Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING: ಭಾರತದ ಆಪರೇಷನ್ ಸಿಂಧೂರ್ ದಾಳಿಯಲ್ಲಿ ಗಾಯಗೊಂಡಿದ್ದ ಇಬ್ಬರು ಪಾಕ್ ಸೈನಿಕರು ಸಾವು: ಸಾವಿನ ಸಂಖ್ಯೆ 13ಕ್ಕೆ ಏರಿಕೆ

14/05/2025 5:21 PM

BREAKING : ಕೇಂದ್ರ ಪುರಸ್ಕೃತ ಯೋಜನೆಗಳ ಪ್ರಗತಿ ಪರಿಶೀಲನೆಗೆ ಕಮಿಟಿ ರಚನೆ : CM ಸಿದ್ದರಾಮಯ್ಯ ಹೇಳಿಕೆ

14/05/2025 5:11 PM

BREAKING : ವಿಧವೆ ಬಳಿ 5 ಸಾವಿರ ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಖಜಾನೆ ಮುಖ್ಯ ಲೆಕ್ಕಿಗ, FDA

14/05/2025 5:10 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಜ್ಯದಲ್ಲಿ ಬಿಸಿಗಾಳಿ ಹಿನ್ನಲೆ: ಈ ಮುನ್ನೆಚ್ಚರಿಕೆ ಕ್ರಮ ವಹಿಸಲು ಆರೋಗ್ಯ ಇಲಾಖೆ ಸಲಹೆ
KARNATAKA

ರಾಜ್ಯದಲ್ಲಿ ಬಿಸಿಗಾಳಿ ಹಿನ್ನಲೆ: ಈ ಮುನ್ನೆಚ್ಚರಿಕೆ ಕ್ರಮ ವಹಿಸಲು ಆರೋಗ್ಯ ಇಲಾಖೆ ಸಲಹೆ

By kannadanewsnow0902/03/2025 6:44 PM

ಬೆಂಗಳೂರು: ರಾಜ್ಯದಲ್ಲಿ ಬೇಸಿಗೆಯ ಸೆಕೆ ಜೊತೆಗೆ ಬಿಸಿಗಾಳಿ ಬೀಸುತ್ತಿದೆ. ಈ ಹಿನ್ನಲೆಯಲ್ಲಿ ಸಾರ್ವಜನಿಕರು ಕೆಲ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸುವಂತೆ ಆರೋಗ್ಯ ಇಲಾಖೆ ಸಲಹೆ ಮಾಡಿದೆ.

ಈ ಬಗ್ಗೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿರುವಂತ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು, ಬಿಸಿಯಾದ ಗಾಳಿ, ಶಾಖ ತರಂಗದ ಸಮಯದಲ್ಲಿ ಈ ಕೆಳಕಂಡ ಸಲಹೆಯನ್ನು ಪಾಲಿಸುವಂತೆ ತಿಳಿಸಿದೆ.

ಹೆಚ್ಚು ನೀರು ಕುಡಿಯುವುದು:

  • ಸಾರ್ವಜನಿಕರಿಗೆ For general population
  • ಬಾಯಾರಿಕೆ ಇಲ್ಲದಿದ್ದರೂ ಸಹ ಹೆಚ್ಚು ನೀರನ್ನು ಆಗಾಗ್ಗೆ ಸೇವಿಸಬೇಕು. ಬಾಯಾರಿಕೆಯು ನಿರ್ಜಲೀಕರಣದ ಲಕ್ಷಣವಾಗಿದೆ.
  • ಪ್ರಯಾಣ ಮಾಡುವ ಸಮಯದಲ್ಲೂ ಕುಡಿಯಲು ನೀರನ್ನು ಜೊತೆಗೆ ತೆಗೆದುಕೊಂಡು ಹೋಗುವುದು ಅಗತ್ಯವಾಗಿದೆ. ಮೌಖಿಕ ಮನರ್ಜಲೀಕರಣ ದ್ರಾವಣ (Oral Rehydration Solution – ORS). ಹಾಗೂ ಮನೆಯಲ್ಲಿಯೇ ಸಿದ್ಧಪಡಿಸಿದ ನಿಂಬೆ ಹಣ್ಣಿನ ಶರಬತ್ತು, ಮಜ್ಜಿಗೆ/ಲಸ್ಸಿ, ಹಣ್ಣಿನ ಜ್ಯೂಸ್ ಗಳನ್ನು ಒಂದು ಚಿಟಿಕೆ ಉಪ್ಪಿನೊಂದಿಗೆ ಸೇವಿಸುವುದು ಉತ್ತಮ.
  • ಈ ಋತುಮಾನದಲ್ಲಿ ಲಭ್ಯವಿರುವ ಹಾಗೂ ಹೆಚ್ಚು ನೀರಿನ ಅಂಶವನ್ನು ಹೊಂದಿರುವ ಹಣ್ಣು ಹಾಗೂ ತರಕಾರಿಗಳಾದ ಕಲ್ಲಂಗಡಿ, ಕರಬೂಜ, ಕಿತ್ತಳೆ, ದ್ರಾಕ್ಷಿ, ಅನಾನಸ್, ಸೌತೆಕಾಯಿ, ಲೆಟೂಸ್, ಎಳೆನೀರುಗಳನ್ನು ಹೆಚ್ಚಾಗಿ ಸೇವಿಸಬೇಕು.

