ಬೆಂಗಳೂರು: ಇಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ನೇತೃತ್ವದಲ್ಲಿ ಮಹತ್ವದ ರಾಜ್ಯ ಸಚಿವ ಸಂಪುಟ ಸಭೆ ನಡೆಯಿತು. ಈ ಸಭೆಯಲ್ಲಿ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಜಾತಿ ಗಣತಿ ವರದಿ ಮಂಡನೆ ಸೇರಿದಂತೆ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಲಾಯಿತು. ಆ ಪ್ರಮುಖ ಹೈಲೈಟ್ಸ್ ಮುಂದಿದೆ ಓದಿ.
ಮಂಡ್ಯ ಜಿಲ್ಲೆಯ ವಿಶ್ವೇಶ್ವರಯ್ಯ ಫಾರ್ಮ್ನಲ್ಲಿ ನೂತನವಾಗಿ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯವನ್ನು (Integrated University) ಸ್ಥಾಪಿಸಲು ಸಚಿವ ಸಂಪುಟ ನಿರ್ಣಯಿಸಿದೆ.
ಒಟ್ಟು ಯೋಜನಾ ವೆಚ್ಚ 285.89 ಕೋಟಿ. ಆಂತರಿಕ ಸಂಪನ್ಮೂಲಗಳ ವೆಚ್ಚ 8.00 ಕೋಟಿ, ಮಂಡ್ಯ ಜಿಲ್ಲೆಯ ವಿಶ್ವೇಶ್ವರಯ್ಯ ಫಾರ್ಮ ಇಲ್ಲಿ ನೂತನವಾಗಿ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಸ್ಥಾಪಿಸಲಾಗುವುದು.
ಕರ್ನಾಟಕವು ಒಟ್ಟು 4 ಕಂದಾಯ ವಿಭಾಗಗಳನ್ನು ಹೊಂದಿದ್ದು ಮೈಸೂರು ಕಂದಾಯ ವಿಭಾಗ ಹೊರತುಪಡಿಸಿ ಉಳಿದ ಎಲ್ಲಾ ಕಂದಾಯ ವಿಭಾಗಗಳನ್ನು ಒಂದಕ್ಕಿAತ ಹೆಚ್ಚು ಕೃಷಿ ಮತ್ತು ತೋಟಗಾರಿಕೆ ಮತ್ತು ಪಶುವೈದ್ಯಕೀಯ ವಿಶ್ವವಿದ್ಯಾಲಯಗಳಿವೆ. ಮೈಸೂರು ವಿಭಾಗದ ವ್ಯಾಪ್ತಿಯಲ್ಲಿ ಯಾವುದೇ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ಸ್ಥಾಪನೆಯಾಗಿರುವುದಿಲ್ಲ.
ಕರ್ನಾಟಕ ಸರ್ಕಾರದ (ವ್ಯವಹಾರ ನಿರ್ವಹಣೆ) ನಿಯಮಗಳು, 1977 ರ ಅನುಸೂಚಿ-1 ರಲ್ಲಿನ ಐಟಂ:11 ರನ್ವಯ (i) 5ನೇ ರಾಜ್ಯ ಹಣಕಾಸು ಆಯೋಗದ ಅವಧಿಯನ್ನು 31ನೇ ಆಗಸ್ಟ್ 2025 ರವರೆಗೆ ವಿಸ್ತರಿಸುವ ಬಗ್ಗೆ ಹಾಗೂ (ii) ಜೂನ್ 2025 ರ ಒಳಗೆ ಆಯೋಗವು ತನ್ನ ವರಿಯನ್ನು ಸಲ್ಲಿಸುವಂತೆ ತಿಳಿಸುವ ಬಗ್ಗೆ ಸಚಿವ ಸಂಪುಟ ಅನುಮೋದಿಸಿದೆ. ಆಯೋಗದ ಅವಧಿಯನ್ನು ದಿನಾಂಕ: 31.08.2025 ರವರೆಗೆ ವಿಸ್ತರಿಸಲು ಹಾಗೂ ಜೂನ್ 2025ರೊಳಗೆ ವರದಿ ಸಲ್ಲಿಸಲು ಆಯೋಗಕ್ಕೆ ತಿಳಿಸಲು ತೀರ್ಮಾನಿಸಲಾಗಿದೆ.
