ಶಿವಮೊಗ್ಗ: ಜಿಲ್ಲೆಯ ಸೊರಬ ತಾಲ್ಲೂಕಿನ ಉಳವಿಯಲ್ಲಿ ಗುಡುಗು, ಸಿಡಿಲು ಸಹಿತ ಭಾರೀ ಮಳೆಯಾಗುತ್ತಿದೆ. ಮಧ್ಯಾಹ್ನ ಆರಂಭಗೊಂಡ ಮಳೆ ಸತತ ಒಂದು ಗಂಟೆಯ ವರೆಗೆ ಸುರಿದಿದೆ.
ಮುಂಗಾರು ಪೂರ್ವ ಮಳೆಯು ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಜನತೆಗೆ ತಂಪೆರೆದಿದೆ. ಸೊರಬ, ಸಾಗರ, ಉಳವಿ ಸೇರಿದಂತೆ ವಿವಿಧೆಡೆ ಭಾರೀ ಮಳೆಯಾಗಿದೆ.
ಇಂದು ಗುಡುಗು ಸಿಡಿಲು ಸಹಿತ ಆಲಿಕಲ್ಲಿನೊಂದಿಗೆ ಭಾರೀ ಮಳೆಯೇ ಸೊರಬ ತಾಲ್ಲೂಕಿನಲ್ಲಿ ಆಗಿದೆ. ಸೊರಬ ತಾಲ್ಲೂಕಿನ ಉಳವಿಯಲ್ಲಿ ಸಂಜೆ 4 ಗಂಟೆಯ ಸುಮಾರಿಗೆ ಆರಂಭಗೊಂಡಂತ ಮಳೆ ಮುಕ್ಕಾಲು ಗಂಟೆಯವರೆಗೆ ಸುರಿಯಿತು.
ಬಿರುಗಾಳಿ ಸಹಿತ ಭಾರೀ ಮಳೆಯಿಂದಾಗಿ ಅಲ್ಲಲ್ಲಿ ಮರಗಳು ಮುರಿದು ಬಿದ್ದಿರುವ ಪರಿಣಾಮ, ವಿದ್ಯುತ್ ತಂತಿಗಳು ತುಂಡಾಗಿವೆ ಎನ್ನಲಾಗುತ್ತಿದೆ. ಹೀಗಾಗಿ ವಿದ್ಯುತ್ ಸರಬರಾಜಿನಲ್ಲೂ ವ್ಯತ್ಯಯ ಉಂಟಾಗೋದಾಗಿ ಮೆಸ್ಕಾಂ ಮೂಲಗಳಿಂದ ತಿಳಿದು ಬಂದಿದೆ.
ವರದಿ: ವಸಂತ ಬಿ ಈಶ್ವರಗೆರೆ
BIG BREAKING: ‘ಹನಿಟ್ರ್ಯಾಪ್’ ಆರೋಪ: ರಾಜ್ಯ ಸರ್ಕಾರದಿಂದ ‘ಉನ್ನತ ಮಟ್ಟದ ತನಿಖೆ’ಗೆ ಆದೇಶ
₹900 ಕೋಟಿ ವೆಚ್ಚದಲ್ಲಿ ಮಂಡ್ಯ ವರ್ತುಲ ರಸ್ತೆ ಯೋಜನೆ ಕೈಗೆತ್ತಿಕೊಳ್ಳಲು ಕೇಂದ್ರದ ಸಮ್ಮತಿ
BREAKING ಛತ್ತೀಸ್ ಗಢದ ಬಿಜಾಪುರದಲ್ಲಿ ಭದ್ರತಾ ಪಡೆಗಳ ಎನ್ಕೌಂಟರ್ : 22 ಮಂದಿ ನಕ್ಸಲರ ಹತ್ಯೆ | Naxal Encounter