ಬೆಂಗಳೂರು : ಬಿಸಿಲಿನ ಬೇಗೆಗೆ ತತ್ತರಿಸಿರುವ ಜನತೆಗೆ ಹವಮಾನ ಇಲಾಖೆ ಶಾಕ್ ನೀಡಿದೆ. ರಾಜ್ಯದ ೧೭ ಜಿಲ್ಲೆಗಳಲ್ಲಿ ಮುಂದಿನ ೫ ದಿನ ಬಿಸಿಗಾಳಿ ಬೀಸಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಈ ಕುರಿತಂತೆ ರಾಜ್ಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಕೇರಳ ರಾಜ್ಯದಲ್ಲಿ ಬಿಸಿಗಾಳಿಯ ಪರಿಣಾಮವಾಗಿ ರಾಜ್ಯದಲ್ಲೂ ಬಿಸಿಗಾಳಿಯ ಎಫೆಕ್ಟ್ ತಟ್ಟಲಿದೆ. ಜನರು ಎಚ್ಚರಿಕೆಯಿಂದ ಇರುವಂತೆ ಸೂಚಿಸಿದೆ.
ಕರ್ನಾಟಕದಲ್ಲಿ ಮುಂದಿನ ಐದು ದಿನ ಬಿಸಿಗಾಳಿ ಇರಲಿದೆ. ಕಲಬುರ್ಗಿ, ವಿಜಯಪುರ, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಸೇರಿದಂತೆ ರಾಜ್ಯದ 17 ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಣೆ ಮಾಡಿದೆ.
ಇಂದಿನಿಂದ ಮೇ.5ರವರೆಗೆ ಬೆಂಗಳೂರಿನ ಜನತೆಗೆ ಬಿಸಿಲಾಘಾತದ ಜೊತೆಗೆ, ಬಿಸಿಗಾಳಿಯ ಆಘಾತ ಉಂಟಾಗಲಿದೆ. ಈ ಮೂಲಕ ಬಿಸಿಲ ಹೊಡೆತಕ್ಕೆ ಬೆಂದ ಕರುನಾಡಿಗೆ ಮತ್ತೊಂದು ಶಾಕ್ ತಟ್ಟಿದೆ. ಅದೇ ಮೇ.೫ರವರೆಗೆ ಬಿಸಿಗಾಳಿ ಕಾಡಲಿದೆ.