ಬೆಂಗಳೂರು : ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಶುಕ್ರವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಹಲವು ಮಹತ್ವದ ನಿರ್ಧಾರ ಕೈಗೊಳ್ಳಲಾಗಿದ್ದು, ಹಲವು ಯೋಜನೆಗಳಿಗೆ ಅನುಮೋದನೆ ನೀಡಲಾಗಿದ್ದು, ಸಚಿವ ಸಂಪುಟ ಸಭೆಯಲ್ಲಿ ನಡೆದ ಪ್ರಮುಖ ನಿರ್ಧಾರಗಳ ಹೈಲೆಟ್ಸ್ ಪಾಯಿಂಟ್ಸ್ ಇಲ್ಲಿದೆ.
1) ಕರ್ನಾಟಕ ನ್ಯಾಯವಾದಿಗಳ ಮೇಲಿನ ಹಿಂಸಾಚಾರ ನಿಷೇಧ ವಿಧೇಯಕ – 2023ಕ್ಕೆ ಘಟನೋತ್ತರ ಅನುಮೋದನೆ.
2) ಬಿಬಿಎಂಪಿ ವ್ಯಾಪ್ತಿಯಲ್ಲಿ ರೂ.800 ಕೋಟಿ ಅನುದಾನದಲ್ಲಿ 43 ವೈಟ್ ಟಾಪಿಂಗ್ ಕಾಮಗಾರಿಗಳನ್ನು ಕೈಗೊಳ್ಳುವ ಕ್ರಿಯಾಯೋಜನೆಗೆ ಅನುಮೋದನೆ.
3) 6 ಜಿಲ್ಲೆಗಳಲ್ಲಿ 6 ಬಹುಉತ್ಪನ್ನ ಶೀಥಲ ಗೃಹಗಳನ್ನು ರೂ.65.97 ಕೋಟಿ ವೆಚ್ಚದಲ್ಲಿ ನಿರ್ಮಿಸಲು ಆಡಳಿತಾತ್ಮಕ ಅನುಮೋದನೆ.
4) ASCAD ಯೋಜನೆಯಡಿ ರಾಜ್ಯದ ಜಾನುವಾರುಗಳಿಗೆ ಜಂತುನಾಶಕ ಔಷಧಿಗಳನ್ನು ರೂ.31 ಕೋಟಿಗಳ ವೆಚ್ಚದಲ್ಲಿ ವಿತರಿಸುವ ಕಾರ್ಯಕ್ರಮಕ್ಕೆ ನಿರ್ಧಾರ.
5) 16ನೇ ಹಣಕಾಸು ಆಯೋಗಕ್ಕೆ ಜ್ಞಾಪನಾ ಪತ್ರವನ್ನು ತಯಾರಿಸಲು ಮೂವರು ಸದಸ್ಯರನ್ನು ಒಳಗೊಂಡ ತಾಂತ್ರಿಕ ಕೋಶ ರಚನೆಗೆ ನಿರ್ಧಾರ.
6) ಹುಲಿಯುಗುರು, ಆನೆ ದಂತ, ಜಿಂಕೆ ಕೊಂಬು ಸೇರಿದಂತೆ ಅಕ್ರಮವಾಗಿಟ್ಟುಕೊಂಡ ಯಾವುದೇ ವನ್ಯಜೀವಿಯ ಅಂಗಾಂಗ ಟ್ರೋಪಿಗಳನ್ನು ಸರ್ಕಾರಕ್ಕೆ ಹಿಂದಿರುಗಿಸಲು 3 ತಿಂಗಳ ಕಾಲಾವಕಾಶ ನೀಡಲು ತೀರ್ಮಾನ.
7) ಬೆಂಗಳೂರಿನಲ್ಲಿರುವ ವಿಶ್ವೇಶ್ವರಯ್ಯ ಕಾಲೇಜ್ ಆಫ್ ಇಂಜಿನಿಯರಿಂಗ್ ಯೂನಿವರ್ಸಿಟಿಯನ್ನು ಉನ್ನತೀಕರಿಸಲು ರೂ.25 ಕೋಟಿ ವೆಚ್ಚದಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಕಾಮಗಾರಿಗೆ ಆಡಳಿತಾತ್ಮಕ ಅನುಮೋದನೆ.
