Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

‘ಪೇಪರ್ ಲೀಕ್ ಸಾಕು, ಇನ್ನು ಸಹಿಸಲು ಸಾಧ್ಯವಿಲ್ಲ’: ದೇಶಾದ್ಯಂತ ಶಾಂತಿಯುತ ಪ್ರತಿಭಟನೆಗೆ Gen-Z ಯುವಕರಿಗೆ ಕೇಜ್ರಿವಾಲ್ ಕರೆ!

ಎಐಎಡಿಎಂಕೆ ಶಾಸಕರಿಗೆ ಬಿಗ್ ಶಾಕ್: TVK ಪರ ಮತ ಹಾಕಿದ 25 ಶಾಸಕರು ಪಕ್ಷದ ಹುದ್ದೆಗಳಿಂದ ವಜಾ!

ಅದಾನಿ ಗ್ರೂಪ್ ಜೊತೆ ಕೈಜೋಡಿಸಿದ ಉಬರ್: ಭಾರತದಲ್ಲಿ ತಲೆಯೆತ್ತಲಿದೆ ಮೊದಲ ಬೃಹತ್ ಡೇಟಾ ಸೆಂಟರ್!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಇಲ್ಲಿದೆ ಇಂದಿನ ‘ಸಿಎಂ ಸಿದ್ಧರಾಮಯ್ಯ’ ನೇತೃತ್ವದಲ್ಲಿ ನಡೆದ ‘ರಾಜ್ಯ ಸಚಿವ ಸಂಪುಟ ಸಭೆ’ಯ ಪ್ರಮುಖ ಹೈಲೈಟ್ಸ್ | Karnataka Cabinet Meeting
KARNATAKA

ಇಲ್ಲಿದೆ ಇಂದಿನ ‘ಸಿಎಂ ಸಿದ್ಧರಾಮಯ್ಯ’ ನೇತೃತ್ವದಲ್ಲಿ ನಡೆದ ‘ರಾಜ್ಯ ಸಚಿವ ಸಂಪುಟ ಸಭೆ’ಯ ಪ್ರಮುಖ ಹೈಲೈಟ್ಸ್ | Karnataka Cabinet Meeting

By ವಸಂತ ಬಿ ಈಶ್ವರಗೆರೆ

ಬೆಂಗಳೂರು: ಇಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ನೇತೃತ್ವದಲ್ಲಿ ಮಹತ್ವದ ರಾಜ್ಯ ಸಚಿವ ಸಂಪುಟ ಸಭೆ ನಡೆಯಿತು. ಈ ಸಭೆಯಲ್ಲಿ ರಾಜ್ಯದಲ್ಲಿ ಸಿಬಿಐ ತನಿಖೆಗೆ ನೀಡಿದ್ದಂತ ಮುಕ್ತ ಅವಕಾಶವನ್ನು ಹಿಂಪಡೆಯುವುದು ಸೇರಿದಂತೆ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಯಿತು. ಹಾಗಾದ್ರೇ ಇಂದಿನ ರಾಜ್ಯ ಸಚಿವ ಸಂಪುಟ ಸಭೆಯ ಪ್ರಮುಖ ಹೈಲೈಟ್ಸ್ ಮುಂದಿದೆ ಓದಿ.

ಇಂದಿನ ರಾಜ್ಯ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದಂತ ಕಾನೂನು ಸಚಿವ ಹೆಚ್.ಕೆ ಪಾಟೀಲ್ ಅವರು, ಇಂದಿನ ಸಂಪುಟ ಸಭೆಯಲ್ಲಿ  25 ವಿಷಯಗಳ ಬಗ್ಗೆ ಇಂದು ಚರ್ಚೆಯಾಗಿದೆ. ಎರಡು ಹೊರತುಪಡಿಸಿ ಉಳಿದೆಲ್ಲದಕ್ಕೆ ಅನುಮತಿ ನೀಡಲಾಗಿದೆ. ಮಹತ್ವದ ವಿಷಯವನ್ನ ಚರ್ಚೆ ಮಾಡಿದ್ದೇವೆ ಎಂದರು.

