ಬೆಂಗಳೂರು: ಇಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ನೇತೃತ್ವದಲ್ಲಿ ಜಾತಿಗಣತಿ ವರದಿ ಸಂಬಂಧ ವಿಶೇಷ ಸಚಿವ ಸಂಪುಟ ಸಭೆ ನಡೆಯಿತು. ಈ ಸಭೆಯಲ್ಲಿ ಯಾವುದೇ ನಿರ್ಧಾರವನ್ನು ಕೈಗೊಳ್ಳದೇ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳುವಂತ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಇಂದಿನ ವಿಶೇಷ ಸಚಿವ ಸಂಪುಟ ಸಭೆಯ ಪ್ರಮುಖ ಹೈಲೈಟ್ಸ್ ಮುಂದಿದೆ ಓದಿ.
ಇಂದು ಸಿಎಂ ಸಿದ್ಧರಾಮಯ್ಯ ಅವರ ನೇತೃತ್ವದಲ್ಲಿ ನಡೆದಂತ ಜಾತಿಗಣತಿ ವರದಿ ಸಂಬಂಧದ ವಿಶೇಷ ಸಂಪುಟ ಸಭೆಯ ನಂತ್ರ ಸುದ್ದಿಗೋಷ್ಠಿಯಲ್ಲಿ ಕಾನೂನು ಸಚಿವ ಹೆಚ್.ಕೆ ಪಾಟೀಲ್ ಅವರು ಸಂಪುಟದ ಚರ್ಚೆಗಳ ಬಗ್ಗೆ ಸುದ್ದಿಗಾರರಿಗೆ ಮಾಹಿತಿ ನೀಡಿದರು.
ಇಂದಿನ ಸಂಪುಟ ಸಭೆ ಚರ್ಚೆ ಅಪೂರ್ಣವಾಗಿದೆ. ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ ಚರ್ಚೆ ನಡೆಯಿತು. ಹಿಂದುಳಿದ ವರ್ಗಗಳ ಇಲಾಖೆ ಸಲ್ಲಿಸಿದ್ದ ವರದಿ ಬಗ್ಗೆ ಚರ್ಚೆ ನಡೆದಿದೆ. ಇಂದು ಸುಧೀರ್ಘವಾಗಿ ಚರ್ಚೆ ಮಾಡಿದ್ದೇವೆ. ಇನ್ನೂ ಕೆಲ ಹೆಚ್ಚಿನ ಮಾಹಿತಿಗಳು ಬೇಕಿದೆ. ತಾಂತ್ರಿಕ ವಿವರಗಳು ಚರ್ಚೆಗೆ ಅಗತ್ಯವಿದೆ. ಅದನ್ನ ಒದಗಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಇಂದಿನ ಚರ್ಚೆ ಅಪೂರ್ಣವಾಗಿದೆ ಎಂದರು.
ಯಾವ ಪ್ಯಾರಾಮೀಟರ್ ತೆಗೆದುಕೊಂಡಿದ್ದಾರೆ. ಸಮೀಕ್ಷೆ ಮಾಡುವ ವೇಳೆ ತೆಗೆದುಕೊಂಡಿದ್ದಾರೆ. ಇದರ ಬಗ್ಗೆ ಚರ್ಚೆ ಮಾಡಲಾಗಿದೆ. ಚರ್ಚೆ ಅಪೂರ್ಣಗೊಂಡಿದೆ. ಮುಂದಿನ ಕ್ಯಾಬಿನೆಟ್ ನಲ್ಲಿ ಮುಂದುವರಿಯಲಿದೆ. ಎಂಎಂಹಿಲ್ಸ್ ನಲ್ಲಿ ಕ್ಯಾಬಿನೆಟ್ ನಡೆಯಲಿದೆ. ಆದರೆ ಅಲ್ಲಿ ಇದನ್ನ ಚರ್ಚೆಮಾಡೋಕೆ ಆಗಲ್ಲ. ಮೇ 1, 2ರಂದು ಮತ್ತೆ ಸಂಪುಟ ಸಭೆ ನಡೆಯಲಿದೆ. ಆಗ ಇದರ ಬಗ್ಗೆ ಚರ್ಚೆ ನಡೆಯಲಿದೆ ಎಂದರು.
