Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಕೆಯುಡಬ್ಲೂಜೆ ಹೊರ ತರುವ ‘ಪತ್ರಕರ್ತ ಸಂಚಿಕೆ’ಯನ್ನು ಬಿಡುಗಡೆ ಮಾಡಿದ ‘ಸಿಎಂ ಸಿದ್ಧರಾಮಯ್ಯ’

30/07/2025 7:20 PM

ಬೆಂಗಳೂರಲ್ಲಿ ರಾಹುಲ್ ಗಾಂಧಿಗೆ ಯಾವ ನಿಯಮದಡಿ ಪಾದಯಾತ್ರೆಗೆ ಅವಕಾಶ: ಆರ್‌.ಅಶೋಕ ಪ್ರಶ್ನೆ

30/07/2025 7:16 PM

ಭಾರತದ ಮೇಲೆ ಶೇ. 25ರಷ್ಟು ಸುಂಕ ವಿಧಿಸಿದ ಅಮೆರಿಕ, ಇದು ಇತರ ದೇಶಗಳಿಗಿಂತ ಹೆಚ್ಚಿದ್ಯಾ? ಕಡಿಮೆ ಇದ್ಯಾ.? ಮಾಹಿತಿ ಇಲ್ಲಿದೆ!

30/07/2025 7:12 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಹೀಗಿದೆ ಇಂದಿನ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಸುದ್ದಿಗೋಷ್ಠಿಯ ಹೈಲೈಟ್ಸ್
KARNATAKA

ಹೀಗಿದೆ ಇಂದಿನ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಸುದ್ದಿಗೋಷ್ಠಿಯ ಹೈಲೈಟ್ಸ್

By kannadanewsnow0909/07/2025 4:29 PM

ಬೆಂಗಳೂರು: ಇಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಅವರು ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ಅವರ ಮಾಧ್ಯಮಗೋಷ್ಠಿಯ ಪ್ರಮುಖ ಹೈಲೈಟ್ಸ್ ಮುಂದಿದೆ ಓದಿ.

ಬಿಜೆಪಿ ಸರ್ಕಾರ ದೇಶದಲ್ಲಿ ಉದ್ಯೋಗ ಸೃಷ್ಟಿಯಲ್ಲಿ ವಿಫಲವಾಗಿದೆ, ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳು ಮತ್ತು ಸಾರ್ವಜನಿಕ ವಲಯದ ಉದ್ಯಮಗಳಲ್ಲಿ (ಪಿಎಸ್ ಯು) 30 ಲಕ್ಷಕ್ಕೂ ಹೆಚ್ಚು ಹುದ್ದೆಗಳು ಭರ್ತಿಯಾಗದೆ ಉಳಿದಿರುವುದು ದೇಶದ ಅತಿದೊಡ್ಡ ದುರಂತ.

ಕೇಂದ್ರ ಬಿಜೆಪಿ ಸರ್ಕಾರ ಕಾರ್ಮಿಕರಿಗೆ ಮಾಡಿದ ದ್ರೋಹವು ದೇಶಾದ್ಯಂತ ಕಾರ್ಮಿಕ ದಂಗೆಯನ್ನು ಹುಟ್ಟುಹಾಕಿದೆ; ಕಾರ್ಮಿಕ ಸಂಘಗಳು ಹಲವಾರು ಆರೋಪಗಳನ್ನು ಕೇಂದ್ರ ಸರ್ಕಾರದ ವಿರುದ್ಧ ಮಾಡುತ್ತಿವೆ.

