ಶಿವಮೊಗ್ಗ : ಪ್ರತಿಯೊಬ್ಬ ಮನುಷ್ಯನಿಗೂ ಆರೋಗ್ಯವೇ ಭಾಗ್ಯ ಚಿಕ್ಕಂದಿನಿಂದ ಅದನ್ನು ಚೆನ್ನಾಗಿ ಕಾಪಾಡಿಕೊಳ್ಳಬೇಕು ಪ್ರಸ್ತುತ ದಿನಮಾನದಲ್ಲಿ ಯುವ ಸಮೂಹ ಒತ್ತಡದಿಂದ ಹೊರಗೆ ಬರಬೇಕು. ದೈನಂದಿನ ಚಟುವಟಿಕೆ ಜೊತೆಗೆ ಜಿಮ್, ಯೋಗ, ಧ್ಯಾನ, ವಾಕಿಂಗ್‌ನoತಹ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಆರೋಗ್ಯ ರಕ್ಷಣೆ ಮಾಡಿಕೊಳ್ಳಬೇಕು ಎಂದು ಸಾಗರ ಶಾಸಕ ಹಾಗೂ ಅರಣ್ಯ ಕೈಗಾರಿಕಾ ಅಭಿವೃದ್ದಿ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಸಲಹೆ ಮಾಡಿದರು.
ಇಂದು ಶಿವಮೊಗ್ಗ ಜಿಲ್ಲೆಯ ಸಾಗರದ ಒಕ್ಕಲಿಗರ ಸಭಾಭವನದಲ್ಲಿ ಶನಿವಾರ ಮಂಗಳೂರಿನ ಕರ್ನಾಟಕ ಪವರ್ ಲಿಫ್ಟಿಂಗ್ ಅಸೋಶಿಯೇಷನ್, ಶಿವಮೊಗ್ಗ ಜಿಲ್ಲಾ ಪವರ್ ಲಿಫ್ಟಿಂಗ್ ಅಸೋಶಿಯೇಶನ್, ಸಾಧನಾ ಮಲ್ಟಿಜಿಮ್ ವತಿಯಿಂದ ದಿ. ರುಕ್ಮಿಣಿ ಸ್ಮರಣಾರ್ಥ ಹಮ್ಮಿಕೊಳ್ಳಲಾಗಿದ್ದ ಎರಡು ದಿನಗಳ ಶಿವಮೊಗ್ಗ ಜಿಲ್ಲಾಮಟ್ಟದ ಪವರ್ ಲಿಫ್ಟಿಂಗ್ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದಂತ ಅವರು, ದಿನನಿತ್ಯ ಸೇವಿಸುವ ಆಹಾರ ಮನುಷ್ಯ ದೇಹದ ಮೇಲೆ ದುಷ್ಟರಿಣಾಮ ಬೀರುತ್ತಿದೆ. ಉತ್ತಮ ಫಸಲಿಗಾಗಿ ರಾಸಾಯನಿಕವನ್ನು ಹೆಚ್ಚು ಬಳಕೆ ಮಾಡಲಾಗುತ್ತಿದೆ. ಇದು ಪರೋಕ್ಷವಾಗಿ ನಮ್ಮ ದೇಹವನ್ನು ಸೇರುತ್ತಿದೆ. ಇದರ ಜೊತೆಗೆ ಜಂಕ್‌ಫುಡ್ ಸೇವನೆ ಆರೋಗ್ಯದ ಮೇಲೆ ಇನ್ನಷ್ಟು ದುಷ್ಪರಿಣಾಮ ಬೀರುತ್ತಿದೆ. ಇಂತಹ ಸಂದರ್ಭದಲ್ಲಿ ನಾವು ಆರೋಗ್ಯ ಕಾಪಾಡಿಕೊಳ್ಳಲು ಅಗತ್ಯ ಮಾರ್ಗ ಕಂಡು ಕೊಳ್ಳಬೇಕು. ದೈಹಿಕ ದೃಢತೆ ಜೊತೆಗೆ ಮಾನಸಿಕವಾಗಿಯೂ ನಾವು ಗಟ್ಟಿಯಾಗಲು ವ್ಯಾಯಾಮ ಶಾಲೆಗಳು ಹೆಚ್ಚು ಅಗತ್ಯ. ನಿರಂತರವಾಗಿ ದೈಹಿಕ ದೃಢತೆ ಕಾಪಾಡಿಕೊಂಡು ಬಂದರೆ ಅನಾರೋಗ್ಯದಿಂದ ದೂರ ಉಳಿಯಬಹುದು, ಕ್ರೀಡೆಯಲ್ಲಿ ನಿರಂತರತೆ ಅಗತ್ಯವಿದೆ ಎಂದು ಹೇಳಿದರು.