ಶರೀರವನ್ನು ಸುರಕ್ಷಿತವಾಗಿಟ್ಟುಕೊಳ್ಳುವುದು:

  • ತಿಳಿ ಬಣ್ಣದ, ಅಳಕವಾದ (loose fitting) ಹತ್ತಿಯ ಬಟ್ಟೆಯನ್ನು ಧರಿಸುವುದು ಉತ್ತಮ.
  • • ಬಿಸಿಲಿನಲ್ಲಿ ಹೊರ ಹೋಗುವ ಸಂದರ್ಭಗಳಲ್ಲಿ ಛತ್ರಿ, ಟೋಪಿ/ಹ್ಯಾಟ್, ಟವೆಲ್ ಅಥವಾ ಇನ್ನಾವುದೇ ಸಾಂಪ್ರದಾಯಿಕ ಪದ್ಧತಿಯನ್ನು ಅನುಸರಿಸಿ, ಬಿಸಿಲನಿಂದ ರಕ್ಷಣೆ ಪಡೆಯುವುದು ಉತ್ತಮ.
  • ಬಿಸಿನಲ್ಲಿ ನಡೆಯುವ ಸಂದರ್ಭದಲ್ಲಿ ಪಾದರಕ್ಷೆ / ಚಪ್ಪಲಿ ಅಥವಾ ಶೂಸ್‌ಗಳನ್ನು ಧರಿಸಬೇಕು.

ಸದಾ ಎಚ್ಚರದಿಂದಿರಿ:

  • ರೇಡಿಯೋ, ದೂರದರ್ಶನ ಹಾಗೂ ದಿನಪತ್ರಿಕೆಗಳ ಮೂಲಕ ಸ್ಥಳೀಯ ಹವಾಮಾನದ ಮಾಹಿತಿಯನ್ನು ಪಡೆದು ಅದರಂತೆ ಚಟುವಟಿಕೆಗಳನ್ನು ಯೋಜಿಸುವುದು ಉತ್ತಮ. ಹವಾಮಾನದ ಕುರಿತು ಕಾಲಕಾಲಕ್ಕೆ ಮಾಹಿತಿಯನ್ನು Karnataka State Natural Disaster Monitoring Centre ನ https://www.ksndinc.org/default.aspx ದಲ್ಲಿ ಮಾಹಿತಿಯನ್ನು ಪಡೆಯಬಹುದು.

ಸಾಧ್ಯವಾದಷ್ಟು ಒಳಾಂಗಣದಲ್ಲಿರಿ:

  • ಉತ್ತಮ ಗಾಳಿ ಬೀಸುವ ಹಾಗೂ ತಣ್ಣಗಿರುವ ಪ್ರದೇಶದಲ್ಲಿರಿ.
  • ನೇರವಾಗಿ ಸೂರ್ಯನ ಬೆಳಕು ಹಾಗೂ ಬಿಸಿ ಗಾಳಿಯು ಮನೆಯ ಒಳಗೆ ಬರದಂತೆ ತಡೆಯಲು, ಹಗಲು ಹೊತ್ತಿನಲ್ಲಿ ಕಿಟಕಿಗಳನ್ನು ಪರದೆಗಳಿಂದ ಮುಚ್ಚಿಡಿ, ಹಾಗೂ ತಣ್ಣನೆಯ ಗಾಳಿಯ ಸಂಚಾರಕ್ಕೆ ಅನುಕೂಲವಾಗುವಂತೆ, ರಾತ್ರಿಯ ಹೊತ್ತು ಕಿಟಕಿಗಳನ್ನು ತೆರೆಡಿಡಬೇಕು.