8) ಶಿವಮೊಗ್ಗ ಜಿಲ್ಲೆಯ ತೇವರಚಟ್ನಳ್ಳಿ ಗ್ರಾಮದಲ್ಲಿ ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳ ಡಾ|| ಬಿ. ಆರ್ ಅಂಬೇಡ್ಕರ್ ವಸತಿ ಶಾಲೆಯ ಕಟ್ಟಡವನ್ನು ರೂ.22.50 ಕೋಟಿ ವೆಚ್ಚದಲ್ಲಿ ನಿರ್ಮಿಸಲು ಆಡಳಿತಾತ್ಮಕ ಅನುಮೋದನೆ.
9) ಬಿಎಂಟಿಸಿ ಸಂಸ್ಥೆಯ ಮೂಲಕ 10 ಹವಾನಿಯಂತ್ರಿತೆ ಡಬ್ಬಲ್ ಡೆಕ್ಕರ್ ಬಸ್ ಗಳನ್ನು ಜೆ.ಸಿ.ಸಿ ಆಧಾರದ ಮೇಲೆ ಕಾರ್ಯಾಚರಣೆ ಮಾಡಲು ಆಡಳಿತಾತ್ಮಕ ಅನುಮೋದನೆ.
10) ಕೇಂದ್ರ ಪುರಸ್ಕೃತ ಪ್ರಸಾದ್ ಯೋಜನೆಯಡಿ ಶ್ರೀ ಚಾಮುಂಡೇಶ್ವರಿ ದೇವಿ ಸನ್ನಿಧಾನದ ಅಭಿವೃದ್ಧಿ ಯೋಜನೆಯನ್ನು ರೂ.45 ಕೋಟಿ ವೆಚ್ಚದಲ್ಲಿ ಕೈಗೊಳ್ಳಲು ಒಪ್ಪಿಗೆ.
11) ಕರ್ನಾಟಕ ನ್ಯಾಯವಾದಿಗಳ ಮೇಲಿನ ಹಿಂಸಾಚಾರ ನಿಷೇಧ ವಿಧೇಯಕ – 2023ಕ್ಕೆ ಘಟನೋತ್ತರ ಅನುಮೋದನೆ.
12) ಬಿಬಿಎಂಪಿ ವ್ಯಾಪ್ತಿಯಲ್ಲಿ ರೂ.800 ಕೋಟಿ ಅನುದಾನದಲ್ಲಿ 43 ವೈಟ್ ಟಾಪಿಂಗ್ ಕಾಮಗಾರಿಗಳನ್ನು ಕೈಗೊಳ್ಳುವ ಕ್ರಿಯಾಯೋಜನೆಗೆ ಅನುಮೋದನೆ.
13) 6 ಜಿಲ್ಲೆಗಳಲ್ಲಿ 6 ಬಹುಉತ್ಪನ್ನ ಶೀಥಲ ಗೃಹಗಳನ್ನು ರೂ.65.97 ಕೋಟಿ ವೆಚ್ಚದಲ್ಲಿ ನಿರ್ಮಿಸಲು ಆಡಳಿತಾತ್ಮಕ ಅನುಮೋದನೆ.
14) ASCAD ಯೋಜನೆಯಡಿ ರಾಜ್ಯದ ಜಾನುವಾರುಗಳಿಗೆ ಜಂತುನಾಶಕ ಔಷಧಿಗಳನ್ನು ರೂ.31 ಕೋಟಿಗಳ ವೆಚ್ಚದಲ್ಲಿ ವಿತರಿಸುವ ಕಾರ್ಯಕ್ರಮಕ್ಕೆ ನಿರ್ಧಾರ.
ನಿನ್ನೆ ನಡೆದ ರಾಜ್ಯ ಸಚಿವ ಸಂಪುಟ ಸಭೆಯ ಪ್ರಮುಖ ನಿರ್ಣಯಗಳು.#CabinetDecisions pic.twitter.com/PiyUZX5e33
— Siddaramaiah (@siddaramaiah) January 6, 2024