ಕೆಎನ್‌ಎನ್‌ಡಿಜಿಟಲ್‌ಡೆಸ್ಕ್: ಬೆಳ್ಳಿ ಪಾತ್ರೆಗಳು ಕೆಲವೊಮ್ಮೆ ಉಪಯೋಗಿಸದೇ ಇದ್ದರೂ ಇಟ್ಟಲ್ಲಿಯೇ ಇಟ್ಟು ಕಪ್ಪು ಬಣ್ಣಕ್ಕೆ ತಿರುಗುತ್ತವೆ. ಇನ್ನು ಪೂಜೆಗಳಿಗೆ ಬಳಸಿದ, ದೀಪ ಹಚ್ಚಲು ಬೆಳ್ಳಿ ಆಭರಣಗಳ ಸಂರಕ್ಷಣೆ ಅಷ್ಟು ಸುಲಭವಾದ ಕೆಲಸವಲ್ಲ. ಎಣ್ಣೆ, ತುಪ್ಪದ ಜಿಡ್ಡು ಬೆಳ್ಳಿ ದೀಪಗಳಿಗೆ ಅಂಟಿಕೊಂಡುಬಿಡುತ್ತದೆ. ಇಂತಹ ಕಠಿಣ ಕಲೆಗಳನ್ನು ಹೋಗಲಾಡಿಸಲು ಮಾರುಕಟ್ಟೆಯಲ್ಲಿ ಅನೇಕ ಪೌಡರ್, ಸೋಪ್‌ಗಳಿವೆ. ಇವೆಲ್ಲಾ ರಾಸಾಯನಿಕಯುಕ್ತವಾಗಿರುತ್ತವೆ. ಇಂತಹ ರಾಸಾಯನಿಕಯುಕ್ತ ಪೌಡರ್‌ಗಳು ಬೆಳ್ಳಿಯ ಪಾತ್ರೆಗಳಿಗೆ ಕೆಲವೊಮ್ಮೆ ಹಾನಿಯುಂಟು ಮಾಡಬಹುದು. ಹಾಗಾಗಿ ಮನೆಯಲ್ಲಿಯೇ ಸಿಗುವ ಕೆಲ ಪದಾರ್ಥಗಳಿಂದ ಬೆಳ್ಳಿ ಪಾತ್ರೆಗಳನ್ನು ಹೆಚ್ಚು ಶ್ರಮವಿಲ್ಲದೇ ಸರಳವಾಗಿ ಶುಚಿಗೊಳಿಸಬಹುದು.
ಕೆಲವೊಬ್ಬರು ನಿತ್ಯವೂ ಬೆಳ್ಳಿ ಪಾತ್ರೆಗಳನ್ನು ತೊಳೆಯುತ್ತಾರೆ. ನಿತ್ಯವೂ ಬೆಳ್ಳಿ ಪಾತ್ರೆ ತೊಳೆಯುತ್ತಿದ್ದರೆ, ನಿಂಬೆ ರಸಕ್ಕೆ ಅರ್ಧ ಚಮಚ ಉಪ್ಪು ಹಾಕಿ ಅದಕ್ಕೆ ಸ್ವಲ್ಪ ನೀರು ಬೆರಸಿ ಇವೆಲ್ಲವನ್ನೂ ಮಿಶ್ರಣ ಮಾಡಿ ಮೃದುವಾದ ಬ್ರೇಷ್‌ನಿಂದ ಬೆಳ್ಳಿ ಪಾತ್ರೆಗಳನ್ನು ಉಜ್ಜಿ ತೊಳೆಯಿರಿ. ಇದರಿಂದ ನೈಸರ್ಗಿಕವಾಗಿ ಬೆಳ್ಳಿ ಪಾತ್ರೆಗಳು ಶುಚಿಯಾಗಿ ಹೊಳೆಯುತ್ತವೆ.
ದೀಪದ ಬೆಳ್ಳಿ ಪಾತ್ರೆಗಳ ಜಿಡ್ಡನ್ನು ತೆಗೆಯಲು ಟಮೆಟೋ ಕೆಚಪ್ ತುಂಬಾ ಉತ್ತಮವಾದ ಪರಿಣಾಮ ಬೀರುತ್ತದೆ. ಹುಳಿ ಅಂಶವಿರುವ ಇದು ಎಂತಹ ಕರೆಗಟ್ಟಿದ ಜಿಡ್ಡನ್ನೂ ಕೆಚಪ್ ಮಾಯ ಮಾಡುವ ಗುಣ ಹೊಂದಿದೆ. ಕೆಚಪ್‌ಅನ್ನು ಬಟ್ಟೆಗೆ ಹಾಕಿಕೊಂಡು ಜಿಡ್ಡಿರುವ ಬೆಳ್ಳಿ ಪಾತ್ರೆಗೆ ನೀರಿನ ಸಹಾಯವಿಲ್ಲದೇ ಹಾಗೇ ಉಜ್ಜಿಕೊಳ್ಳಿ. ಕೆಚಪ್‌ನಿಂದ ಉಜ್ಜಿದಂತೆಲ್ಲಾ ಪಾತ್ರೆಗಳ ಕರೆ ಕಡಿಮಾಗುತ್ತಾ ಹೋಗುತ್ತದೆ. ನಂತರ ನೀರಿನಲ್ಲಿ ಚೆನ್ನಾಗಿ ತೊಳೆದು ಇಡಿ. ನೀರಿನಲ್ಲಿ ತೊಳದ ಮೇಲೆ ಬಟ್ಟಯಿಂದ ಒರೆಸಲು ಮರೆಯಬೇಡಿ. ಇಲ್ಲದಿದ್ದರೆ ನೀರಿನ ಕರೆ ಬೆಳ್ಳಿ ಪಾತ್ರೆಗಳಲ್ಲಿ ಹಾಗೆಯೇ ಉಳಿದುಬಿಡುತ್ತದೆ.
