ಕೆಎನ್‌ಎನ್‌ಡಿಜಿಟಲ್‌ಡೆಸ್ಕ್: ಪಲಾವ್ ಎಲೆ ಅಂದ ತಕ್ಷಣ ನಮಗೆ ನೆನಪಿಗೆ ಬರೋದು ರುಚಿರುಚಿಯಾದ ಘಮಘಮವಾದ ಪಲಾವ್. ಪಲಾವ್ ಎಲೆ ಇಲ್ಲದೇ ಪಲಾವ್‌ಗೆ ರುಚಿನೇ ಇರುವುದಿಲ್ಲ. ಅಡುಗೆಗೆ ಉಪಯೋಗಿಸುವ ಈ ಪಲಾವ್ ಎಲೆಯಿಂದ ನಮ್ಮ ಆರೋಗ್ಯಕ್ಕೆ ಏನೆಲ್ಲಾ ಲಾಭ ಇದೆ ಅಂತ ಗೊತ್ತಾದ್ರೆ ನೀವೇ ಆಶ್ಚರ್ಯ ಪಡ್ತೀರಾ. ಬನ್ನಿ ಪಲಾವ್ ಎಲೆಯ ಮಹತ್ವದ ಬಗ್ಗೆ ತಿಳಿದುಕೊಳ್ಳೋಣ.
ಪಲಾವ್ ಎಲೆ ಅನೇಕ ಔಷಧೀಯ ಗುಣಗಳನ್ನು ಹೊಂದಿದೆ. ಇದರಲ್ಲಿರುವ ಅದ್ಭುತವಾದ ಶಕ್ತಿ ಅದೆಷ್ಟೋ ರೋಗಗಳಿಗೆ ಮದ್ದಿನ ರೂಪದಲ್ಲಿ ಕೆಲಸ ಮಾಡುತ್ತದೆ. ಈ ಪಲಾವ್ ಎಲೆಗಳಿಂದ ಅನೇಕ ಆರ್ಯವೇದ ಔಷಧಿಗಳನ್ನು ತಯಾರಿಸುತ್ತಾರೆ. ಹೀಗೆ ಔಷಧಿ ತಯಾರಿಸುವ ಎಲೆಯನ್ನೇ ನೇರವಾಗಿ ಊಟದಲ್ಲಿ ಸೇವಿಸಿದರೆ ಊಟದ ರುಚಿ ಕೂಡ ಹೆಚ್ಚುತ್ತದೆ ಹಾಗು ಆರೋಗ್ಯಕ್ಕೂ ಉತ್ತಮ.
ಅರ್ಧ ತಲೆನೋವು ಅನೇಕರನ್ನು ಭಾದಿಸುತ್ತದೆ. ಇದನ್ನು ಮೈಗ್ರೇನ್ ಎಂದು ಸಹ ಕರೆಯುತ್ತಾರೆ. ಈ ಸಮಸ್ಯೆ ಇದ್ದವರು ವಾಂತಿ, ಪಿತ್ತದಂತಹ ಇನ್ನು ಕೆಲ ಆರೋಗ್ಯ ಸಮಸ್ಯೆಯನ್ನು ಎದುರಿಸುತ್ತಾರೆ. ಇದರಿಂದಾಗಿ ನರಗಳ ಮೇಲೆ ಒತ್ತಡ ಬೀಳುತ್ತದೆ. ಈ ರೋಗ ಮಾನಸಿಕವಾಗಿ ತುಂಬಾ ತೊಂದರೆ ನೀಡುತ್ತದೆ. ಈ ಎಲ್ಲಾ ಸಮಸ್ಯೆಗಳಿಗೆ ಪಲಾವ್ ಎಲೆಯಲ್ಲಿ ಪರಿಹಾರವಿದೆ. ಮಾನಸಿಕ ಒತ್ತಡ ನಿಯಂತ್ರಸಲು, ಮನಸ್ಸನ್ನು ಶಾಂತಗೊಳಿಸಲು ಹಾಗು ನರಗಳನ್ನು ತಂಪುಗೊಳಿಸುವ ಶಕ್ತಿ ಇದಕ್ಕಿದೆ. ಹೀಗೆ ಮೈಗ್ರೇನ್ ಸಮಸ್ಯೆ ಬಂದಾಗ ಒಂದೆರಡು ಪಲಾವ್ ಎಲೆಯನ್ನು ನೀರಿನಲ್ಲಿ ಕುದಿಸಿ ಆ ನೀರನ್ನು ಕುಡಿದರೆ ನಿಮಗೆ ತಕ್ಷಣ ಮೈಗ್ರೇನ್‌ನಿಂದ ರಿಲೀಫ್ ಸಿಗುತ್ತದೆ. ಹೀಗೆ ನಿರಂತರವಾಗಿ ಒಂದು ವಾರ ಪಲಾವ್ ಎಲೆ ಕುದಿಸಿದ ನೀರನ್ನು ಸೇವಿಸಿದರೆ ಅರ್ಧ ತಲೆನೋವು ಸಂಪೂರ್ಣವಾಗಿ ವಾಸಿಯಾಗುತ್ತದೆ. ಈ ಮನೆಮದ್ದನ್ನು ಮಾಡಿದರೂ ಮೈಗ್ರೇನ್ ಹೆಚ್ಚಾದರೆ ಕೂಡಲೇ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆ ಪಡೆಯಿರಿ.
ಹೀಗೆ ಪಲಾವ್ ಎಲೆ ನೀರನ್ನು ಕುಡಿದರೆ ಕೂದಲಿನ ಸಮಸ್ಯೆ ಕ್ರಮೇಣ ಕಡಿಮೆಯಾಗುತ್ತದೆ. ಕೂದಲಿನ ಎಲ್ಲಾ ರೀತಿ ಆರೋಗ್ಯವನ್ನು ಇದು ಕಾಪಾಡುತ್ತದೆ.
ಸೂಚನೆ: ಆರೋಗ್ಯ ತಜ್ಞರು ಮತ್ತು ಅಧ್ಯಯನಗಳ ಪ್ರಕಾರ ಈ ವಿವರಗಳನ್ನು ಒದಗಿಸಲಾಗಿದೆ. ಈ ಲೇಖನವು ನಿಮ್ಮ ತಿಳುವಳಿಕೆಗಾಗಿ ಮಾತ್ರ. ಇವುಗಳನ್ನು ಅನುಸರಿಸುವ ಫಲಿತಾಂಶಗಳು ಕೇವಲ ವೈಯಕ್ತಿಕವಾಗಿವೆ. ಇವುಗಳನ್ನು ಅನುಸರಿಸುವ ಮೊದಲು ಸಂಬಂಧ ಪಟ್ಟ ವೈದ್ಯರು, ತಜ್ಞರನ್ನು ಸಂಪರ್ಕಿಸುವುದು ಉತ್ತಮ ಮಾರ್ಗವಾಗಿದೆ. ನೀವು ಗಮನಿಸಬಹುದು.