ಬೆಂಗಳೂರು: ಇಂದು ಸಿಎಂ ಸಿದ್ಧರಾಮಯ್ಯ ನೇತೃತ್ವದಲ್ಲಿ ಮಹತ್ವದ ರಾಜ್ಯ ಸಚಿವ ಸಂಪುಟ ಸಭೆ ನಡೆಯಿತು. ಈ ಸಭೆಯಲ್ಲಿ ರಾಜ್ಯಪಾಲರಿಗೆ ಬಾಕಿ ಇರುವಂತ ಪ್ರಾಸಿಕ್ಯೂಷನ್ ಗಳಿಗೆ ಅನುಮತಿ ನೀಡುವ ಬಗ್ಗೆ ಸಲಹೆ ನೀಡುವಂತ ಮಹತ್ವದ ನಿರ್ಧಾರವನ್ನು ಕೈಗೊಳ್ಳಲಾಯಿತು. ಇದಲ್ಲದೇ ಇನ್ನುಳಿದ ಇಂದಿನ ರಾಜ್ಯ ಸಚಿವ ಸಂಪುಟ ಸಭೆಯ ಹೈಲೈಟ್ಸ್ ಮುಂದೆ ಓದಿ.
ಇಂದಿನ ರಾಜ್ಯ ಸಚಿವ ಸಂಪುಟ ಸಭೆಯ ಮುಕ್ತಾಯದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದಂತ ಕಾನೂನು ಸಚಿವ ಹೆಚ್.ಕೆ.ಪಾಟೀಲ್ ಅವರು, ಆಗಸ್ಟ್.1 ರಂದು ಕ್ಯಾಬಿನೆಟ್ ಸಭೆ ನಡೆದಿತ್ತು. ಆ ಸಭೆಯಲ್ಲಿ ಖಂಡನಾ ನಿರ್ಣಯ ತೆಗೆದುಕೊಳ್ಳಲಾಗಿತ್ತು. ರಾಜ್ಯಪಾಲರಿಗೆ ಖಂಡನಾ ನಿರ್ಣಯ ಕಳಿಸಿದ್ದೆವು. ಅಂದು ತೆಗೆದುಕೊಂಡಿದ್ದ ನಿರ್ಣಯ ದೃಢೀಕರಿಸಲಾಗಿದೆ. ಇಂದಿನ ಕ್ಯಾಬಿನೆಟ್ ನಲ್ಲಿ ದೃಡೀಕರಣ ಮಾಡಿದ್ದೇವೆ. ಇಂದು 35 ವಿಷಯಗಳ ಬಗ್ಗೆ ಚರ್ಚಿಸಿದ್ದೇವೆ ಎಂದರು.
ರಾಜ್ಯಪಾಲರ ಎದುರು ಹಲವು ಪ್ರಕರಣಗಳಿವೆ. ಪ್ರಾಸಿಕ್ಯೂಶನ್‌ಗಾಗಿ ಅಲ್ಲಿ ಪೆಂಡಿಂಗ್ ಇವೆ. ಲೋಕಾಯುಕ್ತ ವರದಿಗಳು ಅಲ್ಲಿವೆ. ಮಾಧ್ಯಮದ ಮೂಲಕ ಹಲವು ಮಾಹಿತಿ ಲಭ್ಯವಾಗಿವೆ. ಭ್ರಷ್ಟಾಚಾರ ತಡೆ ಕಾಯ್ದೆಯಡಿ ಸಲ್ಲಿಸಿದ ಅರ್ಜಿ ಬಾಕಿ ಇವೆ. ಕೆಲವು ಆರೋಪ ಪಟ್ಟಿಗಳನ್ನ ಸಲ್ಲಿಸಲಾಗಿದೆ. 197,17ಎ ಅಡಿ ಕೆಲಸ ಕೇಸ್ ಬಾಕಿ ಇವೆ ಎಂದರು.
