ಸುಭಾಷಿತ :

Monday, February 17 , 2020 5:13 AM

ವರ್ಷ ಪೂರ್ತಿ ಆರೋಗ್ಯದಿಂದಿರಲು ಇವುಗಳನ್ನು ಅವಾಯ್ಡ್ ಮಾಡಿ ಸಾಕು…


Wednesday, January 15th, 2020 11:30 am

ಸ್ಪೆಷಲ್ ಡೆಸ್ಕ್ : ವರ್ಷ ಪೂರ್ತಿ ಆಕ್ಟಿವ್ ಆಗಿರಲು ನೀವು ಆರೋಗ್ಯದಿಂದಿರಬೇಕು. ಅದಕ್ಕಾಗಿ ಆರೋಗ್ಯಕ್ರಮಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಅದಕ್ಕಾಗಿ ಮುಖ್ಯವಾಗಿ ನೀವು ಮಾಡಬೇಕಾದ ಕೆಲಸ ಎಂದರೆ ಅನಾರೋಗ್ಯಕರ ವಿಷಯಗಳನ್ನು, ಹವ್ಯಾಸಗಳನ್ನು ಸಾಧ್ಯವಾದಷ್ಟು ಅವಾಯ್ಡ್ ಮಾಡುವುದು. ಅವು ಯಾವುವು ನೋಡೋಣ…

ಸಕ್ಕರೆಗೆ ಕಡಿವಾಣ : ಸಕ್ಕರೆ ಅಂಶವನ್ನು ಆಹಾರದಲ್ಲಿ ಕಡಿಮೆ ಮಾಡಿ. ಜೊತೆಗೆ ಸಾಫ್ಟ್‌ ಡ್ರಿಂಕ್ಸ್‌ ಸೇವನೆ ಕೂಡ ಕಡಿಮೆ ಮಾಡಿ. ಇದರಿಂದ ಹಲ್ಲುಗಳ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ.

ಆಲ್ಕೋಹಾಲ್‌ ಬೇಡ : ಆಲ್ಕೋಹಾಲ್‌ ಸೇವನೆ ಮಾಡುವ ಬದಲಾಗಿ ಹೆಚ್ಚಿನ ಪ್ರಮಾಣದಲ್ಲಿ ನೀರು ಸೇವನೆ ಮಾಡಿ. ಆಲ್ಕೋಹಾಲ್‌ ಸೇವನೆ ಮಾಡಿದರೆ ನೀವು ಆಯಸ್ಸು ಬೇಗನೆ ಕಡಿಮೆಯಾಗುತ್ತದೆ.

ಉಪ್ಪು ಕಡಿಮೆ : ಹೆಚ್ಚಿನ ಪ್ರಮಾಣದಲ್ಲಿ ಉಪ್ಪು ಸೇವನೆ ಮಾಡಿದರೆ ಬ್ಲಡ್‌ ಪ್ರೆಶರ್‌ ಹೆಚ್ಚುತ್ತದೆ. ಇದರಿಂದ ಹಾರ್ಟ್‌ ಅಟ್ಯಾಕ್‌ – ಸ್ಟ್ರೋಕ್‌ ಬರುವ ಸಾಧ್ಯತೆ ಇದೆ.

ಕಡಿಮೆ ಒತ್ತಡ : ಒತ್ತಡವು ಶಾರೀರಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಒತ್ತಡ ಸಮಸ್ಯೆ ಬಾರದಿರಲು ಹೆಚ್ಚು ಪುಸ್ತಕಗಳನ್ನು ಓದಿ, ಮ್ಯೂಸಿಕ್‌ ಕೇಳಿ, ವಾಕ್‌ ಮಾಡಿ, ಯೋಗ ಕಲಿಯಿರಿ.

ಟಿವಿ, ಮೊಬೈಲ್ ಕಡಿಮೆ ಮಾಡಿ : ತುಂಬಾ ಹೊತ್ತು ಟಿವಿ ಮತ್ತು ಮೊಬೈಲ್‌ ನೋಡಿದರೆ ನಿದ್ರೆಯ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಅರೋಗ್ಯ ಚೆನ್ನಾಗಿರಲು ಸಾಧ್ಯವಿಲ್ಲ.

ಸೋಶಿಯಲ್‌ ಕನೆಕ್ಷನ್‌ : ಮೆಂಟಲಿ ಸ್ಟ್ರಾಂಗ್‌ ಆಗಿರಲು ಸೋಶಿಯಲ್‌ ಕನೆಕ್ಷನ್‌ ತುಂಬಾ ಇಂಪಾರ್ಟಂಟ್‌ ಆಗಿದೆ. ಆದುದರಿಂದ ನಿಮ್ಮ ನೆರೆಹೊರೆ, ಫ್ರೆಂಡ್ಸ್‌ ಜೊತೆ ಹೆಚ್ಚಿನ ಸಮಯ ಕಳೆಯಿರಿ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Trending stories
State
Health
Tour
Astrology
Cricket Score
Poll Questions