ಕೆಎನ್‌ಎನ್‌ಡಿಜಿಟಲ್‌ಡೆಸ್ಕ್: ಬೆಳ್ಳುಳ್ಳಿ ಅಡುಗೆಯ ರುಚಿ ಹೆಚ್ಚಿಸುತ್ತದೆ ನಿಜ. ಆದರೆ ಇದೇ ಬೆಳ್ಳುಳ್ಳಿ ದೇಹದ ಆರೋಗ್ಯವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಅದೆಷ್ಟೋ ರೋಗಗಳಿಗೆ ಬೆಳ್ಳುಳ್ಳಿ ರಾಮಬಾಣವಾಗಿದೆ. ಬೆಳ್ಳುಳ್ಳಿಯನ್ನು ನಿಯಮಿತವಾಗಿ ಪ್ರತಿನಿತ್ಯ ಒಂದೆರಡು ಎಸಳು ಸೇವಿಸಿದರೆ ದೇಹಕ್ಕೆ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಇದು ಅನೇಕ ಔಷಧೀಯ ಗುಣವಿರುವ ಅಹಾರ ಪದಾರ್ಥವಾಗಿದೆ.
ಬೆಳ್ಳುಳ್ಳಿಯಲ್ಲಿ ಪ್ರೋಟೀನ್, ವಿಟಮಿನ್ ಎ, ಸಿ, ಬಿ , ಜಿಂಕ್, ಕ್ಯಾಲ್ಸಿಯಂ, ಮೆಗ್ನೀಸಿಯಂ ಅಂಶಗಳು ಹೇರಳವಾಗಿವೆ. ಇನ್ನು ಇದರಲ್ಲಿ ಕಡಿಮೆ ಕ್ಯಾಲೋರಿ ಇದೆ. ಇಷ್ಟೆಲ್ಲಾ ಪೋಷಕಾಂಶಗಳನ್ನು ಹೊಂದಿದ ಬೆಳ್ಳುಳ್ಳಿಯಲ್ಲಿ ಸಣ್ಣ ಪುಟ್ಟ ಜ್ವರ ಕೆಮ್ಮಿನಿಂದ ಹಿಡಿದು ಕ್ಯಾನ್ಸರ್‌ಗೆ ಕಾರಣವಾಗುವ ಕೋಶಗಳ ವಿರುದ್ಧವೂ ಹೋರಾಡುವ ಶಕ್ತಿ ಇದೆ.
ಅಡುಗೆ ಮಾಡುವಾಗ ಬೆಳ್ಳುಳ್ಳಿ ಬಳಸುವುದ ಸಹಜ. ಇದಲ್ಲದೇ ನಿಯಮಿತವಾಗಿ ಹಸಿ ಬೆಳ್ಳುಳ್ಳಿ ಅಥವಾ ಹುರಿದ ಬೆಳ್ಳುಳ್ಳಿ ತಿಂದರೆ ಆರೋಗ್ಯಕ್ಕೆ ಆಗುವ ಪ್ರಯೋಜನೆಗಳನ್ನು ಒಂದೊಂದಾಗಿ ತಿಳಿದುಕೊಳ್ಳೋಣ.
ಬೆಳ್ಳುಳ್ಳಿಯನ್ನು ನಿಯಮಿತವಾಗಿ ಹುರಿದು ತಿಂದರೆ ದೀರ್ಘಕಾಲದವರೆಗೆ ಹೃದಯದ ಆರೋಗ್ಯ ಕ್ಷೇಮವಾಗಿರುತ್ತದೆ. ಹೃದಯ ಸಂಬಂಧಿ ಕಾಯಿಲೆಗಳನ್ನು ಇದು ದೂರ ಮಾಡುತ್ತದೆ.
