ಬೆಂಗಳೂರು: ಇಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ನೇತೃತ್ವದಲ್ಲಿ ಮಹತ್ವದ ರಾಜ್ಯ ಸಚಿವ ಸಂಪುಟ ಸಭೆ ನಡೆಯಿತು. ಈ ಸಭೆಯಲ್ಲಿ ನಂದಿನಿ ಹಾಲಿನ ದರವನ್ನು ಪ್ರತಿ ಲೀಟರ್ ಗೆ ರೂ.4 ಹೆಚ್ಚಳಕ್ಕೆ ಅನುಮೋದನೆ ನೀಡಲಾಯಿತು. ಇದಲ್ಲದೇ ವಿವಿಧ ಅಭಿವೃದ್ಧಿ ಕಾರ್ಯಗಳಿಗೂ ಅನುಮೋದಿಸಿದೆ. ಆ ಎಲ್ಲಾ ಪ್ರಮುಖ ಹೈಲೈಟ್ಸ್ ಮುಂದಿದೆ ಓದಿ.
ಇಂದು ಸಿಎಂ ಸಿದ್ಧರಾಮಯ್ಯ ನೇೃತ್ವದಲ್ಲಿ ನಡೆದಂತ ರಾಜ್ಯ ಸಚಿವ ಸಂಪುಟ ಸಭೆ ಮುಕ್ತಾಯದ ಬಳಿಕ ಸುದ್ದಿಗೋಷ್ಠಿಯಲ್ಲಿ ಸಂಪುಟದ ನಿರ್ಣಯಗಳನ್ನು ಮಾದ್ಯಮಗೋಷ್ಠಿಯಲ್ಲಿ ಸಚಿವ ಹೆಚ್.ಕೆ ಪಾಟೀಲ್ ವಿವರಿಸಿದರು.
ಇಂದಿನ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ 34 ವಿಷಯಗಳ ಬಗ್ಗೆ ಚರ್ಚೆಯಾಗಿದೆ. ನ್ಯಾ.ನಾಗಮೋಹನ್ ದಾಸ್ ಆಯೋಗ ರಚನೆ ಬಗ್ಗೆಯೂ ಚರ್ಚಿಸಲಾಗಿದೆ. ಒಳಮೀಸಲಾತಿ ಬಗ್ಗೆ ಆಯೋಗ ರಚಿಸಿತ್ತು. ಅವರು ಮಧ್ಯಂತರ ವರದಿಯನ್ನ ಕೊಟ್ಟಿದ್ದಾರೆ. ಅದರಲ್ಲಿ 4 ಪ್ರಮುಖ ಶಿಫಾರಸು ಮಾಡಿದ್ದಾರೆ. ಉಪಜಾತಿಗಳ ವೈಜ್ಙಾನಿಕವರದಿಗೆ ಸಮೀಕ್ಷೆ ಮಾಡಬೇಕು. ದತ್ತಾಂಶವನ್ನ ಮಾಡಬೇಕು. 30 ರಿಂದ 40 ದಿನದೊಳಗೆ ಹೊಸದಾಗಿ ಸಮೀಕ್ಷೆ ಮಾಡಬಹುದು ಎಂದಿದ್ದಾರೆ ಎಂದರು.
ಹೊಸ ಸಮೀಕ್ಷೆ ನಡೆಸಲು ಪ್ರಶ್ನೆಗಳ ಸಿದ್ಧತೆ, ಸಂಸ್ಥೆ, ಸಂಪನ್ಮೂಲ ಬೇಕಿದೆ. ಹೊಸ ಸಮೀಕ್ಷೆಯಿಂದ ಸಂಗ್ರಹಿಸಿದ ಅಂಶಗಳಿಂದ ವರ್ಗೀಕರಣ ಮಾಡುವುದು. ಪರಿಶಿಷ್ಟ ಜಾತಿಯಲ್ಲಿನ ಒಳ ಪಂಗಡಗಳ ವರ್ಗೀಕರಣ ಮಾಡುವುದು. ಈ ರೀತಿ ನಾಲ್ಕು ಶಿಫಾರಸು ಮಾಡಿದೆ. ಇದನ್ನ ಸಚಿವ ಸಂಪುಟ ಸಭೆ ಒಪ್ಪಿಕೊಂಡಿದೆ. ಹೊಸ ಸಮೀಕ್ಷೆಗಾಗಿ ಅದೇ ಸಮಿತಿಗೆ ನೇಮಕ ಮಾಡಲಾಗುತ್ತದೆ. ಪೂರ್ಣಗೊಳಿಸಲು 2 ತಿಂಗಳ ಸಮಯ ನಿಗಧಿ ಮಾಡಲಾಗಿದೆ. 2 ತಿಂಗಳೊಳಗೆ ಸಮೀಕ್ಷಾ ವರದಿ ನೀಡಬೇಕು. ಹಾಗಾಗಿ ಆಯೋಗದ ಅವಧಿ ವಿಸ್ತರಿಸಲಾಗಿದೆ ಎಂದರು.
