ಬೆಂಗಳೂರು : ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿ ನಡೆದ ರೇವ್ ಪಾರ್ಟಿಯಲ್ಲಿ ನಟಿ ಹೇಮಾ ಭಾಗಿಯಾಗಿರುವುದು ಸತ್ಯ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ ಸ್ಪಷ್ಟ ಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೇವ್ ಪಾರ್ಟಿಯಲ್ಲಿ ನಟಿ ಹೇಮಾ ಭಾಗಿಯಾಗಿರುವುದು ಸತ್ಯ, ಯಾವ ಸಂದರ್ಭದಲ್ಲಿ ವಿಡಿಯೋ ಮಾಡಿದ್ದಾರೆ ಪರಿಶೀಲಿಸುತ್ತೇವೆ. ಫಾರ್ಮ್ ಹೌಸ್ ನಲ್ಲೇ ಇದ್ದು ಅವರು ವಿಡಿಯೋ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.
ಆದರೆ ತಾವು ಈ ಪಾರ್ಟಿಯಲ್ಲಿ ಇರಲಿಲ್ಲ ಎಂದು ವಿಡಿಯೋ ಮೂಲಕ ಹೇಮಾ ಅವರು ಸ್ಪಷ್ಟಪಡಿಸಿದ್ದರು. ಅದರ ಬೆನ್ನಲ್ಲೇ ಅಸಲಿ ವಿಷಯ ಗೊತ್ತಾಗಿದೆ. ರೇವ್ ಪಾರ್ಟಿ (Rave Party) ನಡೆದ ಬೆಂಗಳೂರಿನ ರೆಸಾರ್ಟ್ನಿಂದಲೇ ವಿಡಿಯೋ ಮಾಡಿ ‘ನಾನು ಹೈದರಾಬಾದ್ನಲ್ಲಿ ಇದ್ದೀನಿ’ ಎಂದು ಹೇಮಾ ಸುಳ್ಳು ಹೇಳಿದ್ದಾರೆ.