಕೋಟಿಗಳ ಬ್ಯುಸಿನೆಸ್ ಇನ್‌ಕ್ಯೂಬೇಟರ್ಸ್ (TBIs) 2.0 ಗಳನ್ನು ಸ್ಥಾಪಿಸುವ ಬಗ್ಗೆ.
ಸ್ಪೀಕರ್ ಮೇಲೆ ಆರೋಪ ಮಾಡೋದು ಸರಿಯಲ್ಲ
ಆರೋಪ ಮಾಡೋರ ಆರೋಪ ಸತ್ಯ ಇದ್ರೆ, ಇದಕ್ಕೆ ಖಾದರ್ ಅವರೇ ಉತ್ತರ ಕೊಡುತ್ತಾರೆ. ಕೊಟ್ಟಿದ್ದಾರೆ. ಎಂಬುದಾಗಿ ಸ್ಪೀಕರ್ ಖಾದರ್ ಮೇಲಿನ ಅಕ್ರಮದ ಆರೋಪಕ್ಕೆ ಸಚಿವ ಎಚ್ ಕೆ ಪಾಟೀಲ್ ಪ್ರತಿಕ್ರಿಯಿಸಿದರು.
ಸಾಗರದಲ್ಲಿ ‘ಯೂಟ್ಯೂಬ್ ಚಾನಲ್’ ಹೆಸರಿನಲ್ಲಿ ಬ್ಲಾಕ್ ಮೇಲ್: ಸೂಕ್ತ ಕಾನೂನು ಕ್ರಮಕ್ಕೆ ‘ASP’ಗೆ ‘KUWJ’ ಮನವಿ
‘ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ’ ರಾಜ್ಯದ ಇಂಧನ ಭವಿಷ್ಯ: ಸಚಿವ ಕೆ.ಜೆ.ಜಾರ್ಜ್
ಮುಂಬೈನಲ್ಲಿ ವ್ಯಕ್ತಿಯೊಬ್ಬ ಒತ್ತೆಯಾಳಾಗಿ ಇಟ್ಟುಕೊಂಡಿದ್ದ 17 ಮಕ್ಕಳ ರಕ್ಷಣೆ