ಆಯೋಗದ ಮೂಲ ಅವಾರ್ಡ್ ಅವಧಿಯನ್ನು 2028-29ನೇ ಸಾಲಿನಿಂದ 2029-30ಕ್ಕೆ ವಿಸ್ತರಿಸಲಾಗಿರುವುದರಿಂದ ವಿಸ್ತರಣೆಯು ಆಯೋಗಕ್ಕೆ ಹೆಚ್ಚುವರಿ ಕಾರ್ಯಬಾಹುಲ್ಯ ಉಂಟಾಗುತ್ತದೆ.
* * *
ಕರ್ನಾಟಕ ನಾಗರೀಕ ಸೇವೆಗಳು (ಅಬಕಾರಿ ಇಲಾಖೆಯ ವರ್ಗಾವಣೆ) ನಿಯಮಗಳು, 2025ರ ಅನುಬಂಧದಲ್ಲಿ ನೀಡಲಾದ ಕರಡನ್ನು ಹೊರಡಿಸಿ, ಸಂಬಂಧಪಟ್ಟವರಿಂದ ಆಕ್ಷೇಪಣೆ ಅಥವಾ ಸಲಹೆಗಳನ್ನು ಆಹ್ವಾನಿಸುವುದು. ಹಾಗೂ ಸ್ವೀಕೃತವಾಗಬಹುದಾದ ಆಕ್ಷೇಪಣೆ ಅಥವಾ ಸಲಹೆಗಳನ್ನು ಪರಿಗಣಿಸಿದ ನಂತರ ಕರ್ನಾಟಕ ನಾಗರೀಕ ಸೇವೆಗಳು (ಅಬಕಾರಿ ಇಲಾಖೆಯ ವರ್ಗಾವಣೆ) ನಿಯಮಗಳು, 2025 ನ್ನು ಅಂತಿಮಗೊಳಿಸಲು ಸಚಿವ ಸಂಪುಟ ನಿರ್ಣಯಿಸಿದೆ.
ಅಬಕಾರಿ ಇಲಾಖೆಯಲ್ಲಿ ಪಾರದರ್ಶಕ ನಿರ್ಧಿಷ್ಟ ಗುರಿ ಹೊಂದಿದ ಮತ್ತು ನಿಯಮಾಧಾರಿತ ವರ್ಗಾವಣೆ ವ್ಯವಸ್ಥೆಯನ್ನು ಜಾರಿಗೆ ತರುವುದರಿಂದ ಇಲಾಖೆ ಅಧಿಕಾರಿ/ನೌಕರರು ಅನಗತ್ಯ ಪ್ರಭಾವಕ್ಕೆ ಒಳಗಾಗದೇ ಸ್ವತಂತ್ರವಾಗಿ ಕರ್ತವ್ಯ ನಿರ್ವಹಿಸಲು ಅನುಕೂಲವಾಗುತ್ತದೆ.
* * *
ಡಾ. ಜಿ. ಶ್ರೀನಿವಾಸ್, ಮುಖ್ಯ ವೈದ್ಯಾಧಿಕಾರಿ, ತಾಲ್ಲೂಕು ಆಸ್ಪತ್ರೆ, ಪಿರಿಯಾಪಟ್ಟಣ, ಮೈಸೂರು ಜಿಲ್ಲೆ. ಇವರ ವಿರುಧ್ಧದ ಆರೋಪಕ್ಕೆ ಸಂಬಂಧಿಸಿದಂತೆ, ಇಲಾಖಾ ವಿಚಾರಣೆ ನಡೆಸಲು ಪ್ರಕರಣವನ್ನು ಉಪಲೋಕಾಯುಕ್ತರಿಗೆ ವಹಿಸುವ ಬದಲು ಇಲಾಖಾ ಹಂತದಲ್ಲಿಯೇ ಇಲಾಖಾ ವಿಚಾರಣೆ ನಡೆಸಲು ಸಚಿವ ಸಂಪುಟ ನಿರ್ಣಯಿಸಿದೆ.
