ಬೆಂಗಳೂರು: ಇಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ನೇತೃತ್ವದಲ್ಲಿ 11 ಕಾರ್ಮಿಕ ಸಂಘಟನೆಯ ಮುಖಂಡರೊಂದಿಗೆ ಮಹತ್ವದ ಸಭೆ ನಡೆಯಿತು. ಯಾವೆಲ್ಲ ವಿಷಯಗಳ ಬಗ್ಗೆ ಚರ್ಚೆಯಾಯ್ತು. ಸಚಿವರು ಏನೆಲ್ಲ ತೀರ್ಮಾನ ಭರವಸೆಗಳನ್ನು ಸಚಿವರು ನೀಡಿದ್ರು ಅಂತ ಮುಂದೆ ಓದಿ.
ಇಂದು ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ರವರ ಅಧ್ಯಕ್ಷತೆಯಲ್ಲಿ ಹಾಗೂ ಅಧ್ಯಕ್ಷರು, ಕೆ ಎಸ್ ಆರ್ ಟಿ ಸಿ, ಎಸ್ ಆರ್ ಶ್ರೀನಿವಾಸ್( ವಾಸು) ರವರ ಉಪಸ್ಥಿತಿಯಲ್ಲಿ, ನಿಗಮದ 11 ಕಾರ್ಮಿಕ ಸಂಘಟನೆಗಳ ಮುಖಂಡರೊಂದಿಗೆ ಕುಂದು ಕೊರತೆಗಳ ಸಭೆ ನಡೆಸಿದರು.
ಎಲ್ಲಾ ಸಂಘಟನೆಗಳು ತಮ್ಮ ತಮ್ಮ ಬೇಡಿಕೆಗಳನ್ನು ಮತ್ತು ಅಭಿಪ್ರಾಯಗಳನ್ನು ಮಂಡಿಸಿದರು. ಮುಖ್ಯವಾಗಿ 01.01.2020 ರಿಂದ 28.02.2023 ರವರೆಗಿನ ವೇತನ ಬಾಕಿ ಹಣ, 01.01.2024 ರಿಂದ ಮೂಲ ವೇತನ ಹೆಚ್ಚಳ ಹಾಗೂ 01.01.2020 ರಿಂದ 28.02.2023ರ ವರೆಗಿನ ವೇತನ ಹೆಚ್ಚಳದ ಬಾಕಿಯನ್ನು ನಿವೃತ್ತ ಹಾಗೂ ಇತರೆ ಕಾರಣಗಳಿಂದ ಸಂಸ್ಥೆಗಳಿಂದ ಹೊರ ಹೋಗಿರುವ ನೌಕರರ ಹಾಗೂ ಇತರೆ ಬೇಡಿಕೆಗಳ ಬಗ್ಗೆ ಚರ್ಚಿಸಿದರು.
ಅಂತಿಮವಾಗಿ 01.01.2020 ರಿಂದ 28.02.2023ರ ವರೆಗಿನ ನಿವೃತ್ತಿ ಹೊಂದಿರುವ ಹಾಗೂ ಸಂಸ್ಥೆಯಿಂದ ಹೊರಗೆ ಹೋಗಿರುವ ಎಲ್ಲಾ ಅಂದಾಜು 10000 ನೌಕರರಿಗೂ ಶೇ.15 ರಷ್ಟು ವೇತನ ಹೆಚ್ಚಳದ ಹಣ ಸುಮಾರು ರೂ. 220 ಕೋಟಿ ಬಾಕಿ ಹಣ ನೀಡುವುದಾಗಿ ಮಾನ್ಯ ಸಾರಿಗೆ ಸಚಿವರು ಭರವಸೆ ನೀಡಿದರು. ವ್ಯವಸ್ಥಾಪಕ ನಿರ್ದೇಶಕರು ಕೆ ಎಸ್ ಆರ್ ಟಿ ಸಿ ರವರಿಗೆ ಕೂಡಲೇ ಆದೇಶ ಹೊರಡಿಸಲು ಸೂಚಿಸಿದರು. ಈ ಕ್ರಮಕ್ಕಾಗಿ ಎಲ್ಲಾ ಸಂಘಟನೆಗಳು ಹರ್ಷ ವ್ಯಕ್ತಪಡಿಸಿ, ಮಾನ್ಯ ಸಾರಿಗೆ ಸಚಿವರು, ಮಾನ್ಯ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿಯನ್ನು ಅಭಿನಂದಿಸಿದರು.