ಸಶಸ್ತ್ರ ಪಡೆಗಳಲ್ಲಿ ಸುಮಾರು 1.55 ಲಕ್ಷ ಹುದ್ದೆಗಳಿವೆ. ರೈಲ್ವೆ ಇಲಾಖೆಯಲ್ಲಿ 2.5 ಲಕ್ಷಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇವೆ. ಸಿಆರ್ಪಿಎಫ್, ಬಿಎಸ್ಎಫ್ ಮತ್ತು ಐಟಿಬಿಪಿ ಸೇರಿದಂತೆ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳಲ್ಲಿ (ಸಿಎಪಿಎಫ್) 85,000 ಕ್ಕೂ ಹೆಚ್ಚು ಖಾಲಿ ಹುದ್ದೆಗಳಿವೆ. ಹೆಚ್ಚುತ್ತಿರುವ ನಿರುದ್ಯೋಗ ಮತ್ತು ಸಾರ್ವಜನಿಕ ಸೇವಾ ಸಿಬ್ಬಂದಿಯ ತುರ್ತು ಅಗತ್ಯದ ಹೊರತಾಗಿಯೂ, ಭಾರತ ಸರ್ಕಾರ ಈ 30 ಲಕ್ಷ ಹುದ್ದೆಗಳನ್ನು ಭರ್ತಿ ಮಾಡಲು ಮೀನಮೇಷ ಎಣಿಸುತ್ತಿರುವುದು ಏಕೆ?

ಭಾರತದಲ್ಲಿ ನಿರುದ್ಯೋಗವು ಆತಂಕಕಾರಿ ಮಟ್ಟವನ್ನು ತಲುಪಿದೆ, ದೇಶದಲ್ಲಿ ನಿರುದ್ಯೋಗ ಬೆಳವಣಿಗೆ ದರ 7.5% ಎಂದು ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ (CMIE) ತಿಳಿಸಿದೆ. ಇದು 45 ವರ್ಷಗಳಲ್ಲಿಯೇ ದಾಖಲಾದ ಅತಿ ಹೆಚ್ಚು ನಿರುದ್ಯೋಗ ದರವಾಗಿದೆ. ಈ ಬಿಕ್ಕಟ್ಟಿನ ಹೊರತಾಗಿಯೂ, ಸರ್ಕಾರವು ಪರಿಣಾಮಕಾರಿ ಕ್ರಮ ಕೈಗೊಳ್ಳಲು ವಿಫಲವಾಗಿದೆ. ಹೆಚ್ಚುತ್ತಿರುವ ನಿರುದ್ಯೋಗ ಮತ್ತು ಸರ್ಕಾರದ ನಿಷ್ಕ್ರಿಯತೆಯ ಬಗ್ಗೆ ಪ್ರಧಾನಿ ಮೋದಿಯವರ ಗಮನ ಸೆಳೆಯಲು ಕಾರ್ಮಿಕ ಸಂಘಗಳು ಪ್ರತಿಭಟನೆ ನಡೆಸುತ್ತಿವೆ.

ಬಡವರು ಬಡವರಾಗಿಯೇ ಇದ್ದಾರೆ, ಶ್ರೀಮಂತರು ಶ್ರೀಮಂತರಾಗಿಯೇ ಬೆಳೆಯುತ್ತಿದ್ದಾರೆ. ಭಾರತದಲ್ಲಿ ಸಂಪತ್ತಿನ ಅಸಮಾನತೆ ದಿನದಿಂದ ದಿನಕ್ಕೆ ಬೆಳೆಯುತ್ತಲೇ ಹೋಗುತ್ತಿದೆ. ವರದಿಗಳ ಪ್ರಕಾರ, ಭಾರತೀಯರಲ್ಲಿ ಅಗ್ರ 10% ಜನರು ದೇಶದ ಒಟ್ಟು ಸಂಪತ್ತಿನ 77% ಪಾಲನ್ನು ಅನ್ನು ಹೊಂದಿದ್ದಾರೆ; ಆದರೆ ಕೆಳಗಿನ 15% ಜನರು ಕೇವಲ 13% ಅನ್ನು ಹೊಂದಿದ್ದಾರೆ.

