ಚಿಕ್ಕಮಗಳೂರು: ಹಾರ್ಟ್ ಅಟ್ಯಾಕ್ಗೆ 22ರ ಯುವತಿ ಬಲಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಹಾಸ್ಟೆಲ್ ನಲ್ಲಿದ್ದುಕೊಂಡು ಬಿಕಾಂ ಓದುತ್ತಿದ್ದ ವಿದ್ಯಾರ್ಥಿನಿಯೊಬ್ಬಳು ಹಠಾತ್ ಕುಸಿದು ಬಿದ್ದು ಮೃತಪಟ್ಟ ಘಟನೆ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯಲ್ಲಿ ನಡೆದಿದೆ.
ಚಿಕ್ಕಮಗಳೂರಿನ ಕಾಲೇಜು ಹಾಸ್ಟೆಲ್ನಲ್ಲಿ ಓದುತ್ತಿದ್ದ 22 ವರ್ಷದ ವಿದ್ಯಾರ್ಥಿನಿ ದಿಶಾ ಹಾರ್ಟ್ ಅಟ್ಯಾಕ್ಗೆ ಬಲಿಯಾಗಿರುವ ಯುವತಿಯಾಗಿದ್ದಾರೆ. ಅಂದ ಹಾಗೇ ಅವರು ಶೃಂಗೇರಿ ಪಟ್ಟಣದ ಜೆಸಿಬಿಎಂ ಕಾಲೇಜಿನಲ್ಲಿ ದಿಶಾ ಅಂತಿಮ ವರ್ಷದ ಬಿಕಾಂ ನಲ್ಲಿ ವ್ಯಾಸಂಗ ಮಾಡುತ್ತಿದ್ದರು, ಪದವಿ ಮುಗಿಸಿ ಕೆಲಸಕ್ಕೆ ಸೇರುವ ಕನಸು ಕಂಡಿದ ದಿಶಾ ಹೀಗೆ ಸಾವನ್ನಪ್ಪಿರುವುದು ವಿಪರ್ಯಾಸವೆ ಸರಿ.ವಿದ್ಯಾರ್ಥಿನಿ ದಿಶಾ ಮೂಲತಃ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯವರಾಗಿದ್ದು ಉನ್ನತ ವ್ಯಾಸಂಗಕ್ಕಾಗಿ ಅವರು ಶೃಂಗೇರಿ ಪಟ್ಟಣದ ಜೆಸಿಬಿಎಂ ಕಾಲೇಜಿನಲ್ಲಿ ಅಭ್ಯಸ ನಡೆಸುತ್ತಿದ್ದರು ಎನ್ನಲಾಗಿದೆ.
ಹೃದಯಾಘಾತವೆಂದು ಶಂಕೆ ವ್ಯಕ್ತವಾಗಿದ್ದು ಫುಡ್ ಪಾಯ್ಸನ್ ಅಥಾವ ಇನ್ಯಾವುದು ಕಾರಣ ಎನ್ನುವುದರ ಬಗ್ಗೆ ಶೃಂಗೇರಿ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.








