ಚಿತ್ರದುರ್ಗ: ಜಿಲ್ಲೆಯಲ್ಲೊಂದು ಅಮಾನವೀಯ ರೀತಿಯಲ್ಲಿ ಶಿಕ್ಷಕನೊಬ್ಬ ನಡೆದುಕೊಂಡಿದ್ದಂತ ವೀಡಿಯೋ ವೈರಲ್ ಆಗಿತ್ತು. ಪೋಷಕರಿಗೆ ಕರೆ ಮಾಡಿದ್ದಕ್ಕೆ ವಿದ್ಯಾರ್ಥಿಗೆ ಕಾಲಿನಿಂದ ಒದ್ದು ಮುಖ್ಯ ಶಿಕ್ಷಕನೊಬ್ಬ ಹಲ್ಲೆಗೈದಿದ್ದನು. ಇಂತಹ ಮುಖ್ಯ ಶಿಕ್ಷಕನ ವಿರುದ್ಧ ದೂರು ದಾಖಲಾದ ಬೆನ್ನಲ್ಲೇ ಬಂಧಿಸಲಾಗಿದೆ.
ಈ ಕುರಿತಂತೆ ಚಿತ್ರದುರ್ಗ ಜಿಲ್ಲಾ ಪೊಲೀಸ್ ಇಲಾಖೆಯಿಂದ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ಇಂದು ಬೆಳಗ್ಗೆಯಿಂದ ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ನಾಯಕನಹಟ್ಟಿಯ ನಗರದ ವೇದ ಪಾಠ ಶಾಲೆಯಲ್ಲಿ ಆಘಾತಕಾರಿ ಘಟನೆ, ಶಿಕ್ಷಕನಿಂದ ಮಕ್ಕಳ ಮೇಲೆ ಹಲ್ಲೆ ಎಂದು ಪೋಸ್ಟ್ ಹರಿದಾಡುತ್ತಿರುತ್ತದೆ ಎಂದಿದೆ.
ಈ ಘಟನೆಗೆ ಸಂಬಂಧಿಸಿದಂತೆ ಮಾಹಿತಿ ತಿಳಿದ ತಕ್ಷಣವೇ ಕಾರ್ಯಪ್ರವೃತ್ತರಾಗಿದ್ದು, ಈ ಬಗ್ಗೆ ನಾಯಕನಹಟ್ಟಿ ಪೊಲೀಸ್ ಠಾಣೆಯಲ್ಲಿ ಬಿಎನ್ಎಸ್ ಕಾಯ್ದೆಯ ಕಲಂ ನಂಬರ್ 115(2), 126(2). 351(2) ಹಾಗೂ ಕಲಂ 75 ಜೆಜೆ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ತನಿಖೆ ನಡೆಸಿ ಹಾಲಿ ಆರೋಪಿಯನ್ನು ವಶಕ್ಕೆ ಪಡೆಯಲಾಗಿದ್ದು, ತನಿಖೆ ಮುಂದುವರೆದಿರುವುದಾಗಿ ತಿಳಿಸಿದೆ.
ನಾಯಕನಹಟ್ಟಿಯ ವೇದಪಾಠಶಾಲೆಯಲ್ಲಿ ಶಿಕ್ಷಕನಿಂದ ಮಕ್ಕಳ ಮೇಲೆ ಹಲ್ಲೆ ಎನ್ನುವ ವಿಡಿಯೋ ವೈರಲ್‌ಗೆ ಸಂಬಂಧಿಸಿದಂತೆ ಹಲ್ಲೆ ನಡೆಸಿದ ವ್ಯಕ್ತಿಯ ಮೇಲೆ ನಾಯಕನಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು ಆರೋಪಿಯನ್ನು ವಶಕ್ಕೆ ಪಡೆಯಲಾಗಿರುತ್ತದೆ.@DgpKarnataka @KarnatakaCops @112chitradurga pic.twitter.com/B4xxlzGpsq
— Chitradurga District Police (@spchitradurga) October 21, 2025
ರಾಜ್ಯದಲ್ಲೇ ‘ಜಾತಿಗಣತಿ ಸಮೀಕ್ಷೆ’ಯಲ್ಲಿ ‘ಮಂಡ್ಯ ಜಿಲ್ಲೆ’ಗೆ ಪ್ರಥಮ ಸ್ಥಾನ: ಡಿಸಿ ಅಭಿನಂದನೆ
ಬೆಂಗಳೂರು ಜನತೆ ಗಮನಕ್ಕೆ: ಸುಮ್ಮನಹಳ್ಳಿ ವಿದ್ಯುತ್ ಚಿತಾಗಾರ ತಾತ್ಕಾಲಿಕವಾಗಿ ಸ್ಥಗಿತ