ಬೆಂಗಳೂರು: ನಿರಂತರ ಮಳೆಯಿಂದಾಗಿ ಬೆಂಗಳೂರು ನಗರದಲ್ಲಿನ ಐಟಿ ಕಂಪೆನಿಗಳು ಸೇರಿದಂತೆ ಉದ್ಯಮಗಳ ಮೇಲೆ ಉಂಟಾಗಿರುವ ಗಂಭೀರ ಪರಿಣಾಮಗಳನ್ನು ಸರ್ಕಾರ ಅತ್ಯಂತ ತೀವ್ರವಾಗಿ ಗಮನಿಸುತ್ತಿದೆ. ಸಮಸ್ಯೆಯನ್ನು ಪ್ರಾಮುಖ್ಯತೆಯ ಮೇರೆಗೆ ಗಮನಿಸಿ ಬಗೆ ಹರಿಸಲು ಡಿಸಿಎಂ ಡಿ.ಕೆ ಶಿವಕುಮಾರ್ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಬೆಂಗಳೂರು ನಗರ ಮತ್ತು ನಗರದ ನಿವಾಸಿಗಳಿಗೆ ತೀವ್ರ ಸವಾಲುಗಳಿಗೆ ಕಾರಣವಾಗಿರುವ ವಾತಾವರಣ ವೈಪರೀತ್ಯದಿಂದಾಗಿ 92 ಮಿಮೀ ನಿಂದ 157 ಮಿಮೀ ನಷ್ಟು ಭಾರೀ ಮಳೆಯಾಗಿ ಜನಜೀವನ ಜರ್ಜರಿತವಾಗಿದೆ, ಇದರ ಪರಿಣಾಮದಿಂದಾಗಿ ಐಟಿ ಕಂಪೆನಿಗಳು ಹಾಗೂ ಉದ್ಯೋಗಿಗಳು ತೊಂದರೆಗೀಡಾಗಿದ್ದಾರೆ ಎಂಬುದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮನಗೊಂಡು ಸೂಕ್ತ ಕ್ರಮಗಳನ್ನು ಕೈಗೊಳ್ಳಲು ನಿರ್ದೇಶಿಸಿದ್ದಾರೆ ಎಂದೂ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಅದರಂತೆ ಪರಿಸ್ಥಿತಿಯನ್ನು ಅವಲೋಕಿಸಿ ಸೂಕ್ತ ಪರಿಹಾರೋಪಾಯಗಳನ್ನು ಕಲ್ಪಿಸಲು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅಧ್ಯಕ್ಷತೆಯಲ್ಲಿ ಸಮಿತಿಯೊಂದನ್ನು ರಚಿಸಲಾಗಿದ್ದು, ಈ ಸಮಿತಿಯು ಐಟಿ, ಬಿಟಿ ಮತ್ತು ಸ್ಟಾರ್ಟಪ್ ವಿಷನ್ ಗ್ರೂಪ್‌ಗಳ ಮುಖ್ಯಸ್ಥರನ್ನು ಸಹ ಒಳಗೊಂಡಿದೆ ಎಂದೂ ಸಚಿವರು ಮಾಹಿತಿ ನೀಡಿದ್ದಾರೆ.
ಬೆಂಗಳೂರು ನಗರದ ಮೂಲಸೌಕರ್ಯವನ್ನು ಬಲಪಡಿಸಲು ತಕ್ಷಣದ, ಅಲ್ಪಾವಧಿಯ ಮತ್ತು ದೀರ್ಘಾವಧಿಯ ಪರಿಹಾರಗಳನ್ನು ಚರ್ಚಿಸಿ ಪರಿಸ್ಥಿತಿಯನ್ನು ಮೌಲ್ಯಮಾಪನ ಮಾಡಲು ಮತ್ತು ತುರ್ತಾಗಿ ಇವುಗಳನ್ನು ಕಾರ್ಯಗತಗೊಳಿಸಲು ಕೈಗಾರಿಕೆಗಳು, ಕಾರ್ಪೊರೇಟ್‌ಗಳು, ಉದ್ಯಮ ಸಂಘಗಳು, ವ್ಯಾಪಾರ ಪಾರ್ಕ್ ಸಂಘಗಳು ಮತ್ತು ನಾಗರಿಕ ಗುಂಪುಗಳೊಂದಿಗೆ ಕೂಡಲೆ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿಯೂ ಸಚಿವ ಪ್ರಿಯಾಂಕ್ ಖರ್ಗೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ದಿಕ್ಕಿನಲ್ಲಿ ‘ಪೂರ್ವಜರು ಫೋಟೋ’ ಇದ್ದರೆ ತಕ್ಷಣ ತೆಗೆದುಹಾಕಿ, ಇಲ್ಲವಾದರೆ ‘ಪಿತೃ ದೋಷ’ ಅಂಟುವುದು ಖಚಿತ
GOOD NEWS: ರಾಜ್ಯದ ‘ಗ್ರಾಮೀಣ ಜನತೆ’ಗೆ ಮತ್ತೊಂದು ಗುಡ್ ನ್ಯೂಸ್: ನಾಳೆಯಿಂದ ‘ಗೃಹ ಆರೋಗ್ಯ ಯೋಜನೆ’ ಜಾರಿ