ರಾಜ್ಯಪಾಲರು ಮೇಲ್ಮೇಲೆ ಪತ್ರ ಬರೆಯುತ್ತಿದ್ದಾರೆ. ತಕ್ಷಣ ಕಳಿಸಿ,ನಾಳೆ ಕಳಿಸಿ ಅಂತ ಸೂಚಿಸ್ತಿದ್ದಾರೆ. ಎಲ್ಲಾ ನಿಯಮಗಳನ್ನ‌ಪರಿಶೀಲಿಸಿದ್ದೇವೆ. ಯಾವುದೇ ಮಾಹಿತಿ ನೀಡುವ ಮುನ್ನ ಪರಿಶೀಲನೆ ಅಗತ್ಯವಿದೆ. ಕ್ಯಾಬಿನೆಟ್ ಒಪ್ಪಿಗೆ ಪಡೆದು ಕಳಿಸಬೇಕು. ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಸೂಚಿಸಿದ್ದೇವೆ. ಇದನ್ನ ಕ್ಯಾಬಿನೆಟ್ ನಲ್ಲಿ ಸಮ್ಮತಿ ನೀಡಿದ್ದೇವೆ. ಒಪ್ಪಿಗೆ ಇಲ್ಲದೆ ಯಾವುದೇ ಪತ್ರ ಕಳಿಸುವಂತಿಲ್ಲ ಎಂಬುದಾಗಿ ತಿಳಿಸಿದರು.

ಎಲ್ಲವನ್ನ ಪರಿಗಣಿಸಿ ಸಂಪುಟ ಕಳಿಸಲಿದೆ. ಏನೇ ಇದ್ರೂ ಕ್ಯಾಬಿನೆಟ್ ಮುಂದೆ ತರಬೇಕು. ರಾಜಭವನ, ಸರ್ಕಾರದ ಮಧ್ಯೆ ಮಾಹಿತಿ ಹೇಗೆ ಲೀಕ್‌ ಆಯ್ತು? ಇದರ ಬಗ್ಗೆ ವಿಚಾರಣೆ ನಡೆಯಿತು. ಸೆಪ್ಟಂಬರ್ 6 ರಂದು ಪತ್ರ ಬರೆಯಲಾಗಿತ್ತು. ಎಡಿಜಿಪಿ ರಾಜಭವನಕ್ಕೆ ಪತ್ರ ಬರೆದಿದ್ದರು. ಕುಮಾರಸ್ವಾಮಿ, ನಿರಾಣಿ, ರೆಡ್ಡಿ ಕುರಿತ ಪತ್ರ ಬರೆಯಲಾಗಿತ್ತು. ಇದು ಖಾಸಗಿ‌ಮಾಧ್ಯಮವೊಂದರಲ್ಲಿ ವರದಿಯಾಗಿತ್ತು. ಇದು ಹೇಗೆ ಸೋರಿಕೆಯಾಯ್ತು ಅನ್ನೋದು ಗೊತ್ತಿಲ್ಲ ಎಂದರು.

ರಾಜಭವನ ಕಾರ್ಯದರ್ಶಿಗೆ ಬರೆದಿದ್ದ ಪತ್ರ ತುಂಬಾ ಕಾನ್ಫಿಡೆಂಟಲ್ ಇರಬೇಕಾದ ಪತ್ರ ಲೀಕ್ ಆಗಿದ್ದೇಗೆ.? ಇದಕ್ಕೆ ಅವಕಾಶ ಕೊಟ್ಟವರು ಯಾರು? ರಾಜಭವನದಿಂದ ಇದು ಸೋರಿಕೆಯಾಗಿದ್ದೇಗೆ? 9 ತಿಂಗಳಿಂದ ಪ್ರಾಸಿಕ್ಯೂಶನ್ ಇಟ್ಟುಕೊಂಡಿದ್ದೇಕೆ? ಕಾನೂನು‌ಬಾಹಿರವಾಗಿ ಇಟ್ಟುಕೊಂಡಿದ್ದೇಕೆ? ನೀವು ಇಟ್ಕೊಂಡು ಸಿದ್ದರಾಮಯ್ಯ ಮೇಲೆ ಗೂಬೆ ಕೂರಿಸಿದ್ದೇಕೆ? ಎಂದರು.

