ಬೆಂಗಳೂರು: ಹೊಸ ವರ್ಷ-2026 ಆಚರಣೆ ಪ್ರಯುಕ್ತ ಆಸ್ಪತ್ರೆಗಳಲ್ಲಿ ಕೊಠಡಿ, ಆಂಬ್ಯುಲೆನ್ಸ್ ವಾಹನ ಸೌಲಭ್ಯ ಮತ್ತು ಸಾರ್ವಜನಿಕರಿಗೆ ವೈದ್ಯಕೀಯ ತುರ್ತು ಚಿಕಿತ್ಸೆ ಸೇವೆಗಳನ್ನು ಒದಗಿಸೋದಕ್ಕೆ ರಾಜ್ಯ ಸರ್ಕಾರ ಖಡಕ್ ಆದೇಶ ಮಾಡಿದೆ.
ಈ ಕುರಿತಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ನಿರ್ದೇಶಕರು ಆದೇಶ ಮಾಡಿದ್ದು, ದಿನಾಂಕ 31-12-2025 ರಿಂದ 01.01.2026 ರವರೆಗೆ ಹೊಸ ವರ್ಷ-2026 ಆಗಮನದ ಆಚರಣೆ ಸಮಯದಲ್ಲಿ, ಕರ್ನಾಟಕ ರಾಜ್ಯದ ವಿವಿಧ ಸ್ಥಳಗಳಲ್ಲಿ, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಹಾಗೂ ಸಾರ್ವಜನಿಕರು ಅಸ್ವಸ್ಥಗೊಳ್ಳುವ ಮತ್ತು ವಿವಿಧ ರೀತಿಯ ಆರೋಗ್ಯ ಸಂಬಂಧಿತ ಸಮಸ್ಯೆಗಳಿಗೆ ಸಿಲುಕುವ ಸಾಧ್ಯತೆಗಳಿರುವುದರಿಂದ, ಉಲ್ಲೇಖಿತ ಪತ್ರದ ಪಕಾರ ತುರ್ತು ಕರ್ತವ್ಯಕ್ಕಾಗಿ, ಜಿಲ್ಲಾ ಮಟ್ಟದ ಎಲ್ಲಾ ಆಸ್ಪತ್ರೆಗಳಲ್ಲಿ ಪುರುಷ ಮತ್ತು ಮಹಿಳೆಯರಿಗೆ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಲು ತಿಳಿಸಿದ್ದಾರೆ.
ಸದರಿ ಮಹಿಳೆಯರ ಪ್ರತ್ಯೇಕ ಕೊಠಡಿಗೆ ಮಹಿಳಾ ಸಿಬ್ಬಂದಿಯನ್ನು ಚಿಕಿತ್ಸೆಗೆ ನಿಯೋಜಿಸುವುದು ಹಾಗೂ ಆಂಬ್ಯುಲೆನ್ಸ್ ವಾಹನ ಸೌಲಭ್ಯ ಮತ್ತು ಅಗತ್ಯ ಔಷಧಗಳು ಲಭ್ಯವಿರುವಂತೆ ವ್ಯವಸ್ಥೆಗೊಳಿಸಿ ಸಾರ್ವಜನಿಕರಿಗೆ ವೈದ್ಯಕೀಯ ತುರ್ತು ಚಿಕಿತ್ಸೆ ಸೇವೆಗಳನ್ನು ಒದಗಿಸಲು ಸೂಚಿಸಿದ್ದಾರೆ.

ಪ್ರವಾಸಿಗರ ಗಮನಕ್ಕೆ: ಹೊಸ ವರ್ಷದ ವೇಳೆ ಚಿಕ್ಕಮಗಳೂರಿನ ಈ ತಾಣಗಳಿಗೆ ತಾತ್ಕಾಲಿಕ ನಿರ್ಬಂಧ
ದಾವಣಗೆರೆ: ನಾಳೆ ಹೊನ್ನಾಳಿ ತಾಲ್ಲೂಕಿನ ಈ ಪ್ರದೇಶಗಳಲ್ಲಿ ‘ವಿದ್ಯುತ್ ವ್ಯತ್ಯಯ’ | Power Cut








