ಮಹಾರಾಷ್ಟ್ರ: ಇಲ್ಲಿನ ಮುಂಬೈನಲ್ಲಿ ಭಾರೀ ಮಳೆಯಿಂದಾಗಿ ಬಹುದೊಡ್ಡ ಅವಾಂತರವೇ ಉಂಟಾಗಿದೆ. ಮಳೆಯಿಂದಾಗಿ ವಿದ್ಯುತ್ ಸಮಸ್ಯೆ ಉಂಟಾದ ಪರಿಣಾಮ, ತಾಂತ್ರಿಕ ಕಾರಣದಿಂದ ಮೋನೋ ರೈಲು ಕೆಟ್ಟು ನಿಂತಿದೆ. ಹೀಗಾಗಿ ಅದರಲ್ಲಿನ ಪ್ರಯಾಣಿಕರನ್ನು ಕೆಳಗಿಳಿಸಲು, ಹೊರ ಕರೆ ತರಲು ಹರಸಾಹಸವನ್ನೇ ಪಡುವಂತೆ ಆಗಿದೆ.
#WATCH | Maharashtra: Teams of BMC, fire department and police are engaged in rescuing passengers from the Monorail stuck near Mysore Colony station in Mumbai. pic.twitter.com/XYq3lVjLTV
— ANI (@ANI) August 19, 2025
ಮಂಗಳವಾರ ಮುಂಬೈನಲ್ಲಿ ಭಾರೀ ಮಳೆಯ ನಡುವೆ ಹಳಿಯಿಂದ ಹಳಿ ತಪ್ಪಿದ ಮಾನೋ ರೈಲು ಗಾಳಿಯಲ್ಲಿ ನೇತಾಡುತ್ತಿತ್ತು. ಮುಂಬೈ ಅಗ್ನಿಶಾಮಕ ದಳ ಪ್ರಯಾಣಿಕರ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿತು.
#WATCH | Maharashtra: Teams of BMC, fire department and police are engaged in rescuing passengers from the Monorail that got stuck near Mysore Colony station in Mumbai due to a power supply issue. pic.twitter.com/vwjK1pBkCI
— ANI (@ANI) August 19, 2025
ಬಾಗಿಲುಗಳು ಮುಚ್ಚಿರುವುದರಿಂದ ಮತ್ತು ವಿದ್ಯುತ್ ವ್ಯತ್ಯಯದಿಂದಾಗಿ ಎಸಿ ಕೆಲಸ ಮಾಡುವುದನ್ನು ನಿಲ್ಲಿಸಿರುವುದರಿಂದ ಅನೇಕ ಪ್ರಯಾಣಿಕರು ಒಳಗೆ ಸಿಲುಕಿಕೊಂಡಿದ್ದಾರೆ, ಉಸಿರುಗಟ್ಟಿಸುತ್ತಿದ್ದಾರೆ.
#WATCH | Maharashtra: Passengers rescued from the Monorail that got stuck near Mysore Colony station in Mumbai due to a power supply issue. pic.twitter.com/Ch3zYgFohg
— ANI (@ANI) August 19, 2025