ದೇಶದ ತಲಾ ಆದಾಯ ಜಿಡಿಪಿ (GDP) ಮಟ್ಟದ ಪ್ರಕಾರ ವಿಶ್ವದ 50 ನೇ ಬಡ ರಾಷ್ಟ್ರವಾಗಿದೆ, ಬಾಂಗ್ಲಾದೇಶ, ಕಾಂಬೋಡಿಯಾ, ಕೀನ್ಯಾ ಮತ್ತು ಹೈಟಿಯಂತಹ ದೇಶಗಳಿಗಿಂತ ಸರಾಸರಿ $2,900 (ಸುಮಾರು ₹2.42 ಲಕ್ಷ) ಕಡಿಮೆಯಾಗಿದೆ. ಜಾಗತಿಕ ಸರಾಸರಿ ತಲಾ ಆದಾಯವು ಸುಮಾರು $13,000 (ಸುಮಾರು ₹10.85 ಲಕ್ಷ), ಈ ಅಂಕಿಅಂಶಗಳನ್ನು ನೋಡಿದರೆ ಪ್ರಸ್ತುತ ಸರ್ಕಾರದ ಆಡಳಿತದಲ್ಲಿ ಭಾರತ ಎಷ್ಟು ಹಿಂದುಳಿದಿದೆ ಎಂಬುದನ್ನು ಸ್ಪಷ್ಟವಾಗಿ ತೋರಿಸುತ್ತದೆ.

ಬಿಜೆಪಿಯ MGNREGA ಸರಿಯಾಗಿ ನಿರ್ವಹಣೆ ಮಾಡದ ಕಾರಣಕ್ಕೆ ಸುಮಾರು 7 ಕೋಟಿ ಜನರು ಕೆಲಸವನ್ನೇ ಕಳೆದುಕೊಂಡಿದ್ದಾರೆ. ಈ ಯೋಜನೆಯು ಬಡವರಿಗೆ ಸಹಾಯ ಮಾಡುವ ಬದಲು ಅವರನ್ನು ಕೆಲಸದಿಂದ ಹೊರಗಿಡುವ ಸಾಧನವಾಗಿ ಬಳಸಲಾಗುತ್ತಿದೆ. ಆಧಾರ್-MGNREGA ಕಾರ್ಡ್ ಲಿಂಕ್ ಮಾಡುವುದರಿಂದ 7 ಕೋಟಿ ನೋಂದಾಯಿತ ಕಾರ್ಮಿಕರಿಗೆ ಅವರ ಸರಿಯಾದ ವೇತನ ಮತ್ತು ಉದ್ಯೋಗವೇ ಮಂಗಮಾಯವಾಗಿದೆ.

MGNREGA ಅಡಿಯಲ್ಲಿ ಒಟ್ಟು ವ್ಯಕ್ತಿ-ದಿನಗಳ ಕೆಲಸದ ಅವಧಿ 2023–24ರಲ್ಲಿ 312.37 ಕೋಟಿಯಿಂದ ಫೆಬ್ರವರಿ 2025 ರ ವೇಳೆಗೆ ಕೇವಲ 239.67 ಕೋಟಿಗೆ ಇಳಿದಿದೆ ಮತ್ತು ಪ್ರತಿ ಮನೆಯ ಸರಾಸರಿ ಕೆಲಸದ ದಿನಗಳು 52.08 ರಿಂದ ಕೇವಲ 44.62 ಕ್ಕೆ ಇಳಿದಿವೆ. ಈ ವರ್ಷದ MGNREGA ಬಜೆಟ್ ₹86,000 ಯಿಂದ ಹಿಂದಿನ ಹಣಕಾಸು ವರ್ಷಕ್ಕೆ ಹೋಲಿಸಿದರೆ ರೂ. 9,754 ಕೋಟಿ ಕಡಿಮೆಯಾಗಿದೆ.

ಕಾಂಗ್ರೆಸ್ 100 ದಿನಗಳ ಕೆಲಸವನ್ನು ಖಾತರಿಪಡಿಸಿ ಕ್ರಾಂತಿಕಾರಿ ಯೋಜನೆಯನ್ನು ಜಾರಿಗೆ ತಂದಿತ್ತು. ಆದರೆ ಈ ಭ್ರಷ್ಟ ಬಿಜೆಪಿ ಅದನ್ನು ಕೇವಲ 45 ಕ್ಕೆ ಇಳಿಸಿದೆ, ಈ ಕ್ರಮವನ್ನು ಕಾರ್ಮಿಕ ಸಂಘಗಳು ತೀವ್ರವಾಗಿ ವಿರೋಧಿಸುತ್ತಿವೆ.

