ಕೆಎನ್‌ಎನ್‌ಡಿಜಿಟಲ್‌ಡೆಸ್ಕ್: ವಯಸ್ಸು 40 ದಾಟಿತೆಂದರೆ ಆರೋಗ್ಯದಲ್ಲಿ ಅನೇಕ ಬದಲಾವಣೆಗಳು ಕಾಣಿಸಿಕೊಳ್ಳುತ್ತವೆ. ಆರೋಗ್ಯ ಕಾಪಾಡಿಕೊಳ್ಳುವುದೇ ದೊಡ್ಡ ಸಾವಾಲಾಗಿರುತ್ತದೆ. ಹೀಗಿರುವಾಗ ಪುರುಷರಾಗಲಿ, ಮಹಿಳೆಯಾಗಲಿ 40 ವರ್ಷ ದಾಟಿದವರು ಈ ಕೆಳಗೆ ತಿಳಿಸಿರುವ ಆಹಾರಗಳ ಸೇವನೆಯನ್ನು ಆದಷ್ಟು ಕಡಿಮೆ ಮಾಡಿಕೊಳ್ಳಬೇಕು.
ಸಂಸ್ಕರಿತ ಪಾನೀಯಗಳು: ಸಾಮಾನ್ಯವಾಗಿ ಕಾರ್ಬೋನೇಟೆಡ್ ಪಾನೀಯಗಳ ಸೇವನೆ ಆರೋಗ್ಯಕ್ಕೆ ಒಳ್ಳೆಯದಲ್ಲ. ಅದರಲ್ಲೂ 40 ದಾಟಿದವರು ಇದರ ಸೇವನೆ ನಿಲ್ಲಿಸಿಬಿಡಬೇಕು. ಏಕೆಂದರೆ ಇದರಲ್ಲಿ ಕೆಫೀನ್, ಫ್ರಕ್ಟೋಸ್, ಇದರಲ್ಲಿ ಸಂಸ್ಕರಿತ ಸಕ್ಕರೆ ಇರುತ್ತದೆ. ಇದರಿಂದ ಸಕ್ಕರೆಯು ಇನ್ಸುಲಿನ್ ಮಟ್ಟವನ್ನು ಹೆಚ್ಚಿಸುತ್ತದೆ. ಇನ್ನು ಕೆಫೀನ್ ಗೌಟ್ ಅನ್ನು ಪ್ರಚೋದಿಸುವ ಸಂಭವ ಹೆಚ್ಚಿರುತ್ತದೆ. ಇವೆಲ್ಲಾ ಹೃದಯಾಘಾತದ ಅಪಾಯವನ್ನು ಉಂಟು ಮಾಡಬಹುದು.
ರೆಡ್‌ಮೀಟ್: 40 ದಾಟಿದವರು ರೆಡ್‌ಮೀಟ್ ಸೇವನೆಯನ್ನು ಕಡಿಮೆ ಮಾಡಿಕೊಳ್ಳಬೇಕು. ರೆಡ್‌ಮೀಟ್ ಅಂದರೆ ಕೆಂಪು ಮಾಂಸದಲ್ಲಿ ಹೇರಳ ಪ್ರಮಾಣದಲ್ಲಿ ಕೊಲೆಸ್ಟ್ರಾಲ್, ಹೃದಯ ರಕ್ತನಾಳದ ಕಾಯಿಲೆಗಳು ಮಧುಮೇಹದಂತಹ ಅಪಾಯಕಾರಿ ಕಾಯಿಲೆಗಳನ್ನು ತಂದೊಡ್ಡುವ ಸಂಭವ ಇರುತ್ತದೆ. ಇನ್ನು ಹೆಚ್ಚು ತಾಪಮಾನದಲ್ಲಿ ಬೇಯಿಸಿದ ಮಾಂಸವನ್ನು ಸೇವಿಸಿದರೆ ಪ್ರಾಸ್ಟೇಟ್ ಕ್ಯಾನ್ಸರ್ ಅಪಾಯವನ್ನು ತರಬಹುದು. ಹಾಗಾಗಿ ಆರೋಗ್ಯದ ದೃಷ್ಟಿಯಿಂದ ರೆಡ್‌ಮೀಟ್ ಸೇವನೆಯನ್ನು ಆದಷ್ಟು ಕಡಿಮೆ ಮಾಡಬೇಕು.
