ಕೆಎನ್ಎನ್‍ಡಿಜಿಟಲ್ ಡೆಸ್ಕ್ ; 2012 ನಿಮಗೆ ನೆನಪಿದೆಯೇ.? ಈ ಮೊದಲು, ಜಗತ್ತಿನ ಅಂತ್ಯವು ಆ ವರ್ಷದಲ್ಲಿ ಆಗುತ್ತದೆ ಎಂದು ಹೆದರಲಾಗುತ್ತಿತ್ತು. ಮಾಯನ್ನರ ಕ್ಯಾಲೆಂಡರ್ 2012ರವರೆಗೆ ಇರುತ್ತದೆ ಎಂದು ಈ ಹಿಂದೆ ಹೇಳಲಾಗಿತ್ತು, ಆದ್ದರಿಂದ ಜಗತ್ತು ಸಹ ಆ ವರ್ಷದಲ್ಲಿ ಕೊನೆಗೊಳ್ಳುತ್ತದೆ ಎನ್ನಲಾಗಿತ್ತು. ಆದರೆ ಆ ವರ್ಷ ಕಳೆದು ಅನೇಕ ವರ್ಷಗಳಾಗಿವೆ. ಆದರೂ ಜಗತ್ತು ಕೊನೆಗೊಳ್ಳಲಿಲ್ಲ. ಆದಾಗ್ಯೂ, ಕರೋನಾ ಬಂದ ನಂತರ, ಅಂತಹ ವದಂತಿಗಳು ಮತ್ತೆ ಹೆಚ್ಚಾಗಿದೆ. ಕೆಲವೇ ದಿನಗಳಲ್ಲಿ ಜಗತ್ತು ಕೊನೆಗೊಳ್ಳುತ್ತದೆ ಎಂದು ಬಹಳಷ್ಟು ಜನರು ಕಾಲಕಾಲಕ್ಕೆ ಹೇಳುತ್ತಿದ್ದಾರೆ. ಆದರೆ ಅದ್ಯಾವುದೂ ನಿಜವಾಗಿವಲ್ಲ.
ಇತ್ತೀಚೆಗೆ, ಒಬ್ಬ ವ್ಯಕ್ತಿಯು ತಾನು ಭವಿಷ್ಯಕ್ಕೆ ಪ್ರಯಾಣಿಸಿದ್ದೇನೆ ಮತ್ತು 2025ರಲ್ಲಿ, ಜಗತ್ತು ಅನೇಕ ನೈಸರ್ಗಿಕ ವಿಪತ್ತುಗಳಿಂದ ನಾಶವಾಗುತ್ತದೆ ಎಂದು ಹೇಳಿದ್ದಾನೆ. ಹಾಗಿದ್ರೆ, ಆತ ಯಾರು.? ಹೇಳುತ್ತಿರುವುದು ಏನು ಗೊತ್ತಾ?
ಅಮೆರಿಕದ ಎಲ್ವಿಸ್ ಥಾಂಪ್ಸನ್ ಇತ್ತೀಚೆಗೆ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವೀಡಿಯೊವನ್ನ ಪೋಸ್ಟ್ ಮಾಡಿದ್ದಾನೆ. ಅದರಲ್ಲಿ ಆತ, ಭವಿಷ್ಯಕ್ಕೆ ಪ್ರಯಾಣಿಸಿದ್ದೇನೆ ಎಂದು ಹೇಳಿದ್ದಾನೆ. 2025ರಲ್ಲಿ ಅನೇಕ ವಿಪತ್ತುಗಳು ಸಂಭವಿಸಲಿವೆ ಎಂದು ಎಚ್ಚರಿಸಿದ್ದಾನೆ. 24 ಕಿಲೋಮೀಟರ್ ವ್ಯಾಸವನ್ನ ಹೊಂದಿರುವ ಬೃಹತ್ ಸುಂಟರಗಾಳಿ ಗಂಟೆಗೆ 1,046 ಕಿಲೋಮೀಟರ್ ವೇಗದಲ್ಲಿ ಪ್ರಯಾಣಿಸಲಿದ್ದು, ಏಪ್ರಿಲ್ 6 ರಂದು ಯುಎಸ್ನ ಒಕ್ಲಹೋಮವನ್ನು ಆವರಿಸಿ ಎಲ್ಲರನ್ನೂ ನಾಶಪಡಿಸುತ್ತದೆ.