ಅಪರಾಧ ಪ್ರಕರಣ ತನಿಖೆಗಿದ್ದ ಮುಕ್ತ ಅವಕಾಶ ವಾಪಸ್ ಗೆ ನಿರ್ಧರಿಸಲಾಗಿದೆ. ದೆಹಲಿ ಪೊಲೀಸ್ ಎಸ್ಟಾಬ್ಲಿಷ್ ಮೆಂಟ್ ಆ್ಯಕ್ಟ್ ವಾಪಸ್ ಗೆ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಕೇಂದ್ರ ಸರ್ಕಾರದ ಮೇಲೆ ಗಂಭೀರ ಆರೋಪವಿದೆ. ನಿಯಮಗಳ ಅನ್ವಯ ಮಾಡುವುದಿಲ್ಲ ಎಂಬ ಆರೋಪ ಎದುರಿಸುತ್ತಿದೆ. ಹಾಗಾಗಿ ಈ ಮುಕ್ತ ಅವಕಾಶ ವಾಪಸ್ ಪಡೆದಿದ್ದೇವೆ. ಸಿಎಂ ಮೇಲೆ ತನಿಖೆಗೆ ಅವಕಾಶ ಕೊಟ್ಟಿದ್ದಾರೆ. ಈ ಸಂದರ್ಭದಲ್ಲಿ ಅದರ ಅಗತ್ಯವಿಲ್ಲ. ನಾವು ತೆಗೆದುಕೊಂಡ ನಿರ್ಧಾರ ಸ್ಪಷ್ಟವಾಗಿದೆ. ಸಿಬಿಐ ಮಿಸ್ ಯೂಸ್ ಆಗ್ತಿದೆ ಎಂಬ ಆರೋಪವಿದೆ. ಹಾಗಾಗಿ ಇದನ್ನ ವಾಪಸ್ ಪಡೆದಿದ್ದೇವೆ ಎಂದು ಸಚಿವ ಹೆಚ್.ಕೆ.ಪಾಟೀಲ್ ತಿಳಿಸಿದರು.

ವಾಲ್ಮೀಕಿ ಪ್ರಕರಣ ಸಿಬಿಐಗೆ ಕೊಡುವ ವಿಚಾರವಾಗಿ ಮಾತನಾಡಿದಂತ ಅವರು, ಹಾಗಾಗಿ ವಾಪಸ್ ಪಡೆಯಲಾಗಿದ್ಯಾ ಎಂಬ ಪ್ರಶ್ನೆಗೆ ಉತ್ತರಿಸಿದಂತ ಅವರು, ಅಂತಹ ಸಂದರ್ಭ ಈಗಿಲ್ಲ. ಮುಂದಿನ ಅಪಾಯವನ್ನೇನು ನಾವು ಊಹಿಸಿಲ್ಲ. ಊಹಿಸಿ ಈ ನಿರ್ಧಾರ ತೆಗೆದುಕೊಂಡಿಲ್ಲ. ಸಿಬಿಐ ಪೂರ್ವಾಗ್ರಹ ಪೀಡಿತವಾಗಿ ಕೆಲಸ ಮಾಡ್ತಿದೆ. ಎಲೆಕ್ಷನ್ ನಲ್ಲಿ ಏನಾಗಿದೆ ಎಲ್ಲರಿಗೂ ಗೊತ್ತಿದೆ. ಒಂದು ಪಾರ್ಟಿಯ ಪರವಾದ ನಿಲುವು ಗೊತ್ತಾಗಿದೆ. ಕೇಂದ್ರ ಸರ್ಕಾರ ಯಾವುದನ್ನ ದುರ್ಬಳಕೆ ಮಾಡಿಕೊಳ್ತಿದೆ. ಆ ಎಲ್ಲವೂ ಪೂರ್ವಾಗ್ರಹ ಪೀಡಿತವೇ? ರಾಜಭವನದ ಮುಖ್ಯಸ್ಥ ಗೂಬೆ ಕೂರಿಸ್ತಾರೆ. ಸರ್ಕಾರದ ಮೇಲೆಯೇ ಗೂಬೆ ಕೂರಿಸ್ತಾರೆ. ಇದನ್ನ ನೋಡಿದ್ರೆ ನಿಮಗೇ ಗೊತ್ತಾಗುತ್ತದೆ ಎಂದು ಹೇಳಿದರು.