ಪ್ರಕರಣವನ್ನು ಉಪ ಲೋಕಾಯುಕ್ತರಿಗೆ ವಹಿಸುವ ಬದಲು ಇಲಾಖೆ ಹಂತದಲ್ಲಿಯೇ ವಿಚಾರಣೆ ನಡೆಸಲು ತೀರ್ಮಾನಿಸಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿ ಶ್ರೀನಿವಾಸ ಇವರು ದೂರುದಾರರಿಂದ ವೇತನ ಪಾವತಿಗೆ ರೂ. 5000 ರೂಪಾಯಿ ಪಡೆದಿರುವುದು ರುಜುವಾತಾಗಿಲ್ಲದಿರುವುದು ಉಪ ಲೋಕಾಯುಕ್ತರು ತಮ್ಮ ವರದಿಯಲ್ಲಿಯೇ ತಿಳಿಸಿದ್ದಾರೆ. ಜಿಲ್ಲಾ ಸೊಸೈಟಿಗೆ ವೇತನ ಪಾವತಿಗೆ ಅನುದಾನ ಕೋರಿದ್ದು ಹಣ ಬಿಡುಗಡೆಯಾಗದ ಕಾರಣ ವೇತನ ನೀಡಲು ಸಾಧ್ಯವಾಗಿಲ್ಲವೆಂದು ಇಲಾಖೆಯ ಶಿಫಾರಸ್ಸು ಮಾಡಿದೆ.
* * *
“NHMನ 2024-25 ನೇ ಸಾಲಿನ ROP ಯಲ್ಲಿ ಅನುಮೋದಿಸಿರುವಂತೆ 2024-25ನೇ ರಾಜ್ಯ ಮಟ್ಟದ ವಿವಿಧ ಐ.ಇ.ಸಿ / ಎಸ್.ಬಿ.ಸಿ.ಸಿ. ಕಾರ್ಯಚಟುಟಿಕೆಗಳ ಕ್ರಿಯಾ ಯೋಜನೆ ಕುರಿತು State Activities ರೂ. 2620.54 ಲಕ್ಷ Commited Budget, ರೂ. 580.63 ಲಕ್ಷ District Level Activities ರೂ. 1400.94 ಲಕ್ಷ ಮತ್ತು Printing ರೂ. 15.00 ಲಕ್ಷಗಳಂತೆ ಸಿದ್ದಪಡಿಸಿರುವ ಒಟ್ಟು ರೂ. 4617.11 ಲಕ್ಷಗಳ ಸಮಗ್ರ ಕ್ರಿಯಾ ಯೋಜನೆಯನ್ನು ಅನುಷ್ಠಾನಗೊಳಿಸಲು” ಆಡಳಿತಾತ್ಮಕ ಅನುಮೋದನೆ ನೀಡಲು ಸಚಿವ ಸಂಪುಟ ನಿರ್ಣಯಿಸಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ರಾಜ್ಯ ಹಾಗೂ ರಾಷ್ಟ್ರೀಯ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುತ್ತಿರುವುದರಿಂದ ಯೋಜನೆಗಳ ಸಂಪೂರ್ಣ ಮಾಹಿತಿ/ಮಾರ್ಗದರ್ಶನವನ್ನು ಸಾರ್ವಜನಿಕರಿಗೆ ಕಲ್ಪಿಸುವ ನಿಟ್ಟಿನಲ್ಲಿ ವಿವಿಧ ಮಾಧ್ಯಮಗಳ ಮೂಲಕ ಪ್ರಚಾರ ನಡೆಸುವ ಉದ್ದೇಶದಿಂದ ಐಇಸಿ ಚಟುವಟಿಕೆ ನಡೆಸಲು ಉದ್ದೇಶಿಸಲಾಗಿದೆ.
