ಕೆಎನ್‌ಎನ್‌ಡಿಜಿಟಲ್‌ಡೆಸ್ಕ್: ವಯಸ್ಕರಲ್ಲಿ ಮಂಡಿ ನೋವು ಸರ್ವೇ ಸಾಮಾನ್ಯ. ವಯಸ್ಸು ನಲವತ್ತು ದಾಟಿತೆಂದರೆ ಸಾಕು ಮಂಡಿ ನೋವು ಶುರು. ಅದರಲ್ಲೂ ವಯಸ್ಸಾದ ಮಹಿಳೆಯರಿಗೆ ಮಂಡಿ ನೋವು ಹೆಚ್ಚಾಗಿ ಭಾದಿಸುತ್ತದೆ. ಈ ಮಂಡಿ ನೋವಿಗೆ ಕೆಲ ಸುಲಭವಾದ ಮನೆ ಮದ್ದುಗಳನ್ನು ನಾವಿಂದು ತಿಳಿಸಿಕೊಡುತ್ತೇವೆ.
ಅರಿಶಿನ ಕೊಂಬನ್ನು ನೀರಿನೊಂದಿಗೆ ತೇಯ್ದು ಮಂಡಿಯ ನೋವಿರುವ ಜಾಗಕ್ಕೆ ಹಚ್ಚಿಕೊಂಡು ನಿಧಾನವಾಗಿ ಮಸಾಜ್ ಮಾಡಿಕೊಳ್ಳಿ. ಸುಮಾರು ಇಪ್ಪತ್ತು ನಿಮಿಷ ಬಿಟ್ಟು ಬೆಚ್ಚಗಿನ ನೀರನಿಂದ ತೊಳೆಯಿರಿ. ಹೀಗೆ ದಿನ್ನಕ್ಕೆ ಕನಿಷ್ಟ ಪಕ್ಷ ಎರಡು ಬಾರಿ ಮಾಡಿ.
ಆಲಿವ್ ಆಯಿಲ್ ಅಥವಾ ಕೊಬ್ಬರಿ ಎಣ್ಣೆಯನ್ನು ಸ್ವಲ್ಪ ಬೆಚ್ಚಗೆ ಮಾಡಿ ನೋವಿರುವ ಜಾಗಕ್ಕೆ ಹಚ್ಚಿ ವೃತ್ತಾಕಾರವಾಗಿ ಮಸಾಜ್ ಮಾಡಿಕೊಳ್ಳಿ. ಎಣ್ಣೆ ಮಸಾಜ್ ಯಾವುದೇ ರೀತಿಯ ಕೀಳು ನೋವಿಗೆ ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.
ಅಡುಗೆಗೆ ಬಳಸುವ ಓಂಕಾಳನ್ನು ನೀರಿನೊಂದಿಗೆ ಅರೆದುಕೊಳ್ಳಿ. ಪೇಸ್ಟ್ ರೂಪದಲ್ಲಿ ಅರೆದುಕೊಂಡು ನೋವಿದ್ದ ಜಾಗಕ್ಕೆ ಲೇಪಿಸಿಕೊಳ್ಳಿ. ಸ್ವಲ್ಪ ಹೊತ್ತು ಹಾಗೆಯೇ ಬಿಡಿ, ನೋವು ಕ್ರಮೇಣ ಕಡಿಮೆಯಾಗುತ್ತದೆ.
ತೆಂಗಿನ ಎಣ್ಣೆಗೆ ಸ್ವಲ್ಪ ಕರ್ಪೂರ ಹಾಕಿ ಕರ್ಪೂರವನ್ನು ಕರಗಿಸಿ. ಇದನ್ನು ಮಂಡಿಯ ನೋವಿದ್ದ ಜಾಗಕ್ಕೆ ಹಚ್ಚಿ ಇದರಿಂದಾಗಿ ರಕ್ತ ಸಂಚಲನ ಸುಲಭವಾಗಿ ಆಗುತ್ತದೆ. ನೋವಿನ ಸೆಳೆತ, ಊರಿಯೂತ ಕಡಿಮೆ ಮಾಡುತ್ತದೆ. ದಿನಕ್ಕೆ ಎರಡು ಬಾರಿ ಮಾತ್ರ ಹೀಗೆ ಮಾಡಿದೆ ಸಾಕು.
ಈ ಮೇಲೆ ಸೂಚಿದ ಮನೆ ಮದ್ದುಗಳು ಮಂಡಿ ನೋವಿಗೆ ನಿವಾರಣೆ ನೀಡುತ್ತವೆ. ಇದನ್ನು ಮಾಡಿಯೂ ನಿಮಗೆ ಮಂಡಿ ನೋವು ಇನ್ನೂ ಹೆಚ್ಚು ತೊಂದರೆ ಕೊಟ್ಟರೆ ಕೂಡಲೇ ವೈದ್ಯರನ್ನು ಸಂಪರ್ಕ ಮಾಡಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಿ. ನಾವು ಹೇಳುವ ಮನೆಮದ್ದೇ ಮಂಡಿ ನೋವಿಗೆ ಅಂತಿಮ ಚಿಕಿತ್ಸೆ ಅಲ್ಲ.
ಸೂಚನೆ: ಆರೋಗ್ಯ ತಜ್ಞರು ಮತ್ತು ಅಧ್ಯಯನಗಳ ಪ್ರಕಾರ ಈ ವಿವರಗಳನ್ನು ಒದಗಿಸಲಾಗಿದೆ. ಈ ಲೇಖನವು ನಿಮ್ಮ ತಿಳುವಳಿಕೆಗಾಗಿ ಮಾತ್ರ. ಇವುಗಳನ್ನು ಅನುಸರಿಸುವ ಫಲಿತಾಂಶಗಳು ಕೇವಲ ವೈಯಕ್ತಿಕವಾಗಿವೆ. ಇವುಗಳನ್ನು ಅನುಸರಿಸುವ ಮೊದಲು ಸಂಬಂಧ ಪಟ್ಟ ವೈದ್ಯರು, ತಜ್ಞರನ್ನು ಸಂಪರ್ಕಿಸುವುದು ಉತ್ತಮ ಮಾರ್ಗವಾಗಿದೆ. ನೀವು ಗಮನಿಸಬಹುದು.