ಹೊರಾಂಗಣ ಚಟುವಟಿಕೆಗಳ ಸಂದರ್ಭದಲ್ಲಿ:

  • ಹೊರಾಂಗಣ ಚಟುವಟಿಕೆಗಳನ್ನು ಆದಷ್ಟೂ ದಿನದ ತಣ್ಣನೆಯ ಸಮಯದಲ್ಲಿ, ಅಂದರೆ ಬೆಳಗಿನ ಹೊತ್ತು ಅಥವಾ ಸಂಜೆಗೆ ಸೀಮಿತವಿರುವಂತೆ ಬದಲಾಯಿಸಿಕೊಳ್ಳಿ. ಹೊರಾಂಗಣ ಪ್ರದೇಶಗಳಲ್ಲಿ ಆಯೋಜಿಸಲಾಗುವ ಚಟುವಟಿಕೆಗಳು ಪೂರ್ವಾಹ 11 ಗಂಟೆಯ ಒಳಗೆ ಮುಕ್ತಾಯಗೊಳಿಸುವುದು ಉತ್ತಮ.
  • ಪೂರ್ವಾಹ್ನ 11 ಗಂಟೆಯಿಂದ ಸಂಜೆ 4 ಗಂಟೆಯ ಅವಧಿಯಲ್ಲಿ ಹೊರಾಂಗಣ ಸಭೆಗಳು / ಚಟುವಟಿಕೆಗಳು ನಡೆಯುವ ಪ್ರದೇಶದಲ್ಲಿ:
  • > ಸಾರ್ವಜನಿಕರಿಗೆ ಬಿಸಿಲಿನಿಂದ ರಕ್ಷಣೆಯನ್ನು ನೀಡಲು ಅಗತ್ಯ ಶಾಮಿಯಾನ/ಪೆಂಡಾಲ್‌ನ ವ್ಯವಸ್ಥೆ ಮಾಡುವುದು.
    > ಉತ್ತಮ ಗಾಳಿಯ (Air circulation) ವ್ಯವಸ್ಥೆಯನ್ನು ಖಚಿತಪಡಿಸಿಕೊಳ್ಳುವುದು.
    > ಸಭಿಕರಿಗೆ ಕುಡಿಯುವ ನೀರಿನ ವ್ಯವಸ್ಥೆಯನ್ನು ಕಡ್ಡಾಯವಾಗಿ ಮಾಡುವುದು.

ದುರ್ಬಲ ವ್ಯಕ್ತಿಗಳಿಗೆ

ಬಿಸಿ ಗಾಳಿಯ ಒತ್ತಡ ಹಾಗೂ ಬಿಸಿ ಗಾಳಗೆ ಸಂಬಂಧಪಟ್ಟ ಆರೋಗ್ಯ ಸಮಸ್ಯೆಗಳಿಂದ ಎಲ್ಲರಿಗೂ ಅಪಾಯವಿದೆ. ಆದರೆ ಈ ಕೆಳಕಾಣಿಸಿದ ಗುಂಪಿನ ಜನರಿಗೆ ಹೆಚ್ಚು ಅಪಾಯವಿರುವ ಹಿನ್ನೆಯಲ್ಲಿ ಹೆಚ್ಚುವರಿ ಗಮನವನ್ನು ನೀಡುವುದು ಅಗತ್ಯವಾಗಿದೆ.

  • ನವಜಾತ ಶಿಶುಗಳು ಹಾಗೂ ಚಿಕ್ಕ ಮಕ್ಕಳು
  • ಗರ್ಭಿಣಿಯರು
  • ಹೊರಾಂಗಣದಲ್ಲಿ ಕೆಲಸ ನಿರ್ವಹಿಸುವವರು
  • ಮಾನಸಿಕ ಸಮಸ್ಯೆಗಳಿಂದ ಬಳಲುತ್ತಿರುವವರು
  • ಆರೋಗ್ಯ ಸಮಸ್ಯೆಗಳರುವವರು, ವಿಶೇಷವಾಗಿ ಹೃದ್ರೋಗ ಹಾಗೂ ರಕ್ತದ ಒತ್ತಡದಿಂದ ಬಳಲುತ್ತಿರುವವರು.