* * *
“ಆಶಾಕಿರಣ” ಯೋಜನೆಯನ್ನು 2024-25ನೇ ಸಾಲಿನಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಉಚಿತವಾಗಿ ಸಮಗ್ರ ನೇತ್ರ ತಪಾಸಣೆ ಮತ್ತು ಕಣ್ಣಿನ ಶಸ್ತçಚಿಕಿತ್ಸೆ ಹಾಗೂ ಕನ್ನಡಕಗಳನ್ನು ವಿತರಿಸುವ ಕಾರ್ಯಕ್ರಮವನ್ನು 2024-25 ನೇ NHM ROP ರ SL.No. 94.4 ಅಡಿಯಲ್ಲಿ ಒದಗಿಸಿರುವ ಒಟ್ಟು ರೂ. 13.30 ಕೋಟಿಗಳ (ಹದಿಮೂರು ಕೋಟಿ ಮೂವತ್ತು ಲಕ್ಷ ರೂಪಾಯಿಗಳು) ಅನುದಾನದಲ್ಲಿ ಅನುಷ್ಠಾನಗೊಳಿಸಲು ಆಡಳಿತಾತ್ಮಕ ಅನುಮೋದನೆ ನೀಡಲು ಸಚಿವ ಸಂಪುಟ ನಿರ್ಣಯಿಸಿದೆ.
ಚಿಕ್ಕಬಳ್ಳಾಪುರ, ಕಲಬುರಗಿ, ಹಾವೇರಿ, ಚಾಮರಾಜನಗರ, ಚಿತ್ರದುರ್ಗ, ರಾಯಚೂರು, ಉತ್ತರ ಕನ್ನಡ ಮತ್ತು ಮಂಡ್ಯ ಜಿಲ್ಲೆಗಳಲ್ಲಿ ಈಗಾಗಲೇ ಜಾರಿಯಲ್ಲಿದೆ. ಉಳಿದ 22 ಜಿಲ್ಲೆಗಳಲ್ಲಿ ಈ ಯೋಜನೆ ಪ್ರಾರಂಭಿಸಲಾಗುವುದು.
ಆಶಾಕಿರಣ ಕಾರ್ಯಕ್ರಮವು ಪ್ರಸ್ತುತ ಪ್ರತಿವರ್ಷ 4 ಜಿಲ್ಲೆಗಳನ್ನು ಒಳಗೊಂಡಿದೆ. ಎಲ್ಲಾ ಜಿಲ್ಲೆಗಳಲ್ಲಿ ಅನುಷ್ಠಾನಗೊಳಿಸಲು ಇನ್ನೂ 7 ವರ್ಷ ಸಮಯ ಬೇಕಾಗಿರುವುದರಿಂದ ಬಹುಪಾಲು ಜನಸಂಖ್ಯೆಗೆ ನೇತ್ರ ತಪಾಸಣೆ ಸೇವೆ ತಲುಪುವುದು ವಿಳಂಬವಾಗುತ್ತದೆ.
ಆದ್ದರಿಂದ ಶಾಶ್ವತ ದೃಷ್ಠಿ ಪರೀಕ್ಷಾ ಕೇಂದ್ರಗಳ ಸ್ಥಾಪನೆಯು ಇಡೀ ರಾಜ್ಯಕ್ಕೆ ಐ ಸ್ಕ್ರೀನಿಂಗ್ ಸೇವೆಗಳ ಏಕಕಾಲಿಕ ಲಭ್ಯತೆಯನ್ನು ಒದಗಿಸುವುದಲ್ಲದೇ ಸೇವೆಗಳನ್ನು ಒದಗಿಸುವ ಬಗ್ಗೆ ಜನಸಂಖ್ಯೆಗೆ ವಿಶ್ವಾಸಾರ್ಹತೆ ಒದಗಿಸುತ್ತದೆ.