ಕೆಲವು ಹಿರಿಯ ಸಚಿವರು ಮಾರ್ಗದರ್ಶನ ಮಾಡಿದ್ದಾರೆ. ಕೆಲವಕ್ಕೆ ಹೆಚ್ಚಿನ ವಿವರಗಳನ್ನ ಕೇಳಿದ್ದಾರೆ. ತಂಗಡಗಿ,ಅಧಿಕಾರಿಗಳು ಹೆಚ್ಚಿನ ಮಾಹಿತಿ ನೀಡ್ತಾರೆ. ಪ್ಯಾರಾಮೀಟರ್ ಬಗ್ಗೆ ಯಾರಿಗೂ ಗೊಂದಲವಿಲ್ಲ. ಕೆಲವು ವಿವರ ಕೇಳಬೇಕಿನಿಸಿದೆ ಅದನ್ನ ಕೇಳಿದ್ದಾರೆ. ಈಗ ದನ ಕಟ್ಟಿಕೊಂಡಿದ್ದಾರಾ ಇಲ್ವಾ ಅನ್ನೋ ಪ್ಯಾರಾಮೀಟರ್. ಇದು ಆರ್ಥಿಕ, ಸಾಮಾಜಿಕ ಸಮೀಕ್ಷೆಯಾಗಿದೆ. ಸಮುದಾಯದ ಸಂಖ್ಯಾಬಲದ ತಪ್ಪು ಗ್ರಹಿಕೆಗಳಿವೆ. ಅವು ಹೊರಗೆ ಬರ್ತಿವೆ. ಅವು ಸರಿಯಾದ ವಿವರಗಳು ಅಲ್ಲ ಎಂದರು.
94.17 ಜನಸಂಖ್ಯೆಯನ್ನ ಸಮೀಕ್ಷೆ ಮಾಡಿದ್ದೇವೆ. ವರದಿ ಸೋರಿಕೆಯ ಪ್ರಶ್ನೆಯೇ ಬರಲ್ವಲ್ಲ. ಎಲ್ಲವೂ ನಿಮ್ಮಬಳಿಯೇ ಇದೆಯಲ್ಲ. ಸಮೀಕ್ಷಾ ವರದಿಯ ಮಾಹಿತಿಯೇ ಸಿಕ್ಕಿದೆ. ಒಕ್ಕಲಿಗ, ಲಿಂಗಾಯತ ನಂಬರ್ ಬಗ್ಗೆ ಬಂದೇ ಇಲ್ಲವಲ್ಲ. ವರದಿ ಮಂಡನೆಯಾಗಿದೆ. ಚರ್ಚೆಯಾಗಿದೆ. ಅಂತಿಮ ನಿರ್ಣಯ ಬಂದಾಗ ಗೊತ್ತಾಗುತ್ತದೆ ಎಂದು ಹೇಳಿದರು.