01.01.2024 ರಿಂದ ಮಾಡಬೇಕಾಗಿರುವ ವೇತನ ಹೆಚ್ಚಳದ ಬಗ್ಗೆ ಮಾತನಾಡಿ, ಮುಂದಿನ ದಿನಗಳಲ್ಲಿ ಹೊಸ ಬಸ್ಸುಗಳ ಸೇರ್ಪಡೆಯಾಗಿ ಆದಾಯ ವೃದ್ಧಿಸಲಿದ್ದು, ಆರ್ಥಿಕ ಪರಿಸ್ಥಿತಿಯನ್ನು ಗಣನೆಗೆ ತೆಗದುಕೊಂಡು ಈ ಬಗ್ಗೆ ಕ್ರಮವಹಿಸಲಾಗುವುದು ಎಂದು ತಿಳಿಸಿದರು.
ಇಂದು ಮೊದಲ ಸಭೆಯಾಗಿರುವುದರಿಂದ ಮಹತ್ವದ ಆದೇಶ ಹೊರಬಿದ್ದಿದ್ದು, ಮುಂದಿನ ಸಭೆಗಳಲ್ಲಿ ಹಲವು ಬೇಡಿಕೆಗಳ ಬಗ್ಗೆ ಸಕಾರಾತ್ಮಕವಾಗಿ ಚರ್ಚೆ ಮಾಡಿ ಮುಂದುವರಿಯೋಣ ಇದು ನಿಮ್ಮ ಸಂಸ್ಥೆ ಈ ಸಂಸ್ಥೆಗಳನ್ನು ಉಳಿಸಿ ಬೆಳೆಸಿಕೊಂಡು ಹೋಗಬೇಕಾಗಿರುವುದು ನಮ್ಮೆಲ್ಲರ ಜವಾಬ್ದಾರಿ ಅದರೊಂದಿಗೆ ಸಾರ್ವಜನಿಕರಿಗೆ ಉತ್ತಮ ಸೇವೆಯನ್ನು ಒದಗಿಸಿ,ಸಂಸ್ಥೆಯನ್ನು ಮತ್ತಷ್ಟು ಅಭಿವೃದ್ಧಿಯ ಪಥದಲ್ಲಿ ತೆಗೆದುಕೊಂಡು ಹೋಗಲು ತಮ್ಮೆಲ್ಲರ ಸಹಕಾರ ಬೇಕು ಎಂದು ಸಾರಿಗೆ ಸಚಿವರು ತಿಳಿಸಿದರು.
ಈ ಸಭೆಯಲ್ಲಿ ವಿ.ಅನ್ಬುಕುಮಾರ್ ಭಾಆಸೇ, ವ್ಯವಸ್ಥಾಪಕ ನಿರ್ದೇಶಕರು, ಕೆ ಎರ್ ಆರ್ ಟಿ ಸಿ, ಆರ್. ರಾಮಚಂದ್ರನ್ ಭಾಆಸೇ,ವ್ಯವಸ್ಥಾಪಕ ನಿರ್ದೇಶಕರು, ಬಿ ಎಂ ಟಿ ಸಿ, ಎಸ್ ಭರತ್ , ಭಾಆಸೇ, ವ್ಯವಸ್ಥಾಪಕ ನಿರ್ದೇಶಕರು, ವಾಕರಾಸಂಸ್ಥೆ, ಎಂ.ರಾಚಪ್ಪ ಕ ಆಸೇ ( ಹಿರಿಯ ಶ್ರೇಣಿ), ವ್ಯವಸ್ಥಾಪಕ ನಿರ್ದೇಶಕರು, ಕಕರಸಾನಿಗಮ, ಡಾ. ಕೆ ನಂದಿನಿದೇವಿ, ಭಾಆಸೇ ನಿರ್ದೇಶಕರು ಸಿ(ಭ& ಜಾ), ಕೆ ಎಸ್ ಆರ್ ಟಿ ಸಿರವರು ಹಾಗೂ ಸಂಸ್ಥೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
‘ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಪ್ರಶಸ್ತಿ’ ಪ್ರಕಟ: ಇಲ್ಲಿದೆ ‘ಪ್ರಶಸ್ತಿ ಪುರಸ್ಕೃತ ಚಿತ್ರ’ಗಳ ಪಟ್ಟಿ
BIG BREAKING: 5, 8, 9 ಮತ್ತು 11ನೇ ತರಗತಿ ‘ಬೋರ್ಡ್ ಪರೀಕ್ಷೆ’ಗೆ ‘ಹೈಕೋರ್ಟ್ ಗ್ರೀನ್ ಸಿಗ್ನಲ್’
‘ನಿಗದಿತ ವೇಳಾಪಟ್ಟಿ’ಯಂತೆ 5, 8 ಮತ್ತು 9ನೇ ತರಗತಿ ‘ಮೌಲ್ಯಾಂಕನ ಪರೀಕ್ಷೆ’ ನಡೆಯಲಿದೆ – ‘ಶಾಲಾ ಶಿಕ್ಷಣ ಇಲಾಖೆ’ ಆದೇಶ