ನವದೆಹಲಿ: ಮಾನ್ಸೂನ್ ರಾಷ್ಟ್ರ ರಾಜಧಾನಿಗೆ ಆಗಮಿಸುವುದರೊಂದಿಗೆ, ಮುಂದಿನ ಐದು ದಿನಗಳಲ್ಲಿ ಹಗುರದಿಂದ ಮಧ್ಯಮ ಮಳೆಯಾಗಲಿದೆ ಎಂದು ಭಾರತ ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆ ನೀಡಿದೆ, ದೆಹಲಿಯ ಕೆಲವು ಭಾಗಗಳಲ್ಲಿ ಜುಲೈ 1 ರವರೆಗೆ ಭಾರಿ ಮಳೆಯಾಗುವ ಸಾಧ್ಯತೆಯಿದೆ ಅಂಥ ತಿಳಿಸಿದೆ.
ದೆಹಲಿಯಲ್ಲಿ ಶುಕ್ರವಾರ 24 ಗಂಟೆಗಳಲ್ಲಿ 228.1 ಮಿ.ಮೀ ಮಳೆಯಾಗಿದ್ದು, ನಗರದ ಹಲವಾರು ಭಾಗಗಳು ಜಲಾವೃತವಾಗಿವೆ ಮತ್ತು ಅನೇಕ ಪ್ರದೇಶಗಳು ದೀರ್ಘಕಾಲದ ವಿದ್ಯುತ್ ಕಡಿತವನ್ನು ಅನುಭವಿಸಿವೆ. ದೆಹಲಿಯಲ್ಲಿ ಮಳೆ ಸಂಬಂಧಿತ ಘಟನೆಗಳಲ್ಲಿ ಕನಿಷ್ಠ ಆರು ಜನರು ಸಾವನ್ನಪ್ಪಿದ್ದಾರೆ, ಇದರಲ್ಲಿ ಮಳೆ ನೀರು ತುಂಬಿದ ಹಳ್ಳದಲ್ಲಿ ಮುಳುಗಿದ ಇಬ್ಬರು ಮಕ್ಕಳು ಸೇರಿದ್ದಾರೆ ಎನ್ನಲಾಗಿದೆ.