ಬಿಜೆಪಿ ಆಡಳಿತದಲ್ಲಿ, ಭಾರತವು 2023 ರ ಜಾಗತಿಕ ಹಸಿವು ಸೂಚ್ಯಂಕದಲ್ಲಿ 125 ದೇಶಗಳಲ್ಲಿ 111 ನೇ ಸ್ಥಾನಕ್ಕೆ ಕುಸಿದಿದೆ, ಪಾಕಿಸ್ತಾನ, ನೇಪಾಳ ಮತ್ತು ಬಾಂಗ್ಲಾದೇಶಕ್ಕಿಂತ ಕೆಳಗಿದೆ. ಈ ಆತಂಕಕಾರಿ ಕುಸಿತವು ಮಕ್ಕಳ ಅಪೌಷ್ಟಿಕತೆ, ಹಸಿವು ಮತ್ತು ವ್ಯಾಪಕ ಆಹಾರ ಅಭದ್ರತೆಯನ್ನು ಪರಿಹರಿಸುವಲ್ಲಿ ಬಿಜೆಪಿ ಸರ್ಕಾರದ ವೈಫಲ್ಯವನ್ನು ಎತ್ತಿ ಹಿಡಿಯುತ್ತದೆ.

ಜೀವಿತಾವಧಿ, ಶಿಕ್ಷಣ ಮತ್ತು ಆದಾಯವನ್ನು ಅಳೆಯುವ UNDP ಯ ಮಾನವ ಅಭಿವೃದ್ಧಿ ಸೂಚ್ಯಂಕ (2022)ದಲ್ಲಿ ಭಾರತವು 193 ರಲ್ಲಿ 134 ನೇ ಸ್ಥಾನದಲ್ಲಿದೆ. ಬಿಜೆಪಿ ಆಡಳಿತದಲ್ಲಿ ನಮಗೆ ಶ್ರೇಯಾಂಕವೇ ಸಿಗದಾಗಿದೆ. ಅಸಮಾನತೆ, ಕಳಪೆ ಆರೋಗ್ಯ ವ್ಯವಸ್ಥೆಗಳು ಮತ್ತು ದುರ್ಬಲ ಸಾರ್ವಜನಿಕ ಶಿಕ್ಷಣದಿಂದ ಜನರು ಬಳಲುವಂತಾಗಿದೆ.

ವಿಶ್ವ ಆರ್ಥಿಕ ವೇದಿಕೆಯ 2023 ರ ಸಮೀಕ್ಷೆಯಂತೆ ಜಾಗತಿಕ ಲಿಂಗ ಅಸಮಾನತೆ ಸೂಚ್ಯಂಕದಲ್ಲಿ ಭಾರತವು 146 ರಲ್ಲಿ 127 ನೇ ಸ್ಥಾನದಲ್ಲಿದೆ. ಕಡಿಮೆ ಆದಾಯದ ಮಟ್ಟಗಳು, ಕಳಪೆ ಆರೋಗ್ಯ ರಕ್ಷಣೆ, ದುರ್ಬಲ ಮೂಲಸೌಕರ್ಯ ಮತ್ತು ಹೆಚ್ಚಿನ ಮಾಲಿನ್ಯದಿಂದಾಗಿ ಜಾಗತಿಕ ಜೀವನ ಗುಣಮಟ್ಟ ಸೂಚ್ಯಂಕದಲ್ಲಿ ಭಾರತವು 173 ರಲ್ಲಿ 121 ನೇ ಸ್ಥಾನದಲ್ಲಿದೆ. ಬಿಜೆಪಿಯ ಅಡಿಯಲ್ಲಿ, ನಾಗರಿಕರ ದೈನಂದಿನ ಜೀವನವನ್ನು ಸುಧಾರಿಸುವ ಬದಲು ಕೇವಲ ಸುದ್ದಿ ಸ್ನೇಹಿ ಯೋಜನೆಗಳ ಮೇಲೆ ಗಮನ ಹರಿಸುತ್ತಿದೆ.