* * *
ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ಗೆ ಅನುಬಂಧದಲ್ಲಿ ವಿವರಿಸಿರುವಂತೆ ಆರೋಗ್ಯ ಮಿತ್ರರು ಮತ್ತು ಟ್ರಸ್ಟ್ನ ಕೇಂದ್ರ ಕಚೇರಿಯ ಸಿಬ್ಬಂದಿಗಳನ್ನು ಹೊರಗುತ್ತಿಗೆ ಆಧಾರದ ಮೇಲೆ ಎರಡು ವರ್ಷಗಳ ಅವಧಿಗೆ ಮಾನವ ಸಂಪನ್ಮೂಲ ಸಂಸ್ಥೆಯಿAದ ಹೊಸದಾಗಿ ಪಡೆಯುವ ಸಂಬಂಧ ಟೆಂಡರ್ ಪ್ರಕ್ರಿಯೆ ಕೈಗೊಳ್ಳಲು. ಅನುಮೋದನೆ ನೀಡಲು ಹಾಗೂ ಸದರಿ ಯೋಜನೆಗೆ ತಗಲುವ ಅಂದಾಜು ವೆಚ್ಚ ಒಟ್ಟು ರೂ. 53.18 ಕೋಟಿಗಳನ್ನು (ಐವತ್ತು ಮೂರು ಕೋಟಿ ಹದಿನೆಂಟು ಲಕ್ಷಗಳು ಮಾತ್ರ) ಆಯುಷ್ಮಾನ್ ಭಾರತ್ – ಆರೋಗ್ಯ ಕರ್ನಾಟಕ ಯೋಜನೆಯ ಆಡಳಿತಾತ್ಮಕ ವೆಚ್ಚ ಅಡಿಯಲ್ಲಿ ಅನುದಾನ ಭರಿಸಲು ಸಚಿವ ಸಂಪುಟ ನಿರ್ಣಯಿಸಿದೆ.
ಒಟ್ಟು ಬೆಂಗಳೂರು ಮತ್ತು ಮೈಸೂರು ವಿಭಾಗಗಳಿಗೆ ಹಾಗೂ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ನ ಕೇಂದ್ರ ಕಛೇರಿಗೆ 554 ಮತ್ತು ಬೆಳಗಾವಿ ಮತ್ತು ಕಲಬುರಗಿ ವಿಭಾಗಗಳಿಗೆ 331 ಹೊರಗುತ್ತಿಗೆ ಸಿಬ್ಬಂದಿ ನೇಮಕ ಮಾಡಿಕೊಳ್ಳಲಾಗುವುದು.
ಆಯುಷ್ಮಾನ್ ಭಾರತ, ಆರ್.ಬಿ.ಎಸ್.ಕೆ, ಆ್ಯಕ್ಸಿಡೆಂಟ್ ವಿಕ್ಟಿಮ್ಸ್, ಆರ್ಗನ್ ಟ್ರಾನ್ಸ್ಪ್ಲಾಂಟ್ ವಿರಳ ಹಾಗೂ ಚಿಕಿತ್ಸೆಯ ಕಾಯಿಲೆಗಳು ಕಾಕ್ಲಿಯಾರ್ ಇಂಪ್ಲಾಂಟ್ ಹಾಗೂ ಅನೇಕ ಯೋಜನೆಗಳನ್ನು ಅನುಷ್ಠಾನವನ್ನು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಅಡಿಯಲ್ಲಿಯೇ ಕೈಗೊಳ್ಳಲಾಗುತ್ತಿರುವುದರಿಂದ ಆರೋಗ್ಯ ಮಿತ್ರ ಹಾಗೂ ಇತರ ಸಿಬ್ಬಂದಿಗಳ ಸೇವೆಯು ಅತ್ಯಾವಶ್ಯಕವಾಗಿರುತ್ತದೆ.
* * *
ಕೇಂದ್ರ ಸರ್ಕಾರದ ಅಧಿನಿಯಮThe Transplantation of Human Organs (Amendment) Act, 2011 (Central Act 16 of 2011) ನ್ನು ಕನಾಟಕ ರಾಜ್ಯದಲ್ಲಿ ಅಳವಡಿಸಿಕೊಳ್ಳಲು – ಅನುಬಂಧ-3 ರಲ್ಲಿರುವ “ಅಧಿಕೃತ ನಿರ್ಣಯ” ವನ್ನು ವಿಧಾನಮಂಡಲದಲ್ಲಿ ಮಂಡಿಸಲು ಸಚಿವ ಸಂಪುಟ ನಿರ್ಣಯಿಸಿದೆ.