ಮೊದಲು ಸಿಬಿಐಗೆ ಫುಲ್‌ ಪರ್ಮಿಷನ್ ಇತ್ತು. ಅದನ್ನ ಈಗ ನಾವು ವಾಪಸ್ ಪಡೆದಿದ್ದೇವೆ. ಇದರಿಂದ ಭಯ ಯಾರಿಗೂ ಇಲ್ಲ. ಭಯ ಹುಟ್ಟಿಸಲು ಮಿಸ್ ಯೂಸ್ ಆಗಬಾರದೆಂದು ವಾಪಸ್ ಪಡೆದಿದ್ದೇವೆ ಎಂದರು.

ಸ್ನೇಹಮಯಿ ಕೃಷ್ಣ ಸಿಬಿಐಗೆ ಕೊಡುವಂತೆ ಡಿಮ್ಯಾಂಡ್ ವಿಚಾರವಾಗಿ ಪ್ರತಿಕ್ರಿಯಿಸಿದಂತ ಅವರು, ಕೊಡುವುದಕ್ಕೆ ಬರುವುದಿಲ್ಲ ಅಂತ ಹೇಳಿದರು.

ಕಸ್ತೂರಿ ರಂಗನ್ ವರದಿ ಜಾರಿ ವಿಚಾರವಾಗಿ ಮಾತನಾಡಿದ ಅವರು, ರಾಜ್ಯ ಸರ್ಕಾರ ವರದಿ ತಿರಸ್ಕರಿಸಿದೆ. ಕೇಂದ್ರಕ್ಕೆ ಇದನ್ನೇ ರೆಫರ್ ಮಾಡಲು ನಿರ್ಣಯ ಕೈಗೊಳ್ಳಲಾಗಿದೆ. ಹಿಂದೆಯೂ ಇದೇ ನಿರ್ಣಯ ತೆಗೆದುಕೊಳ್ಳಲಾಗಿತ್ತು ಎಂದರು.

ದಕ್ಷಿಣ ಕನ್ನಡ ಸ್ಥಳೀಯ ಸಂಸ್ಥೆ ಚುನಾವಣೆ ನಿಗದಿಯಾಗಿದೆ. ಎಂಎಲ್ ಸಿ ಬೈ ಎಲೆಕ್ಷನ್ ಗೆ ಸಮ್ಮತಿ ನೀಡಲಾಗಿದೆ. ಮೇಲ್ಮನೆಯ ಎರಡು ಸ್ಥಾನಗಳಿಗೆ ನಾಮಕರಣ ಮಾಡಲಾಗುತ್ತಿದೆ. ಆಯ್ಕೆ ಮಾಡುವ ಅಧಿಕಾರ ಸಿಎಂಗೆ ನೀಡಿಕೆ ಮಾಡಲಾಗಿದೆ ಎಂದರು.

ಬೆಂಗಳೂರು ವಿವಿ ಅಭಿವೃದ್ಧಿಗೆ ಅನುದಾನಕ್ಕೆ ಒಪ್ಪಿಗೆ ನೀಡಲಾಗಿದೆ. ಐಐಟಿ ಮಾದರಿಯಲ್ಲಿ ನಿರ್ಮಿಸಲು ಅನುದಾನ ನೀಡಲಾಗುತ್ತಿದೆ. 530 ಕೋಟಿ ಅನುದಾನ ನೀಡಲು ಒಪ್ಪಿಗೆ ಸೂಚಿಸಲಾಗಿದೆ ಎಂದು ಹೇಳಿದರು.

ಸಿಖ್ ಸಮುದಾಯ ವಿವಾಹ ನೊಂದಣಿಗೆ ತಿದ್ದುಪಡಿ ತರಲಾಗುತ್ತಿದೆ. ಹಿಂದೂ ವಿವಾಹ ಕಾಯ್ದೆಯಡಿ ನೊಂದಣಿಯಿತ್ತು. ಇದು ವಿದೇಶಿ ಪ್ರವಾಸದ ವೇಳೆ ಗೊಂದಲಕ್ಕೆ ಕಾರಣವಾಗಿತ್ತು. ಹಾಗಾಗಿ‌ ನಿಯಮ ರೂಪಿಸಲು ಅನುಮತಿ ನೀಡಲಾಗಿದೆ ಎಂದರು.

