ನವದೆಹಲಿ: ಮಥುರಾದ ಬಿಜೆಪಿ ಸಂಸದೆ ಹೇಮಾ ಮಾಲಿನಿ ಅವರ ಬಗ್ಗೆ ‘ಅವಹೇಳನಕಾರಿ’ ಹೇಳಿಕೆ ನೀಡುವ ಮೂಲಕ ಕಾಂಗ್ರೆಸ್ ಮುಖಂಡ ರಣದೀಪ್ ಸುರ್ಜೆವಾಲಾ ವಿವಾದ ಸೃಷ್ಟಿಸಿದ ನಂತ್ರ, ವಿರೋಧ ಪಕ್ಷದ ನಾಯಕರು ಪ್ರಧಾನಿ ನರೇಂದ್ರ ಮೋದಿಯವರಿಂದ ಮಹಿಳೆಯರನ್ನ ಹೇಗೆ ಗೌರವಿಸಬೇಕು ಎಂಬುದನ್ನ ಕಲಿಯಬೇಕು ಎಂದು ಗುರುವಾರ ಹೇಳಿದ್ದಾರೆ.
ಲೋಕಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ನಾಯಕಿ ಮತ್ತು ಬಾಲಿವುಡ್ ಹಿರಿಯ ನಟಿ, ಪ್ರತಿಪಕ್ಷಗಳು ‘ಜನಪ್ರಿಯ ಜನರನ್ನು’ ಮಾತ್ರ ಗುರಿಯಾಗಿಸಿಕೊಂಡಿವೆ ಎಂದು ಹೇಳಿದರು.
“ಅವರು ಜನಪ್ರಿಯ ಜನರನ್ನ ಮಾತ್ರ ಗುರಿಯಾಗಿಸುತ್ತಾರೆ. ಯಾಕಂದ್ರೆ, ಜನಪ್ರಿಯರಲ್ಲದವರನ್ನ ಗುರಿಯಾಗಿಸುವುದು ಅವರಿಗೆ ಲಾಭ ನೀಡುವುದಿಲ್ಲ. ಮಹಿಳೆಯರನ್ನ ಹೇಗೆ ಗೌರವಿಸಬೇಕು ಎಂಬುದನ್ನ ಅವರು ಪ್ರಧಾನಿ ನರೇಂದ್ರ ಮೋದಿಯವರಿಂದ ಕಲಿಯಬೇಕು” ಎಂದು ಅವರು ಹೇಳಿದರು.
ಮಥುರಾದಿಂದ ಲೋಕಸಭಾ ಚುನಾವಣೆಯಲ್ಲಿ ಮರು ನಾಮಕರಣಗೊಂಡಿರುವುದಕ್ಕೆ ಹೇಮಾ ಸಂತಸ ವ್ಯಕ್ತಪಡಿಸಿದರು.
#WATCH | Mathura, UP: On Congress leader Randeep Surjewala's statements on her, BJP MP Hema Malini says, "… They target only popular people because targeting the unpopular ones won't do them any good… They should learn how to respect women from PM Narendra Modi… I am here… pic.twitter.com/9FnPXTmqN4
— ANI (@ANI) April 4, 2024
ವಿದೇಶದಲ್ಲಿ ನೆಲೆಸಿರುವ ಭಾರತೀಯ ನಾಗರಿಕರಿಗೆ ‘ಮೋದಿ ಕಿ ಗ್ಯಾರಂಟಿ’ : ಸಚಿವ ಜೈಶಂಕರ್
ವಾಲ್ಮೀಕಿ ಸ್ವಾಮೀಜಿಗಳ ಹೋರಾಟದ ಫಲವಾಗಿ ಎಸ್ಟಿ ಮೀಸಲಾತಿ ಹೆಚ್ಚಳವಾಗಿದೆ- ಬೊಮ್ಮಾಯಿ