ಇನ್ನು “ಮೇ 27ರಂದು, ಯುನೈಟೆಡ್ ಸ್ಟೇಟ್ಸ್ನಲ್ಲಿ ಅಂತರ್ಯುದ್ಧ ನಡೆಯಲಿದೆ ಮತ್ತು ಯುನೈಟೆಡ್ ಸ್ಟೇಟ್ಸ್ ಸೇರಿದಂತೆ ಪ್ರಪಂಚದಾದ್ಯಂತದ ಎಲ್ಲರೂ ಪರಮಾಣು ಶಸ್ತ್ರಾಸ್ತ್ರಗಳನ್ನ ಬಳಸುತ್ತಾರೆ ಮತ್ತು ಮೂರನೇ ವಿಶ್ವ ಯುದ್ಧ ನಡೆಯಲಿದೆ” ಎಂದು ಆತ ಹೇಳಿದ್ದಾನೆ.
ಸೆಪ್ಟೆಂಬರ್ 1 ರಂದು, ಚಾಂಪಿಯನ್ ಎಂಬ ಅನ್ಯಗ್ರಹ ಜೀವಿ ಬಂದು 12,000 ಜನರನ್ನ ಸುರಕ್ಷಿತವಾಗಿ ಮತ್ತೊಂದು ಗ್ರಹಕ್ಕೆ ಸಾಗಿಸುವುದಾಗಿ ಹೇಳಿದ್ದು, ಸೆಪ್ಟೆಂಬರ್ 19 ರಂದು, ಭಾರಿ ಚಂಡಮಾರುತವು ಯುಎಸ್ ಕರಾವಳಿಯನ್ನ ಅಪ್ಪಳಿಸಿ ಎಲ್ಲವನ್ನೂ ಕೊಚ್ಚಿಕೊಂಡು ಹೋಗುತ್ತದೆ. ಇನ್ನು ನವೆಂಬರ್ 3 ರಂದು, ನೀಲಿ ತಿಮಿಂಗಿಲಕ್ಕಿಂತ ಆರು ಪಟ್ಟು ದೊಡ್ಡದಾದ ಜೀವಿ ಪೆಸಿಫಿಕ್ ಮಹಾಸಾಗರದಿಂದ ಸೆರಿನ್ ಕ್ರೌನ್ ಎಂಬ ಜೀವಿ ಹೊರಹೊಮ್ಮುತ್ತದೆ. ಇದು ಭೂಮಿಯನ್ನ ಕೊನೆಗೊಳಿಸುತ್ತದೆ ಎಂದು ಹೇಳಿದ್ದಾನೆ.
ಆದಾಗ್ಯೂ, ಎಲ್ವಿಸ್ ಹೇಳುತ್ತಿರುವುದನ್ನು ಅನೇಕ ಜನರು ತಳ್ಳಿಹಾಕುತ್ತಿದ್ದಾರೆ. ಹೇಳಿದ್ದು ನಡೆಯದಿದ್ದರೆ ಆತನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಇನ್ನು ಕೆಲವರು ಹೇಳಿದ್ದೆಲ್ಲವೂ ನಿಜವಾಗಿರಬಹುದು ಎಂದು ಹೇಳುತ್ತಾರೆ. ಈ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂದು ನಮಗೆ ತಿಳಿಸಿ.
ಕ್ರಿಮಿನಲ್ ಪ್ರಕರಣಗಳಲ್ಲಿ ಶಿಕ್ಷೆಗೊಳಗಾದ ರಾಜಕಾರಣಿಗಳಿಗೆ ಜೀವಾವಧಿ ನಿಷೇಧ ; ‘ಸುಪ್ರೀಂ’ಗೆ ಕೇಂದ್ರದಿಂದ ಅಫಿಡವಿಟ್
ನಟ ‘ಶಾರುಖ್ ಖಾನ್’ ಕುಟುಂಬ ‘ಮನ್ನತ್’ನಿಂದ ಐಷಾರಾಮಿ ‘ಫ್ಲ್ಯಾಟ್’ಗೆ ಶಿಫ್ಟ್, ತಿಂಗಳಿಗೆ ₹24 ಲಕ್ಷ ಬಾಡಿಗೆ
BREAKING : ಬಿಹಾರ ಸಚಿವ ಸಂಪುಟ ವಿಸ್ತರಣೆ ; ಬಿಜೆಪಿಯ 7 ನೂತನ ‘ಸಚಿವರು’ ಪ್ರಮಾಣ ವಚನ ಸ್ವೀಕಾರ |VIDEO