ಬೆಂಗಳೂರು: ನಗರದಲ್ಲಿ ಎಡೆಬಿಡದೇ ಮಳೆಯಾಗುತ್ತಿದೆ. ಮಳೆಯ ಪರಿಣಾಮವಾಗಿ ಹಲವು ರಸ್ತೆಗಳು ಜಲಾವೃತಗೊಂಡು, ಮುಳುಗಡೆಯಾಗಿದ್ದಾವೆ. ಹೀಗಾಗಿ ಜನ ಜೀವನ ಅಸ್ತವ್ಯವಸ್ಥಗೊಂಡಿದ್ದು, ವಾಹನ ಸವಾರರು ಟ್ರಾಫಿಕ್ ಜಾಮ್ ನಲ್ಲಿ ಹೈರಾಣಾಗಿದ್ದಾರೆ.
ಬೆಂಗಳೂರಲ್ಲಿ ತಮಿಳುನಾಡಿನಲ್ಲಿ ಉಂಟಾದಂತ ಸೈಕ್ಲೋನ್ ಪರಿಣಾಮವಾಗಿ ಭಾರಿ ಮಳೆಯಾಗುತ್ತಿದೆ. ಮೆಜೆಸ್ಟಿಕ್, ಕೆ ಆರ್ ಮಾರ್ಕೆಟ್, ಕಲಾಸಿಪಾಳ್ಯ, ಲುಂಬಿನಿ ಗಾರ್ಡನ್, ಶಾಂತಿನಗರ ಸೇರಿದಂತೆ ನಗರದಾಧ್ಯಂತ ಮಳೆ ಸುರಿಯುತ್ತಿದೆ.
ಭಾರೀ ಮಳೆಯಿಂದಾಗಿ ಕೆ ಆರ್ ಸರ್ಕಲ್ ನಲ್ಲಿ ಕಿಲೋ ಮೀಟರ್ ಗಟ್ಟಲೆ ಸಂಚಾರ ದಟ್ಟಣೆ ಉಂಟಾಗಿದೆ. ಮಳೆಯಿಂದಾಗಿ ರಸ್ತೆಗಳು ಜಲಾವೃತಗೊಂಡ ಪರಿಣಾಮ, ವಾಹನ ಸವಾರರು ಪರದಾಡುವಂತೆ ಆಗಿದೆ.
ಚರಂಡಿ ನೀರು ರಸ್ತೆಗೆ ನುಗ್ಗಿದ ಪರಿಣಾಮ, ರಸ್ತೆಗಳು ಜಲಾವೃತಗೊಂಡಿವೆ. ಸರಿಯಾಗಿ ಚರಂಡಿ ನಿರ್ವಹಣೆ ಮಾಡದಿದ್ದಕ್ಕೆ ವಾಹನ ಸವಾರರು, ಜನರು ಆಕ್ರೋಶವನ್ನು ಹೊರ ಹಾಕಿದ್ದಾರೆ.
ಉದ್ಯೋಗಾಕಾಂಕ್ಷಿಗಳ ಗಮನಕ್ಕೆ: ಅ.20ರಂದು ಬೆಂಗಳೂರಲ್ಲಿ ‘ಬೃಹತ್ ಉದ್ಯೋಗ ಮೇಳ’ ಆಯೋಜನೆ
BIG NEWS: ‘ಜಾತಿ ಗಣತಿ ವರದಿ’ ಮಂಡನೆಯಾಗಬೇಕಿದ್ದ ‘ರಾಜ್ಯ ಸಚಿವ ಸಂಪುಟ ಸಭೆ’ 1 ವಾರ ಮುಂದೂಡಿಕೆ