60 ದಿನದೊಳಗೆ ಸಮೀಕ್ಷೆ ಮಾಡ್ತೇವೆ ಅಂದಿದ್ದಾರೆ. ನಾವು ಅದಕ್ಕೆ ಅನುಮತಿ ಕೊಟ್ಟಿದ್ದೇವೆ. ಸೆನ್ಸೆಸ್ ನಲ್ಲಿ ಎಕೆ, ಎಡಿ, ಆದಿ ಆಂದ್ರ ಅಂತ ಇದೆ. ಆದರೆ ಇದರಲ್ಲಿ ಇರುವ ಗೊಂದಲ ಬಗೆಹರಿಸೋದಷ್ಟೇ. ಇದನ್ನಸರಿಪಡಿಸಿ ಕೊಡಲು ಸಮಯ ಹೆಚ್ಚು ಬೇಕಿಲ್ಲ. 60 ದಿನದೊಳಗೆ ನೀಡಬಹುದು. ನಮ್ಮ ಸರ್ಕಾರಿ ಅಧಿಕಾರಿಗಳೇ ಬಳಕೆಯಾಗಲಿದ್ದಾರೆ ಎಂದರು.
ಬಳ್ಳಾರಿ ಗಣಿಗಾರಿಕೆ ಅಕ್ರಮದ ಆರೋಪದಡಿ ಆರ್ ಎಫ್ ಒ ಜಯರಾಮ್ ಮೇಲಿನ ಕೇಸ್ ವಾಪಸ್ ಗೆ ನಿರ್ಧಾರ ಕೈಗೊಳ್ಳಲಾಗಿದೆ. ಬಂಕಾಪುರ ತೋಳ ವಜ್ಯಜೀವಿ ಧಾಮವನ್ನು ಅರಸೀಕೆರೆ ಕರಡಿ ವನ್ಯಧಾಮಗಳನ್ನ ಪರಿಸರ ಸೂಕ್ಷಧಾಮವೆಂದು ಘೋಷಣೆ ಮಾಡಲು ನಿರ್ಧರಿಸಲಾಗಿದೆ. ಈ ಸಂಬಂಧ ಕೇಂದ್ರಕ್ಕೆ ಶಿಫಾರಸು ಮಾಡಲು ಸಂಪುಟ ಸಮ್ಮತಿ ನೀಡಲಾಗಿದೆ ಎಂದರು.
ಆಯುಷ್ಮಾನ ಆರೋಗ್ಯ ಮಂದಿರಗಳಿಗೆ ಔಷಧಿ ಖರೀದಿಗೆ ಒಪ್ಪಿಗೆ ನೀಡಲಾಗಿದೆ. 14.91 ಕೋಟಿ ವೆಚ್ಚದಲ್ಲಿ ಔಷಧ ಖರೀದಿಸಲಾಗುತ್ತಿದೆ. ಆಯುಷ್ ಆಸ್ಪತ್ರೆಗೆ ಚಿಕಿತ್ಸಾಲಯಗಳಿಗೆ 28 ಕೋಟಿ ವೆಚ್ಚದಲ್ಲಿ ಖರೀದಿಗೆ ಒಪ್ಪಿಗೆ ನೀಡಿದೆ. ಬೆಂಗಳೂರಿನ ಯುನಾನಿ ವಿದ್ಯಾರ್ಥಿ ನಿಲಯ ಕಟ್ಟಣವನ್ನು 11.70 ಕೋಟಿ ವೆಚ್ಚದಲ್ಲಿ ನಿರ್ಮಾಣಕ್ಕೆ ಒಪ್ಪಿಗೆ ನೀಡಲಾಗಿದೆ ಎಂದು ತಿಳಿಸಿದರು.
ಕಿಯೋನಿಕ್ಸ್ ದತ್ತಾಂಶ ಕೇಂದ್ರದ ತಿದ್ದುಪಡಿ ನಿಯಮಕ್ಕೆ ಒಪ್ಪಿಗೆ ನೀಡಲಾಗಿದೆ. ನಿಪುಣ ಕರ್ನಾಟಕ ಉದ್ಯೋಗ ನೀತಿಗೆ ಅನುಮತಿಸಲಾಗಿದೆ. ಮೈಸೂರು ಕಲಾಮಂದಿರ, ರಂಗಾಯಣ ಕಟ್ಟಡವನ್ನು 14.60 ಕೋಟಿ ವೆಚ್ಚದಲ್ಲಿ ನವೀಕರಣಕ್ಕೆ ಒಪ್ಪಿಗೆ ನೀಡಲಾಗಿದೆ ಎಂದರು.