ರಿಪೋರ್ಟರ್ಸ್ ವಿಥೌಟ್ ಬಾರ್ಡರ್ಸ್ ಬಿಡುಗಡೆ ಮಾಡಿದ 2024 ರ ವಿಶ್ವ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕದಲ್ಲಿ ಭಾರತ 180 ರಲ್ಲಿ 159 ನೇ ಸ್ಥಾನದಲ್ಲಿದೆ. ಬಿಜೆಪಿ ಆಡಳಿತವು ಅಭಿಪ್ರಾಯ ಸ್ವತಂತ್ರ್ಯವನ್ನೇ ಹತ್ತಿಕ್ಕಿದೆ, ಪತ್ರಕರ್ತರನ್ನು ಜೈಲಿಗೆ ಹಾಕಿದೆ ಮತ್ತು ಸ್ವತಂತ್ರ ಮಾಧ್ಯಮಕ್ಕೆ ಬೆದರಿಕೆ ಹಾಕಲು ರಾಜ್ಯ ಅಧಿಕಾರವನ್ನು ಬಳಸಿದೆ; ಇದು ದಶಕಗಳಲ್ಲಿಯೇ ಭಾರತದ ಅತ್ಯಂತ ಕೆಟ್ಟ ಪತ್ರಿಕಾ ಸ್ವಾತಂತ್ರ್ಯ ಶ್ರೇಯಾಂಕಕ್ಕೆ ಕಾರಣವಾಗಿದೆ.

ಬಿಜೆಪಿ ಆಳ್ವಿಕೆಯಲ್ಲಿ, 2019 ರಿಂದ ಭಾರತವು ಮೋಟಾರ್ ಸೈಕಲ್ಗಳು ಮತ್ತು ಸ್ಕೂಟರ್ಗಳ ಮಾರಾಟದಲ್ಲಿ ಭಾರಿ ಕುಸಿತ ಕಂಡಿದೆ. ಗ್ರಾಮೀಣ ಜನರ ಆದಾಯ ಕುಸಿದಿರುವುದು, ಅನಿಶ್ಚಿತ ವೇತನ, ಇಂಧನ ಬೆಲೆ ಏರಿಕೆ ಮತ್ತು ವಾಹನಗಳ ಮೇಲಿನ ಜಿಎಸ್ಟಿ ಮುಂತಾದ ಕಾರಣಗಳಿಂದಾಗಿ ಈ ಸಮಸ್ಯೆ ಎದುರಾಗಿದೆ.

ಮೋದಿ ಸರ್ಕಾರದ ಅಡಿಯಲ್ಲಿ ಎಫ್ಎಂಸಿಜಿ ವಲಯವು ತನ್ನ ಕೆಟ್ಟ ದಿನಗಳನ್ನು ಕಂಡಿದೆ. ಹಿಂದೂಸ್ತಾನ್ ಯೂನಿಲಿವರ್, ಡಾಬರ್, ಮಾರಿಕೊ ಕಂಪೆನಿಗಳು ಗ್ರಾಮೀಣ ಬೇಡಿಕೆ ಕುಸಿದಿರುವ ಕಾರಣಕ್ಕೆ ಆದಾಯ ಕಡಿಮೆಯಾಗುವುದು ಮತ್ತು ಉದ್ಯೋಗ ನಷ್ಟಗಳ ಹೆಚ್ಚಳ ಮುಂತಾದ ಕಾರಣಗಳಿಂದಾಗಿ ಬೇಡಿಕೆಯೂ ಕಡಿಮೆಯಾಗಿದೆ ಎಂದಿವೆ.