ನ್ಯಾಯಾಂಗ ಅಧಿಕಾರಿಗಳ ವಸತಿ ಸಮ್ಮುಚ್ಚಯವನ್ನು 11.70 ಕೋಟಿ ವೆಚ್ಚದಲ್ಲಿ ನಿರ್ಮಾಣಕ್ಕೆ ಸಂಪುಟ ಒಪ್ಪಿಗೆ ನೀಡಿದೆ. ಬೆಂಗಳೂರಿನ ಹೊಸಕೆರೆ ಹಳ್ಳಿಯಲ್ಲಿ ಕಾಳಿದಾಸ ರಾಯಣ್ಣ ವಿದ್ಯಾರ್ಥಿ ನಿಲಯಕ್ಕೆ 20 ಗುಂಟೆ ಜಮೀನು ನೀಡಲು ನಿರ್ಧಾರಿಸಲಾಗಿದೆ. ರಾಮನಗರದಲ್ಲಿ 0.05 ಭೂಮಿ ಜಿಲ್ಲಾ ಸಹಕಾರ ಒಕ್ಕೂಟಕ್ಕೆ ನೀಡಲು  ನಿರ್ಧರಿಸಲಾಗಿದೆ ಎಂದರು.

ಬಿಎಂಟಿಸಿ ಎಲೆಕ್ಟ್ರಿಕ್ ಬಸ್ ಖರೀದಿಗೆ ಒಪ್ಪಿಗೆ ನೀಡಲಾಗಿದೆ. 29.13 ಕೋಟಿ ವೆಚ್ಚದಲ್ಲಿ ಹವಾನಿಯಂತ್ರಿತ ಬಸ್ ಖರೀದಿಗೆ ಅವಕಾಶ ನೀಡಲಾಗುತ್ತಿದೆ. ಶಹಪೂರದಲ್ಲಿ ವೀರಶೈವ ಸಮಾಜಕ್ಕೆ ಭೂಮಿಯನ್ನು ನೀಡಲಾಗುತ್ತಿದೆ. 10 ಪರ್ಸೆಂಟ್ ಗೈಟೆನ್ಸ್ ವ್ಯಾಲ್ಯೂ‌ಮೇಲೆ ಭೂಮಿ ನೀಡಿಕೆ ಮಾಡಲು ಸಂಪುಟ ನಿರ್ಧರಿಸಿದೆ ಎಂದರು.

ಬೆಣ್ಣೆಹಳ್ಳ ಪ್ರವಾಹ ನಿಯಂತ್ರಣಕ್ಕೆ ನಿರ್ಧಾರ ಕೈಗೊಳ್ಳಲಾಗಿದೆ. 200 ಕೋಟಿ ರೂ ವೆಚ್ಚಕ್ಕೆ ಅನುಮೋದನೆ ನೀಡಲಾಗಿದೆ. ಶಿಗ್ಗಾಂವಿ, ಹಾನಗಲ್, ಕುಂದಗೋಳದಲ್ಲಿ ಹಳ್ಳ ಹರಿಯುತ್ತದೆ. ಇದನ್ನ ನಿಯಂತ್ರಿಸುವುದಕ್ಕೆ ನೂತನ ಯೋಜನೆಗೆ ಅನುಮತಿಸಲಾಗಿದೆ. ನೀರು ಸದ್ಬಳಕೆ ಮಾಡುವ ರೀತಿಯಲ್ಲಿ ಯೋಜನೆ ರೂಪಿಸಲಾಗುತ್ತಿದೆ. 16 ಟಿಎಂಸಿ ನೀರು ಇದರಲ್ಲಿ ವ್ಯರ್ಥವಾಗುತ್ತದೆ. ರೈತರ ದೃಷ್ಟಿಯಿಂದ ಈ ಯೋಜನೆ ತರ್ತಿದ್ದೇವೆ ಎಂದು ಹೇಳಿದರು.