ಜೇವರ್ಗಿ ರಸ್ತೆ ಕಾಮಗಾರಿಗೆ ಸಂಪುಟ ಅನುಮೋದನೆ ನೀಡಲಾಗಿದೆ. ಕುಶಾಲನಗರ ಮುಸಗೋಡು ಕಣಿವೆ ರಸ್ತೆಯನ್ನು 15 ಕೋಟಿ ಅಂದಾಜು ವೆಚ್ಚದಲ್ಲಿ ನಿರ್ಮಾಣಕ್ಕೆ ಒಪ್ಪಿಗೆ ನೀಡಲಾಗಿದೆ. ಸಿಂದಗಿಯ ತಾಲೂ ಪ್ರಜಾಸೌಧಕ್ಕೆ ಕಟ್ಟಡ ನಿರ್ಮಾಣ 16 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲು ಅನುಮತಿಸಲಾಗಿದೆ ಎಂದರು.
ಹೊಸಕೋಟೆಯಲ್ಲಿ ವಿದ್ಯಾಸೌಧವನ್ನು 16 ಕೋಟಿ ವೆಚ್ಷದಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಚಿಕ್ಕಮಗಳೂರಿನಲ್ಲಿ ಆಸ್ಪತ್ರೆಯನ್ನು 56 ಕೋಟಿ ವೆಚ್ಚದ ಕಾಮಗಾರಿಗೆ ಒಪ್ಪಿಗೆ ನೀಡಲಾಗಿದೆ. ಉಲ್ಲಾಳು ಗ್ರಾಮದ 18.19 ಎಕರೆ ಜಮೀನು ಸ್ಟೇಡಿಯಂಗೆ ನೀಡಲು ಒಪ್ಪಿಗೆ ನೀಡಿದೆ. ಬೆಂಗಳೂರಿನ ನೊಂದಣಿ ಕಚೇರಿ ನಿರ್ಮಾಣಕ್ಕೆ 76 ಕೋಟಿ ಅನುದಾನಕ್ಕೆ ಒಪ್ಪಿಗೆ ನೀಡಲಾಗಿದೆ. ಮಹಿಳಾ ಕಲ್ಯಾಣ ಬಾಲ್ಯ ನ್ಯಾಯ ಕಾಯ್ದೆಗೆ ತಿದ್ದುಪಡಿಗೆ ಒಪ್ಪಿಗೆ ಸೂಚಿಸಲಾಗಿದೆ. ಸಚಿವರ ವೇತನ ಭತ್ಯೆ ವಿಧೇಯಕಕ್ಕೆಘಟನೋತ್ತರ ಅನುಮೋದನೆ ನೀಡಲಾಗಿದೆ. ಬೆಂಗಳೂರು ಅರಮನೆ ಟಿಡಿಆರ್ ವಿಧೇಯಕಕ್ಕೆ ಘಟನೋತ್ತರ ಅನುಮೋದನೆ ನೀಡಲಾಗಿದೆ ಎಂದರು.
ಈ ಬಳಿಕ ಮಾತನಾಡಿದಂತ ಸಚಿವ ಹೆಚ್.ಸಿ ಮಹಾದೇವಪ್ಪ ಅವರು, ಎಸ್ಸಿ ಒಳಮೀಸಲಾತಿ ಜಾರಿ ಸಂಬಂಧ ಹೊಸ ತಂತ್ರಜ್ಙಾನ ಬಳಕೆ ಮಾಡಲಾಗುವುದು. 5260 ಗ್ರಾಮಪಂಚಾಯ್ತಿಗಳಿವೆ. 200ಕ್ಕೂ ಹೆಚ್ಚು ವಾರ್ಡ್ ಗಳಿವೆ. ಚೀಫ್ ಸೆಕ್ರಟರಿ ಮಾನಿಟರಿಂಗ್ ಇರಲಿದೆ. ಸಮರೋಪಾಧಿಯಲ್ಲಿ ಸರ್ವೆ ಮಾಡಿ ವರದಿ ಸಲ್ಲಿಸಲಿದೆ. ದತ್ತಾಂಶ ಕರಾರುವಕ್ಕಾಗಿ ಇದ್ರೆ ಸಮಸ್ಯೆ ಆಗಲ್ಲ. ಆಂಧ್ರ, ತೆಲಂಗಾಣದಂತೆ ಆಗುವುದು ಬೇಡ. ಹಾಗಾಗಿ ವೈಜ್ಙಾನಿಕವಾಗಿ ಮಾಡಿ ಸಲ್ಲಿಸಲಿದೆ ಎಂದರು.
BREAKING NEWS: ಗೋಲ್ಡ್ ಸ್ಮಗ್ಲಿಂಗ್ ಕೇಸ್: ನಟಿ ರನ್ಯಾ ರಾವ್ ಜಾಮೀನು ಅರ್ಜಿ ವಜಾ
BREAKING : ಕೇರಳದ ಸೀತಾದೇವಿ ಲವ್ ಕುಶ ದೇವಸ್ಥಾನಕ್ಕೆ ಭೇಟಿ ನೀಡಿದ ಸಂಸದೆ ಪ್ರಿಯಾಂಕಾ ಗಾಂಧಿ | WATCH VIDEO