ಜವಳಿ ವಲಯವು ಸಹ ತಾನು ಹಿಂದೆಂದೂ ಕಂಡಿರದ ಬಿಕ್ಕಟ್ಟನ್ನು ಕಂಡಿದೆ. ಸಾವಿರಾರು ಜವಳಿ ಘಟಕಗಳು ಮುಚ್ಚಿಹೋಗಿವೆ ಮತ್ತು ಕಾರ್ಮಿಕರನ್ನು ಕೆಲಸದಿಂದ ತೆಗೆದುಹಾಕಿವೆ. ಉದಾಹರಣೆಗೆ, ಸೂರತ್ನಲ್ಲಿ, ಜವಳಿ ಉದ್ಯಮವು 2023 ರಲ್ಲಿ 30% ಕ್ಕಿಂತ ಹೆಚ್ಚು ಉತ್ಪಾದನೆ ಕುಸಿತವನ್ನು ವರದಿ ಮಾಡಿದೆ.

ಭಾರತದ ಅತಿದೊಡ್ಡ ಉದ್ಯೋಗ ಸೃಷ್ಟಿಯಾಗುವುದು ರಿಯಲ್ ಎಸ್ಟೇಟ್ ಮತ್ತು ನಿರ್ಮಾಣ ಕ್ಷೇತ್ರಗಳಿಂದ. ಬಿಜೆಪಿಯ ದುರಾಡಳಿತದಿಂದ ಇವು ಸಹ ಪರಬಾರದ ಕಷ್ಟ-ನಷ್ಟ ಅನುಭವಿಸುತ್ತಿವೆ. ಈ ವಲಯವು ದೀರ್ಘಕಾಲದ ಮಂದಗತಿಯನ್ನು ಎದುರಿಸುತ್ತಿದೆ, 2022 ರ ವೇಳೆಗೆ ಭಾರತದ ಪ್ರಮುಖ ನಗರಗಳಲ್ಲಿ ಮಾರಾಟವಾಗದ ಮನೆಗಳ ಸಂಖ್ಯೆ 10 ಲಕ್ಷ ಯೂನಿಟ್ಗಳನ್ನು ದಾಟಿದೆ. ಶ್ರೀಮಂತರು ರಿಯಲ್ ಎಸ್ಟೇಟ್ ಅನ್ನು ಸಂಪತ್ತು-ನಿರ್ಮಾಣ ಆಸ್ತಿಯಾಗಿ ಪರಿಗಣಿಸುತ್ತಾ ಬಹು ಆಸ್ತಿಗಳಲ್ಲಿ ಹೂಡಿಕೆ ಮಾಡುವುದನ್ನು ಮುಂದುವರೆಸಿದರೆ, ಮಧ್ಯಮ ವರ್ಗ ಮತ್ತು ಬಡವರು ತಮ್ಮ ಜೀವನ ನಿರ್ವಹಣೆಗೆ ಮಾತ್ರ ಹೆಣಗಾಡುತ್ತಿದ್ದಾರೆ.

FICCI ಮತ್ತು Quess Corp ವೇತನ ಸಮೀಕ್ಷೆಯು ತೀವ್ರ ವೇತನ ಕಡಿತವನ್ನು ಜಗಜ್ಜಾಹೀರು ಮಾಡಿವೆ. ನಾಮಮಾತ್ರ ವೇತನ ಹೆಚ್ಚಳವು ಕೇವಲ 0.8% ರಿಂದ 5% ವರೆಗೆ ಇರುತ್ತದೆ, ಆದರೆ ಹಣದುಬ್ಬರ ದರವು 5.7% ಆಗಿದೆ. ಅಂತಹ ಸನ್ನಿವೇಶದಲ್ಲಿ, ಮಧ್ಯಮ ಮತ್ತು ಬಡ ವರ್ಗಗಳು ಎಲ್ಲಿಗೆ ಹೋಗಬೇಕು, ಬರುತ್ತಿರುವ ಸಂಬಳ, ಆದಾಯ ನೋಡಿದರೆ ಹೆಚ್ಚುತ್ತಿರುವ ಜೀವನ ವೆಚ್ಚವನ್ನು ಸಹ ಪೂರೈಸಲು ಸಾಧ್ಯವಿಲ್ಲದ ಪರಿಸ್ಥಿತಿ ಎದುರಾಗಿದೆ.