ಕೊರೊನಾ ಕಾಲದಿಂದಾಗಿ ಹೆಚ್ಚಿನ ಬಳಕೆಗೆ ಬಂದ ಹ್ಯಾಂಡ್ ಸ್ಯಾನಿಟೈಸರ್ ಕೂಡ ಬೆಳ್ಳಿ ಪಾತ್ರೆಗಳನ್ನು ಶುಚಿಗೊಳಿಸಲು ಬಳಸಬಹುದು. ಬೀರುವಿನಲ್ಲಿ ಇಟ್ಟ ಬೆಳ್ಳಿ ಆಭರಣಗಳು ಕಪ್ಪಾಗಿದ್ದರೆ ಅದಕ್ಕೆ ಸ್ಯಾನಿಟೈಸರ್ ಹಾಕಿ ಶ್ವಚ್ಛವಾದ ಬಿಳಿ ಬಟ್ಟೆಯಿಂದ ಕೂಡಲೇ ಉಜ್ಜಿ ಒರೆಸಿಕೊಳ್ಳಿ. ಬೆಳ್ಳಿ ಪಾತ್ರೆಗಳು ಮತ್ತೆ ತಮ್ಮ ನಿಜವಾದ ರೂಪ ಪಡೆದುಕೊಳ್ಳುತ್ತವೆ.
ಒಂದು ಬಿಳಿ ಶುಚಿಯಾದ ಬಟ್ಟೆಯ ಮೇಲೆ ಟೂತ್‌ಪೇಸ್ಟ್ ಹಾಕಿಕೊಂಡು ಬೆಳ್ಳಿ ಪಾತ್ರೆಗಳ ಮೇಲೆ ಉಜ್ಜಿದರೆ ಪಾತ್ರೆಗಳು ಮತ್ತೆ ಹೊಳೆಯುವ ರೂಪ ಪಡೆದುಕೊಳ್ಳುತ್ತವೆ.
ತುಂಬಾ ಬೆಳ್ಳಿ ಪಾತ್ರೆಗಳನ್ನು ತೊಳೆಯುವುದಿದ್ದರೆ ಅದಕ್ಕೆ ಒಂದು ಕೆಲಸ ಮಾಡಿ. ಒಂದು ನಿಂಬೆ ಹಣ್ಣನ್ನು ಒಂದು ಬಟ್ಟಲಿಗೆ ಸರ ಹಿಂಡಿಕೊಳ್ಳಿ. ಅದಕ್ಕೆ ಒಂದು ಚಮಚ ಉಪ್ಪು, ಒಂದು ಚಮಚ ಸೋಡಾಪುಡಿ ಹಾಕಿ ಅರ್ಧ ಲೋಟ ನೀರನ್ನು ಹಾಕಿ ಕಲೆಸಿಕೊಳ್ಳಿ. ಎಲ್ಲಾ ಪಾತ್ರೆಗಳನ್ನು ಹೀಗೆ ತೊಳೆದರೆ ಕರೆಗಳು ಸುಲಭವಾಗಿ ಕರೆ ಹೋಗುತ್ತದೆ ಮತ್ತು ಬೆಳ್ಳಿ ಪಾತ್ರೆಗಳನ್ನು ತೊಳೆಯಲು ಅಷ್ಟು ಶ್ರಮ ಬೇಕಾಗುವುದಿಲ್ಲ.
ಬೆಳ್ಳಿ ಪಾತ್ರೆಗಳನ್ನು ಎತ್ತಿಡಬೇಕಾದರೆ ಶುಭ್ರವಾದ ಬಿಳಿ ಬಟ್ಟೆಯಲ್ಲಿ ಪ್ರತಿಯೊಂದು ಬೆಳ್ಳಿ ಪಾತ್ರೆಗಳನ್ನು ಸರಿಯಾಗಿ ಬಟ್ಟೆಯಿಂದ ರ್ಯಾಪ್ ಮಾಡಿ, ಮತ್ತೊಂದು ರಟ್ಟಿನ ಬಾಕ್ಸ್‌ನಲ್ಲಿ ಹಾಕಿಡಿ. ಗಾಳಿಯಾಡದಂತೆ ಮುಚ್ಚಿ. ಹೀಗೆ ಮಾಡಿದರೆ ಬೀರುವಿನಲ್ಲಿ ಇಟ್ಟ ಬೆಳ್ಳಿ ಪಾತ್ರೆಗಳು ತಮ್ಮ ಹೊಳಪನ್ನು ಕಳೆದುಕೊಳ್ಳದೇ ಹೊಳೆಯುವ ರೂಪದಲ್ಲಿಯೇ ಇರುತ್ತವೆ.