ಶಿವಮೊಗ್ಗ: ಜಿಲ್ಲೆಯಲ್ಲಿ ಕಳೆದ ಕೆಲ ದಿನಗಳಿಂದ ಭಾರೀ ಮಳೆಯಾಗುತ್ತಿದೆ. ಈ ಹಿನ್ನಲೆಯಲ್ಲಿ ಸಾಗರ ತಾಲ್ಲೂಕಿನ ಶಾಲೆಗಳಿಗೆ ನಾಳೆ ರಜೆಯನ್ನು ಘೋಷಣೆ ಮಾಡಲಾಗಿದೆ.
ಈ ಕುರಿತಂತೆ ಸಾಗರ ತಹಶೀಲ್ದಾರ್ ಚಂದ್ರಶೇಖರ ನಾಯಕ್ ಆದೇಶ ಹೊರಡಿಸಿದ್ದು, ಇಂದು ಸಾಗರ ತಾಲೂಕಿನಾದ್ಯಂತ ಅತಿ ಹೆಚ್ಚಿನ ಮಳೆ ಯಾಗುತ್ತಿರುವುದರಿಂದ ನಾಳೆ ಕೂಡ ಹೆಚ್ಚಿನ ಮಳೆಯಾಗುವ ಸಂಭವನೀಯತೆ ಹೆಚ್ಚಿರುವುದರಿಂದ ದಿನಾಂಕ 25.07.2025 ರಂದು ಮಕ್ಕಳ ಹಿತದೃಷ್ಟಿಯಿಂದ ಅಂಗನವಾಡಿ ಕೇಂದ್ರ ಮತ್ತು ಪ್ರಾಥಮಿಕ ಶಾಲೆಗಳಿಗೆ ಮಾತ್ರ ಅನ್ವಯಿಸಿ ರಜೆಯನ್ನು ಘೋಷಿಸಲಾಗಿದೆ ಎಂದಿದ್ದಾರೆ.
ಮುಂದಿನ ರಜಾ ದಿವಸಗಳಲ್ಲಿ ಶಾಲೆಗಳನ್ನು ನಡೆಯಿಸಿ ಪಾಠ ಪ್ರವಚನಗಳನ್ನು ಸರಿದೂಗಿಸಲು ಸಾಗರ ತಹಶೀಲ್ದಾರ್ ಚಂದ್ರಶೇಖರ ನಾಯಕ್ ಸೂಚಿಸಿದ್ದಾರೆ.
ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು
BIG NEWS: ಇನ್ಮುಂದೆ ಈ ಎಲ್ಲದಕ್ಕೂ ಮೇಲಿನ ಅಧಿಕಾರಿ ಅನುಮೋದನೆ ಕಡ್ಡಾಯ: ಕರ್ನಾಟಕ ಡಿಜಿ-ಐಜಿಪಿ ಆದೇಶ
BREAKING: ಖ್ಯಾತ ‘WWE ಕುಸ್ತಿಪಟು ಹಲ್ಕ್ ಹೋಗನ್’ ನಿಧನ: ವರದಿ | WWE Legend Hulk Hogan No More