ಮೈಸೂರು: ಕಳ್ಳರು ಮನೆಗಳ್ಳತನ ಮಾಡಿ, ಕದ್ದಿದ್ದಂತ ಚಿನ್ನಾಭರಣದಲ್ಲಿ ಪಾಲು ಪಡೆದಿದ್ದಂತ ಹೆಡ್ ಕಾನ್ಸ್ ಸ್ಟೇಬಲ್ ಒಬ್ಬರು, ಮಾರಾಟ ಮಾಡಲು ಯತ್ನಿಸಿ ಪೊಲೀಸರಿಗೆ ಸಿಕ್ಕಿಬಿದ್ದು, ಬಂಧನಕ್ಕೆ ಒಳಗಾಗಿರುವಂತ ಘಟನೆ ಮೈಸೂರಿನ ಮಂಡಿ ಠಾಣೆಯಲ್ಲಿ ನಡೆದಿತ್ತು. ಈ ಸಂಬಂಧ ಮೇಲ್ನೋಟಕ್ಕೆ ಆರೋಪ ಸಾಭೀತಾದ ಹಿನ್ನಲೆಯಲ್ಲಿ ಹೆಡ್ ಕಾನ್ಸ್ ಸ್ಟೇಬಲ್ ಅಮಾನತುಗೊಳಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆದೇಶಿಸಿದ್ದಾರೆ.
ಮೈಸೂರಿನ ಮಂಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಿವಿಧ ಮನೆಗಳ್ಳತನ ಪ್ರಕರಣಗಳು ನಡೆದಿದ್ದವು. ಈ ಕಳ್ಳತನ ಪ್ರಕರಣದಲ್ಲಿ ಕಳ್ಳರಾದಂತ ನಜರುಲ್ಲಾ ಬಾಬು, ಆಲಿ ಎಂಬುವರು ಭಾಗಿಯಾಗಿದ್ದಂತ ಮಾಹಿತಿ ಪೊಲೀಸರಿಗೆ ಸಿಕ್ಕಿತ್ತು. ಅವರನ್ನು ಪೊಲೀಸರು ಬಂಧಿಸಿದ್ದರು.
ಪೊಲೀಸರು ಬಂಧಿಸಿದ್ದಂತ ಮನೆಗಳ್ಳರಾದಂತ ನಜರುಲ್ಲಾ ಬಾಬು ಹಾಗೂ ಆಲಿ ತಾವು ಕದ್ದಿದ್ದಂತ 400 ಗ್ರಾಂ ಚಿನ್ನಾಭರಣದಲ್ಲಿ 300 ಗ್ರಾಂ ಅನ್ನು ಅಶೋಕಪುರಂ ಠಾಣೆಯ ಹೆಡ್ ಕಾನ್ ಸ್ಟೇಬಲ್ ರಾಜು ಎಂಬುವರಿಗೆ ಕೊಟ್ಟಿರುವುದಾಗಿ ಮಾಹಿತಿ ನೀಡಿದ್ದರು.
ಈ ಮಾಹಿತಿ ಆಧರಿಸಿ ಅಶೋಕಪುರಂ ಹೆಡ್ ಕಾನ್ ಸ್ಟೇಬಲ್ ರಾಜು ಅವರ ಮೇಲೆ ಮಂಡಿ ಠಾಣೆಯ ಪೊಲೀಸರು ಕಣ್ಣಿಟ್ಟಿದ್ದರು. ಇಂದು ಮನೆಗಳ್ಳರಿಂದ ಪಡೆದಿದ್ದಂತ 100 ಗ್ರಾಂ ಚಿನ್ನಾಭರಣ ಮಾರಾಟಕ್ಕೆ ಯತ್ನಿಸಿದಂತ ವೇಳೆಯಲ್ಲಿ ಹೆಡ್ ಕಾನ್ ಸ್ಟೇಬಲ್ ರಾಜುನನ್ನು ಮಂಡಿ ಠಾಣೆಯ ಪೊಲೀಸರು ಬಂಧಿಸಿದ್ದರು.
ಅಂದಹಾಗೇ ಬಂಧಿತ ಹೆಡ್ ಕಾನ್ ಸ್ಟೇಬಲ್ ರಾಜು ಹಲವು ಮನೆಗಳ್ಳತನ ಪ್ರಕರಣಗಳಲ್ಲಿ ಕಳ್ಳರಿಂದ ಚಿನ್ನಾಭರಣವನ್ನು ಪಡೆದಿರುವಂತ ಶಂಕೆಯನ್ನು ಪೊಲೀಸರು ವ್ಯಕ್ತ ಪಡಿಸಿದ್ದಾರೆ. ಈ ಸಂಬಂಧ ಮಂಡಿ ಠಾಣೆಯ ಪೊಲೀಸರಿಂದ ಹೆಚ್ ಸಿ ರಾಜುನನ್ನು ವಿಚಾರಣೆ ನಡೆಸಿದ್ದರು. ಅಲ್ಲದೇ ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ವರದಿಯನ್ನು ನೀಡಲಾಗಿತ್ತು.
ದೇವರಾಜ ಠಾಣೆ ಸೇರಿದಂತೆ ಮೈಸೂರಿನ ವಿವಿಧ ಠಾಣೆಗಳಲ್ಲಿ ದಾಖಲಾಗಿದ್ದಂತ ಕಳವು ಮಾಲು ವಶಪಡಿಸಿಕೊಳ್ಳಬೇಕಿದ್ದಂತ ಹೆಡ್ ಕಾನ್ಸ್ ಸ್ಟೇಬಲ್ ರಾಜು ಕಳ್ಳರ ಜೊತೆಗೆ ಶಾಮೀಲಾಗಿದ್ದು ಮೇಲ್ನೋಟಕ್ಕೆ ದೃಢಪಟ್ಟಿತ್ತು. ಈ ಹಿನ್ನಲೆಯಲ್ಲಿ ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್ ಅವರು ಹೆಚ್ ಸಿ ರಾಜು ಅಮಾನತುಗೊಳಿಸಿ ಆದೇಶಿಸಿದ್ದಾರೆ.
ಇಂದು ಗಣೇಶನ ಹಬ್ಬ: ಇದನ್ನು ಆರಂಭಿಸಿದ ‘ಬಾಲ ಗಂಗಾಧರ ತಿಲಕ್’ ಬಗ್ಗೆ ನಿಮಗೆ ತಿಳಿದಿರ ವಿಷಯ ಇಲ್ಲಿದೆ
ನಿಮ್ಮ ಊರಿನ ‘ಕಂದಾಯ ನಕ್ಷೆ’ ಬೇಕೆ? ಈ ವಿಧಾನ ಅನುಸರಿಸಿ, ಕುಳಿತಲ್ಲೇ ‘ಡೌನ್ ಲೋಡ್’ ಮಾಡಿ | Revenue Maps Online
ಪ್ರಯಾಣಿಕರೇ ದಯವಿಟ್ಟು ಗಮನಿಸಿ : ಇನ್ಮುಂದೆ ಈ ವಯಸ್ಸಿನ ಮಕ್ಕಳು ರೈಲಿನಲ್ಲಿ ಉಚಿತವಾಗಿ ಪ್ರಯಾಣಿಸಬಹುದು!