ಬೆಂಗಳೂರು: ರಾಜ್ಯದ ಜನರು ಬಿಸಿಲ ಬೇಗೆಯಿಂದ ತತ್ತರಿಸಿ ಹೋಗಿದ್ದಾರೆ. ಅಬ್ಬಾ ಮಳೆ ಬಂದ್ರೆ ಸಾಕು, ಧರಣಿ ತಂಪಾಗಿ, ತಣ್ಣಗಾದ್ರೆ ಸಾಕು ಅಂತ ಕಾಯುತ್ತಿದ್ದಾರೆ. ಈ ನಿರೀಕ್ಷೆಯಲ್ಲಿರುವಂತ ಜನರಿಗೆ ಮುಂದಿನ 4 ದಿನಗಳ ಕಾಲ ಭರ್ಜರಿ ಮಳೆ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.
ಈ ಕುರಿತಂತೆ ಮಾಹಿತಿ ನೀಡಿರುವಂತ ಹವಾಮಾನ ಇಲಾಖೆಯು ಬೆಂಗಳೂರು ಸೇರಿದಂತೆ ರಾಜ್ಯದ 11ಕ್ಕೂ ಹೆಚ್ಚು ಚಿಲ್ಲೆಗಳಲ್ಲಿ 4 ದಿನಗಳ ಕಾಲ ಭಾರೀ ಮಳೆಯಾಗಲಿದೆ ಎಂಬುದಾಗಿ ತಿಳಿಸಿದೆ.
ರಾಜ್ಯದ ಬೀದರ್, ಕೊಪ್ಪಳ, ಯಾದಗಿರಿ, ಬಳ್ಳಾರಿ, ಗದಗ, ಬಾಗಲಕೋಟೆ, ಕಲಬುರ್ಗಿ, ದಾವಣಗೆರೆ, ಮಂಡ್ಯ, ಕೊಡಗು, ತುಮಕೂರು, ಹಾಸನ, ಮೈಸೂರು ಜಿಲ್ಲೆಯಲ್ಲಿ ಭಾರೀ ಮಳೆಯ ಮುನ್ಸೂಚನೆಯ ಕಾರಣ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.
ಕೊಡಗು, ಬೆಳಗಾವಿ, ಚಿಕ್ಕಮಗಳೂರು ಜಿಲ್ಲೆಯಲ್ಲಿ ಸಾಧಾರಣ ಮಳೆಯಾದ್ರೇ, ಇನ್ನುಳಿದ ಜಿಲ್ಲೆಗಳಲ್ಲಿ ಮುಂದಿನ 7 ದಿನ ಯಾವುದೇ ಮಳೆಯ ಮುನ್ಸೂಚನೆ ಇಲ್ಲ ಅಂತ ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಇಲ್ಲಿದೆ ಕರ್ನಾಟಕದ ’14 ಲೋಕಸಭಾ ಕ್ಷೇತ್ರ’ಗಳ ಮೊದಲ ಹಂತದ ‘ಕ್ಷೇತ್ರವಾರು ಮತದಾನ’ದ ವಿವರ
ರಾಜ್ಯದ ’14 ಲೋಕಸಭಾ ಕ್ಷೇತ್ರ’ಗಳಿಗೆ ಮೊದಲದ ಹಂತದ ‘ಮತದಾನದ ಅವಧಿ’ ಅಂತ್ಯ