ಪ್ರೌಢಶಾಲೆಗಳಲ್ಲಿ ಇಂಟರ್ ನೆಟ್ ನೀಡಲು ನಿರ್ಧಾರ ಕೈಗೊಳ್ಳಲಾಗಿದೆ. 74 ಆದರ್ಶ ವಿದ್ಯಾಲಯಗಳ ಮೇಲ್ದರ್ಜೆಗೇರಿಕೆಗೆ ಸಮ್ಮತಿ ನೀಡಲಾಗಿದೆ ಎಂದರು.

ಅಧಿಕಾರಿಗಳ ವರ್ಗಾವಣೆ ವಿಚಾರವಾಗಿ ಮಾತನಾಡಿದ ಅವರು, ಸಿವಿಲ್ ಸರ್ವೀಸ್ ಕೋಡ್ ಮಾಡಬೇಕು. ಹೈಕೋರ್ಟ್ ಇದನ್ನಹೇಳಿತ್ತು. ಸಿವಿಲ್ ಸರ್ವೀಸ್ ಕೋಡ್ ಬೇಕೇ ಬೇಡವೇ ಎಂದು ತೀರ್ಮಾನ ಕೈಗೊಳ್ಳಲಾಗಿದೆ. ಇದಕ್ಕೆ ಸಚಿವ ಸಂಪುಟ ಉಪ ಸಮಿತಿ ರಚನೆ ಮಾಡಲಾಗುತ್ತಿದೆ. ಯಾರನ್ನ ನೇಮಿಸಬೇಕೆಂದು ಸಿಎಂಗೆ ಅಧಿಕಾರ ನೀಡಲಾಗಿದೆ ಎಂದು ತಿಳಿಸಿದರು.

ಬಿಬಿಎಂಪಿ ವ್ಯಾಪ್ತಿ ರಸ್ತೆಗಳಿಗೆ ಡಾಂಬರೀಕರಣ ಮಾಡಲು 659.70 ಕೋಟಿ ಅನುದಾನಕ್ಕೆ ಅನುಮೋದನೆಯನ್ನು ಇಂದಿನ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ನೀಡಲಾಗಿದೆ ಎಂದರು.

ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು

4.50 ಲಕ್ಷ ಲಂಚ ಸ್ವೀಕರಿಸುತ್ತಿದ್ದಾಗಲೇ ಲೋಕಾಯುಕ್ತ ಬಲೆಗೆ ಬಿದ್ದ ‘BBMP ಅಧಿಕಾರಿ’ಗಳು

BREAKING: ‘ಗ್ರಾಮೀಣ ಪತ್ರಕರ್ತ’ರಿಗೆ ಭರ್ಜರಿ ಸಿಹಿಸುದ್ದಿ: ‘ಉಚಿತ ಬಸ್ ಪಾಸ್’ ವಿತರಣೆಗೆ ‘ರಾಜ್ಯ ಸರ್ಕಾರ’ ಆದೇಶ | Journalist Bus Pass

SHOCKING : ಮಹಾಲಕ್ಷ್ಮಿ ನನ್ನ ಮಗನ ವಿರುದ್ಧ ‘ಹನಿಟ್ರ್ಯಾಪ್’ ಮಾಡಿದ್ದಳು : ಆರೋಪಿಯ ತಾಯಿ ಸ್ಪೋಟಕ ಹೇಳಿಕೆ!

Share. Facebook Twitter LinkedIn WhatsApp Email

Related Posts

ಸುಶಿಕ್ಷಿತ ಯುವಶಕ್ತಿಯಿಂದ ಮಾತ್ರ ದೇಶದ ಪ್ರಗತಿ ಸಾಧ್ಯ: ಸಚಿವ ಕೆ.ಜೆ.ಜಾರ್ಜ್

2 Mins Read

BREAKING: ಬೆಂಗಳೂರಿನಲ್ಲಿ ಬೃಹತ್ GST ವಂಚನೆ ಜಾಲ ಪತ್ತೆ: ₹410 ಕೋಟಿ ಐಟಿಸಿ ಹಗರಣದ ಕಿಂಗ್‌ಪಿನ್ ಬಂಧನ