ಶಶಿಕಲಾ ಜೊಲ್ಲೆ 9/12/21 ರಂದು ಅರ್ಜಿ ಇದೆ. ಮುರುಗೇಶ್ ನಿರಾಣಿ 26/2/24 ರಂದು ಅರ್ಜಿ ಇದೆ. 21/11/23 ರಂದು ಕುಮಾರಸ್ವಾಮಿ ವಿರುದ್ಧ ಅರ್ಜಿಗಳು
ರಾಜ್ಯಪಾಲರ ಮುಂದೆ ಪ್ರಕರಣ ಬಾಕಿ ಇವೆ. 29/7/24 ರಂದು ಗೌರ್ನರ್ ಸ್ಪಷ್ಟೀಕರಣ ಕೇಳಿದ್ದಾರೆ. 8/8/24 ರಂದು ಎಸ್ ಐಟಿಗೆ ತಲುಪಿದೆ. ಎಸ್ ಐಟಿ 16/8/24 ರಂದು ಸ್ಪಷ್ಟೀಕರಣ ಕೊಟ್ಟಿದ್ದಾರೆ. 163ವಿದಿ ಅನ್ವಯ ನೆರವು ಸಲಹೆಗೆ ಸಂಪುಟದ ಒಪ್ಪಿಗೆ ನೀಡಲಾಗಿದೆ. ಪ್ರಾಸಿಕ್ಯೂಶನ್ ಗೆ ಕೊಡುವಂತೆ ಸಲಹೆ ನೀಡಲು ನಿರ್ಧಾರ ಕೈಗೊಳ್ಳಲಾಗಿದೆ ಎಂದರು.
ಹೆಚ್ಡಿಕೆ, ರೆಡ್ಡಿ ವಿರುದ್ಧ ಚಾರ್ಜ್ ಶೀಟ್ ಹಾಕಲಾಗಿದೆ. ಜೊಲ್ಲೆ, ನಿರಾಣಿ ವಿರುದ್ಧ ಚಾರ್ಜ್ ಶೀಟ್ ಇಲ್ಲ. ಸಿದ್ದರಾಮಯ್ಯ ಪ್ರಕರಣದಲ್ಲಿ ಖಾಸಗಿ ವ್ಯಕ್ತಿ ದೂರು ಕೊಟ್ಟಿದ್ದರು. ತರಾತುರಿಯಲ್ಲಿ ಮಾಡಿದ್ದು ಸರಿಯಲ್ಲವೆಂದು ನಿರ್ಣಯ ಕೈಗೊಳ್ಳಲಾಗಿದೆ. ನಾವು ಹಿಂದಿನ ಕ್ಯಾಬಿನೆಟ್ ನೆಟ್ ನಿರ್ಣಯ ಮಾಡಿದ್ದೆವು. ಆದರೆ ನಾಲ್ಕರಲ್ಲಿ ತನಿಖೆಯಾಗಿದೆ. ಎರಡು ಪ್ರಕರಣಗಳಲ್ಲಿ ಚಾರ್ಜ್ ಶೀಟ್ ಸಲ್ಲಿಕೆಯಾಗಿದೆ. ಹೀಗಿದ್ದೂ ಯಾವುದೇ ಕ್ರಮ ಆಗಿಲ್ಲ. ರಾಜ್ಯಪಾಲರ ಕಚೇರಿ ತಪ್ಪು ಮಾಡಬಾರದು. ಆ ಹಿನ್ನೆಲೆಯಲ್ಲಿ ನಾವು ಅವರಿಗೆ ಸಲಹೆ ನೀಡ್ತಿದ್ದೇವೆ. ಸಂಪುಟ ಸಭೆಯಲ್ಲಿ ನಿರ್ಣಯ ತೆಗೆದುಕೊಂಡಿದ್ದೇವೆ. 163ರಡಿ ನಾವು ಮಾರ್ಗದರ್ಶನ ಮಾಡಿದ್ದೇವೆ. ರಾಜಭವನ ತಪ್ಪು ಮಾಡಬಾರದೆಂದು ಮಾಡಿದ್ದೇವೆ ಎಂದರು ತಿಳಿಸಿದರು.