ಮೈದಾ ಹಿಟ್ಟು: ಮೈದಾದಿಂದ ಮಾಡಿದ ಬ್ರೆಡ್ ಇನ್ನಿತರ ರೋಟಿಗಳನ್ನು 40 ದಾಟಿದವರು ತಿಂದರೆ ಅವರ ಜೀರ್ಣಕ್ರಿಯೆಗೆ ತೊಂದರೆ ಉಂಟು ಮಾಡುತ್ತದೆ. ಮೈದಾ ಸೇವನೆ ಆರೋಗ್ಯಕ್ಕೆ ತುಂಬಾ ಹಾನಿಕಾರಕ. ಇದು ದೇಹದಲ್ಲಿ ಉರಿಯೂತ ಉಂಟು ಮಾಡುತ್ತದೆ. ಅಲ್ಲದೇ ಸಂಧಿವಾತ ಹಾಗು ರಕ್ತದಲ್ಲಿ ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತದೆ. ಮೈದಾದಲ್ಲಿನ ಪೊಟ್ಯಾಸಿಯಮ್ ಬ್ರೋಮೇಟ್ ಜೀವಕೋಶಗಳಿಗೆ ವಿಷಕಾರಿಯಾಗಿದೆ.
ಆಲುಗಡ್ಡೆ: 40 ದಾಟಿದವರಿಗೆ ಕೀಲು ನೋವು ಕಾಣಿಸಿಕೊಳ್ಳಲು ಶುರುವಾಗುತ್ತದೆ. ಇದಕ್ಕೆ ಮುಖ್ಯ ಕಾರಣ ಆಲುಗಡ್ಡೆಯನ್ನು ಹೆಚ್ಚಾಗಿ ತಿನ್ನುವುದು. ಹೆಚ್ಚಾನು ಹೆಚ್ಚು ಜಂಕ್‌ಫುಡ್, ಸ್ನ್ಯಾಕ್ಸ್‌ಗಳನ್ನು ಆಲುಗಡ್ಡೆಯಿಂದಲೇ ತಯಾರಿಸುತ್ತಾರೆ. ಎಣ್ಣೆಯಲ್ಲಿ ಕರಿದ ಆಲುಗಡ್ಡೆಯಲ್ಲಿ ಕ್ಯಾಲೋರೀಸ್ ಹೆಚ್ಚಿದ್ದು, ಇದು ದೇಹದ ತೂಕ ಹೆಚ್ಚಿಸುತ್ತದೆ. ಆಲುಗಡ್ಡೆ ಹೆಚ್ಚು ಸೇವನೆಯಿಂದ ಮಹಿಳೆಯರಲ್ಲಿ ಹಾರ್ಮೋನ್ ಇಂಬ್ಯಾಲ್ಸ್ ಆಗುತ್ತದೆ ಹಾಗೂ ಹೃದಯ ಸಂಬಂಧಿ ಕಾಯಿಲೆ ಬರುವ ಚಾನ್ಸಸ್ ಹೆಚ್ಚಿರುತ್ತದೆ.
ಹಣ್ಣಿನ ಜ್ಯೂಸ್: ಹಣ್ಣಿನ ರಸ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಆದರೆ 40 ದಾಟಿದವರು ಸಕ್ಕರೆಯಿಂದ ತಯಾರಿಸಿದ ಹಣ್ಣಿನ ಜ್ಯೂಸ್ ಸೇವನೆ ಅವೈಡ್ ಮಾಡಬೇಕು. ಇದು ವಿಶೇಷವಾಗಿ ಮಧುಮೇಹ ಹೊಂದಿರುವವರು ದೇಹದಲ್ಲಿ ಮತ್ತಷ್ಟು ಸಕ್ಕರೆ ಅಂಶವನ್ನು ಹೆಚ್ಚಿಸುತ್ತದೆ. ಹಾಗಾಗಿ ಹಣ್ಣಿನ ರಸದ ಬದಲಾಗಿ ಸಾಧ್ಯವಾದಷ್ಟು ತಾಜಾ ಹಣ್ಣುಗಳನ್ನು ಸೇವಿಸಬೇಕು.
ಸೂಚನೆ: ಆರೋಗ್ಯ ತಜ್ಞರು ಮತ್ತು ಅಧ್ಯಯನಗಳ ಪ್ರಕಾರ ಈ ವಿವರಗಳನ್ನು ಒದಗಿಸಲಾಗಿದೆ. ಈ ಲೇಖನವು ನಿಮ್ಮ ತಿಳುವಳಿಕೆಗಾಗಿ ಮಾತ್ರ. ಇವುಗಳನ್ನು ಅನುಸರಿಸುವ ಫಲಿತಾಂಶಗಳು ಕೇವಲ ವೈಯಕ್ತಿಕವಾಗಿವೆ. ಇವುಗಳನ್ನು ಅನುಸರಿಸುವ ಮೊದಲು ಸಂಬಂಧ ಪಟ್ಟ ವೈದ್ಯರು, ತಜ್ಞರನ್ನು ಸಂಪರ್ಕಿಸುವುದು ಉತ್ತಮ ಮಾರ್ಗವಾಗಿದೆ. ನೀವು ಗಮನಿಸಬಹುದು.