ಕೆಎನ್‌ಎನ್‌ಡಿಜಿಟಲ್‌ಡೆಸ್ಕ್: ಕಣ್ಣಿನ ದೃಷ್ಟಿ ದೋಷವೂ ಒಂದು ಆರೋಗ್ಯದ ಸಮಸ್ಯೆ ಆಗಿದೆ. ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಕರಿಗೂ ಇದು ಸಾಮಾನ್ಯವಾಗಿಬಿಟ್ಟಿದೆ. ದೃಷ್ಟಿ ದೋಷ ಉಂಟಾಗಲು ಕಾರಣಗಳು ಅನೇಕ ಆದರೆ ಈ ಸಮಸ್ಯೆ ನಿವಾರಣೆಗೂ ಅನೇಕ ಪರಿಹಾರಗಳಿವೆ. ಅದರಲ್ಲಿ ಒಂದು ಸುಲಭವಾದ ಮನೆಮದ್ದನ್ನು ನವಿಂದು ತಿಳಸಿಕೊಡುತ್ತೇವೆ. ಇದಕ್ಕೆ ಯಾವುದೇ ಸೈಡ್ ಎಫೆಕ್ಟ್ ಇಲ್ಲ. ನಾವು ಹೇಳುವ ಈ ಮನೆಮದ್ದನ್ನು ಟ್ರೈ ಮಾಡಿದರೆ ಕಣ್ಣಿ ಸಮಸ್ಯೆಯನ್ನು ಸುಲಭವಾಗಿ ನಿವಾರಿಸಿಕೊಳ್ಳಬಹುದು.
ಕನ್ಣಿನ ಸಮಸ್ಯೆ ನಿವಾರಣೆ ಮಾಡಲು ಬದಾಮಿ ತುಂಬಾ ಸಹಾಯ ಮಾಡುತ್ತದೆ. ಮೊದಲಿಗೆ ಒಂದು ಬಟ್ಟಲಿಗೆ ಹತ್ತು ಬದಾಮಿಯನ್ನು ಹಾಕಿ. ಬದಾಮಿಯಲ್ಲಿ ಒಮೆಗಾ 3 ಫ್ಲಾಟಿ ಆಸಿಡ್ ಹಾಗು ವಿಟಮಿನ್ ಮತ್ತು ಆಂಟಿ ಆಕ್ಸಿಡೆಂಟ್ ಪ್ರಮಾಣವು ತುಂಬಾ ಹೆಚ್ಚಾಗಿರುತ್ತದೆ. ಬದಾಮಿ ಜೊತೆಗೆ ಒಂದು ಚಮಚ ಜೀರಿಗೆ ತೆಗೆದುಕೊಳ್ಳಿ. ಜೀರಿಗೆಯಲ್ಲಿ ವಿಟಮಿನ್ ಎ ಹಾಗು ವಿಟಮಿನ್ ಸಿ ಇರುತ್ತದೆ. ಜೀರಿಗೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದರ ಜೊತೆ ಕಾಲು ಚಮಚ ಬಿಳಿ ಕಾಳು ಮೆಣಸನ್ನು ಹಾಕಿ ಹಾಗು ಒಂದು ಚಮಚ ಸೋಂಪು ಕಾಳನ್ನು ಇದಕ್ಕೆ ಸೇರಿಸಿ. ಸೋಂಪು ಕಣ್ಣಿನ ಆರೋಗ್ಯ ಕಾಪಾಡುವಲ್ಲಿ ಮುಖ್ಯ ಪಾತ್ರ ನಿರ್ವಹಿಸುತ್ತದೆ. ಇದಕ್ಕೆ ಕೊನೆಯಲ್ಲಿ ಸ್ವಲ್ಪ ಬೆಲ್ಲ ಸೇರಿಸಿ.
ಬದಾಮಿ, ಬಿಳಿ ಕಾಳು ಮೆಣಸು, ಜೀರಿಗೆ, ಸೋಂಪು ಬೆಲ್ಲ ಈ ಎಲ್ಲವನ್ನೂ ಮಿಕ್ಸಿ ಜಾರ್‌ಗೆ ಹಾಕಿ ಪೌಡರ್ ಮಾಡಿಕೊಳ್ಳಿ. ನಿಮಗೆ ಬೇಕಾಗುವ ಪ್ರಮಾಣದಲ್ಲಿ ಸುಮಾರು 15ದಿನಕ್ಕೆ ಆಗುವಷ್ಟು ಮಾಡಿಟ್ಟುಕೊಂಡರೆ ಪರವಾಗಿಲ್ಲ. ಈ ಮಿಶ್ರಣವನ್ನು ನಿತ್ಯವೂ ಮಲಗುವ ಮುನ್ನ ಹಾಲಿನೊಂದಿಗೆ ಬೆಸರಿ ಸೇವಿಸಿ. ಮಕ್ಕಳಿಗೂ ಇದನ್ನು ಕೊಡಬಹುದು. ಹೀಗೆ ಸುಮಾರು ಮೂರು ತಿಂಗಳು ನಿರಂತರವಾಗಿ ಬಿಟ್ಟುಬಿಡದೇ ಮಾಡಿದರೆ ಉತ್ತಮವಾದ ಹಾಗು ಪರಿಣಾಮಕಾರಿಯಾದ ಫಲಿತಾಂಶ ನೀವು ಪಡೆಯಬಹುದು. ನಿಮ್ಮ ಕಣ್ಣಿನ ದೃಷ್ಟಿ ದೋಷದ ಸಮಸ್ಯೆ ನಿವಾರಣೆಯಾಗುತ್ತದೆ.
ಸೂಚನೆ: ಆರೋಗ್ಯ ತಜ್ಞರು ಮತ್ತು ಅಧ್ಯಯನಗಳ ಪ್ರಕಾರ ಈ ವಿವರಗಳನ್ನು ಒದಗಿಸಲಾಗಿದೆ. ಈ ಲೇಖನವು ನಿಮ್ಮ ತಿಳುವಳಿಕೆಗಾಗಿ ಮಾತ್ರ. ಇವುಗಳನ್ನು ಅನುಸರಿಸುವ ಫಲಿತಾಂಶಗಳು ಕೇವಲ ವೈಯಕ್ತಿಕವಾಗಿವೆ. ಇವುಗಳನ್ನು ಅನುಸರಿಸುವ ಮೊದಲು ಸಂಬಂಧ ಪಟ್ಟ ವೈದ್ಯರು, ತಜ್ಞರನ್ನು ಸಂಪರ್ಕಿಸುವುದು ಉತ್ತಮ ಮಾರ್ಗವಾಗಿದೆ. ನೀವು ಗಮನಿಸಬಹುದು.