ಪ್ರಸ್ತಾವಿತ ತಿದ್ದುಪಡಿಯಿಂದ ಅಂಗಾಗ ದಾನದಲ್ಲಿ ನಡೆಯುವ ವಾಣಿಜ್ಯೀಕರಣವನ್ನು ತಡೆಯಬಹುದಾಗಿದೆ. ವೇದ ಅಂಗಗಳ ಕಸಿಯನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಸಾಧ್ಯವಾಗುತ್ತದೆ. ಇದರಿಂದ ರಾಜ್ಯದಲ್ಲಿ ಗುಣಮಟ್ಟದ ಆರೋಗ್ಯ ಸೇವೆಯನ್ನು ಒದಗಿಸಬಹುದಾಗಿದೆ.
* * *
ಸರ್ಕಾರಿ ಆದೇಶ ಸಂಖ್ಯೆ: HFW 54 FPE 2018, ಬೆಂಗಳೂರು ದಿನಾಂಕ: 03.12.2018 ರಡಿ “ಕರ್ನಾಟಕದ Priority House Hold (ಆದ್ಯತಾ ಮನೆ) ಕಾರ್ಡ್ ಹೊಂದಿರುವವರಿಗೆ ಮೂಲಕ ಅಸ್ತಿತ್ವದಲ್ಲಿರುವ “ಅಂಗಾಗ ಕಸಿ (ಜೀವಸಾರ್ಥಕಥೆ) ಯೋಜನೆಯಲ್ಲಿ ಶ್ವಾಸಕೋಶ, ಹೃದಯ ಮತ್ತು ಶ್ವಾಸಕೋಶ ಮತ್ತು ಮೂಳೆ ಮಜ್ಜಿಯ ಕಸಿ (BMT) ಯನ್ನು ಸೇರಿಸಿ ಅಸ್ತಿತ್ವದಲ್ಲಿರುವ “ಅಂಗಾಗ ಕಸಿ ಯೋಜನೆಯ ವಿಸ್ತರಣೆ” ಹಾಗೂ ಸರ್ಕಾರಿ ಆದೇಶ ಸಂಖ್ಯೆ: DPAR 52 SMR 2022 ದಿನಾಂಕ: 11.07.2022 ರಲ್ಲಿ ವ್ಯಾಖ್ಯಾನಿಸಲಾದ ಶ್ವಾಸಕೋಶ, ಹೃದಯ ಮತ್ತು ಶ್ವಾಸಕೋಶದ ಕಸಿ ವಿಧಾನದ ಬೆಲೆಯೊಂದಿಗೆ, ಸರ್ಕಾರಿ ಆದೇಶ ಸಂಖ್ಯೆ : HWF 64 FPE 2018, ಬೆಂಗಳೂರು, ದಿನಾಂಕ: 03.12.2018 ರಲ್ಲಿ ಶ್ವಾಸಕೋಶ ಮತ್ತು ಹೃದಯ ಮತ್ತು ಶ್ವಾಸಕೋಶದ ಕಸಿ ರೋಗಿಗಳಿಗೆ ಇಮ್ಮö್ಯನೊಸಪ್ರೆಶನ್ ಔಷಧಿಗಳ ಬೆಲೆಯೊಂದಿಗೆ ಮತ್ತು ಸರ್ಕಾರದ ಆದೇಶ ಸಂಖ್ಯೆ: HWF 352 FPE 2023 ಬೆಂಗಳೂರು, ದಿನಾಂಕ: 01.07.2024 ರಲ್ಲಿ ಅತಿ ವಿರಳ ಮತ್ತು ದುಬಾರಿ ವೆಚ್ಚದ ಚಿಕಿತ್ಸಾ ವಿಧಾನಗಳ ಯೋಜನೆಯಲ್ಲಿ ವ್ಯಾಕ್ಯಾನಿಸಲಾದ ಮೂಳೆ ಮಜ್ಜಿಯ ಕಸಿ (BMT) ದರಗಳಂತೆ, ಮತ್ತು ಈ ಸಂಬಂಧಿಸಿದ ಸಕಾರಿ ಆದೇಶಗಳ ಇತರೆ ಷರತ್ತುಗಳು ಬದಲಾಗದಂತೆ ಷರತ್ತಿಗೆ ಒಳಪಟ್ಟು ಪ್ರಸ್ತಾವನೆಗೆ ಸಚಿವ ಸಂಪುಟ ಅನುಮೋದನೆ ನೀಡಿದೆ.