ಬೆಳ್ಳುಳ್ಳಿ ಕೊಲೆಸ್ಟ್ರಾಲ್ ನಿಯಂತ್ರಿಸುವಲ್ಲಿ ಹೆಚ್ಚು ಕೆಲಸ ಮಾಡುತ್ತದೆ. ಬೊಜ್ಜು ಇದ್ದವರು ಇದನ್ನು ಸೇವಿಸಬಹುದು. ಇನ್ನು ಹುರಿದ ಬೆಳ್ಳುಳ್ಳಿ ಸೇವನೆ ಮಾಡಿದರೆ ಕೊಲೆಸ್ಟ್ರಾಲ್ ಕರಗಿ ದೇಹದ ತೂಕವನ್ನು ಕ್ರಮೇಣವಾಗಿ ಕಡಿಮೆ ಮಾಡುತ್ತದೆ.
ರಾತ್ರಿ ಮಲಗುವ ಮುನ್ನ ಒಂದೆರಡು ಹುರಿದ ಬೆಳ್ಳುಳ್ಳಿ ಎಸಳನ್ನು ಚೆನ್ನಾಗಿ ಅಗೆದು ತಿಂದರೆ ದೇಹದಲ್ಲಿನ ವಿಷಕಾರಕ ಅಂಶಗಳು ಬೆಳಗ್ಗೆ ಮಲ ಮೂತ್ರದ ಮೂಲಕ ಆಚೆ ನೂಕುವ ಶಕ್ತಿ ಇದಕ್ಕಿದೆ.
ಉಸಿರಾಟದ ತೊಂದರೆ ಇದ್ದವರು ರಾತ್ರಿ ಮಲಗುವ ಮುನ್ನ ಎರಡು ಎಸಳು ಬೆಳ್ಳುಳ್ಳಿಯನ್ನು ಹುರಿದು ತಿಂದರೆ ಯಾವುದೇ ಸಮಸ್ಯೆಯಾಗದೇ ಸುಲಭವಾಗಿ ನಿದ್ರೆ ಮಾಡಬಹುದು. ದೇಹದ ತೂಕ ಕಡಿಮೆ ಮಾಡಿಕೊಳ್ಳುವವರೂ ಮಲಗುವ ಮುನ್ನ ಹುರಿದ ಬೆಳ್ಳುಳ್ಳಿ ಸೇವಿಸಿ. ಇನ್ನು ಬೆಳಗ್ಗೆ ನಿತ್ಯ ಕರ್ಮಗಳ ನಂತರವೂ ಹಸಿ ಬೆಳ್ಳುಳ್ಳಿ ಸೇವಿಸಿದರೆ ದೇಹದಲ್ಲಿ ರಕ್ತ ಸಂಚಾರ ಸರಿಯಾಗಿ ಆಗುತ್ತದೆ. ಹಾಗು ಇದು ಸ್ನಾಯು, ಮೂಲೆಗಳಿಗೆ ಶಕ್ತಿ ನೀಡುತ್ತದೆ.
ಸೂಚನೆ: ಆರೋಗ್ಯ ತಜ್ಞರು ಮತ್ತು ಅಧ್ಯಯನಗಳ ಪ್ರಕಾರ ಈ ವಿವರಗಳನ್ನು ಒದಗಿಸಲಾಗಿದೆ. ಈ ಲೇಖನವು ನಿಮ್ಮ ತಿಳುವಳಿಕೆಗಾಗಿ ಮಾತ್ರ. ಇವುಗಳನ್ನು ಅನುಸರಿಸುವ ಫಲಿತಾಂಶಗಳು ಕೇವಲ ವೈಯಕ್ತಿಕವಾಗಿವೆ. ಇವುಗಳನ್ನು ಅನುಸರಿಸುವ ಮೊದಲು ಸಂಬಂಧ ಪಟ್ಟ ವೈದ್ಯರು, ತಜ್ಞರನ್ನು ಸಂಪರ್ಕಿಸುವುದು ಉತ್ತಮ ಮಾರ್ಗವಾಗಿದೆ. ನೀವು ಗಮನಿಸಬಹುದು.