ಮೈಸೂರು ಮಿನರಲ್ ಎ. ವೃಂದದ ಅಧಿಕಾರಿಗಳಿಗೆ 4ನೇ ವೇತನ ಆಯೋಗದ ಶಿಫಾರಸಿನಂತೆ ಬಾಕಿವೇತನ ಬಿಡುಗಡೆ ಮಾಡಲಾಗುತ್ತಿದೆ. ಎಂಎಸ್ ಎಂಇ ಕೈಗಾರಿಕೆಗಳಿಗೆ ವೇಗ ನೀಡಲಾಗುತ್ತದೆ. ಕೇಂದ್ರದ 118, ರಾಜ್ಯದ 19 ಕೋಟಿ ವೆಚ್ಚದಲ್ಲಿ ಒಪ್ಪಿಗೆ ನೀಡಲಾಗಿದೆ. ಕೈಗಾರಿಕಾ ನಿಯಮಗಳ ತಿದ್ದುಪಡಿಗೆ ಒಪ್ಪಿಗೆ ಸೂಚಿಸಲಾಗಿದೆ. ಸಂಡೂರು 2058,1666 ಎಕರೆ ಭೂಮಿಗೆ ಕ್ರಯಪತ್ರವನ್ನು JSW ಸಂಸ್ಥೆಗೆ ಕ್ರಯಪತ್ರ ನೀಡಲು ಒಪ್ಪಿಗೆ ನೀಡಲಾಗಿದೆ ಎಂದರು.
ಸಹಕಾರಿ ಸಂಸ್ಥೆಗೆ 1600 ಕೋಟಿ ಸಾಲ ಪಡೆಯಲು ಖಾತರಿ. ಸಂಪುಟದ ಘಟನೋತ್ತರ ಅನುಮೋದನೆ ನೀಡಲಾಗಿದೆ. 50 ಗ್ರಾಮ ಪಂಚಾಯ್ತಿಗಳಲ್ಲಿ ಸೋಲಾರ್ ಬೀದಿ ದೀಪ ಅಳವಡಿಕೆಗೆ ಒಪ್ಪಿಗೆ ನೀಡಲಾಗಿದೆ ಎಂದರು.
250 ಅಡಿ ಸ್ಕೈಡೆಕ್ ನಿರ್ಮಾಣಕ್ಕೆ ಒಪ್ಪಿಗೆ ನೀಡಲಾಗಿದೆ. 500 ಕೋಟಿ ಅಂದಾಜು ಮೊತ್ತಕ್ಕೆ ಒಪ್ಪಿಗೆ ನೀಡಿದೆ. ಬೆಂಗಳೂರಿನಲ್ಲಿ ಎಲ್ ಇಡಿ ದೀಪಗಳ ಅಳವಡಿಕೆಗೆ ಒಪ್ಪಿಗೆ ನೀಡಲಾಗಿದೆ. 684 ಕೋಟಿ ವೆಚ್ಚಕ್ಕೆ ಸಂಪುಟ ಒಪ್ಪಿಗೆ ನೀಡಿದೆ ಎಂದರು.
ಬೆಂಗಳೂರು ಟನಲ್ ರಸ್ತೆ ನಿರ್ಮಾಣಕ್ಕೆ ಸಮ್ಮತಿ ನೀಡಲಾಗಿದೆ. ಎಸ್ಟೀಮ್ ಮಾಲ್ ನಿಂದ ಸಿಲ್ಕ್ ಬೋರ್ಡ್ ವರೆಗೆ ಟನಲ್ ನಿರ್ಮಾಣ ಮಾಡಲಾಗುತ್ತಿದೆ. 12690 ಕೋಟಿ ವೆಚ್ಚದಲ್ಲಿ ಸುರಂಗ ನಿರ್ಮಾಣ ಮಾಡಲಾಗುತ್ತಿದೆ ಎಂದರು.
ರಾಜ್ಯದಲ್ಲಿ 590 ಅಂಗನವಾಡಿ ಕಟ್ಟಡಗಳ 87 ಕೋಟಿ ವೆಚ್ಚದಲ್ಲಿ ನಿರ್ಮಿಸಲು ಒಪ್ಪಿಗೆ ನೀಡಲಾಗಿದೆ ಎಂದು ತಿಳಿಸಿದರು.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು
ಸಿದ್ದರಾಮಯ್ಯ ರಾಜೀನಾಮೆ ಕೊಡುವವರೆಗೆ ನಾವು ವಿರಮಿಸುವುದಿಲ್ಲ: BJP MLC ಛಲವಾದಿ ನಾರಾಯಣಸ್ವಾಮಿ
ಲೋಕಾಯುಕ್ತಕ್ಕಿಂತ ‘CBI’ ಅಧಿಕಾರಿಗಳೇ ಎಷ್ಟೋ ವಾಸಿ :ವಿಚಾರಣೆ ಬಳಿಕ ಡಿಸಿಎಂ ಡಿಕೆ ಶಿವಕುಮಾರ್ ಹೇಳಿಕೆ