ಭಾರತದ ಕಾರ್ಮಿಕ ವರ್ಗವು ಅನಿಶ್ಚಿತ ಸ್ಥಿತಿಯಲ್ಲಿದೆ, 80% ಜನರು ಅಸಂಘಟಿತ ವಲಯದಲ್ಲಿ ಉದ್ಯೋಗದಲ್ಲಿದ್ದಾರೆ, 60% ಜನರು ಯಾವುದೇ ಒಪ್ಪಂದವಿಲ್ಲದೆ ಕೆಲಸ ಮಾಡುತ್ತಿದ್ದಾರೆ ಮತ್ತು 53% ಜನರು ಯಾವುದೇ ರೀತಿಯ ಸಾಮಾಜಿಕ ಭದ್ರತೆಯನ್ನು ಹೊಂದಿಲ್ಲ. ಈ ವಿಚಾರಗಳೇ ದೇಶದಲ್ಲಿ ಅನಿಶ್ಚಿತತೆಯನ್ನು ಉಂಟು ಮಾಡಿರುವುದು. ಇದು ದೇಶಾದ್ಯಂತ ಲಕ್ಷಾಂತರ ಜನರ ಜೀವನೋಪಾಯ ಮತ್ತು ಘನತೆಗೆ ಬೆದರಿಕೆ ಹಾಕುವ ಒಂದು ಟೈಮ್ ಬಾಂಬ್ ಆಗಿದೆ. ಬಿಜೆಪಿ ಮತ್ತು ಮೋದಿ ಸರ್ಕಾರವು ಇಂದು ಜನರು ಎದುರಿಸುತ್ತಿರುವ ನಿಜವಾದ ಹೋರಾಟಗಳನ್ನು ತಮ್ಮ ಕಣ್ಣುಗಳನ್ನು ತೆರೆದು ನೋಡಬೇಕು ಜೊತೆಗೆ ಒಪ್ಪಿಕೊಳ್ಳಬೇಕು ಎಂದು ಈ ಮೂಲಕ ಕಾಂಗ್ರೆಸ್ ಒತ್ತಾಯಿಸುತ್ತದೆ ಎಂದರು.

ಮನೆಯಲ್ಲಿ ಪ್ರೀತಿಗೆ ನಿರಾಕರಿಸಿದ್ದಕ್ಕೆ ಪ್ರೇಮಿಗಳಿಬ್ಬರು ಆತ್ಮಹತ್ಯೆಗೆ ಯತ್ನ: ಅಪ್ರಾಪ್ತೆ ಸಾವು

BREAKING: ರಾಜ್ಯದಲ್ಲಿ ಬಂಧಿತ ಮೂವರು ಶಂಕಿತ ಉಗ್ರರಿಗೆ 6 ದಿನ NIA ಕಸ್ಟಡಿಗೆ ನೀಡಿ ಕೋರ್ಟ್ ಆದೇಶ

Share. Facebook Twitter LinkedIn WhatsApp Email

Related Posts

ಕೆಯುಡಬ್ಲೂಜೆ ಹೊರ ತರುವ ‘ಪತ್ರಕರ್ತ ಸಂಚಿಕೆ’ಯನ್ನು ಬಿಡುಗಡೆ ಮಾಡಿದ ‘ಸಿಎಂ ಸಿದ್ಧರಾಮಯ್ಯ’

30/07/2025 7:20 PM1 Min Read

ಬೆಂಗಳೂರಲ್ಲಿ ರಾಹುಲ್ ಗಾಂಧಿಗೆ ಯಾವ ನಿಯಮದಡಿ ಪಾದಯಾತ್ರೆಗೆ ಅವಕಾಶ: ಆರ್‌.ಅಶೋಕ ಪ್ರಶ್ನೆ

30/07/2025 7:16 PM2 Mins Read

ನಿಮ್ಮ ಮನೆಯ ಈ ದಿಕ್ಕಿನಲ್ಲಿ ‘ಪಿತೃಗಳ ಪೋಟೋ’ ಇದ್ದರೇ ಪಿತೃ ದೋಷವಂತೆ!

