ಬೆಂಗಳೂರು: ರಾಜ್ಯದಲ್ಲಿ ರಣ ಬಿಸಿಲಿಗೆ ಜನರು ತತ್ತರಿಸಿ ಹೋಗಿದ್ದಾರೆ. ಅದ್ಯಾವಾಗ ಮಳೆ ಬರುತ್ತಪ್ಪ ಅಂತ ಕಾಯುತ್ತಿದ್ದಾರೆ. ಇಂತಹ ಜನತೆಗೆ ಗುಡ್ ನ್ಯೂಸ್ ಹೊರ ಬಿದ್ದಿದೆ. ರಾಜ್ಯದ ಈ ಜಿಲ್ಲೆಯಲ್ಲಿ ಒಂದು ವಾರ ಭರ್ಜರಿ ಮಳೆ ಬರಲಿದೆ. ಬೆಂಗಳೂರಿಗೂ ವರುಣಾಗಮನ ಆಗಲಿದೆಯಂತೆ.
ಈ ಕುರಿತಂತೆ ಹವಾಮಾನ ಇಲಾಖೆಯಿಂದ ಮುನ್ಸೂಚನೆ ನೀಡಿದ್ದು, ಸಿಲಿಕಾನ್ ಸಿಟಿ ಬೆಂಗಳೂರು ಸೇರಿದಂತೆ ರಾಜ್ಯಧ ಕೆಲ ಜಿಲ್ಲಿಗಳಲ್ಲಿ ಮೇ.4ರಿದಂ ಮಳೆಯಾಗಲಿದೆ. ಮೇ.14ರವರೆಗೆ ಮಳೆಯ ಮುನ್ಸೂಚನೆಯಿದೆ ಅಂತ ತಿಳಿಸಿದೆ.
ಮೇ ಮೊದಲ ವಾರದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಳೆಯಾದ್ರೇ, 2ನೇ ವಾರದಲ್ಲಿ ಮತ್ತಷ್ಟು ಮಳೆ ಹೆಚ್ಚಾಗೋ ಸಾಧ್ಯತೆ ಇದೆ ಎಂಬುದಾಗಿ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಇನ್ನೂ ಚಿಕ್ಕಮಗಳೂರು, ಬೆಳಗಾವಿ, ಕೊಡಗು, ಧಾರವಾಡ, ಉಡುಪಿ, ಶಿವಮೊಗ್ಗ, ದಕ್ಷಿಣ ಕನ್ನಡ, ಮೈಸೂರು, ಶಿವಮೊಗ್ಗ, ಹಾಸನ ಚಾಮರಾಜನಗರ, ಮೈಸೂರು, ಮಂಡ್ಯ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ರಾಮನಗರ ಜಿಲ್ಲೆಗಳಲ್ಲಿ ಮುಂದಿನ ಒಂದು ವಾರ ವ್ಯಾಪಕ ಮಳೆಯಾಗಲಿದೆ ಎಂಬುದಾಗಿ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಇಂದಿನಿಂದ ಮೇ.5ರವರೆಗೆ ರಾಜ್ಯದ ಈ ಜಿಲ್ಲೆಗಳಲ್ಲಿ ‘ತೀವ್ರ ಬಿಸಿಗಾಳಿ’: ಹವಾಮಾನ ಇಲಾಖೆಯಿಂದ ‘ರೆಡ್ ಅಲರ್ಟ್’ ಘೋಷಣೆ
ಹಾಲಿನ ಪ್ರೋತಾಹಧನ ನೀಡದ ಕಾಂಗ್ರೆಸ್ ಸರ್ಕಾರ, ಖಜಾನೆ ಖಾಲಿಗೆ ಇದೇ ಸಾಕ್ಷಿ: ಪ್ರತಿಪಕ್ಷ ನಾಯಕ ಆರ್.ಅಶೋಕ್