ತಂಪಾದ ವಾತಾವರಣವಿರುವ ಪ್ರದೇಶದಿಂದ ಬಿಸಿಯಾದ ವಾತಾವರಣದ ಪ್ರದೇಶಕ್ಕೆ ಭೇಟಿ ನೀಡುವ ಜನರು: ಬಿಸಿ ಗಾಳಿಯ
ಸಂದರ್ಭದಲ್ಲಿ ಸುಮಾರು ಒಂದು ವಾರದ ಅವಧಿಯನ್ನು ಹೊಸ ವಾತಾವರಣಕ್ಕೆ ಒಗ್ಗಿಕೊಳ್ಳಲು (acclimatized) ಮೀಸುಡಬೇಕು ಹಾಗೂ ಈ ಅವಧಿಯಲ್ಲಿ ಹೆಚ್ಚು ನೀರನ್ನು ಸೇವಿಸಬೇಕು. ಹಂತ ಹಂತವಾಗಿ ಬಿಸಿಯಾದ ವಾತಾವರಣದಲ್ಲಿ ಚಟುವಟಿಕೆಗಳನ್ನು ನಡೆಸುವುದರಿಂದ ಒಗ್ಗಿಕೊಳ್ಳಲು ಸಾಧ್ಯವಾಗುತ್ತದೆ.

ಇತರ ಮುನ್ನೆಚ್ಚರಿಕಾ ಕ್ರಮಗಳು

  • ಪ್ರತ್ಯೇಕವಾಗಿ / ಒಂಟಿಯಾಗಿ ವಾಸಿಸುವ ವೃದ್ಧರು ಅಥವಾ ರೋಗಿಗಳ ಉಸ್ತುವಾರಿ ಹಾಗೂ ಅವರ ಆರೋಗ್ಯ ಸ್ಥಿತಿಯ ಮೇಲ್ವಿಚಾರಣೆಯನ್ನು ದೈನಂದಿನವಾಗಿ ಕೈಗೊಳ್ಳಬೇಕು.
  • ಮನೆಯ ಒಳಾಂಗಣವನ್ನು ತಣ್ಣಗಿರಿಸಲು ಪರದೆಗಳು / ಷಟರ್ ಗಳನ್ನು ಬಳಸಿ ಹಾಗೂ ರಾತ್ರಿಯ ಸಮಯದಲ್ಲಿ ಕಿಟಕಿಗಳನ್ನು ತೆರೆದಿಡಿ.
    ಹಗಲು ಹೊತ್ತಿನಲ್ಲಿ ಮನೆಯ ಕೆಳಗಿನ ಮಹಡಿಗಳಲ್ಲಿರುವುದು ಉತ್ತಮ.
  • ಶರೀರವನ್ನು ತಣ್ಣಗಿಡಲು ಫ್ಯಾನ್ ಅಥವಾ ತೇವವಾದ ಬಟ್ಟೆಯನ್ನು ಬಳಸಬಹುದು.

ಡಿಕೆ ಶಿವಕುಮಾರ್ ನಟ್ಟು ಬೋಲ್ಟ್ ವಿಚಾರ; ಆ ಕೆಲಸ ಮಾಡಲು ಬೇರೆ ಜನ ಇದ್ದಾರೆ ಎಂದು ಕುಟುಕಿದ HDK

ಮಾ.7ರಂದು ಬಜೆಟ್ ಮಂಡನೆ ದಿನವೇ ಬಿಜೆಪಿಯಿಂದ ಪಾದಯಾತ್ರೆ, ಪ್ರತಿಭಟನೆ: ಆರ್.ಅಶೋಕ್

Share. Facebook Twitter LinkedIn WhatsApp Email

Related Posts

BREAKING : ಕೇಂದ್ರ ಪುರಸ್ಕೃತ ಯೋಜನೆಗಳ ಪ್ರಗತಿ ಪರಿಶೀಲನೆಗೆ ಕಮಿಟಿ ರಚನೆ : CM ಸಿದ್ದರಾಮಯ್ಯ ಹೇಳಿಕೆ

