ಮಂಡ್ಯ : ಜಿಲ್ಲೆಯಲ್ಲಿ ಹೃದಯ ವಿದ್ರಾವಕ ಘಟನೆಯೊಂದು ನಡೆದಿದೆ. ಇಂದು  3 ಮಕ್ಕಳಿಗೆ ವಿಷವುಣಿಸಿ ತಾಯಿ ನೇಣಿಗೆ ಕೊರಳೊಡ್ಡಿರುವ ದಾರುಣ ಘಟನೆ ಸಕ್ಕರೆ ನಾಡು ಮಂಡ್ಯದಲ್ಲಿ ಇಂದು ನಡೆದಿದೆ.

ಮಂಡ್ಯ: ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಪೋಲೀಸರೇ ಶಾಮೀಲು – ಮಾನವ ಹಕ್ಕುಗಳ ಸೇವಾ ಸಮಿತಿ ಅಧ್ಯಕ್ಷೆ ಕೆ.ಎಚ್.ಇಂದಿರಾ ಆರೋಪ

ಮಂಡ್ಯ ಜಿಲ್ಲೆಯ ಮದ್ದೂರು ಪಟ್ಟಣದ ಮಹಾವೀರ ಚಿತ್ರಮಂದಿರದ ಹಿಂಭಾಗದಲ್ಲಿ ವಾಸಿಸುತ್ತಿದ್ದ ಮುಸ್ಲಿಂ ಕುಟುಂಬದ ಉಸ್ನಾ ಕೌಸರ್ ಬಿನ್ ಆಖಿಲ್ ಅಹಮ್ಮದ್( 30) ಮದ್ದೂರು ಮೆಡಿಕಲ್ ಸೆಂಟರ್ ನಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ತನ್ನ ಮೂವರು ಮಕ್ಕಳಾದ ಹಾರಿಸ್ ಗಂಡು (7) ವರ್ಷ, ಅಲೀಸಾ ಹೆಣ್ಣು ( 4 )ವರ್ಷ, ಅನಮ್ ಫಾತಿಮಾ ಹೆಣ್ಣು (2) ವರ್ಷ ಸಾವಿಗೀಡಾದ ದುರ್ದೈವಿಗಳಾಗಿದ್ದಾರೆ.

ಮಂಡ್ಯ: ಡಿ.4ರಂದು ಶ್ರೀರಂಗಪಟ್ಟಣ ಟೌನ್, ಗಂಜಾಂ ವ್ಯಾಪ್ತಿಯಲ್ಲಿ ಮದ್ಯ ಮಾರಾಟ ನಿಷೇಧ

ಮೂವರು ಮಕ್ಕಳಿಗೆ ವಿಷವುಣಿಸಿ, ತಾಯಿಯೂ ನೇಣಿಗೆ ಶರಣಾಗಿರುವುದಕ್ಕೆ ಕೌಟಂಬಿಕ ಕಲಹ ಕಾರಣ ಎಂಬುದಾಗಿ ಹೇಳಲಾಗುತ್ತಿದೆ. ಈ ವಿಷಯ ತಿಳಿದು ಘಟನಾ ಸ್ಥಳಕ್ಕೆ ಮದ್ದೂರು ಠಾಣೆಯ ಪೊಲೀಸರು ದೌಡಾಯಿಸಿದ್ದಾರೆ. ಸ್ಥಳದಲ್ಲಿ ಪರಿಶೀಲನೆ ನಡೆಸುತ್ತಿದ್ದು, ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ನಡೆಸಿದ ನಂತ್ರವೇ ಈ ಘಟನೆಗೆ ಕಾರಣ ಸ್ಪಷ್ಟವಾಗಲಿದೆ.

ವರದಿ : ಗಿರೀಶ್ ರಾಜ್, ಮಂಡ್ಯ

ರಾಜಕಾರಣದಿಂದ ಹಣ ಗಳಿಸೋದಕ್ಕೆ ಐಎಎಸ್ ಅಧಿಕಾರಿಗಳು, ರೌಡಿಗಳು ಇಳಿಯುತ್ತಿದ್ದಾರೆ – ಸಂತೋಷ್ ಹೆಗ್ಡೆ

Share.
Exit mobile version