ಹೃದಯ ಮತ್ತು ಶ್ವಾಸಕೋಶ ಕಸಿ ವಿಧಾನವನ್ನು ಪ್ರಾಥಮಿಕವಾಗಿ ಕೊನೇ ಹಂತದ ಹೃದಯ ಮತ್ತು ಶ್ವಾಸಕೋಶದ ತೊಂದರೆ ಇರುವ ರೋಗಿಗಳಿಗೆ ಹಾಗೂ ಶ್ವಾಸಕೋಶ ಮತ್ತು ಹೃದಯ ಮತ್ತು ಶ್ವಾಸಕೋಶ ಕಸಿ ರೋಗಿಗಳಿಗೆ ಇಮ್ಯುನೋಸಪ್ರೆಶನ್ ಔಷಧಿ ಕೊಡಲು ಹಾಗೂ ಆಟೋಲೋಗಸ್ ಮೂಳೆ ಮಜ್ಜೆಯ ಕಸಿ ಕೈಗೊಳ್ಳಲು ಪ್ರಸ್ತಾಪಿಸಲಾಗಿದೆ.
* * *
ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಆವರಣದಲ್ಲಿ 450 ಹಾಸಿಗೆ ಸಾಮರ್ಥ್ಯದ ಎರಡನೇ ಹಂತದ ಕಟ್ಟಡ ನಿರ್ಮಾಣ ಕಾಮಗಾರಿಗೆ ಹಾಗೂ ವೈದ್ಯಕೀಯ ಉಪಕರಣ ಮತ್ತು ಪೀಠೋಪಕರಣಗಳ ಖರೀದಿಯ ಅಂದಾಜು ಮೊತ್ತ ಮತ್ತು ಪೀಠೋಪಕರಣಗಳ ಖರೀದಿಯ ಅಂದಾಜು ಮೊತ್ತ ರೂ.78,10,57,506/- (ಎಪ್ಪತ್ತೆಂಟು ಕೋಟಿ ಹತ್ತು ಲಕ್ಷದ ಐವತ್ತೇಳು ಸಾವಿರದ ಐದು ನೂರ ಆರು ರೂಪಾಯಿಗಳು ಮಾತ್ರ) ಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡುವುದು” ಸಚಿವ ಸಂಪುಟ ಅನುಮೋದಿಸಿದೆ.
ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಆವರಣದಲ್ಲಿ ನಿರ್ಮಾಣವಾಗುತ್ತಿರುವ 450 ಹಾಸಿಗೆ ಸಾಮರ್ಥ್ಯದ ನೂತನ ಆಸ್ಪತ್ರೆ ಕಟ್ಟಡದ ಎರಡನೇ ಹಂತದ ಕಾಮಗಾರಿಯ ರೂ. 78.10 ಕೋಟಿಗಳ ಅಂದಾಜು ಮೊತ್ತಕ್ಕೆ ಅನುಮೋದನೆ ಕೋರಿ ಪ್ರಸ್ತಾಪಿಸಲಾಗಿದೆ.
300 ಹಾಸಿಗೆಗಳ ಜಿಲ್ಲಾ ಆಸ್ಪತ್ರೆ ಕಟ್ಟಡದಲ್ಲಿ ಮೊದಲ ಹಂತದಲ್ಲಿ ಕೈಗೊಂಡಿರುವ ಕೆಲಸಗಳನ್ನು ಹೊರತುಪಡಿಸಿ 3 ಮತ್ತು 4ನೇ ಮಹಡಿಯ ಉಳಿಕೆ ಸಿವಿಲ್ ಕಾಮಗಾರಿಗಳು ಮುಂತಾದವುಗಳನ್ನು 2ನೇ ಹಂತದ ಅಂದಾಜು ಪಟ್ಟಿಯಲ್ಲಿ ಸೇರಿಸಲಾಗಿದೆ.