2 Mins Read

ಬೆಂಗಳೂರಲ್ಲಿ 23 ಲಕ್ಷಕ್ಕೂ ಹೆಚ್ಚು ಖಾತಾ ಬಿಡುಗಡೆ ದೇಶದಲ್ಲೇ ದಾಖಲೆ: ಡಿಸಿಎಂ ಡಿ ಕೆ ಶಿವಕುಮಾರ್

6 Mins Read
Recent News

‘ಪೇಪರ್ ಲೀಕ್ ಸಾಕು, ಇನ್ನು ಸಹಿಸಲು ಸಾಧ್ಯವಿಲ್ಲ’: ದೇಶಾದ್ಯಂತ ಶಾಂತಿಯುತ ಪ್ರತಿಭಟನೆಗೆ Gen-Z ಯುವಕರಿಗೆ ಕೇಜ್ರಿವಾಲ್ ಕರೆ!

ಎಐಎಡಿಎಂಕೆ ಶಾಸಕರಿಗೆ ಬಿಗ್ ಶಾಕ್: TVK ಪರ ಮತ ಹಾಕಿದ 25 ಶಾಸಕರು ಪಕ್ಷದ ಹುದ್ದೆಗಳಿಂದ ವಜಾ!

ಅದಾನಿ ಗ್ರೂಪ್ ಜೊತೆ ಕೈಜೋಡಿಸಿದ ಉಬರ್: ಭಾರತದಲ್ಲಿ ತಲೆಯೆತ್ತಲಿದೆ ಮೊದಲ ಬೃಹತ್ ಡೇಟಾ ಸೆಂಟರ್!

‘ಇರಾನ್ ಮೇಲೆ ಅಮೆರಿಕ ಸಂಪೂರ್ಣ ಹಿಡಿತ ಸಾಧಿಸಿದೆ’: ಹಾರ್ಮುಜ್ ಜಲಸಂಧಿ ಬಿಕ್ಕಟ್ಟಿನ ನಡುವೆ ಟ್ರಂಪ್ ಮತ್ತು ರಕ್ಷಣಾ ಕಾರ್ಯದರ್ಶಿ ಅಧಿಕೃತ ಘೋಷಣೆ!

State News
KARNATAKA

ಸುಶಿಕ್ಷಿತ ಯುವಶಕ್ತಿಯಿಂದ ಮಾತ್ರ ದೇಶದ ಪ್ರಗತಿ ಸಾಧ್ಯ: ಸಚಿವ ಕೆ.ಜೆ.ಜಾರ್ಜ್

By ವಸಂತ ಬಿ ಈಶ್ವರಗೆರೆ KARNATAKA 2 Mins Read

ಬೆಂಗಳೂರು: ಸುಶಿಕ್ಷಿತ, ಪ್ರಜ್ಞಾವಂತ ಯುವಶಕ್ತಿಯಿಂದ ನಮ್ಮ ದೇಶದ ಪ್ರಗತಿ ಸಾಧ್ಯವಾಗಲಿದೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಅಭಿಪ್ರಾಯಪಟ್ಟಿದ್ದಾರೆ. ಇಂಡಿಯನ್ ಅಕಾಡೆಮಿ…

BREAKING: ಬೆಂಗಳೂರಿನಲ್ಲಿ ಬೃಹತ್ GST ವಂಚನೆ ಜಾಲ ಪತ್ತೆ: ₹410 ಕೋಟಿ ಐಟಿಸಿ ಹಗರಣದ ಕಿಂಗ್‌ಪಿನ್ ಬಂಧನ

ಬೆಂಗಳೂರಲ್ಲಿ 23 ಲಕ್ಷಕ್ಕೂ ಹೆಚ್ಚು ಖಾತಾ ಬಿಡುಗಡೆ ದೇಶದಲ್ಲೇ ದಾಖಲೆ: ಡಿಸಿಎಂ ಡಿ ಕೆ ಶಿವಕುಮಾರ್

BIG BREAKING: ರಾಜ್ಯ ಸರ್ಕಾರದಿಂದ ‘ಶಾಲಾ-ಕಾಲೇಜು’ಗಳಲ್ಲಿ ‘ಹಿಜಾಬ್ ನಿಷೇಧ’ ಆದೇಶ ವಾಪಾಸ್

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.