30/07/2025 7:05 PM2 Mins Read
Recent News

ಕೆಯುಡಬ್ಲೂಜೆ ಹೊರ ತರುವ ‘ಪತ್ರಕರ್ತ ಸಂಚಿಕೆ’ಯನ್ನು ಬಿಡುಗಡೆ ಮಾಡಿದ ‘ಸಿಎಂ ಸಿದ್ಧರಾಮಯ್ಯ’

30/07/2025 7:20 PM

ಬೆಂಗಳೂರಲ್ಲಿ ರಾಹುಲ್ ಗಾಂಧಿಗೆ ಯಾವ ನಿಯಮದಡಿ ಪಾದಯಾತ್ರೆಗೆ ಅವಕಾಶ: ಆರ್‌.ಅಶೋಕ ಪ್ರಶ್ನೆ

30/07/2025 7:16 PM

ಭಾರತದ ಮೇಲೆ ಶೇ. 25ರಷ್ಟು ಸುಂಕ ವಿಧಿಸಿದ ಅಮೆರಿಕ, ಇದು ಇತರ ದೇಶಗಳಿಗಿಂತ ಹೆಚ್ಚಿದ್ಯಾ? ಕಡಿಮೆ ಇದ್ಯಾ.? ಮಾಹಿತಿ ಇಲ್ಲಿದೆ!

30/07/2025 7:12 PM

ನಿಮ್ಮ ಮನೆಯ ಈ ದಿಕ್ಕಿನಲ್ಲಿ ‘ಪಿತೃಗಳ ಪೋಟೋ’ ಇದ್ದರೇ ಪಿತೃ ದೋಷವಂತೆ!

30/07/2025 7:05 PM
State News
KARNATAKA

ಕೆಯುಡಬ್ಲೂಜೆ ಹೊರ ತರುವ ‘ಪತ್ರಕರ್ತ ಸಂಚಿಕೆ’ಯನ್ನು ಬಿಡುಗಡೆ ಮಾಡಿದ ‘ಸಿಎಂ ಸಿದ್ಧರಾಮಯ್ಯ’

By kannadanewsnow0930/07/2025 7:20 PM KARNATAKA 1 Min Read

ಬೆಂಗಳೂರು: ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ(Karnataka Union of Working Journalists-KUWJ) ಹೊರ ತರುವ ಪತ್ರಕರ್ತ ವಿಶೇಷ ಸಂಚಿಕೆಯನ್ನು…

ಬೆಂಗಳೂರಲ್ಲಿ ರಾಹುಲ್ ಗಾಂಧಿಗೆ ಯಾವ ನಿಯಮದಡಿ ಪಾದಯಾತ್ರೆಗೆ ಅವಕಾಶ: ಆರ್‌.ಅಶೋಕ ಪ್ರಶ್ನೆ

30/07/2025 7:16 PM

ನಿಮ್ಮ ಮನೆಯ ಈ ದಿಕ್ಕಿನಲ್ಲಿ ‘ಪಿತೃಗಳ ಪೋಟೋ’ ಇದ್ದರೇ ಪಿತೃ ದೋಷವಂತೆ!

30/07/2025 7:05 PM

BIG NEWS: ಧರ್ಮಸ್ಥಳದಲ್ಲಿ ಕಳೇಬರ ಶೋಧ ವೇಳೆ ಮಹತ್ವದ ಕುರುಹು ಪತ್ತೆ: ಸೋಷಿಯಲ್ ಮೀಡಿಯಾದಲ್ಲಿ ‘ಪ್ರೆಸ್ ನೋಟ್ ವೈರಲ್’

30/07/2025 6:49 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.