* * *
“ಬೆಂಗಳೂರಿನ ಆನಂದರಾವ್ ವೃತ್ತದ ಎನ್. ಹೆಚ್. ಕಾಂಪೌಂಡ್ ಆವರಣದಲ್ಲಿರುವ 8.78 ಎಕರೆ ವಿಸ್ತೀರ್ಣದ ನಿವೇಶನವನ್ನು ಲೋಕೋಪಯೋಗಿ ಇಲಾಖೆಯ ಮಾಲೀಕತ್ವಕ್ಕೆ ಪಡೆದು ಅವಳಿ ಗೋಪುರ ನಿರ್ಮಾಣ ಯೋಜನೆಯನ್ನು ಅನುಷ್ಠಾನಗೊಳಿಸಲು ಆರ್ಥಿಕ ಹೂಡಿಕೆ ಸಂಬAಧ ವ್ಯವಹಾರ ಸಲಹೆಗಾರರನ್ನು (Transaction Advisor) ರವರನ್ನು ನೇಮಕ ಮಾಡಿ, ಮತ್ತೊಮ್ಮೆ ಸಚಿವ ಸಂಪುಟದ ಮುಂದೆ ಮಂಡಿಸಲು: ಸಚಿವ ಸಂಪುಟವು ನಿರ್ಣಯಿಸಿದೆ.
* * *
ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಪ್ರಸ್ತುತ ಕರ್ತವ್ಯ ನಿರ್ವಹಿಸುವ ಹೊರಗುತ್ತಿಗೆ ನೌಕರರುಗಳಿಗೆ & ಅವರ ಕುಟುಂಬಕ್ಕೆ (ಇ.ಎಸ್‌ಐ ಸೌಲಭ್ಯ ಹೊಂದಿರುವ ಹೊರಗುತ್ತಿಗೆ ನೌಕರರನ್ನು ಹೊರತುಪಡಿಸಿ) (Under Family Floater Scheme) ಸಾಮೂಹಿಕ ಆರೋಗ್ಯ ವಿಮೆ ಯೋಜನೆಯನ್ನು KTPP ನಿಯಮಗಳನ್ವಯ ಇ-ಪ್ರೊಕ್ಯೂರ್‌ಮೆಂಟ ಮುಖಾಂತರ 3 ವರ್ಷಗಳ ಅವಧಿಗೆ ಟೆಂಡರ್ ಕರೆದು ವಿಮಾ ಸಂಸ್ಥೆಗಳನ್ನು ಆಯ್ಕೆ ಮಾಡಿ ಜಾರಿಗೊಳಿಸಲು ರಾಜ್ಯ ಸಚಿವ ಸಂಪುಟದ ಅನುಮೋದನೆ ನೀಡಿದೆ.
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಸೇವೆ ಸಲ್ಲಿಸುವ ಹೊರಗುತ್ತಿಗೆ ನೌಕರರಿಗೆ ಸಾಮೂಹಿಕ ಆರೋಗ್ಯ ವಿಮೆ ಒದಗಿಸುವ ಮೂಲಕ ಆರ್ಥಿ ಅಭದ್ರತೆಯನ್ನು ಹೋಗಲಾಡಿಸಲು ಸಿಬ್ಬಂದಿಗಳಿಗೆಲ್ಲರಿಗೂ ಆರೋಗ್ಯ ವಿಮೆ ಒದಗಿಸಲು ಪ್ರಸ್ತಾಪಿಸಲಾಗಿದೆ.
ಶಿವಮೊಗ್ಗದಲ್ಲಿ ವೈದ್ಯೆ, ನರ್ಸ್ ಆತ್ಮಹತ್ಯೆಗೆ ಯತ್ನ: ಆಸ್ಪತ್ರೆಗೆ ದಾಖಲು
BREAKING: ಸಾಗರದ ‘ಗಣಪತಿ ಬ್ಯಾಂಕ್’ ಅಧ್ಯಕ್ಷರಾಗಿ ಶ್ರೀನಿವಾಸ್ ಮೇಸ್ತ್ರಿ, ಉಪಾಧ್ಯಕ್ಷರಾಗಿ ವಿ.ಶಂಕರ್ ಆಯ್ಕೆ