ಆದಿಚುಂಚನಗಿರಿ ಶಾಖಾ ಮಠದ ಶ್ರೀ ನಾಗಾನಯನಂದ ಸ್ವಾಮೀಜಿ ಮಾತನಾಡಿ, ಸಾಧನಾ ಮಲ್ಟಿಜಿಮ್ ಉತ್ತಮವಾಗಿ ಕೆಲಸ ಮಾಡುವ ಜೊತೆಗೆ ಯುವ ಸಮೂಹವನ್ನು ಆರೋಗ್ಯದ ಕಡೆ ಕರೆದೊಯ್ಯುವ ಕೆಲಸ ಮಾಡುತ್ತಿದೆ. ಜಿಮ್ ಮುಖ್ಯಸ್ಥ ರಮೇಶ್ ತಮ್ಮ ತಾಯಿಯವರ ಹೆಸರಿನಲ್ಲಿ ಪವರ್ ಲಿಫ್ಟಿಂಗ್ ಸ್ಪರ್ಧೆ ಆಯೋಜಿಸುವ ಮೂಲಕ ಮಾದರಿಯಾಗಿದ್ದಾರೆ. ಪ್ರತಿಯೊಬ್ಬರಿಗೂ ತಂದೆತಾಯಿ ಜಗತ್ತಿನಲ್ಲಿ ಅತಿ ಶ್ರೇಷ್ಟ ವ್ಯಕ್ತಿಗಳಾಗಿರುತ್ತಾರೆ. ಅವರ ಹೆಸರಿನಲ್ಲಿ ಇಂತಹ ಕಾರ್ಯಕ್ರಮ ನಡೆಸುವುದು ಔಚಿತ್ಯಪೂರ್ಣ ಎಂದರು.
ಇದೇ ಸಂದರ್ಭದಲ್ಲಿ ರಾಷ್ಟಮಟ್ಟದ ವಿಶೇಷ ಒಲಿಂಪಿಕ್ಸ್ನ ಪವರ್ ಲಿಫ್ಟಿಂಗ್ ವಿಭಾಗದಲ್ಲಿ ಪದಕ ಗೆದ್ದ ಮುಂಗರವಳ್ಳಿ ಚೈತನ್ಯ ವಿಶೇಷ ಮಕ್ಕಳ ಶಾಲೆಯ ಅನುಷಾ, ಶರತ್ ಶೆಟ್ಟಿ, ಸ್ನೇಹ ಅವರನ್ನು ಸನ್ಮಾನಿಸಲಾಯಿತು.
ಸಾಗರದ ನಗರಸಭೆ ಅಧ್ಯಕ್ಷೆ ಮೈತ್ರಿ ಪಾಟೀಲ್, ಉಪಾಧ್ಯಕ್ಷೆ ಸವಿತಾ ವಾಸು, ಸದಸ್ಯರಾದ ಮಧುಮಾಲತಿ, ವಿಪಕ್ಷ ನಾಯಕ ಗಣಪತಿ ಮಂಡಗಳಲೆ, ಸೈಯದ್ ಜಾಕೀರ್, ಗುಂಡಪ್ಪ ಗೌಡ, ಮಂಜುನಾಥ್, ನಿಂಗಪ್ಪ ಬಿ.ಪುಷ್ಪ ರಮೇಶ್, ಪ್ರಕಾಶ್ ಕಾರಂತ್ ಅಭಿಷೇಕ್. ರಮೇಶ್ ಎನ್. ಧರ್ಮರಾಜ್ ಇತರರು ಹಾಜರಿದ್ದರು.
ಸಹಕಾರಿ ಸಂಸ್ಥೆಗಳಲ್ಲಿ ಸೇವೆಯೇ ಜೀವಾಳ, ರಾಜಕೀಯ ಪ್ರವೇಶ ಇರಬಾರದು: ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು
ರಾಜ್ಯದ ‘ಗ್ರಾಮೀಣ ಜನತೆ’ಗೆ ಮತ್ತೊಂದು ಗುಡ್ ನ್ಯೂಸ್: ಇನ್ಮುಂದೆ ಸಿಗಲಿದೆ ಗ್ರಾ.ಪಂ ವ್ಯಾಪ್ತಿಯಲ್ಲಿ ‘ಇ-ಸ್ವತ್ತು’