ಬೆಂಗಳೂರು: ರಾಜ್ಯದ ಜನರಲ್ಲಿ ಅಡುಗೆ ಎಣ್ಣೆಯಿಂದ ಉಂಟಾಗುತ್ತಿರುವ ಆರೋಗ್ಯ ಸಮಸ್ಯೆ ತಡೆಯುವ ನಿಟ್ಟಿನಲ್ಲಿ 6 ತಿಂಗಳಿಗೊಮ್ಮೆ ಅಡುಗೆ ಎಣ್ಣೆ ವಿಶ್ಲೇಷಣೆಗೆ ಒಳಪಡಿಸಲು ಆಹಾರ ಸುರಕ್ಷತಾ ಇಲಾಖೆ ಸೂಚನೆ ನೀಡಲಾಗಿದೆ.
ಈ ಕುರಿತು ಆಹಾರ ಸುರಕ್ಷತಾ ಇಲಾಖೆ ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ದಿನಾಂಕ:30.07.2025ರಂದು ಆಯುಕ್ತರು, ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ, ಬೆಂಗಳೂರು ರವರ ಅಧ್ಯಕ್ಷತೆಯಲ್ಲಿ ಅಡುಗೆ ಎಣ್ಣೆಯಲ್ಲಿ Transfat ಕಡಿಮೆ ಇರುವ ಅಡುಗೆ ಎಣ್ಣೆಯನ್ನು ಉಪಯೋಗಿಸುವ ಬಗ್ಗೆ ಮತ್ತು ಉಪಯೋಗಿಸಿದ ಅಡುಗೆ ಎಣ್ಣೆಯನ್ನು (RUCO) ವಿಲೇವಾರಿ ಮಾಡುವ ಬಗ್ಗೆ ಮತ್ತು ಅಡುಗೆ ಎಣ್ಣೆ ತಯಾರಿಕ ಘಟಕಗಳಲ್ಲಿ ಸ್ವಚ್ಚತೆ ಪ್ಯಾಕೇಜಿಂಗ್, ಲೆಬೆಲಿಂಗ್ ಮತ್ತು ಆಯಿಲ್ ಫೋರ್ಟಿಫಿಕೇಶನ್ ಬಗ್ಗೆ ವೀಡಿಯೋ ಕಾನ್ಸ್‌ರೆನ್ಸ್ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಭೆಗೆ ಜಿಲ್ಲಾ ಅಂಕಿತಾಧಿಕಾರಿಗಳು, ಅಡುಗೆ ತಯಾರಿಕಾ ಘಟಕದ ಮಾಲೀಕರು, ವ್ಯವಸ್ಥಾಪಕರು ಹೋಟೆಲ್ ಉದ್ದಿಮೆದಾರರ ಸಂಘದ ಪದಾಧಿಕಾರಿಗಳು, ಬೇಕರಿ ಸಂಘ ಪದಾಧಿಕಾರಿಗಳು, ಎಫ್.ಎಸ್.ಎಸ್.ಐ ನೊಂದಾಯಿತ RUCO ಏಜೆನ್ಸಿಗಳ ಮಾಲೀಕರು ಮತ್ತು ವ್ಯವಸ್ಥಾಪಕರು, Karnataka State Bio Diesel Development Board ಹಾಜರಿದ್ದರು. ಈ ಸಭೆಯಲ್ಲಿ ಆಯುಕ್ತರು ಎಲ್ಲಾ ಅಡುಗೆ ಎಣ್ಣೆ ತಯಾರಿಕಾ ಘಟಕದ ಮಾಲೀಕರಿಗೆ ಸ್ವಚ್ಛತೆಯನ್ನು ಕಾಪಾಡಿಕೊಳ್ಳಲು ಮತ್ತು ಎಫ್.ಎಸ್.ಎಸ್. ನಿಯಮಾನುಸಾರ ಲೆಬಲಿಂಗ್ ಮತ್ತು ಆಯಿಲ್ ಫೋರ್ಟಿಫಿಕೇಶನ್ ಹೊಂದಿರುವ (Vitamin A & D) ಅಡುಗೆ ಎಣ್ಣೆಯನ್ನು ಸಾರ್ವಜನಿಕರಿಗೆ ಮಾರಾಟಮಾಡಲು ಕ್ರಮವಹಿಸಬೇಕೆಂದು ಮತ್ತು ಎಲ್ಲಾ ಆಯಿಲ್ ಉದ್ದಿಮೆದಾರರು ತಮ್ಮಲ್ಲಿ ತಯಾರಾದ ಎಣ್ಣೆಯನ್ನು ಪ್ರತಿ 06 ತಿಂಗಳಿಗೊಮ್ಮೆ ವಿಶ್ಲೇಷಣೆಗೆ ಒಳಪಡಿಸಲು ತಿಳಿಸಲಾಯಿತು.