ಈ ಬಳಿಕ ಸಚಿವ ಶಿವರಾಜ್ ತಂಗಡಗಿ ಮಾತನಾಡಿ, ಕ್ಯಾಬಿನೆಟ್ ನಲ್ಲೊ ಕೆಲವೊಂದು ಆರೋಗ್ಯಕರ ವಿಚಾರಗಳು ಚರ್ಚೆ ಆಗಿದೆ. ಮತ್ತೆ ಕ್ಯಾಬಿನೆಟ್ ಗೆ ಚರ್ಚೆಗೆ ಬರುತ್ತೆ. ಸಚಿವರು ಒಂದಿಷ್ಟು ಮಾಹಿತಿ ಒದಗಿಸೊದಕ್ಕೆ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದೇವೆ. ಕ್ಯಾಬಿನೆಟ್ ನಲ್ಲಿ ವರದಿಯನ್ಮ ಚರ್ಚೆ ಮಾಡಿದ್ದೇವೆ. ಯಾವ ಸಚಿವರಿಂದ ಯಾವುದೆ ಆಕ್ಷೇಪ ಆಗಿಲ್ಲ. ಜಾತಿಜನಗಣತಿಯಲ್ಲಿ 54 ಮಾನದಂಡ ಇದೆ. ಎಷ್ಟು ಜನ ಭಾಗವಹಿಸಿದ್ರು ಅಂತ ಹೇಳಿದ್ದೀವಿ. ಒಂದು ಲಕ್ಷದ 60 ಸಾವಿರ ಅಧಿಕಾರಿಗಳು ಕೆಲಸ ಮಾಡಿದ್ದಾರೆ. ಸಚಿವರ ಆಕ್ಷೇಪ ಏನಿಲ್ಲಾ. ಸಾರ್ವಜನಿಕ ಯಾವಾಗ ಸಿಗುತ್ತೆ ಎಂಬ ವಿಚಾರದ ಬಗ್ಗೆ ಮುಂದಿನ ಕ್ಯಾಬಿನೆಟ್ ನಲ್ಲಿ ಪೂರ್ಣ ಪ್ರಮಾಣದ ಚರ್ಚೆ ಆದ್ಮಲೆ ಮಾಹಿತಿ ಕೊಡ್ತೀವಿ ಎಂದರು.
ಸಚಿವ ಹೆಚ್ ಸಿ ಮಹದೇವಪ್ಪ ಮಾತನಾಡಿ, ಜಾತಿ ಜನಗಣತಿ ವರದಿ ಚರ್ಚೆ ಆಪುರ್ಣವಾಗಿದೆ. ಇನ್ನು ಕೆಲವುರು ಒದಬೇಕು ಅಂತಿದ್ರು. ವರದಿ ಜಾರಿಗೆ ವಿರೋಧ ಏನು ಆಗಿಲ್ಲ. ಹಿಂದುಳಿದ ವರ್ಗದ ಆಯೋಗ ವರದಿ ಚರ್ಚೆ ಆಗಿದೆ. ಕೆಲವು ಸಲಹೆಗಳನ್ನ ಸಚಿವರು ಕೊಟ್ಟಿದ್ದಾರೆ. ವರದಿ ಜಾರಿಗೆ ಒತ್ತಡ ಬಿನ್ನಾಬಿಪ್ರಾಯ ಏನಿಲ್ಲ. ಆರೋಗ್ಯಕರ ಚರ್ಚೆ ಆಗಿದೆ. ಮಹತ್ವದ ವಿಚಾರಗಳನ್ನ ಚರ್ಚೆ ಮಾಡಿದ್ದೇವೆ ಎಂದರು.
ಪ್ರಬಲ ಸಮುದಾಯಗಳ ವಿಚಾರವಾಗಿ ಮಾತನಾಡಿದಂತ ಅವರು ಯಾರ ವಿರೋಧದ ಮಾತೆ ಇಲ್ಲ ಎಂದರು. ಡಿಸಿಎಂ ಬಂದು ವಾಪಸ್ಸು ಕರೆದುಕೊಂಡು ಹೋದ್ರ ಎಂಬ ವಿಚಾರವಾಗಿ ಪ್ರತಿಕ್ರಿಯಿಸಿ ನಾವು ಪಾರ್ಟಿ ಕಾರ್ಯಕ್ರಮದ ಬಗ್ಗೆ ಮಾತಾಡಿದ್ದು ಎಂದರು.
ಧರ್ಮಸ್ಥಳಕ್ಕೆ ತೆರಳುವ ಭಕ್ತಾಧಿಗಳ ಗಮನಕ್ಕೆ: ಮಂಜುನಾಥ ಸ್ವಾಮಿ ದೇವರ ದರ್ಶನದ ಸಮಯ ಬದಲು | Dharmasthala Temple
GOOD NEWS : ರಾಜ್ಯದ ಮಹಿಳೆಯರಿಗೆ ಸಿಹಿಸುದ್ದಿ : ಇನ್ಮುಂದೆ ಬಸ್ ನಲ್ಲಿ ಉಚಿತ ಪ್ರಯಾಣಕ್ಕೆ ಆಧಾರ್ ಕಾರ್ಡ್ ಬೇಕಿಲ್ಲ!