14/05/2025 5:11 PM1 Min Read

BREAKING : ವಿಧವೆ ಬಳಿ 5 ಸಾವಿರ ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಖಜಾನೆ ಮುಖ್ಯ ಲೆಕ್ಕಿಗ, FDA

14/05/2025 5:10 PM1 Min Read

BREAKING: ರಾಜ್ಯದ ಆಸ್ತಿ ಮಾಲೀಕರಿಗೆ ಗುಡ್ ನ್ಯೂಸ್: ‘ಬಿ-ಖಾತಾ’ ಅವಧಿ 3 ತಿಂಗಳವರೆಗೆ ವಿಸ್ತರಣೆ

14/05/2025 4:44 PM2 Mins Read
Recent News

BREAKING: ಭಾರತದ ಆಪರೇಷನ್ ಸಿಂಧೂರ್ ದಾಳಿಯಲ್ಲಿ ಗಾಯಗೊಂಡಿದ್ದ ಇಬ್ಬರು ಪಾಕ್ ಸೈನಿಕರು ಸಾವು: ಸಾವಿನ ಸಂಖ್ಯೆ 13ಕ್ಕೆ ಏರಿಕೆ

14/05/2025 5:21 PM

BREAKING : ಕೇಂದ್ರ ಪುರಸ್ಕೃತ ಯೋಜನೆಗಳ ಪ್ರಗತಿ ಪರಿಶೀಲನೆಗೆ ಕಮಿಟಿ ರಚನೆ : CM ಸಿದ್ದರಾಮಯ್ಯ ಹೇಳಿಕೆ

14/05/2025 5:11 PM

BREAKING : ವಿಧವೆ ಬಳಿ 5 ಸಾವಿರ ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಖಜಾನೆ ಮುಖ್ಯ ಲೆಕ್ಕಿಗ, FDA

14/05/2025 5:10 PM

BREAKING: ಕರ್ನಲ್ ಸೋಫಿಯಾ ಖುರೇಷಿ ಬಗ್ಗೆ ವಿವಾದಾತ್ಮಕ ಹೇಳಿಕೆ: ಬಿಜೆಪಿ ಸಚಿವರ ವಿರುದ್ಧ FIR ದಾಖಲಿಸಲು ಕೋರ್ಟ್ ಆದೇಶ

14/05/2025 5:08 PM
State News
KARNATAKA

BREAKING : ಕೇಂದ್ರ ಪುರಸ್ಕೃತ ಯೋಜನೆಗಳ ಪ್ರಗತಿ ಪರಿಶೀಲನೆಗೆ ಕಮಿಟಿ ರಚನೆ : CM ಸಿದ್ದರಾಮಯ್ಯ ಹೇಳಿಕೆ

By kannadanewsnow0514/05/2025 5:11 PM KARNATAKA 1 Min Read

ಬೆಂಗಳೂರು : ಕೇಂದ್ರ ಪುರಸ್ಕೃತ ಯೋಜನೆಗಳ ಪ್ರಗತಿ ಪರಿಶೀಲನೆಗೆ ಕಮಿಟಿ ರಚನೆ ಮಾಡಲಾಗಿದೆ. ಪ್ರಗತಿ ಪರಿಶೀಲನೆಗೆ ರಚಿಸಿರುವ ಕಮಿಟಿ ಅಧ್ಯಕ್ಷ…

BREAKING : ವಿಧವೆ ಬಳಿ 5 ಸಾವಿರ ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಖಜಾನೆ ಮುಖ್ಯ ಲೆಕ್ಕಿಗ, FDA

14/05/2025 5:10 PM

BREAKING: ರಾಜ್ಯದ ಆಸ್ತಿ ಮಾಲೀಕರಿಗೆ ಗುಡ್ ನ್ಯೂಸ್: ‘ಬಿ-ಖಾತಾ’ ಅವಧಿ 3 ತಿಂಗಳವರೆಗೆ ವಿಸ್ತರಣೆ

14/05/2025 4:44 PM

ಕಲ್ಲು ಹೊಡೆದವರಿಗೆ ಗುಂಡು ಹೊಡೆಯುವ ಅಧಿಕಾರವನ್ನೂ ಕೊಟ್ಟಿಲ್ಲವೇಕೆ: ಕಾಂಗ್ರ್ ನಾಯಕರ ವಿರುದ್ಧ ಸಿ.ಟಿ ರವಿ ಗುಡುಗು

14/05/2025 4:39 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.