ಈ ಸಭೆಗೆ ವಿಡಿಯೋ ಕಾನ್ಸ್‌ರೆನ್ಸ್ ಮೂಲಕ ಹೆಚ್.ಸಿ.ಜಿ ಕ್ಯಾನ್ಸರ್ ಆಸ್ಪತ್ರೆಯ ಪ್ರಸಿದ್ಧ ಕ್ಯಾನ್ಸರ್ ತಜ್ಞರಾದ ಡಾ. ವಿಶಾಲ್ ರಾವ್ ರವರು Transfat ಕಡಿಮೆ ಇರುವ ಅಡುಗೆ ಎಣ್ಣೆಯನ್ನು ಅಡುಗೆಗೆ ಮತ್ತು ಬೇಕರಿ ಮಾಲೀಕರು ಉಪಯೋಗಿಸಬೇಕೆಂದು ತಿಳಿಸಿದರು. ಇದರಿಂದ ಹೃದಯಕ್ಕೆ ಸಂಬಂಧಪಟ್ಟ ಕಾಯಿಲೆಗಳು ಮತ್ತು ಅಸಂಕ್ರಾಮಿಕ ರೋಗಗಳು ತಡೆಗಟ್ಟಬಹುದೆಂದು ತಿಳಿಸಿದರು.
ಮುಂದುವರೆದು ಆಯುಕ್ತರು RUCO ಏಜೆನ್ಸಿರವರಿಗೆ 2024-25ನೇ ಮತ್ತು 2025-26ನೇ, ಸಾಲಿನಲ್ಲಿ ಒಟ್ಟು 32,68,990 ಲೀಟರ್ ಉಪಯೋಗಿಸಿದ ಎಣ್ಣೆಯನ್ನು ಸಂಗ್ರಹಣೆ ಮಾಡಿದ್ದೇವೆಂದು RUCO ಏಜೆನ್ಸ್ ಮಾಲೀಕರು ಆಯುಕ್ತರಿಗೆ ಮಾಹಿತಿ ನೀಡಿದರು ಮತ್ತು ಇನ್ನು ಹೆಚ್ಚು ಸಂಗ್ರಹಣೆ ಮಾಡಿ BIO DIESEL ತಯಾರಿಕೆ ಘಟಕಕ್ಕೆ ನೀಡಬೇಕೆಂದು ಎಫ್.ಎಸ್.ಎಸ್.ಎ ನೋಂದಾಯಿತ RUCO ಏಜೆನ್ಸಿಗಳಿಗೆ ತಿಳಿಸಲಾಯಿತು. ಮತ್ತು ಸಭೆಗೆ ಹಾಜರಿದ್ದ, ಹೋಟೆಲ್ ಸಂಘದ ಪದಾಧಿಕಾರಿಗಳಿಗೆ ತಾವುಗಳು ಉಪಯೋಗಿಸಿ ಉಳಿದ ಎಣ್ಣೆಯನ್ನು ಕಟ್ಟು ನಿಟ್ಟಾಗಿ RUCO ಏಜೆನ್ಸಿಗಳಿಗೆ ನೀಡಿ ಈ ಎಣ್ಣೆಯು ಮರುಬಳಕೆಯಾಗದಂತೆ ಸಹಕರಿಸಬೇಕೆಂದು ತಿಳಿಸಿದರು.